Yoga Day: ಆಪಲ್ ವಾಚ್ ಜತೆ ಯೋಗ ಮಾಡಿ, ಯೋಗ ಪ್ರಿಯರಿಗೆ ಆಪಲ್ ವಾಚ್‌ನಲ್ಲಿದೆ ಅಚ್ಚರಿದಾಯಕ ಫೀಚರ್‌ಗಳು
Jan 09, 2024 08:09 PM IST
Yoga Day: ಆಪಲ್ ವಾಚ್ ಜತೆ ಯೋಗ ಮಾಡಿ, ಯೋಗ ಪ್ರಿಯರಿಗೆ ಆಪಲ್ ವಾಚ್‌ನಲ್ಲಿದೆ ಅಚ್ಚರಿದಾಯಕ ಫೀಚರ್‌ಗಳು
Yoga Day with Apple Watch: ಅಂತಾರಾಷ್ಟ್ರೀಯ ಯೋಗದಿನದಂದು (Yoga Day 2023) ಆಪಲ್ ವಾಚ್ ಮೂಲಕ ನಿಮ್ಮ ದಿನಚರಿ ಆರಂಭಿಸಬಹುದು. ಪ್ರತಿನಿತ್ಯ ಆಪಲ್ ವಾಚ್ ಬಳಸಿ ಯೋಗ ಮಾಡಬಹುದು.
Yoga Day with Apple Watch: ಆಪಲ್ ವಾಚ್ ಇತರೆ ಸಾಮಾನ್ಯ ಫಿಟ್‌ನೆಸ್ ವಾಚ್‌ಗಳಿಗಿಂತ ಹೆಚ್ಚು ಫೀಚರ್ಸ್ ಹೊಂದಿದೆ. ನೀವು ಬೇಕಿದ್ದರೆ ಕಡಿಮೆ ದರದ ಆಪಲ್ ವಾಚ್ ಎಸ್‌ಇ ಅಥವಾ ದುಬಾರಿ ವಾಚ್ ಸೀರಿಸ್ 7 ಖರೀದಿಸಬಹುದು. ಇವುಗಳು ವಿಶ್ವದರ್ಜೆಯ ಫಿಟ್ನೆಟ್ ಆಪ್‌ಗಳು ಇವೆ. ವಿಶ್ವ ಯೋಗ ದಿನದ ಸಂದರ್ಭದಲ್ಲಿ ಆಪಲ್ ವಾಚ್ ಆಪ್‌ಗಳ (Apple Watch apps) ಕುರಿತು ತಿಳಿದುಕೊಳ್ಳೋಣ.
“ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಯೋಗವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಯೋಗವು ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ವಿವಿಧ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆಪಲ್ ವಾಚ್ ಬಳಸಿ ನಮ್ಮ ಆರೋಗ್ಯ ಉತ್ತಮಪಡಿಸಬಹುದು. ಹೃದಯದ ಬಡಿತ, SpO2 ಮಟ್ಟ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಮೈಂಡ್‌ಫುಲ್‌ನೆಸ್ ಮತ್ತು ಬ್ರೀಥ್ ಅಪ್ಲಿಕೇಶನ್‌ಗಳು ಹೆಚ್ಚು ಪ್ರಯೋಜನಕಾರಿ" ಎಂದು ಯೋಗ ಎಕ್ಸ್‌ಪರ್ಟ್ ಶಾನಿ ದಯಾಲ್ ಹೇಳಿದ್ದಾರೆ.
ಆಪಲ್ ವಾಚ್ ಜತೆ ಯೋಗ
ಬ್ರೀಥ್ ಆಪ್ (Breathe App)
ಈ ಆಪ್ ಆಪಲ್ ವಾಚ್‌ನಲ್ಲಿ ಮೊದಲೇ ಲೋಡ್ ಆಗಿರುತ್ತದೆ. ಇದರಲ್ಲಿ ಹಲವು ಸೀರಿಸ್ ಉಸಿರಾಟದ ಗೈಡ್‌ಗಳಿವೆ. ಪ್ರತಿನಿತ್ಯ ಸಮರ್ಪಕವಾಗಿ ಉಸಿರಾಡಲು ಈ ಆಪ್ ನೆನಪು ಮಾಡುತ್ತದೆ. ಎಷ್ಟು ದೀರ್ಘ ಉಸಿರಾಟ ಮಾಡಲು ಬಯಸುವಿರೋ ಅದಕ್ಕೆ ತಕ್ಕಂತೆ ಇದರಲ್ಲಿ ಹೊಂದಾಣಿಕೆ ಮಾಡಬಹುದು. ಇದನ್ನು ಬಳಸಲು ಮೈಂಡ್‌ಫುಲ್‌ನೆಸ್ ಆಪ್ ತೆರೆಯಿರಿ, ನಿಮ್ಮ ಉಸಿರಾಟದ ಕುರಿತು ಪರಿಶೀಲನೆ ನಡೆಸಿ.
ಪ್ರಯೋಗ (Prayoga)
ನಿಮ್ಮ ಐಫೋನ್ ಮತ್ತು ಆಪಲ್ ವಾಚ್‌ನಲ್ಲಿ ಪ್ರಯೋಗ ಪಾಠಗಳು ಲಭ್ಯ. ವಾಚ್ ಒಎಸ್ ಮತ್ತು ಐಒಎಸ್ ಟೆಕ್ನಾಲಜಿ ಜತೆಯಾಗಿ ಬಳಸಬಹುದು. ವಾಚ್‌ನಲ್ಲಿ ಕೇಳಿಸುವ ಆಡಿಯೋ ನೆರವಿನಿಂದ ಆಸನಗಳನ್ನು ಮಾಡಲು ಸೂಚಿಸಲಾಗುತ್ತದೆ. ದೇಹದ ಹದಿನೇಳು ಜಾಯಿಂಟ್‌ಗಳನ್ನು ಈ ವಾಚ್‌ನ ಬಾಡಿ ಟ್ರಾಕಿಂಗ್ ಫೀಚರ್ ಟ್ರ್ಯಾಕ್ ಮಾಡುತ್ತದೆ. ಸರಿಯಾಗಿ ಮಾಡದೆ ಇದ್ದರೆ ಬದಲಾವಣೆಗಳನ್ನು ಸೂಚಿಸುತ್ತದೆ.
ಆಲ್ಟ್ರಾ ಹ್ಯೂಮನ್ (UltraHuman)
ಆರಂಭಿಕರಿಗೆ ಮತ್ತು ಯೋಗ ಕಲಿತವರಿಗೆ ಈ ಟೂಲ್ ನೆರವಾಗುತ್ತದೆ. ವಿಜ್ಞಾನ ಮತ್ತು ಕಲೆಯನ್ನು ಬಳಸಿ ವರ್ಕೌಟ್, ಯೋಗ, ಧ್ಯಾನ, ಬೆಡ್‌ಟೈಮ್ ಕತೆ ಇತ್ಯಾದಿಗಳನ್ನು ಹೊಂದಿದೆ. ಜಗತ್ತಿನ ಪ್ರಮುಖ ನ್ಯೂರೋಸೈಂಟಿಸ್ಟ್‌ಗಳು, ಸೈಕೊಲಾಜಿಸ್ಟ್‌ಗಳು, ಸಂಗೀತಗಾರರು, ಬರಹಗಾರರು, ಯೋಗ ತಜ್ಞರು, ಫಿಟ್ನೆಸ್ ಮತ್ತು ವರ್ಕೌಟ್ ತರಬೇತುದಾರರ ಅನುಭವ ಮತ್ತು ಜ್ಞಾನದಿಂದ ಈ ಆಪ್ ಮುನ್ನಡೆಯುತ್ತದೆ ಎಂದು ಆಪಲ್ ತಿಳಿಸಿದೆ.
ವೈಸಾ(Wysa)
ಇದು ಭಾವನಾತ್ಮಕ ಬುದ್ಧಿಮತ್ತೆ ಹೊಂದಿರುವ ಚಾಟ್‌ಬಟ್ ಹೊಂದಿದ್ದು, ನೀವು ವ್ಯಕ್ತಪಡಿಸುವ ಭಾವನೆಗೆ ಈ ಎಐ ಪ್ರತಿಕ್ರಿಯೆ ನೀಡುತ್ತದೆ. ಸಿಬಿಟಿ, ಡಿಬಿಟಿ, ಯೋಗ ಮತ್ತು ಧ್ಯಾನಕ್ಕೆ ಸಂಬಂಧಪಟ್ಟ ಸಂಶೋಧನೆ ಆಧರಿತ ಟೂಲ್ ಇದಾಗಿದೆ. ಒತ್ತಡ, ಖಿನ್ನತೆ, ನಿದ್ದೆ ಸೇರಿದಂತೆ ಮಾನಸಿಕ ಆರೋಗ್ಯ, ಮಾನಸಿಕ ಸ್ವಾಸ್ತ್ಥಕ್ಕೆ ಬೆಂಬಲ ನೀಡುತ್ತದೆ.
ಕಲ್ಟ್.ಫಿಟ್ (cult.fit)
ವರ್ಕೌಟ್ ಅನ್ನು ಫನ್ ಆಗಿ ಮಾಡಲು ಸಹಕರಿಸುತ್ತದೆ. ಮಾನಸಿಕ ಫಿಟ್ನೆಸ್‌ಗೆ ನೆರವಾಗುವ ಯೋಗ ಮತ್ತು ಧ್ಯಾನ ತಂತ್ರಗಳು ಇದರಲ್ಲಿವೆ. ತೂಕ ಕಳೆದುಕೊಳ್ಳಲು, ಕಾರ್ಡಿಯೊವಾಸ್ಕ್ಯುಲರ್ ಆರೋಗ್ಯ ಸೇರಿದಂತೆ ಹಲವು ಉಪಯೋಗಗಳು ಇದರಲ್ಲಿವೆ.
ಆಸನ ರೆಬಲ್ (Asana Rebel)
ತೂಕ ನಷ್ಟದಿಂದ ಮಾನಸಿಕ ಆರೋಗ್ಯ ಉತ್ತಮಪಡಿಸುವವರೆಗೆ ಹಲವು ವರ್ಕೌಟ್ ಮತ್ತು ಧ್ಯಾನದ ಫೀಚರ್‌ಗಳನ್ನು ಹೊಂದಿದೆ.
ಅರ್ಬನ್: ಸ್ಲೀಪ್ ಆಂಡ್ ಮೆಡಿಟೇಷನ್ (Urban: Sleep & Meditation)
ಅರ್ಬನ್ ಯೋಗಿ ಕೂಡ ನಿಮ್ಮ ಆಪಲ್ ವಾಚ್‌ಗೆ ಸೂಕ್ತವಾದ ಆಪ್. ಧ್ಯಾನ, ಪ್ರತಿನಿತ್ಯ ಸ್ಪೂರ್ತಿದಾಯಕ ವಿಷಯಗಳು, ನಿದ್ದೆಗೆ ಸಹಕಾರಿಯಾಗುವ ಅಂಶಗಳು, ವೈಯಕ್ತಿಕ ಕಾಳಜಿ ಇತ್ಯಾದಿಗಳನ್ನು ಇದರಿಂದ ಪಡೆಯಬಹುದು. ಒತ್ತಡ ರಹಿತವಾಗಿ ಅತ್ಯುತ್ತಮ ನಿದ್ದೆಗೆ ಈ ಆಪ್ ಸಹಕರಿಸುತ್ತದೆ.