logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jio Recharge Offer: ನಿಮ್ಮಲ್ಲಿ ಜಿಯೋ ಸಿಮ್‌ ಇದೆಯಾ, 7ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಯೋದಿಂದ ರಿಚಾರ್ಜ್‌ ಆಫರ್‌ಗಳ ಸುರಿಮಳೆ

Jio Recharge Offer: ನಿಮ್ಮಲ್ಲಿ ಜಿಯೋ ಸಿಮ್‌ ಇದೆಯಾ, 7ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಯೋದಿಂದ ರಿಚಾರ್ಜ್‌ ಆಫರ್‌ಗಳ ಸುರಿಮಳೆ

HT Kannada Desk HT Kannada

Sep 05, 2023 02:24 PM IST

7ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಯೋದಿಂದ ರಿಚಾರ್ಜ್‌ ಆಫರ್‌ಗಳ ಸುರಿಮಳೆ

    • Jio 7th Anniversary Recharge Offer: ಜಿಯೋ ಸಿಮ್‌ ಬಳಸುವವರಿಗೆ ರಿಲಯೆನ್ಸ್‌ ಕಂಪನಿಯು ಭರ್ಜರಿ ಆಫರ್‌ಗಳನ್ನು ನೀಡಿದೆ. ಜಿಯೋ ಸಿಮ್‌ ಪರಿಚಯಿಸಿ ಏಳು ವರ್ಷವಾದ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಡೇಟಾ ಸೇರಿದಂತೆ ಹಲವು ಆಫರ್‌ ನೀಡಿದೆ.
7ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಯೋದಿಂದ ರಿಚಾರ್ಜ್‌ ಆಫರ್‌ಗಳ ಸುರಿಮಳೆ
7ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಯೋದಿಂದ ರಿಚಾರ್ಜ್‌ ಆಫರ್‌ಗಳ ಸುರಿಮಳೆ

ಭಾರತದಲ್ಲಿ ಮೊಬೈಲ್‌ ಸಿಮ್‌ ಕಾರ್ಡ್‌ಗಳಿಗೆ ರಿಚಾರ್ಜ್‌ ಮಾಡುವುದು ದುಬಾರಿಯಾಗಿದ್ದ ಕಾಲವಿತ್ತು. ಒಂದು ಜಿಬಿ ಇಂಟರ್‌ನೆಟ್‌ಗೆ ಸಾಕಷ್ಟು ಹಣ ನೀಡಬೇಕಿತ್ತು. ಆದರೆ, ಏಳು ವರ್ಷದ ಹಿಂದೆ ಆಗಮಿಸಿದ ಜಿಯೋ ಕಂಪನಿಯು ಹಲವು ಭರ್ಜರಿ ಆಫರ್‌ಗಳನ್ನು ನೀಡಿತ್ತು. ಜನರಿಗೆ ಹಲವು ನೂರು ಜಿಬಿ ಡೇಟಾಗಳನ್ನು ಸುಲಭವಾಗಿ ಪಡೆಯಲು ಅವಕಾಶ ನೀಡಿತ್ತು. ಈಗ ಜಿಯೋ ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್‌ ನೆಟ್‌ವರ್ಕ್‌ ಕಂಪನಿಗಳ ಇಂಟರ್‌ನೆಟ್‌ ದುಬಾರಿಯಾಗಿ ಪರಿಣಮಿಸಿದ್ದರೂ ಆಗಿನ ಕಾಲದಲ್ಲಿ ತುಂಬಾ ಅಗ್ಗಕ್ಕೆ ಜಿಯೋ ಸೇವೆಗಳು ದೊರಕುತ್ತಿತ್ತು. ಭಾರತದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಮತ್ತು ಇಂಟರ್‌ನೆಟ್‌ ಕ್ಷೇತ್ರದಲ್ಲಿ ಹೊಸ ಶಕೆಯನ್ನೇ ಜಿಯೋ ಆರಂಭಿಸಿತ್ತು. ಭಾರತದಲ್ಲಿ ಜಿಯೋ ಸೇವೆಗಳು ಆರಂಭವಾಗಿ ಏಳು ವರ್ಷವಾದ ಪ್ರಯುಕ್ತ ಇದೀಗ ಜಿಯೋ ಭರ್ಜರಿ ಆಫರ್‌ಗಳನ್ನು ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಜಿಯೋದ 7ನೇ ವಾರ್ಷಿಕೋತ್ಸವದ ಕೆಲವು ಪ್ಲ್ಯಾನ್‌ಗಳು

299 ರೂಪಾಯಿ ರೀಚಾರ್ಜ್ ಪ್ಲ್ಯಾನ್‌: 28 ದಿನಕ್ಕೆ ಪ್ರತಿದಿನಕ್ಕೆ 2 ಜಿಬಿ ಇಂಟರ್‌ನೆಟ್‌ ಡೇಟಾ, ಅನಿಯಮಿತ ವಾಯ್ಸ್‌ ಕಾಲ್‌, ದಿನಕ್ಕೆ ನೂರು ಎಸ್‌ಎಂಎಸ್‌ ದೊರಕುತ್ತದೆ. ವಿಶೇಷ ಪ್ರಯೋಜನಡಿಯಲ್ಲಿ ಏಳು ಜಿಬಿ ಹೆಚ್ಚುವರಿ ಡೇಟಾ ದೊರಕುತ್ತದೆ.

749 ರೂಪಾಯಿ ರೀಚಾರ್ಜ್: ಈ ಯೋಜನೆಯಲ್ಲಿ 90 ದಿನಗಳ ಕಾಲ ದಿನಕ್ಕೆ 2 ಜಿಬಿ ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯವಾಗಿದೆ. ವಿಶೇಷ ಕೊಡುಗೆಯಾಗಿ ಹೆಚ್ಚುವರಿ 14 ಜಿಬಿ ಹೆಚ್ಚುವರಿ ಡೇಟಾ ದೊರಕುತ್ತದೆ.

2999 ರೂಪಾಯಿ ಪ್ಲ್ಯಾನ್‌

ಒಂದು ವರ್ಷಕ್ಕೆ ಪ್ರತಿದಿನ 2.5 ಜಿಬಿ ಪಡೆಯಬಹುದು. ಇದರಲ್ಲಿ 21 ಜಿಬಿ ಹೆಚ್ಚುವರಿ ಡೇಟಾ ಸೇರಿದಂತೆ, ಹಲವು ಕೊಡುಗೆಗಳನ್ನು ನೀಡಲಾಗುತ್ತದೆ. ಅನಿಯಮಿತ ಧ್ವನಿ ಕರೆ, ಪ್ರತಿದಿನ ನೂರು ಎಸ್‌ಎಂಎಸ್‌ ಇತ್ಯಾದಿ ಹಲವು ಫೀಚರ್‌ಗಳು ಇವೆ.

ಇದು ಜಿಯೋ ನೀಡುತ್ತಿರುವ ಕೆಲವು ಉಚಿತ ಮತ್ತು ಅನಿವರ್ಸರಿ ಪ್ಲ್ಯಾನ್‌ಗೆ ಉದಾಹರಣೆಯಷ್ಟೇ. ನಿಮ್ಮ ಮೊಬೈಲ್‌ನಲ್ಲಿರುವ ಜಿಯೋ ಆಪ್‌ನಲ್ಲಿ ಈ ಕುರಿತು ಹೆಚ್ಚಿನ ವಿವರ ಪಡೆಯಬಹುದು. ನಿಮ್ಮ ಪ್ರತಿನಿತ್ಯದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಜಿಯೋ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ