logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Andhra Cm Jagan: ವಿಜಯವಾಡ ಚುನಾವಣಾ ರ್‍ಯಾಲಿಯಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆತ; ಹಣೆಗೆ ಗಾಯ

Andhra CM Jagan: ವಿಜಯವಾಡ ಚುನಾವಣಾ ರ್‍ಯಾಲಿಯಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆತ; ಹಣೆಗೆ ಗಾಯ

Raghavendra M Y HT Kannada

Apr 14, 2024 09:15 AM IST

ಚುನಾವಣಾ ರ್‍ಯಾಲಿ ವೇಳೆ ಕಿಡಿಗೇಡಿಗಳು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆದಿದ್ದಾರೆ. ಹಣೆಗೆ ಗಾಯವಾಗಿದೆ.

    • ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಡೆಸುತ್ತಿದ್ದ ಚುನಾವಣಾ ರ್‍ಯಾಲಿಯಲ್ಲಿ ಕಿಡಿಗೇಡಿಗಳು ಹೂಗಳೊಂದಿಗೆ ಕಲ್ಲೆಸೆದಿದ್ದಾರೆ. ಜಗನ್ ಅವರ ಎಡಗಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿದೆ.
ಚುನಾವಣಾ ರ್‍ಯಾಲಿ ವೇಳೆ ಕಿಡಿಗೇಡಿಗಳು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆದಿದ್ದಾರೆ. ಹಣೆಗೆ ಗಾಯವಾಗಿದೆ.
ಚುನಾವಣಾ ರ್‍ಯಾಲಿ ವೇಳೆ ಕಿಡಿಗೇಡಿಗಳು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆದಿದ್ದಾರೆ. ಹಣೆಗೆ ಗಾಯವಾಗಿದೆ.

ವಿಜಯವಾಡ (ಆಂಧ್ರ ಪ್ರದೇಶ): ಚುನಾವಣಾ ರೋಡ್‌ ಶೋ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ (Andhra CM Jagan Mohan Reddy) ಅವರ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಎಡಗಣ್ಣಿನ ಮೇಲ್ಭಾಗದಲ್ಲಿ ತೀವ್ರ ಗಾಯವಾಗಿರುವ ಘಟನೆ ವಿಜಯವಾಡದಲ್ಲಿ (Vijayawada) ನಡೆದಿದೆ. ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟೊಟ್ಟಿಗೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವೈಎಸ್‌ಆರ್‌ಸಿಪಿ ವತಿಯಿಂದ "ಮೇಮಂತಾ ಸಿದ್ಧಂ" ಎಂಬ ಚುನಾವಣಾ ಯಾತ್ರೆಯ (Election Campaign) ವೇಳೆ ಬಸ್‌ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್‌ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ. ಕ್ಯಾಟ್‌ ಬಾಲ್ ಮೂಲಕ ಸಿಎಂ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಜಗನ್ ಅವರ ಹಣೆಗೆ ಗಾಯವಾಗುತ್ತಿದ್ದಂತೆ ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಪಂದಿಸಿದ್ದು, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿ ರೋಡ್ ಶೋ ಮುಂದುವರಿಸಿದ್ದಾರೆ. ಸಿಎಂ ಜಗನ್ ಅವರ ಪಕ್ಕದಲ್ಲಿದ್ದ ಶಾಸಕ ವೆಲ್ಲಂಪಳ್ಳಿ ಅವರ ಎಗಣ್ಣಿಗೂ ಗಾಯವಾಗಿದೆ ಎಂದು ವರದಿಯಾದಿದೆ. ವಿಜಯವಾಡದಲ್ಲಿ ಶನಿವಾರ (ಏಪ್ರಿಲ್ 13) ಮೂರೂವರೆ ಗಂಟೆಗಳ ಕಾಲ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಿತು. ಸದ್ಯ ಆಂಧ್ರ ಸಿಎಂ ಮೇಲಿನ ದಾಳಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ಪಕ್ಷಗಳ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಇದು ಟಿಡಿಪಿ ನಾಯಕರ ಕೃತ್ಯ ಎಂದ ವೈಸಿಪಿ

ಇನ್ನು ಇದೇ ವಿಚಾರವಾಗಿ ಆಡಳಿತ ಪಕ್ಷದ ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ನಾಯಕರ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ಸಿಎಂ ಜಗನ್ ಅವರಿಗೆ ಬರುತ್ತಿರುವ ಜನಬೆಂಬಲವನ್ನು ಸಹಿಸಲಾಗದೆ ತೆಲುಗು ದೇಶಂ ಪಾರ್ಟಿ-ಟಿಡಿಪಿಯವರು ದಾಳಿ ನಡೆಸಲು ನಿರ್ಧರಿಸಿದ್ದಾರೆ ಎಂದು ವಿಜಯವಾಡದ ವೈಎಸ್‌ಆರ್‌ಸಿಪಿ ನಾಯಕರು ಆರೋಪಿಸಿದ್ದಾರೆ. ಟಿಡಿಪಿ ನಾಯಕರೇ ಸಿಎಂ ಜಗನ್ ಮೇಲೆ ದಾಳಿ ಮಾಡಿಸಿದ್ದಾರೆ. ಮೇಮಂತಾ ಸಿದ್ಧಂ ಯಾತ್ರೆಯ ಜನಪ್ರಿಯತೆಯನ್ನು ಸಹಿಸಲಾಗದ ಟಿಡಿಪಿ ಗುಂಪುಗಳು ಹೇಡಿತನದ ಕೃತ್ಯಗಳಿಗೆ ಮುಂದಾಗಿವೆ ಎಂದು ವೈಸಿಪಿ ಸಾಮಾಜಿಕ ಜಾಲತಾಣದ ಘಟಕವು ಟೀಕಿಸಿದೆ. ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದೆ. ಮೇ 13 ರಂದು ರಾಜ್ಯದ ಜನತೆ ಇದಕ್ಕೆಲ್ಲಾ ಉತ್ತರ ನೀಡಲಿದ್ದಾರೆ ಎಂದು ಹೇಳಿದೆ.

ಸಿಎಂ ಜಗನ್ ಮೇಲಿನ ಹಲ್ಲೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್, ನೀವು ಸುರಕ್ಷಿತವಾಗಿರುವುದಕ್ಕೆ ಸಂತೋಷವಾಗಿದೆ. ಸಹೋದರ ವೈಎಸ್ ಜಗನ್ ಜಾಗರೂಕರಾಗಿರಿ. ಎಪಿ ಸಿಎಂ ಜಗನ್ ಮೇಲಿನ ದಾಳಿಯನ್ನು ನಾನು ಬಲವಾಡಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ. ಈ ಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಾನು ವಿನಂತಿಸುತ್ತೇನೆ ಎಂದು ಕೆಟಿಆರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಜನಗ್ ಮೇಲಿನ ಹಲ್ಲೆಯನ್ನು ಎಪಿಸಿಸಿ ಅಧ್ಯಕ್ಷೆ ಹಾಗೂ ಜಗನ್ ಅವರ ಸಹೋದರಿ ವೈಎಸ್ ಶರ್ಮಿಳಾ ಖಂಡಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಿಎಂ ಜಗನ್ ಮೇಲಿನ ಹಲ್ಲೆ ನಡೆಸಿ ಕಣ್ಣನಿ ಮೇಲ್ಭಾಗಕ್ಕೆ ಗಾಯವಾಗಿರುವುದು ದುಃಖಕರ ಮತ್ತು ದುರದೃಷ್ಟಕರ. ಇದು ಆಕಸ್ಮಿಕವಾಗಿ ಸಂಭಿಸಿರಬಹುದು ಎಂದು ನಾನು ಭಾವಿಸುತ್ತೇನೆ. ಇಲ್ಲವಾದರೆ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಇದನ್ನು ಎಲ್ಲರೂ ಖಂಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ. ಸಿಎಂ ಜಗನ್ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶರ್ಮಿಳಾ ಅವರು ಹೇಳಿದ್ದಾರೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ನಡುವಿನ ದೊಡ್ಡ ಸಮರವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ