logo
ಕನ್ನಡ ಸುದ್ದಿ  /  ಜೀವನಶೈಲಿ  /  French Fries Day: ಫ್ರೆಂಚ್‌ ಫ್ರೈಸ್‌ ಪ್ರಿಯರಿಗೆ ಸಿಹಿಸುದ್ದಿ; ಭಿನ್ನ ರುಚಿಯ ಫ್ರೈಸ್‌ಗಳನ್ನು ನೀವೂ ಮನೆಯಲ್ಲಿ ತಯಾರಿಸಿ; ರೆಸಿಪಿ ಇಲ್ಲಿದೆ

French Fries Day: ಫ್ರೆಂಚ್‌ ಫ್ರೈಸ್‌ ಪ್ರಿಯರಿಗೆ ಸಿಹಿಸುದ್ದಿ; ಭಿನ್ನ ರುಚಿಯ ಫ್ರೈಸ್‌ಗಳನ್ನು ನೀವೂ ಮನೆಯಲ್ಲಿ ತಯಾರಿಸಿ; ರೆಸಿಪಿ ಇಲ್ಲಿದೆ

Reshma HT Kannada

Jul 13, 2023 11:37 AM IST

ನ್ಯಾಷನಲ್‌ ಫ್ರೆಂಚ್‌ ಫ್ರೈಸ್‌ ದಿನ ಜುಲೈ 14

    • Unique Homemade Fries Recipes: ಚಿಲ್ಲಿ ಚೀಸ್‌ ಫ್ರೈಸ್‌ನಿಂದ, ಅವಕಾಡೊ ಫ್ರೈಸ್‌ವರೆಗೆ ನ್ಯಾಷನಲ್‌ ಫ್ರೆಂಚ್‌ ಫ್ರೈಸ್‌ ದಿನದಂದು ಬಾಯಲ್ಲಿ ನೀರೂರಿಸುವ, ಭಿನ್ನ ರುಚಿಯ ಫ್ರೈಸ್‌ಗಳನ್ನು ನೀವೂ ಮನೆಯಲ್ಲಿ ತಯಾರಿಸಿ. ಅಂದ ಹಾಗೆ ನಾಳೆ (ಜುಲೈ 14) ನ್ಯಾಷನಲ್‌ ಫ್ರೆಂಚ್‌ ಫ್ರೈಸ್‌ ದಿನ. 
ನ್ಯಾಷನಲ್‌ ಫ್ರೆಂಚ್‌ ಫ್ರೈಸ್‌ ದಿನ ಜುಲೈ 14
ನ್ಯಾಷನಲ್‌ ಫ್ರೆಂಚ್‌ ಫ್ರೈಸ್‌ ದಿನ ಜುಲೈ 14

ಫ್ರೆಂಚ್‌ ಫ್ರೈಸ್‌... ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು ಪಕ್ಕಾ. ಗರಿಗರಿಯಾದ, ಬಿಸಿ ಬಿಸಿಯಾದ, ನಾಲಿಗೆಗೆ ಹಿತ ಎನ್ನಿಸುವ ಫ್ರೈಸ್‌ ಅನ್ನು ಮಕ್ಕಳಿಂದ ಹಿಡಿದು, ವಯಸ್ಸಾದವರೆಗೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ರುಚಿಯನ್ನು ಸವಿಯುವುದು ಮಾತ್ರ, ಇದನ್ನು ಸಂಭ್ರಮಿಸುವುದು ಅವಶ್ಯವಲ್ಲವೇ. ಆ ಕಾರಣಕ್ಕೆ ಪ್ರತಿ ವರ್ಷ ಜುಲೈ 14 ರಂದು ರಾಷ್ಟ್ರೀಯ ಫ್ರೆಂಚ್‌ ಫ್ರೈಸ್‌ ದಿನವನ್ನು ಆಚರಿಸಲಾಗುತ್ತದೆ. ಈ ಸಂತೋಷದ ದಿನದಂದು ಜನರ ರುಚಿಮೊಗ್ಗಗಳನ್ನು ಸೆಳೆದಿರುವ ಈ ವಿಶಿಷ್ಟ ತಿನಿಸಿಗೆ ಗೌರವ ಸಲ್ಲಿಸುವುದು ವಾಡಿಕೆ. ವಿಭಿನ್ನ ರುಚಿ, ಫ್ಲೇವರ್‌ ಹೊಂದಿರುವ ಫ್ರೈಸ್‌ಗಳು ಮಳೆಗಾಲಕ್ಕಂತೂ ಹೇಳಿ ಮಾಡಿಸಿದವು. ಆದರೆ ಹೊರಗಡೆ ಇದನ್ನು ತಿನ್ನುವುದರಿಂದ ಆರೋಗ್ಯ ಕಡೆಬಹುದು. ಹಾಗಂತ ತಿನ್ನದೇ ಇರಲು ಸಾಧ್ಯವಿಲ್ಲ. ಚಿಂತೆ ಬೇಡ. ಮನೆಯಲ್ಲೇ ಬಗೆ ಬಗೆಯ ಫ್ರೆಂಚ್‌ ಫ್ರೈಸ್‌ಗಳನ್ನು ಸುಲಭವಾಗಿ ತಯಾರಿಸಿಕೊಂಡು ತಿನ್ನಬಹುದು. ಅಂತಹ ಕೆಲವು ಭಿನ್ನ ರುಚಿಯ ಫ್ರೆಂಚ್‌ ಫ್ರೈಸ್‌ ರೆಸಿಪಿಗಳು ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ನಾಲಿಗೆ ರುಚಿ ಮೊಗ್ಗುಗಳನ್ನು ಅರಳಿಸುವ 5 ಬಗೆಯ ಫ್ರೆಂಚ್‌ ಫ್ರೈಸ್‌ಗಳ ರೆಸಿಪಿಗಳನ್ನು ಎಚ್‌ಟಿ ಲೈಫ್‌ಸ್ಟೈಲ್‌ ಜೊತೆ ಹಂಚಿಕೊಂಡಿದ್ದಾರೆ ಬಾಣಸಿಗ ರಾಜಿ.

ಚಿಲ್ಲಿ ಚೀಸ್‌ ಫ್ರೈಸ್‌

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ- 2, ಮನೆಯಲ್ಲಿ ಮಾಡಿದ ಚಿಲ್ಲಿ - 1 ಕಪ್‌, ಚೀಸ್‌ - 1 ಕಪ್‌, ಜಲಪೆನೋಸ್‌ - ಕಾಲು ಕಪ್‌, ಡಾಲುಪ್‌ ಸೋರ್‌ ಕ್ರೀಮ್‌ - 1, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಸಿಂಗರಿಸಲು

ತಯಾರಿಸುವ ವಿಧಾನ: 450 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಓವೆನ್‌ ಅನ್ನು ಬಿಸಿ ಮಾಡಿಕೊಳ್ಳಿ. ಫ್ರೈಸ್‌ಗಳನ್ನು ಆಲಿವ್‌ ಎಣ್ಣೆ, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಹುರಿದುಕೊಳ್ಳಿ. ಅದನ್ನು ಬೇಕಿಂಗ್‌ ಶೀಟ್‌ ಮೇಲೆ ಹರಡಿ, 20 ರಿಂದ 25 ನಿಮಿಷ ಬೇಯಿಸಿಕೊಳ್ಳಿ ಅಥವಾ ಬಣ್ಣ ಬದಲಾಗಿ ಗರಿಗರಿಯಾಗುವವರೆಗೂ ಕರಿಯಿರಿ. ಅದರ ಮೇಲೆ ಚಿಲ್ಲಿ, ಚೀಸ್‌, ಜಲಪೆನೋಸ್‌, ಸೋರ್‌ ಕ್ರೀಮ್‌ ಹಾಕಿ. ಪುನಃ 5 ನಿಮಿಷ ಬೇಯಿಸಿ ಅಥವಾ ಚೀನ್‌ ಕರಗುವವರೆಗೂ ಇಡಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಸಿಂಗರಿಸಿ. ಫ್ರೈಸ್‌ಗಳ ಮೇಲೆ ಆಲಿವ್‌ ಎಣ್ಣೆ, ಉಪ್ಪು ಹಾಗೂ ಕಾಳುಮೆಣಸನ್ನು ಹರಡಿ. ಮೊದಲೇ ಬಿಸಿ ಮಾಡಿಕೊಂಡು ಓವೆನ್‌ನಲ್ಲಿ ಬೇಕಿಂಗ್‌ ಶೀಟ್‌ಗಳನ್ನು ಹರಡಿ 20 ರಿಂದ 25 ನಿಮಿಷಗಳ ಕಾಲ ಬೇಯಿಸಿ.

ಅವಕಾಡೊ ಫ್ರೈಸ್‌

ಬೇಕಾಗುವ ಸಾಮಗ್ರಿಗಳು: ಉದ್ದದ ಅವಕಾಡೊ (ಬೆಣ್ಣೆಹಣ್ಣು)- 2 (ಹಣ್ಣಾಗಿರುವ), ಹಿಟ್ಟು - ಕಾಲು ಕಪ್‌, ಬ್ರೆಡ್‌ ಪುಡಿ - ಕಾಲು ಕಪ್‌, ಬೆಳ್ಳುಳ್ಳಿ ಪುಡಿ - 1 ಚಮಚ, ಉಪ್ಪು - ಅರ್ಧ ಚಮಚ, ಕಾಳುಮೆಣಸು - ಕಾಲು ಚಮಚ, ಮೊಟ್ಟೆ - 1, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಅವಕಾಡೊವನ್ನು ಸಿಪ್ಪೆ ತೆಗೆದು ಫ್ರೈಸ್‌ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಒಂದು ಬೌಲ್‌ನಲ್ಲಿ ಹಿಟ್ಟು, ಬ್ರೆಡ್‌ಹುಡಿ, ಬೆಳ್ಳುಳ್ಳು ಪುಡಿ ಮಾಡಿಕೊಂಡಿದ್ದು, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಪ್ರತ್ಯೇಕ ಬೌಲ್‌ನಲ್ಲಿ ಮೊಟ್ಟೆ ಒಡೆದು ಹಾಕಿ, ಮಿಶ್ರಣ ಮಾಡಿ. ಮೊಟ್ಟೆಯಲ್ಲಿ ಅವಕಾಡೊ ತುಂಡುಗಳನ್ನು ಅದ್ದಿ, ನಂತರ ಅದನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ತೆಗೆಯಿರಿ. ಇದನ್ನು ಕಾದ ಎಣ್ಣೆಯಲ್ಲಿ ಕೆಲ ಹೊತ್ತು ಕರಿಯಿರಿ ಅಥವಾ ಬಣ್ಣ ಬದಲಾಗುವವರೆಗೂ ಕರಿಯಬಹುದು. ಇದನ್ನು ಟಿಶ್ಯೂ ಪೇಪರ್‌ ಮೇಲೆ ಹರಡಿ, ಕೂಡಲೇ ತಿನ್ನಲು ಕೊಡಿ.

ಗಾರ್ಲಿಕ್‌ ಪರ್ಮೆಸನ್‌ ಸಿಹಿ ಗೆಣಸಿನ ಫ್ರೈಸ್‌

ಬೇಕಾಗುವ ಸಾಮಗ್ರಿಗಳು: ಸಿಹಿ ಗೆಣಸು - 2 (ಸಿಪ್ಪೆ ತೆಗೆದು, ಫ್ರೈಸ್‌ ಗಾತ್ರಕ್ಕೆ ಕತ್ತರಿಸಿಕೊಂಡಿದ್ದು), ಆಲಿವ್‌ ಎಣ್ಣೆ - ಕಾಲು ಕಪ್‌, ಬೆಳ್ಳುಳ್ಳಿ - ಅರ್ಧ ಚಮಚ (ಜಜ್ಜಿದ್ದು), ಉಪ್ಪು - ಅರ್ಧ ಚಮಚ, ಕಾಳುಮೆಣಸಿನ ಪುಡಿ - ಕಾಲು ಚಮಚ, ಪರ್ಮೆಸನ್‌ ಚೀಸ್‌ - ಕಾಲು ಕಪ್‌ (ಹೆಚ್ಚಿಕೊಂಡಿದ್ದು)

ತಯಾರಿಸುವ ವಿಧಾನ: ಓವೆನ್‌ ಅನ್ನು 425 ಡಿಗ್ರಿ ಫ್ಯಾರನ್‌ ಹೀಟ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಆಲಿವ್‌ ಎಣ್ಣೆ, ಬೆಳ್ಳುಳ್ಳಿ, ಉಪ್ಪು ಹಾಗೂ ಕಾಳುಮೆಣಸಿನ ಪುಡಿಯ ಮಿಶ್ರಣದೊಂದಿಗೆ ಸಿಹಿ ಗೆಣಸಿನ ತುಂಡುಗಳನ್ನು ಹೊರಳಿಸಿ. ಇದನ್ನು ಬೇಕಿಂಗ್‌ ಶೀಟ್‌ ಮೇಲೆ ಹರಡಿ 20 ರಿಂದ 25 ನಿಮಿಷ ಬೇಯಿಸಿಕೊಳ್ಳಿ. ಅಥವಾ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಕರಿಯಬಹುದು. ಇದರ ಮೇಲೆ ಪರ್ಮೇಸನ್‌ ಚೀಸ್‌ ಉದುರಿಸಿ ತಿನ್ನಲು ಕೊಡಿ.

ಕ್ಯಾರೆಟ್‌ ಫ್ರೈಸ್‌

ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್‌ - 2 (ಸಿಪ್ಪೆ ತೆಗೆದು, ಫ್ರೈಸ್‌ ಗಾತ್ರಕ್ಕೆ ಕತ್ತರಿಸಿದ್ದು), ಆಲಿವ್‌ ಎಣ್ಣೆ - 1 ಚಮಚ, ಸ್ಮೋಕ್ಡ್‌ ಪಾರ್ಪರಿಕಾ - 1 ಚಮಚ, ಉಪ್ಪು - ಅರ್ಧ ಚಮಚ, ಕಾಳುಮೆಣಸಿನ ಪುಡಿ - ಕಾಲು ಚಮಚ, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - ಕಾಲು ಚಮಚ, ನಿಂಬೆ ರಸ - 1 ಚಮಚ, ಬೆಳ್ಳುಳ್ಳಿ - ಕಾಲು ಚಮಚ (ಜಜ್ಜಿದ್ದು).

ತಯಾರಿಸುವ ವಿಧಾನ: 425 ಡಿಗ್ರಿ ಫ್ಯಾರನ್‌ ಹೀಟ್‌ನಲ್ಲಿ ಓವೆನ್‌ ಅನ್ನು ಬಿಸಿ ಮಾಡಿಕೊಳ್ಳಿ. ಕತ್ತರಿಸಿ ಇಟ್ಟುಕೊಂಡಿರುವ ಕ್ಯಾರೆಟ್‌ ತುಂಡುಗಳನ್ನು ಆಲಿವ್‌ ಎಣ್ಣೆ, ಸ್ಮೋಕ್ಡ್‌ ಪ್ಯಾಪರಿಕಾ, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಕ್ಯಾರೆಟ್‌ ತುಂಡುಗಳನ್ನು ಬೇಕಿಂಗ್‌ ಶೀಟ್‌ ಮೇಲೆ ಹರಡಿ 20 ರಿಂದ 25 ನಿಮಿಷ ಬೇಯಿಸಿ ಅಥವಾ ಬಣ್ಣ ಬದಲಾಗುವವರೆಗೂ ಕರಿಯಿರಿ. ಒಂದು ಸಣ್ಣ ಬೌಲ್‌ನಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆರಸ, ಬೆಳ್ಳುಳ್ಳಿ ಸೇರಿಸಿ ಮಿಶ್ರಣ ಮಾಡಿ. ಇದನ್ನು ಕ್ಯಾರೆಟ್‌ ಫ್ರೈಸ್‌ ಮೇಲೆ ಹರಡಿ ತಿನ್ನಲು ಕೊಡಿ.

ಥಾಯ್‌ ಕರಿ ಫ್ರೈಸ್‌

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ - 2, ಥಾಯ್‌ ಕರಿ ಪುಡಿ - 1 ಚಮಚ, ನಿಂಬೆರಸ - 1 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು - ಕಾಲು ಚಮಚ.

ತಯಾರಿಸುವ ವಿಧಾನ: ಆಲೂಗೆಡ್ಡೆಗಳನ್ನು ಫ್ರೈಸ್‌ ಆಕಾರಕ್ಕೆ ಹೆಚ್ಚಿಕೊಳ್ಳಿ. ಇದನ್ನು ಅರ್ಧ ಗಂಟೆ ತಣ್ಣೀರಿನಲ್ಲಿ ನೆನೆಸಿಡಿ. ನಂತರ ಬಣ್ಣ ಬದಲಾಗುವವರೆಗೂ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಥಾಯ್‌ ಕರಿ ಪುಡಿ, ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಮಿಶ್ರಣದೊಂದಿಗೆ ಟಾಪಿಂಗ್‌ ಮಾಡಿ ತಿನ್ನಲು ಕೊಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು