logo
ಕನ್ನಡ ಸುದ್ದಿ  /  ಜೀವನಶೈಲಿ  /  Shivaratri: Famous Shiva Temple In Karnataka: ಶಿವರಾತ್ರಿ ಆಚರಣೆ: ಕರ್ನಾಟಕದಲ್ಲಿನ ಪ್ರಸಿದ್ಧ ಶಿವನ ದೇವಾಲಯಗಳಿವು

Shivaratri: famous Shiva temple in Karnataka: ಶಿವರಾತ್ರಿ ಆಚರಣೆ: ಕರ್ನಾಟಕದಲ್ಲಿನ ಪ್ರಸಿದ್ಧ ಶಿವನ ದೇವಾಲಯಗಳಿವು

HT Kannada Desk HT Kannada

Feb 17, 2023 12:28 PM IST

ಧರ್ಮಸ್ಥಳ

    • ಕರ್ನಾಟಕದಲ್ಲಿ ಶಿವಭಕ್ತರ ಸಂಖ್ಯೆ ಅಪಾರ, ರಾಜ್ಯದ ಹಲವಾರು ಕಡೆ ಶಿವನ ಆಲಯಗಳಿವೆ. ಶಿವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಸಿದ್ಧ ದೇವಾಲಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ದೇವಸ್ಥಾನಗಳಲ್ಲಿ ಶೃದ್ಧೆ, ಭಕ್ತಿ, ನಂಬಿಕೆ ಹಾಗೂ ಸಂಭ್ರಮದಿಂದ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಧರ್ಮಸ್ಥಳ
ಧರ್ಮಸ್ಥಳ

ಜಗದೊಡೆಯ ಶಿವನ ಶಕ್ತಿ ಅಪಾರ. ಶಿವನ ಲೀಲೆಯ ಬಗ್ಗೆ ಅರಿಯದವರಿಲ್ಲ. ಭಕ್ತಿಯಿಂದ ಬೇಡಿದ ಭಕ್ತರಿಗೆ ಮನಸಾರೆ ಹರಸುವ ಶಿವನಿಗೆ ದೇಶದಾದ್ಯಂತ ಹಲವು ಕಡೆ ಗುಡಿಗಳಿವೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಶಿವರಾತ್ರಿಯಂದು ಭಕ್ತಿ, ಭಾವ, ಸಂಭ್ರಮದಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

Summer Tips: ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ಕರ್ನಾಟಕದಲ್ಲೂ ಶಿವಭಕ್ತರ ಸಂಖ್ಯೆ ಅಪಾರ, ರಾಜ್ಯದ ಹಲವಾರು ಕಡೆ ಶಿವನ ಆಲಯಗಳಿವೆ. ಶಿವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಸಿದ್ಧ ದೇವಾಲಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ದೇವಸ್ಥಾನಗಳಲ್ಲಿ ಶೃದ್ಧೆ, ಭಕ್ತಿ, ನಂಬಿಕೆ ಹಾಗೂ ಸಂಭ್ರಮದಿಂದ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಧರ್ಮಸ್ಥಳ ಮಂಜುನಾಥ ದೇವಸ್ಥಾನ

ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದ ಮಂಜುನಾಥ ದೇಗುಲದಲ್ಲಿ ಶಿವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅಂದು ಮಂಜುನಾಥನಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತದೆ. ನಾಡಿನಾದ್ಯಂತ ಭಕ್ತರು ಮಂಜುನಾಥನ ಸನ್ನಿಧಿಗೆ ಆಗಮಿಸಿ ಭಕ್ತಿಯಿಂದ ನೆನೆಯುತ್ತಾರೆ. ಇಷ್ಟೇ ಅಲ್ಲದೇ ಶಿವರಾತ್ರಿ ಸಮಯದಲ್ಲಿ ಬೆಂಗಳೂರು, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು ಮುಂತಾದ ಕಡೆಯಿಂದ ಕಾಲುನಡಿಗೆಯಲ್ಲಿ ಧರ್ಮಸ್ಥಳಕ್ಕೆ ಬರುವುದು ವಿಶೇಷ. ಅಂದು ರಾತ್ರಿಯಿಡಿ ಜಾಗರಣೆ ನಡೆಸಲಾಗುತ್ತದೆ.

ಮುರ್ಡೇಶ್ವರ ಶಿವನ ಆಲಯ

ವಿಶ್ವದಲ್ಲೇ 2ನೇ ಅತಿ ಎತ್ತರದ ಶಿವನ ಮೂರ್ತಿ ಹೊಂದಿರುವ ಕ್ಷೇತ್ರ ಮುರ್ಡೇಶ್ವರ. ಕಂಡುಕ ಗಿರಿಯ ಮೇಲೆ‌, ಸಮುದ್ರದ ತಟದಲ್ಲಿ ಸ್ಥಾಪಿತವಾದ ಈ ದೇವಾಲಯ ಖ್ಯಾತ ಪ್ರವಾಸಿತಾಣವೂ ಹೌದು. ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ರುದ್ರಾಬಿಷೇಕ, ಜಲಾಭಿಷೇಕ ಮುಂತಾದ ಪೂಜಾ ಕೈಂಕರ್ಯಗಳು ವಿಶೇಷವಾಗಿ ನೆರವೇರುತ್ತವೆ.

ಮುರ್ಡೇಶ್ವರ

ಕೋಟಿಲಿಂಗೇಶ್ವರ

ಕೋಲಾರ ಜಿಲ್ಲೆಯಲ್ಲಿರುವ ಕೋಟಿಲಿಂಗೇಶ್ವರನ ಆಲಯವು ಕೂಡ ಪ್ರಸಿದ್ಧ ಪ್ರವಾಸಿ ತಾಣ. ಏಷ್ಯಾದಲೇ ಅತಿ ಎತ್ತರದ 108 ಅಡಿಗಳ ಶಿವನ ಪ್ರತಿಮೆ ಹಾಗೂ 32 ಅಡಿ ಎತ್ತರದ ಅತಿ ದೊಡ್ಡ ನಂದಿ ವಿಗ್ರಹವನ್ನು ಈ ದೇವಾಲಯ ಹೊಂದಿದೆ. ಶಿವರಾತ್ರಿಯ ಸಮಯದಲ್ಲಿ ಕೋಲಾರ, ಬೆಂಗಳೂರು ಸೇರಿದಂತೆ ನೆರೆಯ ಆಂಧ್ರಪ್ರದೇಶದ ಭಕ್ತರು ಇಲ್ಲಿಗೆ ಬಂದು ಶಿವನನ್ನು ಭಕ್ತಿಯಿಂದ ಪೂಜಿಸುತ್ತಾರೆ.

ಮಹಾಬಲೇಶ್ವರ ದೇವಸ್ಥಾನ

ದಕ್ಷಿಣಕಾಶಿ ಎಂದೇ ಕರೆಸಿಕೊಳ್ಳುವ ಮಹಾಬಲೇಶ್ವರ ದೇವಾಲಯ ಇರುವುದು ಗೋಕರ್ಣದಲ್ಲಿ. ಇಲ್ಲಿರುವ ಆತ್ಮಲಿಂಗವನ್ನು ಕಾಶಿಯಷ್ಟೇ ಪವಿತ್ರ ಎನ್ನುತ್ತಾರೆ. 4ನೇ ಶತಮಾನದಲ್ಲಿಯೇ ದ್ರಾವಿಡ ವಾಸ್ತ್ರುಶಿಲ್ಪ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕರ್ನಾಟಕದ ಏಳು ಮುಕ್ತಿಸ್ಥಳದಲ್ಲಿ ಈ ಸ್ಥಳವೂ ಒಂದು. ಶಿವನ ಪಂಚ ಪವಿತ್ರ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ವಿಶೇಷ ಪ್ರಾಶಸ್ತ್ಯ. ಶಿವರಾತ್ರಿಯಂದು ಇಲ್ಲಿ ರಥಯಾತ್ರೆ ಅಥವಾ ತೇರಿ ಹಬ್ಬವನ್ನು ನೆರವೇರಿಸುತ್ತಾರೆ. ಕರ್ನಾಟಕದಾದ್ಯಂತ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಶ್ರೀಕಂಠೇಶ್ವರ ದೇವಸ್ಥಾನ

ಇದು ನಂಜನಗೂಡು ತಾಲ್ಲೂಕಿನಲ್ಲಿರುವ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ದೇವಾಲಯ. ಇದು ಕಪಿಲಾ ನದಿಯ ದಂಡೆಯಲ್ಲಿದ್ದು, ಇದನ್ನು ದಕ್ಷಿಣ ಪ್ರಯಾಗ ಎಂದು ಕರೆಯುತ್ತಾರೆ. ಈ ದೇವಾಲಯದ ಗೋಪುರವು 120 ಅಡಿ ಎತ್ತರವಿದೆ. ಶಿವರಾತ್ರಿ ಸಮಯದಲ್ಲಿ ಈ ದೇವಸ್ಥಾನದಲ್ಲೂ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತವೆ.

ಶಿವೋಂ ಶಿವ ದೇವಸ್ಥಾನ

ಈ ದೇವಸ್ಥಾನವಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ. ಹಳೆ ವಿಮಾನನಿಲ್ದಾಣದ ರಸ್ತೆಯಲ್ಲಿರುವ ಈ ದೇವಾಲಯವನ್ನು 1995ರಲ್ಲಿ ನಿರ್ಮಿಸಲಾಗಿತ್ತು. 65 ಅಡಿ ಎತ್ತರದ ಶಿವನ ಮೂರ್ತಿ ಈ ದೇವಾಲಯದ ವಿಶೇಷ. ಮಹಾಶಿವರಾತ್ರಿಯ ಸಮಯದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿಗೆ ಬಂದು ಶಿವನನ್ನು ಭಜಿಸುತ್ತಾರೆ.

    ಹಂಚಿಕೊಳ್ಳಲು ಲೇಖನಗಳು