logo
ಕನ್ನಡ ಸುದ್ದಿ  /  Lifestyle  /  Health Benefits Of Clapping Everyday

Benefits of Clapping: ಚಪ್ಪಾಳೆ ತಟ್ಟುವುದರಿಂದಲೂ ಆರೋಗ್ಯಕ್ಕೆ ಬಹಳ ಲಾಭಗಳಿವೆ ಅಂದ್ರೆ ನಂಬ್ತೀರಾ..ಇಲ್ಲಿದೆ ನೋಡಿ ಮಾಹಿತಿ

HT Kannada Desk HT Kannada

Oct 05, 2022 04:39 PM IST

ಚಪ್ಪಾಳೆ ತಟ್ಟುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

    • ದಿನನಿತ್ಯದ ಕೆಲಸಗಳನ್ನು ಮುಗಿಸಿದ ನಂತರ ಬೆಳಗ್ಗೆ 5 ನಿಮಿಷಗಳ ಕಾಲ ನಿಮ್ಮ ಕೈಗಳಿಂದ ಚಪ್ಪಾಳೆ ತಟ್ಟುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಂತರ 5 ನಿಮಿಷಗಳ ಕಾಲ ಮಲಗಿ, ಕೈಕಾಲುಗಳನ್ನು ಸುಲಭವಾಗಿ ಬಿಡಿ ಮತ್ತು ಉಸಿರಾಡಿ. ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
ಚಪ್ಪಾಳೆ ತಟ್ಟುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ
ಚಪ್ಪಾಳೆ ತಟ್ಟುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ (PC: Freepik.com)

ಸಾಮಾನ್ಯವಾಗಿ ನಾವು ಇತರರನ್ನು ಅಭಿನಂದಿಸಲು ಮತ್ತು ಹುರಿದುಂಬಿಸಲು ಹೆಚ್ಚಾಗಿ ಚಪ್ಪಾಳೆ ತಟ್ಟುತ್ತೇವೆ. ಆದರೆ ಈ ರೀತಿ ಚಪ್ಪಾಳೆ ತಟ್ಟುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಎಂಬುದು ನಿಮಗೆ ಗೊತ್ತಾ..? ಅಲ್ಲದೆ, ಇದು ಯಾವುದೇ ದೈಹಿಕ ಶ್ರಮವನ್ನು ಒಳಗೊಂಡಿರುವುದಿಲ್ಲ. ದಿನಕ್ಕೆ ಕನಿಷ್ಠ 5-6 ನಿಮಿಷಗಳ ಕಾಲ ಚಪ್ಪಾಳೆ ತಟ್ಟುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಟ್ರೆಂಡಿಂಗ್​ ಸುದ್ದಿ

Tea History: ಚಾಯ್‌ ಪ್ರೇಮಿಗಳೇ, ಆಹಾ ಎಂದು ಹೀರುವ ಮುನ್ನ ಭಾರತಕ್ಕೆ ಟೀ ಬಂದ ಕಥೆಯನ್ನೊಮ್ಮೆ ತಿಳಿದುಕೊಳ್ಳಿ

Calcium Deficiency: ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುವ ಲಕ್ಷಣಗಳಿವು, ಇವುಗಳನ್ನು ತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ

Drumstick Biryani: ಹೊಸ ರುಚಿಯ ಬಿರಿಯಾನಿ ಮಾಡ್ಬೇಕು ಅಂತ ಯೋಚಿಸಿದ್ರೆ ನುಗ್ಗೆಕಾಯಿ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Weight Loss: 30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು

ಹಾಗಂತ ಸುಮ್ಮನೆ ಚಪ್ಪಾಳೆ ತಟ್ಟಿದರೆ ಯಾವುದೇ ಪ್ರಯೋಜನಗಳು ದೊರೆಯುವುದಿಲ್ಲ. ನಿಮ್ಮ ಭುಜಗಳ ಸಮಾನವಾಗಿ ಎರಡೂ ಕೈಗಳನ್ನು ಮೇಲಕ್ಕೆತ್ತಿ. ಕೈಗಳನ್ನು ಸಾಧ್ಯವಾದಷ್ಟು ಅಗಲವಾಗಿ ಹಿಡಿದುಕೊಳ್ಳಿ. ಒಂದು ನಿಮಿಷ ನಿಧಾನವಾಗಿ ಚಪ್ಪಾಳೆ ತಟ್ಟಿ. ನಿಮಗೆ ಸ್ವಲ್ಪ ದಣಿವು ಅನಿಸಿದರೆ, ನಿಮ್ಮ ಕೈಗಳಿಗೆ ಒಂದೂವರೆ ನಿಮಿಷ ವಿಶ್ರಾಂತಿ ನೀಡಿ. ನಂತರ ಇನ್ನೊಂದು ನಿಮಿಷ ಚಪ್ಪಾಳೆ ತಟ್ಟಿ. ಇದನ್ನು 4-5 ಬಾರಿ ಮಾಡಿ. ನಿಮಿಷಕ್ಕೆ ಸುಮಾರು 50 ರಿಂದ 100 ಚಪ್ಪಾಳೆಗಳನ್ನು ಹೊಡೆಯಬಹುದು. ಅಂದರೆ 5 ನಿಮಿಷದಲ್ಲಿ 300 ರಿಂದ 500 ಕ್ಲಾಪ್ಸ್. ಇದರಿಂದ ಎಷ್ಟು ಪ್ರಯೋಜನ ಇದೆ ಎಂಬುದು ನಿಮಗೆ ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಹೀಗೆ ಚಪ್ಪಾಳೆ ತಟ್ಟುವುದರಿಂದ ಎಷ್ಟೆಲ್ಲಾ ಆರೋಗ್ಯಕ್ಕೆ ಪ್ರಯೋಜನಗಳಿವೆ ನೋಡಿ

ದಿನನಿತ್ಯದ ಕೆಲಸಗಳನ್ನು ಮುಗಿಸಿದ ನಂತರ ಬೆಳಗ್ಗೆ 5 ನಿಮಿಷಗಳ ಕಾಲ ನಿಮ್ಮ ಕೈಗಳಿಂದ ಚಪ್ಪಾಳೆ ತಟ್ಟುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಂತರ 5 ನಿಮಿಷಗಳ ಕಾಲ ಮಲಗಿ, ಕೈಕಾಲುಗಳನ್ನು ಸುಲಭವಾಗಿ ಬಿಡಿ ಮತ್ತು ಉಸಿರಾಡಿ. ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ದೇಹದ ಕೊಬ್ಬು ಕಡಿಮೆಯಾಗುತ್ತದೆ. ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಮಧುಮೇಹ ಕೂಡಾ ನಿಯಂತ್ರಣದಲ್ಲಿರುತ್ತದೆ. ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ದೇಹವು ಉತ್ಸುಕವಾಗುತ್ತದೆ. ಚಪ್ಪಾಳೆ ತಟ್ಟುವುದರಲ್ಲಿ ಆಕ್ಯುಪ್ರೆಶರ್ ತತ್ವ ಅಡಗಿದೆ. ಎರಡೂ ಅಂಗೈಗಳಲ್ಲಿರುವ ಸಾವಿರಾರು ಬಿಂದುಗಳ ಮೇಲೆ ಚಪ್ಪಾಳೆ ತಟ್ಟುವುದು ಒತ್ತಡವನ್ನು ಉಂಟುಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸಲಿದೆ.

ಪ್ರತಿದಿನ ಹೀಗೆ ಚಪ್ಪಾಳೆ ತಟ್ಟುವುದರಿಂದ ಉದರ ಸಂಬಂಧಿ ಸಮಸ್ಯೆ, ಕುತ್ತಿಗೆ, ಸೊಂಟ ನೋವು, ಕಿಡ್ನಿ ಮತ್ತು ಶ್ವಾಸಕೋಶದ ತೊಂದರೆಗಳನ್ನು ನಿವಾರಿಸಬಹುದು. ಇದಲ್ಲದೆ, ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ದೈನಂದಿನ ಚಪ್ಪಾಳೆ ವ್ಯಾಯಾಮವು ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ದಿನೇ ದಿನೇ ಚಿಕಿತ್ಸೆ ದುಬಾರಿಯಾಗುತ್ತಿರುವಾಗ ಒಂದು ಪೈಸೆ ಖರ್ಚಿಲ್ಲದೆ ಚಪ್ಪಾಳೆ ತಟ್ಟುವ ಅಭ್ಯಾಸ ಮಾಡಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ಆದರೆ ನಿಮ್ಮ ನೆರೆಹೊರೆಯವರಿಗೆ ತೊಂದರೆ ಆಗುವಂತೆ ಜೋರಾಗಿ ಚಪ್ಪಾಳೆ ತಟ್ಟಬೇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು