logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Asteroid: ಗಂಟೆಗೆ 31227 ಕಿಮೀ ವೇಗದಲ್ಲಿ ಇಂದು ಭೂಮಿಯತ್ತ ಬರುತ್ತಿದೆ ಬೃಹತ್‌ ಗಾತ್ರದ ಕ್ಷುದ್ರಗ್ರಹ, ಎಚ್ಚರಿಸಿದ ನಾಸಾ

Asteroid: ಗಂಟೆಗೆ 31227 ಕಿಮೀ ವೇಗದಲ್ಲಿ ಇಂದು ಭೂಮಿಯತ್ತ ಬರುತ್ತಿದೆ ಬೃಹತ್‌ ಗಾತ್ರದ ಕ್ಷುದ್ರಗ್ರಹ, ಎಚ್ಚರಿಸಿದ ನಾಸಾ

Praveen Chandra B HT Kannada

May 23, 2023 02:24 PM IST

Asteroid: ಗಂಟೆಗೆ 31227 ಕಿಮೀ ವೇಗದಲ್ಲಿ ಇಂದು ಭೂಮಿಯತ್ತ ಬರುತ್ತಿದೆ ಬೃಹತ್‌ ಗಾತ್ರದ ಕ್ಷುದ್ರಗ್ರಹ, ಎಚ್ಚರಿಸಿದ ನಾಸಾ

  • Asteroid: ವಿಮಾನವೊಂದರಷ್ಟು ದೊಡ್ಡದಾಗಿರುವ ಕ್ಷುದ್ರಗ್ರಹವೊಂದು ಇಂದು ಭೂಮಿಯ ಸನಿಹಕ್ಕೆ ಆಗಮಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಆ ಕ್ಷುದ್ರಗ್ರಹದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Asteroid: ಗಂಟೆಗೆ 31227 ಕಿಮೀ ವೇಗದಲ್ಲಿ ಇಂದು ಭೂಮಿಯತ್ತ ಬರುತ್ತಿದೆ ಬೃಹತ್‌ ಗಾತ್ರದ ಕ್ಷುದ್ರಗ್ರಹ, ಎಚ್ಚರಿಸಿದ ನಾಸಾ
Asteroid: ಗಂಟೆಗೆ 31227 ಕಿಮೀ ವೇಗದಲ್ಲಿ ಇಂದು ಭೂಮಿಯತ್ತ ಬರುತ್ತಿದೆ ಬೃಹತ್‌ ಗಾತ್ರದ ಕ್ಷುದ್ರಗ್ರಹ, ಎಚ್ಚರಿಸಿದ ನಾಸಾ (Pixabay)

ಈ ವರ್ಷದ ಆರಂಭದಿಂದಲೇ ಸೌರಬಿರುಗಾಳಿಗಳು, ಭೂಕಾಂತೀಯ ಬಿರುಗಾಳಿಗಳು, ಭೂಕಂಪಗಳಂತಹ ಹಲವು ಪರಿಸರ ವಿದ್ಯಮಾನಗಳು ಭೂಮಿಯಲ್ಲಿ ಸಂಭವಿಸಿದೆ. ಆದರೆ, ಪ್ರತಿದಿನವೂ ಭೂಮಿಯ ಹತ್ತಿರಕ್ಕೆ ಕ್ಷುದ್ರಗ್ರಹಗಳು ಬರುತ್ತವೆ. ಈ ರೀತಿ ಭೂಮಿಯ ಹತ್ತಿರಕ್ಕೆ ಕ್ಷುದ್ರಗ್ರಹ ಆಗಮಿಸುವುದನ್ನು ಬೆದರಿಕೆ ಎಂದು ಪರಿಗಣಿಸಬೇಕಾಗಿಲ್ಲ. ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ. ಹವಾಯಿಯ ಮಾಯಿಯಲ್ಲಿರುವ Pans-STARRS1ನಂತಹ ನಾಸಾದ ದೂರದರ್ಶಕಗಳು ಮತ್ತು ಅರಿಜೋನಾದ ಟಕ್ಸನ್‌ ಬಳಿ ಇರುವ ಕ್ಯಾಟಲಿನಾ ಸ್ಕೈ ಸರ್ವೇಯಂತಹ ದೂರದರ್ಶಕಗಳು ಭೂಮಿಗೆ ಕ್ಷುದ್ರಗ್ರಹದಂತಹ ಆಕಾಶಕಾಯಗಳಿಂದ, ಬಾಹ್ಯಾಕಾಶದ ವಿಷಯಗಳಿಂದ ಆಗುವ ಅಪಾಯವನ್ನು ಅವಲೋಕಿಸುತ್ತ ಇರುತ್ತವೆ. ಇವು ಮಾತ್ರವಲ್ಲದೆ ನಾಸಾದ ಅಂತರಿಕ್ಷದಲ್ಲಿರುವ ದೂರದರ್ಶಕಗಳೂ ಆಕಾಶದಾಳಕ್ಕೆ ಕಣ್ಣಿಟ್ಟಿರುತ್ತವೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಇಂತಹ ಹಲವು ದೂರದರ್ಶಕಗಳು, ಬಾಹ್ಯಾಕಾಶ ತಂತ್ರಜ್ಞಾನಗಳ ನೆರವಿನಿಂದ ಭೂಮಿಯತ್ತ ಬರುವ ಕ್ಷುದ್ರಗ್ರಹಗಳ ಮಾಹಿತಿಯನ್ನು ನಾಸಾ ನೀಡುತ್ತಿದೆ. ಇಂದು Asteroid 2023 JK1 ಎಂಬ ಕ್ಷುದ್ರಗ್ರಹ ಭೂಮಿಯ ಸನಿಹಕ್ಕೆ ಆಗಮಿಸಲಿದೆ ಎಂದು ನಾಸಾ ಮಾಹಿತಿ ನೀಡಿದೆ.

ಆಸ್ಟ್ರಾಯ್ಡ್‌ 2023 ಜೆಕೆ1 ವಿವರ

ನಾಸಾದ ಪ್ಲಾನೆಟರಿ ಡಿಫೆನ್ಸ್ ಕೋಆರ್ಡಿನೇಷನ್ ಕಚೇರಿಯು ಬಾಹ್ಯಾಕಾಶ ಮೇಲ್ವಿಚಾರಣೆ ಮಾಡಲು ಮತ್ತು ಭೂಮಿಯ ಸಮೀಪಕ್ಕೆ ಆಗಮಿಸುವ ವಿವಿಧ ವಸ್ತುಗಳ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಹೊಂದಿದೆ. ಇಂದು ಭೂಮಿಯ ಸನಿಹಕ್ಕೆ ಆಸ್ಟ್ರಾಯ್ಡ್‌ 2023 ಜೆಕೆ1 ಎಂಬ ಕ್ಷುದ್ರಗ್ರಹ ಬರುವುದಾಗಿ ಮುನ್ಸೂಚನೆ ನೀಡಿದೆ.

ಈ ಕ್ಷುದ್ರಗ್ರಹವು ಭೂಮಿಯ ಸನಿಹಕ್ಕೆ ಬಂದರೂ ಭೂಮಿಯ ಮೇಲ್ಮೈಗೆ ಯಾವುದೇ ಅಪಾಯ ಮಾಡುವ ಸಾಧ್ಯತೆಯಿಲ್ಲ. Asteroid 2023 JK1 ಭೂಮಿಯಿಂದ ಸುಮಾರು 65 ಲಕ್ಷ ಕಿ.ಮೀ. ದೂರದಲ್ಲಿ ಇದು ಹಾದು ಹೋಗಲಿದೆ. ಅಂದಹಾಗೆ, ಈ ಕ್ಷುದ್ರಗ್ರಹವು 31227 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಈ ಕ್ಷುದ್ರಗ್ರಹವು 91 ಅಡಿ ಎತ್ತರ ಮತ್ತು 203 ಅಡಿ ಅಗಲ ಹೊಂದಿದೆ. ಅಂದರೆ, ಒಂದು ದೊಡ್ಡ ವಿಮಾನದ ಗಾತ್ರವನ್ನು ಹೊಂದಿದೆ.

ಕ್ಷುದ್ರಗ್ರಹವನ್ನು ಅಧ್ಯಯನ ಮಾಡುವುದೇಕೆ?

ಆರಂಭಿಕ ಸೌರ ಮಂಡಲ ವ್ಯವಸ್ಥೆಯ ಕುರಿತು ಹೆಚ್ಚು ತಿಳಿದುಕೊಳ್ಳಲು ವಿಜ್ಞಾನಿಗಳು ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡುತ್ತಾರೆ. ಭೂಮಿಯ ರಚನೆ, ಬ್ರಹ್ಮಾಂಡದ ಅಸ್ತಿತ್ವ ಇತ್ಯಾದಿ ಪ್ರಶ್ನೆಗಳಿಗೆ ಕ್ಷುದ್ರಗ್ರಹಗಳ ಮೂಲಕ ಉತ್ತರ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಕ್ಷುದ್ರಗ್ರಹಗಳು ಎಂದರೇನು?

ಆಸ್ಟ್ರಾಯ್ಡ್‌ ಅಥವಾ ಕ್ಷುದ್ರಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸುವ ಕಲ್ಲಿನ ವಸ್ತು. ಇವು ಗ್ರಹಗಳಿಗಿಂತ ಚಿಕ್ಕದಾಗಿದೆ. ಈಗಾಗಲೇ ಹಲವು ಲಕ್ಷ ಕ್ಷುದ್ರಗ್ರಹಗಳನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮಂಗಳ ಮತ್ತು ಗುರುಗಳ ನಡುವಿನ ಬೆಲ್ಟ್‌ನಲ್ಲಿ ಹಲವು ದಶಲಕ್ಷ ಕ್ಷುದ್ರಗ್ರಹಗಳು ಇರುತ್ತವೆ. ಟ್ರೋಜನ್‌ಗಳೆಂಬ ಕ್ಷುದ್ರಗ್ರಹಗಳು ಗುರು, ನೆಪ್ಚೂನ್‌, ಮಂಗಳನ ಸುತ್ತ ಇರುತ್ತವೆ. ಭೂಮಿಯ ಸನಿಹದಲ್ಲಿರುವ ಕ್ಷುದ್ರಗ್ರಹಗಳು. ಇವುಗಳನ್ನು ನಿಯರ್‌ ಅರ್ಥ್‌ ಆಸ್ಟ್ರಾಯ್ಡ್‌ ಎಂದು ಕರೆಯುತ್ತಾರೆ. ಇವುಗಳಲ್ಲಿ ಹಲವು ಕ್ಷುದ್ರಗ್ರಹಗಳು ಭೂಮಿಗೆ ಅಪಾಯಕಾರಿಯಾಗಿವೆ. ಅಂದರೆ, ಇವುಗಳು ದಿಕ್ಕು ತಪ್ಪಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ