logo
ಕನ್ನಡ ಸುದ್ದಿ  /  ಜೀವನಶೈಲಿ  /  Personal Finance: ಎಫ್‌ಡಿ ಹಿಂಪಡೆಯುವುದು ಈಗ ಇನ್ನೂ ಸುಲಭ, ನಿಯಮ ಸಡಿಲಿಸಿದೆ ಆರ್‌ಬಿಐ

Personal Finance: ಎಫ್‌ಡಿ ಹಿಂಪಡೆಯುವುದು ಈಗ ಇನ್ನೂ ಸುಲಭ, ನಿಯಮ ಸಡಿಲಿಸಿದೆ ಆರ್‌ಬಿಐ

HT Kannada Desk HT Kannada

Oct 29, 2023 05:59 PM IST

ಭಾರತೀಯ ರಿಸರ್ವ್ ಬ್ಯಾಂಕ್

  • ಎಫ್‌ಡಿ ಹೂಡಿಕೆದಾರರಿಗೆ ಒಂದು ಶುಭಸುದ್ದಿ. 15 ಲಕ್ಷ ರೂಪಾಯಿ ಮೇಲ್ಪಟ್ಟ ಸ್ಥಿರ ಠೇವಣಿದಾರರ ಹೂಡಿಕೆ ಅವಧಿಗೆ ಮೊದಲು ಹಿಂಪಡೆಯಲು ಸಾಧ್ಯವಿರಲಿಲ್ಲ. ಈಗ ಈ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1 ಕೋಟಿ ರೂಪಾಯಿಗೆ ಏರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್ (PTI)

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅವಧಿಪೂರ್ವದಲ್ಲೇ ಹಿಂತೆಗೆಯುವ ಆಯ್ಕೆ ಇರುವಂತಹ ಎಲ್ಲ ದೇಶೀಯ ಸ್ಥಿರ ಠೇವಣಿ (fixed deposits) ಗಳ ಕನಿಷ್ಠ ಮೊತ್ತವನ್ನು 1 ಕೋಟಿ ರೂಪಾಯಿಗೆ ಏರಿಸಿದೆ. ಈ ಮೊದಲು ಈ ಮೊತ್ತ 15 ಲಕ್ಷ ರೂಪಾಯಿ ಇತ್ತು.

ಟ್ರೆಂಡಿಂಗ್​ ಸುದ್ದಿ

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಇದಕ್ಕೂ ಮೊದಲು 15 ಲಕ್ಷ ರೂಪಾಯಿ ಮೇಲ್ಪಟ್ಟ ಸ್ಥಿರ ಠೇವಣಿದಾರರ ಹೂಡಿಕೆ ಅವಧಿಗೆ ಮೊದಲು ಹಿಂಪಡೆಯಲು ಸಾಧ್ಯವಿರಲಿಲ್ಲ. ಈಗ ಈ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1 ಕೋಟಿ ರೂಪಾಯಿಗೆ ಏರಿಸಿದೆ.

ಅವಧಿಪೂರ್ವದಲ್ಲಿ ಹಿಂಪಡೆಯಬಹುದಾದ ಮತ್ತು ಅವಧಿಪೂರ್ವದಲ್ಲಿ ಹಿಂಪಡೆಯಲಾಗದ ಠೇವಣಿಗಳು

ಅವಧಿಪೂರ್ವದಲ್ಲಿ ಹಿಂಪಡೆಯಬಹುದಾದ ಮತ್ತು ಅವಧಿಪೂರ್ವದಲ್ಲಿ ಹಿಂಪಡೆಯಲಾಗದ ಠೇವಣಿಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳುವುದು ಹೀಗೆ.

ಬ್ಯಾಂಕ್‌ಗಳು ಕಾಲೆಬಲ್‌ ಮತ್ತು ನಾನ್‌-ಕಾಲೆಬಲ್‌ (callable and non-callable deposits) ಎಂಬ ಎರಡು ರೀತಿಯ ಎಫ್‌ಡಿಗಳನ್ನು ನೀಡುತ್ತವೆ. ಹೆಸರೇ ಸೂಚಿಸುವಂತೆ, ಮೊದಲನೆಯದು ಅವಧಿಪೂರ್ವದಲ್ಲೆ ಹಿಂಪಡೆಯಬಹುದಾದುದು ಮತ್ತು ಇನ್ನೊಂದು ಅವಧಿಪೂರ್ವದಲ್ಲಿ ಹಿಂಪಡೆಯಲು ಸಾಧ್ಯವಿಲ್ಲದ್ದು ಎಂದು ಅರ್ಥ. ಮೊದಲನೆಯದರಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳ ಅವಧಿಗೂ ಮೊದಲೇ ಅದನ್ನು ಪೂರ್ತಿಯಾಗಿ ಹಿಂಪಡೆಯುವುದು ಸಾಧ್ಯವಿದೆ.

ಅವಧಿಪೂರ್ವದಲ್ಲಿ ಹಿಂಪಡೆಯಬಹುದಾದ ಠೇವಣಿಯ ಮಿತಿ ಏರಿಕೆಯ ಪ್ರಯೋಜನವೇನು

ಅವಧಿಪೂರ್ವದಲ್ಲಿ ಹಿಂಪಡೆಯಲಾಗದ ಎಫ್‌ಡಿಗಳ ಮಿತಿಯನ್ನು 15 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಹೆಚ್ಚಿಸುವುದರೊಂದಿಗೆ, ನಗದು ಕೊರತೆಯ ಸಂದರ್ಭದಲ್ಲಿ ಹೆಚ್ಚಿದ ಲಿಕ್ವಿಡಿಟಿಯೊಂದಿಗೆ ಠೇವಣಿದಾರರಿಗೆ ಇದು ಸಹಾಯ ಮಾಡುತ್ತದೆ. ಹೂಡಿಕೆದಾರರು ತಮ್ಮ ಎಫ್‌ಡಿಯನ್ನು ಮುಕ್ತಾಯದ ಮೊದಲು ಅದನ್ನು ಹಿಂಪಡೆಯವುದು ಸಾಧ್ಯವಾಗುತ್ತದೆ. ಠೇವಣಿ ಇಡುವಾಗ ಪರಸ್ಪರ ಒಪ್ಪಿಕೊಂಡಂತೆ ಅವಧಿಯ ಅಂತ್ಯದ ಮೊದಲು ಖಾತೆಯನ್ನು ಮುಚ್ಚಬಹುದು ಕೂಡ.

ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ಹೇಳಿರುವುದೇನು

"ಪರಿಶೀಲನೆಯಲ್ಲಿ, ಹಿಂಪಡೆಯಲಾಗದ ಅವಧಿ ಠೇವಣಿಗಳ (ಟಿಡಿ) ಕನಿಷ್ಠ ಮೊತ್ತವನ್ನು 15 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಹೆಚ್ಚಿಸಬಹುದು ಎಂದು ನಿರ್ಧರಿಸಲಾಗಿದೆ. ಅಂದರೆ 1 ಕೋಟಿ ರೂಪಾಯಿ ಮೊತ್ತಕ್ಕೆ ವ್ಯಕ್ತಿಗಳಿಂದ ಸ್ವೀಕರಿಸಲಾದ ಎಲ್ಲ ದೇಶೀಯ ಅವಧಿ ಠೇವಣಿಗೆ ಅವಧಿಪೂರ್ವದಲ್ಲಿ ಹಿಂತೆಗೆದುಕೊಳ್ಳುವ ಸೌಲಭ್ಯ ಇರಬೇಕು ಎಂದು ರಿಸರ್ವ್ ಬ್ಯಾಂಕ್ ಸುತ್ತೋಲೆಯಲ್ಲಿ ತಿಳಿಸಿದೆ.

ಠೇವಣಿಗಳ ಅವಧಿ ಮತ್ತು ಠೇವಣಿಗಳ ಗಾತ್ರಕ್ಕೆ ಹೆಚ್ಚುವರಿಯಾಗಿ ಠೇವಣಿಗಳ ಹಿಂಪಡೆಯಲಾಗದಿರುವಿಕೆ (ಅವಧಿಪೂರ್ವ ಹಿಂಪಡೆಯುವಿಕೆಯ ಆಯ್ಕೆಯ ಲಭ್ಯತೆ ಇಲ್ಲದಿರುವುದು) ಆಧರಿಸಿ ಅವಧಿ ಠೇವಣಿಗಳ ಮೇಲಿನ ಬಡ್ಡಿಯ ಮೇಲೆ ಭೇದಾತ್ಮಕ ದರವನ್ನು ನಿಗದಿಪಡಿಸುವುದಕ್ಕೆ ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಬಲ್ಕ್ ಠೇವಣಿಗಳ ಮೇಲೆ ಮಾತ್ರ ವಿಭಿನ್ನ ಬಡ್ಡಿದರ

ಆರ್‌ಬಿಐನ ಈ ಸೂಚನೆಗಳು ಅನಿವಾಸಿ (ಬಾಹ್ಯ) ರೂಪಾಯಿ (ಎನ್‌ಆರ್‌ಇ) ಠೇವಣಿ/ ಸಾಮಾನ್ಯ ಅನಿವಾಸಿ (ಎನ್‌ಆರ್‌ಒ) ಠೇವಣಿಗಳಿಗೂ ಅನ್ವಯಿಸುತ್ತವೆ.

ಅವಧಿಪೂರ್ವ ವಾಪಸಾತಿ ಆಯ್ಕೆಯಿಲ್ಲದೆ ಎನ್‌ಆರ್‌ಇ / ಎನ್‌ಆರ್‌ಒ ಅವಧಿಯ ಠೇವಣಿಗಳನ್ನು ನೀಡುವ ಸ್ವಾತಂತ್ರ್ಯವನ್ನು ಬ್ಯಾಂಕ್‌ಗಳು ಹೊಂದಿರಬೇಕು. 1 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತಕ್ಕೆ ವ್ಯಕ್ತಿಗಳಿಂದ ಸ್ವೀಕರಿಸಲಾದ ಎಲ್ಲಾ ಎನ್‌ಆರ್‌ಇ / ಎನ್‌ಆರ್ಒ ಅವಧಿ ಠೇವಣಿಗಳು (ಒಂಟಿ ಅಥವಾ ಜಂಟಿ) ಅವಧಿಪೂರ್ವ-ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಹೊಂದಿರಬೇಕು ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ.

ಈ ಸೂಚನೆಗಳು ಎಲ್ಲ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ ಮತ್ತು ತತ್‌ಕ್ಷಣದಿಂದಲೇ ಜಾರಿಗೆ ಬಂದಿವೆ.

    ಹಂಚಿಕೊಳ್ಳಲು ಲೇಖನಗಳು