logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಛತ್ತೀಸ್‌ಗಡದ ಡಾಕ್ಟರ್‌ಗೆ ಸಿಕ್ತು 30 ವರ್ಷ ಹಳೆಯ 500 ರೂ ಎಸ್‌ಬಿಐ ಷೇರು; ಈಗದರ ಮೌಲ್ಯ ಎಷ್ಟು, ಎಕ್ಸ್‌ ಬಳಕೆದಾರರ ಕುತೂಹಲ

ಛತ್ತೀಸ್‌ಗಡದ ಡಾಕ್ಟರ್‌ಗೆ ಸಿಕ್ತು 30 ವರ್ಷ ಹಳೆಯ 500 ರೂ ಎಸ್‌ಬಿಐ ಷೇರು; ಈಗದರ ಮೌಲ್ಯ ಎಷ್ಟು, ಎಕ್ಸ್‌ ಬಳಕೆದಾರರ ಕುತೂಹಲ

Umesh Kumar S HT Kannada

Apr 02, 2024 02:47 PM IST

google News

ಡಾ.ತನ್ಮಯ್ ಮೋತಿವಾಲಾ ಅವರು ಎಕ್ಸ್‌ನಲ್ಲಿ ಶೇರ್ ಮಾಡಿರುವ ಎಸ್‌ಬಿಐ ಷೇರು ಪ್ರತಿಯ ಚಿತ್ರ

  • ಛತ್ತೀಸ್‌ಗಡದ ಡಾಕ್ಟರ್‌ಗೆ 30 ವರ್ಷ ಹಳೆಯ 500 ರೂ ಎಸ್‌ಬಿಐ ಷೇರು ಹಳೆಯ ಆಸ್ತಿ ಪ್ರಮಾಣ ಪತ್ರಗಳ ನಡುವೆ ಸಿಕ್ತು. ಈ ವಿಚಾರವನ್ನು ಅವರು ಟ್ವೀಟ್ ಮಾಡಿದ್ರು. ಈಗದರ ಮೌಲ್ಯ ಎಷ್ಟು ಎಂಬುದು ಎಕ್ಸ್ ಬಳಕೆದಾರರ ಕುತೂಹಲ. 

ಡಾ.ತನ್ಮಯ್ ಮೋತಿವಾಲಾ ಅವರು ಎಕ್ಸ್‌ನಲ್ಲಿ ಶೇರ್ ಮಾಡಿರುವ ಎಸ್‌ಬಿಐ ಷೇರು ಪ್ರತಿಯ ಚಿತ್ರ
ಡಾ.ತನ್ಮಯ್ ಮೋತಿವಾಲಾ ಅವರು ಎಕ್ಸ್‌ನಲ್ಲಿ ಶೇರ್ ಮಾಡಿರುವ ಎಸ್‌ಬಿಐ ಷೇರು ಪ್ರತಿಯ ಚಿತ್ರ (X/@Least_ordinary)

ನವದೆಹಲಿ: ಮೂವತ್ತು ವರ್ಷಗಳ ಹಿಂದೆ 500 ರೂಪಾಯಿ ಮೌಲ್ಯದ ಎಸ್‌ಬಿಐ ಷೇರು ಖರೀದಿಸಿದ್ದರು ಆ ದಂಪತಿ. ಬಳಿಕ ಅದನ್ನು ಮರೆತುಬಿಟ್ಟಿದ್ದರು. ಅದು ಈಗ ಅವರ ಮೊಮ್ಮಗನ ಕೈ ಸೇರಿದೆ. ಅದನ್ನು ಡಿಮ್ಯಾಟ್‌ ಖಾತೆಗೆ ಪರಿವರ್ತಿಸಬೇಕಾಗಿದೆ ಎಂಬ ಸುದ್ದಿ ಎಕ್ಸ್‌ನಲ್ಲಿ ಗಮನಸೆಳೆದಿದೆ.

ಇದು ಗಮನಸೆಳೆಯುತ್ತಿದ್ದಂತೆ, ಮೂವತ್ತು ವರ್ಷಗಳ ಹಿಂದೆ 500 ರೂಪಾಯಿ ಮೌಲ್ಯದ ಎಸ್‌ಬಿಐ ಷೇರು ಖರೀದಿಸಿದ್ದರೆ ಅದರ ಮೌಲ್ಯ ಇಂದು ಎಷ್ಟಾಗಿರುತ್ತಿತ್ತು? - ಹೀಗೊಂದು ಪ್ರಶ್ನೆ ಈಗ ಮೈಕ್ರೋಬ್ಲಾಗಿಂಗ್ ಸೈಟ್‌ ಎಕ್ಸ್‌ನಲ್ಲಿ ಗುಯಿಂಗುಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಡಾಕ್ಟರ್ ಒಬ್ಬರು ಹಂಚಿಕೊಂಡ ಎಸ್‌ಬಿಐ ಷೇರು ಪ್ರತಿಯ ಫೋಟೋ ಮತ್ತು ಅವರು ನೀಡಿದ ವಿವರಣೆ!

ಪ್ರೋಸ್ಕೂಲ್ ಹೆಲ್ತ್‌ನ ಸಹಸಂಸ್ಥಾಪಕರಾಗಿರುವ ಪೀಡಿಯಾಟ್ರಿಕ್ ಸರ್ಜನ್‌ ಡಾ. ತನ್ಮಯ್‌ ಮೋತಿವಾಲಾ ಅವರೇ ಈ ರೀತಿ ಟ್ವೀಟ್ ಮಾಡಿರುವುದು. ಮಾರ್ಚ್‌ 28 ರಂದು ಅವರ ಮಾಡಿದ ಈ ಟ್ವೀಟ್‌ಗೆ ಬಹಳ ಸ್ಪಂದನೆ ಸಿಕ್ಕಿದ್ದು, 9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 156 ಸಲ ರೀಟ್ವೀಟ್ ಆಗಿದೆ. 2200ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. 330ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.

ಡಾ. ತನ್ಮಯ್‌ ಮೋತಿವಾಲಾ ಅವರ ಟ್ವೀಟ್‌ ಹೀಗಿದೆ

“ಷೇರುಗಳನ್ನು ಹೊಂದುವುದರ ಪ್ರಯೋಜನ” ಎಂಬ ಸಾಲುಗಳೊಂದಿಗೆ ಡಾ.ತನ್ಮಯ್‌ ಮೋತಿವಾಲಾ ಟ್ವೀಟ್‌ ಶುರುಮಾಡಿದ್ದಾರೆ.

"ನನ್ನ ಅಜ್ಜ ಅಜ್ಜಿ 1994 ರಲ್ಲಿ 500 ರೂಪಾಯಿಯ ಎಸ್‌ಬಿಐ ಷೇರುಗಳನ್ನು ಖರೀದಿಸಿದ್ದರು. ಆ ಮೇಲೆ ಅವರು ಅದನ್ನು ಮರೆತಿದ್ದರು. ವಾಸ್ತವವಾಗಿ, ಅವರು ಅದನ್ನು ಏಕೆ ಖರೀದಿಸಿದರು, ಅದನ್ನು ಯಾಕೆ ಉಳಿಸಿಕೊಂಡರು ಎಂಬುದು ಕೂಡ ಅವರಿಗೆ ತಿಳಿದಿರಲಿಲ್ಲ."

“ಕುಟುಂಬದ ಹಿಡುವಳಿಪತ್ರಗಳನ್ನು ಒಗ್ಗೂಡಿಸುವಾಗ ಒಂದು ಕಡೆ ಈ ರೀತಿಯ ಕೆಲವು ಪ್ರಮಾಣಪತ್ರಗಳನ್ನು ಕಂಡುಕೊಂಡೆ. (ಅವುಗಳನ್ನು ಡಿಮ್ಯಾಟ್ ಗೆ ಪರಿವರ್ತಿಸಲು ಈಗಾಗಲೇ ಕಳುಹಿಸಲಾಗಿದೆ)” ಎಂದು ಮೋತಿವಾಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಆ ಟ್ವೀಟ್ ಇಲ್ಲಿದೆ ನೋಡಿ-

1994ರಲ್ಲಿ 500 ರೂಪಾಯಿ ಇದ್ದ ಎಸ್‌ಬಿಐ ಷೇರುಗಳ ಮೌಲ್ಯ ಈಗೆಷ್ಟು?

ಡಾ. ಮೋತಿವಾಲಾ ಅವರ ಎಕ್ಸ್‌ ಪೋಸ್ಟ್‌ ಓದಿದ ಅನೇಕರು ಎಸ್‌ಬಿಐ ಷೇರುಗಳ ಪ್ರಸ್ತುತ ಮೌಲ್ಯದ ಬಗ್ಗೆ ವಿಚಾರಿಸಿರುವುದು ಕಂಡುಬಂದಿದೆ. ಓದುಗರ ಪ್ರಶ್ನೆಗಳಿಗೆ ಸ್ಪಂದಿಸಿರುವ ಡಾ. ಮೋತಿವಾಲಾ ಒಂದೊಂದು ಪ್ರಶ್ನೆಯನ್ನೂ ಉಲ್ಲೇಖಿಸಿ ಸ್ವಾನುಭವದ ಉತ್ತರ ಕೊಡುತ್ತ ಹೋಗಿದ್ದಾರೆ.

“ಬಹಳ‍ಷ್ಟು ಜನ ಇದರ ಪ್ರಸ್ತುತ ಮೌಲ್ಯದ ಬಗ್ಗೆ ವಿಚಾರಿಸಿದ್ದಾರೆ” ಎಂದು ಅದಕ್ಕೆ ಡಾ.ಮೋತಿವಾಲಾ ಉತ್ತರ ನೀಡಿದ್ದಾರೆ.

“ಇದು ಡಿವಿಡೆಂಡ್‌ಗಳನ್ನು ಹೊರತುಪಡಿಸಿ ಷೇರು ಮೌಲ್ಯ 3.75 ಲಕ್ಷ ರೂಪಾಯಿ ಆಗಿದೆ. ಇದು ದೊಡ್ಡ ಮೊತ್ತವಲ್ಲ. ಆದರೆ 30 ವರ್ಷದಲ್ಲಿ ಇದು 750 ಪಟ್ಟು ಬೆಳೆದಿದೆ”

ನನ್ನ ಫ್ಯಾಮಿಲಿ ಸ್ಟಾಕ್ ಸರ್ಟಿಫಿಕೇಟ್‌ಗಳನ್ನು ನಾನು ಡಿಮ್ಯಾಟ್‌ಗೆ ಹೇಗೆ ಪರಿವರ್ತಿಸಿದೆ?

ಹಲವಾರು ಜನರು ಈ ಸಮಸ್ಯೆಯನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ನಾವು ನಿಜವಾಗಿಯೂ ಸಲಹೆಗಾರ/ಸಮಾಲೋಚಕರ ಸಹಾಯವನ್ನು ತೆಗೆದುಕೊಂಡಿದ್ದೇವೆ. ಪ್ರಕ್ರಿಯೆಯು ತುಂಬಾ ತ್ರಾಸದಾಯಕವಾದುದು. ದೀರ್ಘವಾಗಿರುತ್ತದೆ (ಹೆಸರು, ವಿಳಾಸ, ಸಹಿ ಹೊಂದಾಣಿಕೆ ಇತ್ಯಾದಿಗಳಲ್ಲಿ ಕಾಗುಣಿತ ದೋಷಗಳು ಇರಬಹುದು) ಸಲಹೆಗಾರರ ನೆರವು ಪಡೆದರೂ ಇದು ಬಹಳ ಸಮಯ ತೆಗೆದುಕೊಂಡಿತು. ಆದರೆ ನಾವು ಹೆಚ್ಚಿನ ಪ್ರಮಾಣಪತ್ರಗಳನ್ನು ಡಿಮ್ಯಾಟ್‌ಗೆ ಪರಿವರ್ತಿಸಲು ಸಾಧ್ಯವಾಗಿದೆ.

ಶುಲ್ಕಗಳು?

ಅವು ವಿಭಿನ್ನ ಸಲಹೆಗಾರರಿಗೆ ಬದಲಾಗುತ್ತವೆ. ನಮ್ಮ ಊರಿನಲ್ಲಿ ಅವರ ಲಭ್ಯತೆಯ ಆಧಾರದ ಮೇಲೆ ನಾವು ಅದನ್ನು ಆಯ್ಕೆ ಮಾಡಿದ್ದೇವೆ. ನಾನು ಅದನ್ನು ಏನು ಮಾಡಲು ಯೋಜಿಸುತ್ತಿದ್ದೇನೆ?ಅದನ್ನು ಹಿಡಿದುಕೊಳ್ಳಿ. ಸದ್ಯಕ್ಕೆ ಹಣದ ಅವಶ್ಯಕತೆ ಇಲ್ಲ ಎಂದು ಡಾ. ಮೋತಿವಾಲಾ ಟ್ವೀಟ್‌ನಲ್ಲಿ ಉತ್ತರಿಸಿದ್ದಾರೆ.

ಡಾ, ತನ್ಮಯ್ ಮೋತಿವಾಲಾ ಅವರ ಟ್ವೀಟ್‌

ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದು ಒಬ್ಬೊಬ್ಬರು ಒಂದೊಂದು ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಈ ಪೋಸ್ಟ್ ವೈರಲ್ ಆದ ಬೆನ್ನಿಗೆ ಡಾಕ್ಟರ್‌ ಎರಡನೇ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ