logo
ಕನ್ನಡ ಸುದ್ದಿ  /  ಜೀವನಶೈಲಿ  /  Apple Macbook Air: ಎಂ3 ಚಿಪ್‌ನೊಂದಿಗೆ ಆ್ಯಪಲ್ ಮ್ಯಾಕ್‌ಬುಕ್ ಏರ್ ಬಿಡುಗಡೆ; ಬೆಲೆ 1.14 ಲಕ್ಷ ರೂಪಾಯಿಯಿಂದ ಆರಂಭ

Apple MacBook Air: ಎಂ3 ಚಿಪ್‌ನೊಂದಿಗೆ ಆ್ಯಪಲ್ ಮ್ಯಾಕ್‌ಬುಕ್ ಏರ್ ಬಿಡುಗಡೆ; ಬೆಲೆ 1.14 ಲಕ್ಷ ರೂಪಾಯಿಯಿಂದ ಆರಂಭ

Raghavendra M Y HT Kannada

Mar 05, 2024 02:04 PM IST

google News

ಎಂ3 ಚಿಪ್ ಇರುವ 13 ಮತ್ತು 15 ಇಂಚಿನ ಎರಡು ಆ್ಯಪಲ್ ಮ್ಯಾಕ್‌ಬುಕ್‌ಗಳನ್ನು ಬಿಡುಗಡೆ ಮಾಡಲಾಗಿದೆ.

    • Apple MacBook Air Price: ಎಂ3 ಚಿಪ್ ಇರುವ 13 ಮತ್ತು 15 ಇಂಚಿನ ಎರಡು ಆ್ಯಪಲ್ ಮ್ಯಾಕ್‌ಬುಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಆರಂಭಿಕ ಬೆಲೆ 1.14 ಲಕ್ಷ ರೂಪಾಯಿ ಇದೆ. ಹೊಸ ಗ್ಯಾಡ್ಜೆಟ್‌ನ ವೈಶಿಷ್ಟ್ಯ ತಿಳಿಯಿರಿ.
ಎಂ3 ಚಿಪ್ ಇರುವ 13 ಮತ್ತು 15 ಇಂಚಿನ ಎರಡು ಆ್ಯಪಲ್ ಮ್ಯಾಕ್‌ಬುಕ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಎಂ3 ಚಿಪ್ ಇರುವ 13 ಮತ್ತು 15 ಇಂಚಿನ ಎರಡು ಆ್ಯಪಲ್ ಮ್ಯಾಕ್‌ಬುಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. (HT)

Apple MacBook Air Price: ಗುಣಮಟ್ಟದಲ್ಲಿ ಈವರೆಗೆ ರಾಜಿಮಾಡಿಕೊಳ್ಳದೆ ಜಗತ್ತಿನಾದ್ಯಂತ ಕೋಟ್ಯಂತರ ಗ್ರಾಹಕರನ್ನು ಹೊಂದಿರುವ ದೈತ್ಯ ಟೆಕ್ ಕಂಪನಿ ಆ್ಯಪಲ್ ಇದೀಗ ಎಂ3 ಚಿಪ್‌ ಇರುವ ಎರಡು ಹೊಸ ಮ್ಯಾಕ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಆ್ಯಪಲ್ ಮ್ಯಾಕ್‌ಬುಕ್ ಏರ್ ಅಂತ. 13 ಹಾಗೂ 15 ಇಂಚಿನ ಎರಡು ಮಾದರಿಗಳನ್ನು ಲಾಂಚ್ ಮಾಡಲಾಗಿದೆ. ಇವುಗಳ ಕಾರ್ಯಕ್ಷಮತೆ ಉತ್ತಮವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಬಹಳಷ್ಟು ಸಾಧ್ಯತೆಗಳಿವೆ. ಈ ಹೊಸ ಗ್ಯಾಡ್ಜೆಟ್‌ಗಳ ಆರಂಭಿಕ ಬೆಲೆ 1,14,900 ರೂಪಾಯಿಯಿದ ಆರಂಭವಾಗುತ್ತವೆ. ಆದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಪ್ರತ್ಯೇಕ ಮಾರಾಟದ ಡಿಸ್ಕೌಂಟ್‌ನಲ್ಲಿ ಇವರಿಗೆ ಆರಂಭಿಕ ಬೆಲೆ 1,4,900 ರೂಪಾಯಿಯಿಂದ 1,24,900 ರೂಪಾಯಿಗೆ ಸಿಗಲಿದೆ.

ಈ ಹೊಸ ಮ್ಯಾಕ್‌ಬುಕ್ ಏರ್‌ನ ಮುಖ್ಯ ಹೈಲೈಟ್ಸ್‌ ಎಂದರೆ ಇದರ ಕಾರ್ಯಕ್ಷಮತ ಮತ್ತು ಪ್ರದರ್ಶನ. ಹಳೆಯ ಎಂ1 ವರ್ಷನ್‌ಗೆ ಹೋಲಿಸಿದ್ರೆ ಶೇಕಡಾ 60 ರಷ್ಟು ವೇಗ ಹೆಚ್ಚಿದೆ. ಎಂ3 ಚಿಪ್‌ ವೇಗದ ಇಂಟೆಂಲ್ ಆದಾರಿ ಮ್ಯಾಕ್ ಬುಕ್ ಏರ್ ಅಂಶಗಳಲ್ಲಿ ಮೀರಿಸುತ್ತದೆ ಎಂದು ಆ್ಯಪಲ್ ಕಂಪನಿ ಹೇಳಿಕೊಂಡಿದೆ.

ಇದರಲ್ಲಿ ಅಪ್‌ಗ್ರೇಡೆಡ್ ನ್ಯೂರಲ್ ಇಂಜಿನ್ ಅನ್ನು ಸೇರಿಸುವ ಮೂಲಕ ಆ್ಯಪ್ ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆ ಮತ್ತು ವೇಗವನ್ನು ಇನ್ನಷ್ಟು ಹೆಚ್ಚಿಸಿದೆ. ಎಐನಲ್ಲಿ ಹೆಚ್ಚಿನ ಕೆಲಸ ಮಾಡುವವರಿಗೆ ಇದು ಅತ್ಯುತ್ತಮ ಲ್ಯಾಪ್‌ಟಾಪ್ ಎಂದು ಆ ಸಂಸ್ಥೆ ವಿವರಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಎರಡೂ ಮಾದರಿಯ ಮ್ಯಾಕ್‌ಬುಕ್‌ಗಳಲ್ಲೂ 18 ಗಂಟೆಗಳ ಬ್ಯಾಟರಿ ಲೈಫ್ ಬರುತ್ತದೆ. ಡ್ಯುಯಲ್ ಎಕ್ಸ್‌ಟರ್ನಲ್ ಡಿಸ್‌ಪ್ಲೇ ಸರ್ಪೋರ್ಟ್ ಮಾಡುತ್ತದೆ.

ಮಾರ್ಚ್ 4 ರಿಂದಲೇ ಆ್ಯಪಲ್ ಮ್ಯಾಕ್‌ಬುಕ್ ಏರ್ ಮಾರಾಟ ಆರಂಭ

ಎಂ3 ಚಿಪ್‌ ಹೊಂದಿರುವ ಆ್ಯಪಲ್ ಮ್ಯಾಕ್‌ಬುಕ್ ಏರ್ ಅನ್ನು ಖದೀರಿಸಲು ಬಯಸುವರಿಗಾಗಿ ನಿನ್ನೆಯಿಂದಲೇ (ಮಾರ್ಚ್ 4, ಸೋಮವಾರ) ಆನ್‌ಲೈನ್ ಮತ್ತು ಆಫ್‌ಲೈನ್‌ ಸ್ಟೋರ್‌ಗಳ ಮೂಲಕ ಹೊಸ ತಂತ್ರಜ್ಞಾನ ಆಧಾರಿತ ಲ್ಯಾಪ್‌ಟಾಪ್‌ಗಳನ್ನು ಆರ್ಡರ್‌ ಮಾಡಿಕೊಳ್ಳಬಹುದು. ಮಾರ್ಚ್ 8 (ಶುಕ್ರವಾರ) ರಿಂದ ಎಲ್ಲಾ ಆ್ಯಪಲ್ ಸ್ಟೋರ್‌ಗಳು ಹಾಗೂ ಆ್ಯಪಲ್ ಅಧಿಕೃತ ಮಾರಾಟಗಾರರಲ್ಲಿ ಲಭ್ಯವಾಗುತ್ತವೆ.

ಕ್ಯಾಲಿಫೋರ್ನಿಯಾದ ಮೂಲದ ಈ ಟೆಕ್ ದೈತ್ಯ ಸಂಸ್ಥೆ ಎವಿ1 ಡಿಕೋಡ್ ಇಂಜಿನ್‌ ಅನ್ನು ಹೊಸ ಮ್ಯಾಕ್‌ಬುಕ್ ಏರಪ್‌ನಲ್ಲಿ ಸಂಯೋಜಿಸಿದೆ. ಇವು ಬಳಕೆದಾರರಿಗೆ ಉತ್ತಮ ವಿಡಿಯೊ ಗುಣಮಟ್ಟ ಮತ್ತು ಸ್ಟ್ರೀಮಿಂಗ್ ಸೇವೆಗಳನ್ನು ಉತ್ತಮ ಗುಣಮಟ್ಟದಲ್ಲಿ ನೀಡಲಿದೆ. ವೈ-ಫೈ 6-ಇ ಸಪೋರ್ಟ್‌ನೊಂದಿಗೆ ಈ ಲ್ಯಾಪ್‌ಟಾಪ್ ಧ್ವನಿ ಪ್ರತ್ಯೇಕತೆ, ವೈಟ್ ಸ್ಪೆಕ್ಟ್ರಮ್ ಮೈಕ್ರೊಫೋನ್ ಮೋಡ್‌ಗಳು, ಆಡಿಯೊ ಮತ್ತು ವಿಡಿಯೊ ಕರೆಗಳ ಸಮಯದಲ್ಲಿ ಉತ್ತಮ ಧ್ವನಿ ಸ್ಪಷ್ಟತೆಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಆ್ಯಪಲ್ ಕಂಪನಿಯ ಐಫೋನ್, ಐಪ್ಯಾಟ್, ಏರ್‌ಬಡ್ಸ್, ಮ್ಯಾಕ್‌ಬುಕ್, ಟ್ಯಾಬ್ ಹಾಗೂ ವಾಚ್‌ಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಬೆಲೆ ಕೂಡ ದುಬಾರಿಯಾಗಿರುತ್ತದೆ. ಇತಿ ಶೀಘ್ರದಲ್ಲೇ ಆ್ಯಪಲ್ ಐಫೋನ್ 16 ಮಾರುಕಟ್ಟೆಗೆ ತರಲು ಆ ಕಂಪನಿ ಸಿದ್ಧತೆಗಳನ್ನು ಆರಂಭಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ