logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Coin Vending Machine: ಕ್ಯೂಆರ್‌ ಕೋಡ್‌ ಆಧಾರಿತ ನಾಣ್ಯ ವಿತರಣಾ ಯಂತ್ರ; ಇದರ ಕಾರ್ಯನಿರ್ವಹಣೆ ಹೇಗೆ?

Coin vending machine: ಕ್ಯೂಆರ್‌ ಕೋಡ್‌ ಆಧಾರಿತ ನಾಣ್ಯ ವಿತರಣಾ ಯಂತ್ರ; ಇದರ ಕಾರ್ಯನಿರ್ವಹಣೆ ಹೇಗೆ?

HT Kannada Desk HT Kannada

Feb 08, 2023 01:40 PM IST

ಸಾಂಕೇತಿಕ ಚಿತ್ರ

  • Coin vending machine: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ಯೂಆರ್ ಕೋಡ್ ಆಧಾರಿತ ನಾಣ್ಯ ವಿತರಣಾ ಯಂತ್ರಗಳನ್ನು ಸ್ಥಾಪಿಸುವ ಪ್ರಾಯೋಗಿಕ ಯೋಜನೆಯನ್ನು ಕೇಂದ್ರೀಯ ಬ್ಯಾಂಕ್ ಪ್ರಾರಂಭಿಸಲಿದೆ ಎಂದು ಬುಧವಾರ ಹೇಳಿದರು. ಈ ನಾಣ್ಯ ವಿತರಣಾ ಯಂತ್ರ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ನಮಗೆ ತಿಳಿದಿರುವ ವಿವರ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (Livemint)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ಯೂಆರ್ ಕೋಡ್ ಆಧಾರಿತ ನಾಣ್ಯ ವಿತರಣಾ ಯಂತ್ರಗಳನ್ನು ಸ್ಥಾಪಿಸುವ ಪ್ರಾಯೋಗಿಕ ಯೋಜನೆಯನ್ನು ಕೇಂದ್ರೀಯ ಬ್ಯಾಂಕ್ ಪ್ರಾರಂಭಿಸಲಿದೆ ಎಂದು ಬುಧವಾರ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ವಿತ್ತೀಯ ನೀತಿಯ ಫಲಿತಾಂಶ ಪ್ರಕಟಿಸಿದ ಅವರು, ನಾಣ್ಯಗಳ ಲಭ್ಯತೆಯನ್ನು ಒದಗಿಸುವುದಕ್ಕೆ ವಹಿವಾಟು ಸುಲಭಗೊಳಿಸಲು ಈ ಉಪಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

“ ಯುಪಿಐ ಸೌಲಭ್ಯದ ಮೂಲಕ ಗ್ರಾಹಕರಿಗೆ ಸುಲಭವಾಗಿ ಮತ್ತು ಕೂಡಲೇ ಕಾಯಿನ್‌ ಲಭ್ಯತೆಯನ್ನು ಖಾತರಿಪಡಿಸುವ ಕೆಲಸವನ್ನು ಹೊಸ QR-ಕೋಡ್ ಆಧಾರಿತ ಕಾಯಿನ್‌ ವೆಂಡಿಂಗ್‌ ಮಷಿನ್‌ ಉಪಕ್ರಮ ಮಾಡಲಿದೆ. ಮೊದಲ ಹಂತದಲ್ಲಿ ಭಾರತದ 12 ನಗರಗಳಲ್ಲಿ ಇದರ ಪ್ರಾಯೋಗಿಕ ಅನುಷ್ಠಾನ ನಡೆಯಲಿದೆ. ಆರ್‌ಬಿಐನ ಈ ಕ್ರಮವು ಕಾರ್ಯತಂತ್ರದ ನಿರ್ಧಾರವಾಗಿದ್ದು, ಇದು ಭಾರತೀಯ ಪಾವತಿ ಕ್ಷೇತ್ರಕ್ಕೆ ಬಹುದೊಡ್ಡ ಪ್ರಯೋಜನವನ್ನು ನೀಡುತ್ತದೆ ಎಂದು ಭಾರತ ಮತ್ತು ಫಿಲಿಪ್ಪೀನ್ಸ್‌ ಪ್ರಾಂತ್ಯದ ಎಫ್‌ಐಎಸ್‌ನ ಬ್ಯಾಂಕಿಂಗ್ ಮತ್ತು ಪಾವತಿಗಳ ಮುಖ್ಯಸ್ಥ ರಾಜಶ್ರೀ ರೆಂಗನ್ ಹೇಳಿದ್ದಾರೆ.

ಕ್ಯೂಆರ್‌ ಕೋಡ್‌ ಆಧಾರಿತ ಕಾಯಿನ್‌ ವೆಂಡಿಂಗ್‌ ಮಷಿನ್‌; ಇದುವರೆಗೆ ನಮಗೆ ತಿಳಿದಿರುವುದು ಇಷ್ಟು

  1. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಾಯೋಗಿಕವಾಗಿ ದೇಶದ 12 ನಗರಗಳಲ್ಲಿ 19 ಕಡೆಗಳಲ್ಲಿ ಕ್ಯೂಆರ್‌ ಕೋಡ್‌ ಆಧಾರಿತ ಕಾಯಿನ್‌ ವೆಂಡಿಂಗ್‌ ಮಷಿನ್‌ ಸ್ಥಾಪಿಸಲಿದೆ.
  2. ಈ ವೆಂಡಿಂಗ್‌ ಯಂತ್ರಗಳು ಗ್ರಾಹಕರ ಖಾತೆಗೆ ಕಾಯಿನ್ಸ್‌ ಅನ್ನು ಜಮೆ ಮಾಡಲಿದೆ.
  3. ಭೌತಿಕ ನಗದು ನೋಟುಗಳನ್ನು ಒದಗಿಸುವ ಬದಲಾಗಿ ಈ ವೆಂಡಿಂಗ್‌ ಯಂತ್ರವು ಯುಪಿಐ ಬಳಸಿಕೊಂಡು ಗ್ರಾಹಕರ ಖಾತೆಗೆ ನೇರವಾಗಿ ಕಾಯಿನ್‌ ಜಮೆ ಮಾಡುತ್ತದೆ.
  4. ಈ ಉಪಕ್ರಮವು ಕಾಯಿನ್‌ಗಳ ಲಭ್ಯತೆಯನ್ನು ಇನ್ನಷ್ಟು ಸುಧಾರಿಸಲಿದೆ.
  5. ಈ ಮಷಿನ್‌ಗಳನ್ನು ಬಳಸಿಕೊಂಡು ಕಾಯಿನ್‌ ವಿತರಣೆ ಮಾಡುವುದಕ್ಕೆ ಬ್ಯಾಂಕುಗಳಿಗೆ ಸೂಕ್ತ ಮಾರ್ಗಸೂಚಿಯನ್ನು ಆರ್‌ಬಿಐ ರವಾನಿಸಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ರೆಪೋದರ ಶೇಕಡ 0.25 ಏರಿಕೆ

ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (25 ಬಿಪಿಎಸ್ - 0.25%) ಹೆಚ್ಚಿಸಲಾಗಿದೆ. ಇದು ತಕ್ಷಣವೇ ಜಾರಿಗೆ ಬರಲಿದೆ. ಇದರೊಂದಿಗೆ ರೆಪೋ ದರ ಶೇ.6.25ರಿಂದ ಶೇ.6.50ಕ್ಕೆ ಏರಿಕೆಯಾಗಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದರು.

ಆರ್‌ಬಿಐ ಈ ದರವನ್ನು ಸತತ ಆರನೇ ಬಾರಿ ಹೆಚ್ಚಿಸಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಕಂತುಗಳಲ್ಲಿ ಆರ್‌ಬಿಐ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಅಂದರೆ ಬಡ್ಡಿ ದರ ಶೇ.2.5ರಷ್ಟು ಹೆಚ್ಚಾಗಿದ್ದು ಈಗ ಶೇ.6.50ಕ್ಕೆ ತಲುಪಿದೆ. ಅಲ್ಲದೆ, 2023-24ರ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯು ಶೇಕಡ 6.4 ಆಗುವ ನಿರೀಕ್ಷೆಯಿದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದ್ದಾರೆ.

ಆರ್‌ಬಿಐ ಕಳೆದ ವರ್ಷ ಡಿಸೆಂಬರ್‌ನಲ್ಲಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. ಅದಕ್ಕೂ ಮುನ್ನ ಮೂರು ಬಾರಿ ತಲಾ 50 ಅಂಶ ಏರಿಸಿತ್ತು. ದೇಶದ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಈಗ ರೆಪೋದರವನ್ನು ಏರಿಸುವ ಕ್ರಮವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕಳೆದ ಕೆಲವು ಎಂಪಿಸಿ ಸಭೆಗಳಲ್ಲಿ ಅನುಮೋದಿಸುತ್ತ ಬಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ