logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Elon Musk: ಎಲಾನ್ ಮಸ್ಕ್ ಮತ್ತೊಮ್ಮೆ ಜಗತ್ತಿನ ನಂಬರ್ 1 ಶ್ರೀಮಂತ; ಭಾರತದ ಅಂಬಾನಿ, ಅದಾನಿಗೆ ಎಷ್ಟನೇ ಸ್ಥಾನ

Elon Musk: ಎಲಾನ್ ಮಸ್ಕ್ ಮತ್ತೊಮ್ಮೆ ಜಗತ್ತಿನ ನಂಬರ್ 1 ಶ್ರೀಮಂತ; ಭಾರತದ ಅಂಬಾನಿ, ಅದಾನಿಗೆ ಎಷ್ಟನೇ ಸ್ಥಾನ

Raghavendra M Y HT Kannada

Jun 02, 2023 09:04 AM IST

ಜಗತ್ತಿನ ನಂಬರ್ ಒನ್ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Twitter)

  • ಉದ್ಯಮಿ ಎಲಾನ್ ಮಸ್ಕ್ ಮತ್ತೆ ಜಗತ್ತಿನ ನಂಬರ್‌ 1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ, ಗೌತಮ್ ದಾನಿ ಕೂಡ ಇದ್ದಾರೆ.

ಜಗತ್ತಿನ ನಂಬರ್ ಒನ್ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Twitter)
ಜಗತ್ತಿನ ನಂಬರ್ ಒನ್ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Twitter)

ವಾಷಿಂಗ್ಟನ್: ಟೆಸ್ಲಾ (Tesla) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್ (Elon Musk) ಮತ್ತೆ ಜಗತ್ತಿನ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ (World Number 1 Businessman).

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ (Bernard Arnault) ಅವರ ಒಡೆತನದ ಐಷಾರಾಮಿ ಉತ್ಪನ್ನಗಳ ಸಂಸ್ಥೆ ಎಲ್‌ವಿಎಂಹೆಚ್ ಷೇರುಗಳು ಪ್ಯಾರಿಸ್ ಷೇರುಪೇಟೆಯಲ್ಲಿ ಶೇ.2.6 ರಷ್ಟು ಕುಸಿತ ಕಂಡ ಬಳಿಕ ಅರ್ನಾಲ್ಡ್ ಅವರನ್ನು ಹಿಂದಿಕ್ಕಿ ಮಸ್ಕ್ ನಂಬರ್ 1 ಸ್ಥಾನಕ್ಕೆ ತಲುಪಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ವಿಶ್ವದ 500 ಶ್ರೀಮಂತರ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಎಲಾನ್ ಮಸ್ಕ್ ಮತ್ತು ಬರ್ನಾರ್ಡ್ ಅರ್ನಾಲ್ಟ್ ಅವರು ನಂಬರ್ 1 ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಲೇ ಇದ್ದಾರೆ.

ಇಡೀ ಜಗತ್ತಿನಲ್ಲಿ ಟೆಕ್ ಸೇರಿದಂತೆ ಹಲವು ಕ್ಷೇತ್ರಗಳು ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಐಷಾರಾಮಿ ವಸ್ತುಗಳ ಉತ್ಪಾದಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎಲ್‌ವಿಎಂಹೆಚ್ ಸಂಸ್ಥೆ ಉತ್ತಮ ಬೆಳವಣಿಗೆ ಕಾಣುವ ಮೂಲಕ ತಮ್ಮ ಶಕ್ತಿ ಏನೆಂದನ್ನು ತೋರಿಸಿದ್ದ 74 ವರ್ಷದ ಅರ್ನಾಲ್ಡ್ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಸ್ಥಾನಕ್ಕೆ ತಲುಪಿ ಅಚ್ಚರಿ ಮೂಡಿಸಿದ್ದರು.

ಇದೀಗ ಐಷಾರಾಮಿ ವಲಯದಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ಈ ಕ್ಷೇತ್ರದಲ್ಲಿನ ಆರ್ಥಿಕ ಬೆಳವಣಿಗೆ ಮಸುಕಾಗಲು ಪ್ರಾರಂಭಿಸಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಚೀನಾದ ಮಾರುಕಟ್ಟೆಯಲ್ಲಿ ಕಳೆದ ಏಪ್ರಿಲ್‌ನಿಂದ ಎಲ್‌ವಿಎಂಎಚ್‌ ಷೇರುಗಳು ಮೌಲ್ಯ ಸುಮಾರು ಶೇ.10 ರಷ್ಟು ಕುಸಿತ ಕಂಡಿದೆ. ಒಂದು ಹಂತದಲ್ಲಿ ಒಂದೇ ದಿನ ಅರ್ನಾಲ್ಟ್ ಅವರ ನಿವ್ವಳ ಆಸ್ತಿಯಲ್ಲಿ 11 ಶತಕೋಟಿ ಡಾಲರ್ ನಷ್ಟು ಕರಗಿಹೋಗಿದೆ.

ಇತ್ತ ಎಲಾನ್ ಮಸ್ಕ್ ಟೆಸ್ಲಾ ಕಂಪನಿಯಲ್ಲಿನ ಉತ್ತಮ ಲಾಭದೊಂದಿಗೆ ಈ ವರ್ಷ 55.5 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಕೆ ಕಂಡಿದ್ದಾರೆ. ಇದರಲ್ಲಿ ಆಸ್ಟಿನ್ ಆಧಾರಿತ ವಾಹನ ತಯಾರಿಕೆಯ ಪಾಲು ಶೇ.71 ರಷ್ಟು ಇದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಪ್ರಕಾರ, ಎಲಾನ್ ಮಸ್ಕ್ ಅವರ ಸಂಪತ್ತು ಪ್ರಸ್ತುತ 192.3 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಜಗತ್ತಿನ ಶ್ರೀಮಂತ ಉದ್ಯಮಿಗಳ ಪೈಕಿ ಎರಡನೇ ಸ್ಥಾನಕ್ಕೆ ಕುಸಿದಿರುವ ಬರ್ನಾರ್ಡ್ ಅರ್ನಾಲ್ಟ್ ಅವರ ಆಸ್ತಿ ಈಗ ಸುಮಾರು 186.6 ಬಿಲಿಯನ್ ಡಾಲರ್‌ನಷ್ಟು ಆಗಿದೆ.

ಮುಕೇಶ್ ಅಂಬಾನಿ, ಗೌತಮ್ ಅದಾನಿಗೆ ಎಷ್ಟನೇ ಸ್ಥಾನ?

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಜಗತ್ತಿನ 500 ಶ್ರೀಮಂತರ ಪಟ್ಟಿಯಲ್ಲಿ ಎಲಾನ್ ಮಸ್ಕ್ ನಂಬರ್ ಒನ್, ಅರ್ನಾಲ್ಟ್ ಎರಡನೇ ಸ್ಥಾನದಲ್ಲಿ ಇದ್ದರೆ, ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ 13ನೇ ಸ್ಥಾನದಲ್ಲಿ ಇದ್ದಾರೆ, ಅದಾನಿ ಒಡೆತನದ ಗೌತಮ್ ಅದಾನಿ 19ನೇ ಸ್ಥಾನದಲ್ಲಿ ಇದ್ದಾರೆ.

ಇನ್ನ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಈ ಹಿಂದೆ ನಂಬರ್ ಸ್ಥಾನಕ್ಕೇರಿದ್ದ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಸ್ 3ನೇ ಸ್ಥಾನದಲ್ಲಿ ಇದ್ದರೆ, ಲ್ಯಾರಿ ಎಲಿಸನ್, ಸ್ವೀವ್ ಬಾಮರ್, ವಾರ್ನರ್ ಬಫೆಟ್, ಲ್ಯಾರಿ ಪೇಜ್ , ಸೆರ್ಗೆಯ್ ಬ್ರಿನ್ ಹಾಗೂ ಮಾರ್ಕ್ ಜುಕರ್ಬರ್ಗ್ ನಂತರದ ಸ್ಥಾನದಲ್ಲಿ ಇದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ