logo
ಕನ್ನಡ ಸುದ್ದಿ  /  ಜೀವನಶೈಲಿ  /  Section 80ttb: ಉಳಿತಾಯದಿಂದ ಬರುವ ಬಡ್ಡಿ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ; ಈ ಅಂಶಗಳು ತಿಳಿದಿರಲಿ

Section 80TTB: ಉಳಿತಾಯದಿಂದ ಬರುವ ಬಡ್ಡಿ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ; ಈ ಅಂಶಗಳು ತಿಳಿದಿರಲಿ

Jayaraj HT Kannada

Feb 16, 2024 07:00 AM IST

ಉಳಿತಾಯದಿಂದ ಬರುವ ಬಡ್ಡಿ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ

    • Personal Finance: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಹಿರಿಯ ನಾಗರಿಕರು ತಮ್ಮ ಠೇವಣಿಗಳಿಂದ ಬರುವ ಬಡ್ಡಿ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಅಂಚೆ ಕಚೇರಿ, ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಇಟ್ಟ ಠೇವಣಿಗಳ ಮೇಲೆ 50,000 ರೂಪಾಯಿವರೆಗೆ ಉಳಿಸಬಹುದು.
ಉಳಿತಾಯದಿಂದ ಬರುವ ಬಡ್ಡಿ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ
ಉಳಿತಾಯದಿಂದ ಬರುವ ಬಡ್ಡಿ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ (Mint)

ತೆರಿಗೆಗೆ ಸಂಬಂಧಿಸಿದಂತೆ ಭಾರತದ ಹಿರಿಯ ನಾಗರಿಕರಿಗೆ ಹೆಚ್ಚುವರಿ ವಿನಾಯಿತಿಗಳಿವೆ. ಆದಾಯ ತೆರಿಗೆ ಕಾಯ್ದೆಯ (Income Tax Act) ಸೆಕ್ಷನ್ 80TTBಯು ಭಾರತದ ಹಿರಿಯ ನಾಗರಿಕರು ತಮ್ಮ ಠೇವಣಿಗಳಿಂದ ಪಡೆಯುವ ಬಡ್ಡಿ ಆದಾಯಕ್ಕೆ (interest income) ಸಂಬಂಧಿಸಿದಂತೆ ಪಡೆಯಬಹುದಾದ ತೆರಿಗೆ ವಿನಾಯಿಗಳನ್ನು ವಿವರಿಸುತ್ತದೆ. 2018ರ ಹಣಕಾಸು ಬಜೆಟ್‌ನಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಹಲವಾರು ಪ್ರಯೋಜನಗಳನ್ನು ಪರಿಚಯಿಸಲಾಯಿತು. ಅವುಗಳಲ್ಲಿ ಸೆಕ್ಷನ್ 80 ಟಿಟಿಬಿ ಕೂಡಾ ಒಂದು.

ಟ್ರೆಂಡಿಂಗ್​ ಸುದ್ದಿ

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಅವರು ತೆರಿಗೆ ವಿನಾಯಿತಿ ಕುರಿತು ಮಾಹಿತಿ ನೀಡಿದ್ದಾರೆ. ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ, 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಭಾರತೀಯ ಪ್ರಜೆಗಳು ಈ ವಿನಾಯಿತಿ ಪಡೆಯಲು ಅರ್ಹರು. ಭಾರತೀಯ ಹಿರಿಯ ನಾಗರಿಕರು, ಅಂಚೆ ಕಚೇರಿ, ಬ್ಯಾಂಕ್ ಮತ್ತು ಸಹಕಾರಿ ಸೊಸೈಟಿಗಳಲ್ಲಿ ಇಟ್ಟ ಠೇವಣಿಗಳಿಂದ ಪಡೆಯುವ ಬಡ್ಡಿ ಹಣಕ್ಕೆ ಒಂದು ವರ್ಷದೊಳಗೆ 50,000 ರೂಪಾಯಿ ತೆರಿಗೆ ವಿನಾಯಿತಿ ಪಡೆಯಲು ಅರ್ಹರು. ಈ ಕಡಿತವು ಉಳಿತಾಯ ಠೇವಣಿಗಳು (savings) ಮಾತ್ರವಲ್ಲದೆ ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ ಗಳಿಸುವ ಬಡ್ಡಿಗೂ ಅನ್ವಯಿಸುತ್ತದೆ.

ಈ ವಿನಾಯಿತಿಯು ಉಳಿತಾಯ ಖಾತೆಯ ಬಡ್ಡಿ, ನಿರಖು ಠೇವಣಿ ಬಡ್ಡಿ ಮತ್ತು ಆವರ್ತಿತ ಠೇವಣಿ (recurring deposit)ಗಳಿಂದ ಬರುವ ಬಡ್ಡಿಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಮಾಡಿದ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಗೆ ಒಟ್ಟಾರೆ 50,000 ರೂಪಾಯಿಗಳ ಮಿತಿಯೊಳಗೆ ವಿನಾಯಿತಿ ಪಡೆಯಬಹುದು.

ಸೆಕ್ಷನ್ 80 ಟಿಟಿಎ ಮತ್ತು ಸೆಕ್ಷನ್ 80 ಟಿಟಿಬಿ ಸೆಕ್ಷನ್ ನಡುವಿನ ವ್ಯತ್ಯಾಸಗಳೇನು?

ಇವರೆಡೂ ಸೆಕ್ಷನ್‌ಗಳು ಬಡ್ಡಿ ಆದಾಯದ ಮೇಲಿನ ಕಡಿತಕ್ಕೆ ಸಂಬಂಧಿಸಿವೆ. ಆದರೆ, ಸೆಕ್ಷನ್ 80 ಟಿಟಿಎ ಅಡಿಯಲ್ಲಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬದ (HUFs) ವ್ಯಕ್ತಿಗಳು ತಮ್ಮ ಬ್ಯಾಂಕ್‌, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಹೊಂದಿರುವ ಉಳಿತಾಯ ಖಾತೆಗಳಿಗೆ ಮಾತ್ರ 10,000 ರೂಪಾಯಿವರೆಗೆ ಬಡ್ಡಿ ಕಡಿತಕ್ಕೆ ಅರ್ಹರಾಗಿರುತ್ತಾರೆ. ಈ ಸೆಕ್ಷನ್ ಅಡಿಯಲ್ಲಿ ಬರುವ ಪ್ರಯೋಜನಗಳು ಹಿರಿಯ ನಾಗರಿಕರಿಗೆ ಇರುವುದಿಲ್ಲ.

ಈ ಅಂಶಗಳು ನೆನಪಿನಲ್ಲಿರಲಿ

  • ಹಿರಿಯ ನಾಗರಿಕ ಎಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿವಾಸಿ.
  • ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ (ಉಳಿತಾಯ ಅಥವಾ ನಿರಖು)
  • ಸಹಕಾರಿ ಸೊಸೈಟಿಯಲ್ಲಿನ ಠೇವಣಿಗಳ ಮೇಲಿನ ಬಡ್ಡಿ
  • ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ
  • ಹಿರಿಯ ನಾಗರಿಕರ ಠೇವಣಿಗಳ ಮೇಲಿನ ಬಡ್ಡಿ ಪಾವತಿಯಿಂದ 50,000 ರೂಪಾಯಿವರೆಗೆ ಬ್ಯಾಂಕುಗಳು ಯಾವುದೇ ತೆರಿಗೆ ಅಥವಾ ಟಿಡಿಎಸ್ (tax at source)ಕಡಿತಗೊಳಿಸಲು ಸಾಧ್ಯವಿಲ್ಲ.
  • 50,000 ರೂಪಾಯಿಗಿಂತ ಹೆಚ್ಚಿನ ಬಡ್ಡಿಯ ಮೊತ್ತವು ತೆರಿಗೆಗೆ ಅರ್ಹವಾಗಿರುವುದರಿಂದ, ಹಿರಿಯ ನಾಗರಿಕರಿಗೆ ಅನ್ವಯವಾಗುವ ಸ್ಲ್ಯಾಬ್ ದರದ ಪ್ರಕಾರ ತೆರಿಗೆಯನ್ನು ಆಕರ್ಷಿಸುತ್ತದೆ.
  • ಕಂಪನಿಯ ಸ್ಥಿರ ಠೇವಣಿಗಳು ಅಥವಾ ಬಾಂಡ್‌ಗಳು / ಎನ್‌ಸಿಡಿಗಳಿಂದ ಬರುವ ಬಡ್ಡಿ ಆದಾಯವು ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ವಿನಾಯಿತಿಗೆ ಒಳಪಡುವುದಿಲ್ಲ.

(ಇಲ್ಲಿ ಹೇಳಿರುವ ಅಭಿಪ್ರಾಯಗಳು ವಿಶ್ಲೇಷಕರ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಚರ್ಚಿಸಿ.)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು