logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Woman Marriage Bill: ಮಹಿಳೆಯರ ಮದುವೆ ವಯಸ್ಸು18ರಿಂದ 21ಕ್ಕೆ ಹೆಚ್ಚಿಸುವ ವಿಧೇಯಕ ರದ್ದು ಸಾಧ್ಯತೆ

Woman marriage Bill: ಮಹಿಳೆಯರ ಮದುವೆ ವಯಸ್ಸು18ರಿಂದ 21ಕ್ಕೆ ಹೆಚ್ಚಿಸುವ ವಿಧೇಯಕ ರದ್ದು ಸಾಧ್ಯತೆ

Umesha Bhatta P H HT Kannada

Feb 12, 2024 05:37 PM IST

ಭಾರತದಲ್ಲಿ ಮಹಿಳೆಯರ ಮದುವೆ ವಯಸ್ಸು ಏರಿಸುವ ವಿಧೇಯಕ ಲೋಕಸಭೆಯಲ್ಲಿ ಜಾರಿಯಾಗಿಯೇ ಇಲ್ಲ.

    • ಭಾರತದಲ್ಲಿ ಮಹಿಳೆಯರ ಮದುವೆ ವಯಸ್ಸು ಏರಿಸಬೇಕು ಎನ್ನುವ ಪ್ರಸ್ತಾವ ಹಳೆಯದ್ದು. ಇದನ್ನು ತಿದ್ದುಪಡಿ ಮೂಲಕ ತರಲು ಕೇಂದ್ರ ಸರ್ಕಾರ ಮೂರು ವರ್ಷದ ಹಿಂದೆ ವಿಧೇಯಕ ಮಂಡಿಸಿತ್ತು. ಆದೂ ಜಾರಿಯಾಗದೇ ಹಾಗೆ ಉಳಿದುಕೊಂಡಿದ್ದು, ಅವಧಿಯೂ ಮುಗಿಯುವ ಹಂತಕ್ಕೆ ಬಂದಿದೆ. 
ಭಾರತದಲ್ಲಿ ಮಹಿಳೆಯರ ಮದುವೆ ವಯಸ್ಸು ಏರಿಸುವ ವಿಧೇಯಕ ಲೋಕಸಭೆಯಲ್ಲಿ ಜಾರಿಯಾಗಿಯೇ ಇಲ್ಲ.
ಭಾರತದಲ್ಲಿ ಮಹಿಳೆಯರ ಮದುವೆ ವಯಸ್ಸು ಏರಿಸುವ ವಿಧೇಯಕ ಲೋಕಸಭೆಯಲ್ಲಿ ಜಾರಿಯಾಗಿಯೇ ಇಲ್ಲ.

ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರತಿ ಅಧಿವೇಶದಲ್ಲಿ ಒಂದಿಲ್ಲೊಂದು ವಿಧೇಯಕ ಮಂಡಿಸುತ್ತಲೇ ಇರುತ್ತದೆ. ಅದರಲ್ಲಿ ಸಾಮಾಜಿಕ ವಿಷಯಗಳ ವಿಧೇಯಕಗಳೂ ಇವೆ. ಮೂರು ವರ್ಷದ ಹಿಂದೆ ಇದೇ ರೀತಿ ಭಾರೀ ಸದ್ದಿನೊಂದಿಗೆ ಮಂಡಿಸಿದ ವಿಧೇಯಕ ಜಾರಿಯಾಗದೇ ಅದರ ಅವಧಿ ಮುಗಿಯುವ ಹಂತಕ್ಕೆ ಬಂದಿದೆ. ಈ ಅಧಿವೇಶನದಲ್ಲಿ ವಿಧೇಯಕ ಜಾರಿಯಾಗದೇ ಇದ್ದರೆ ಹೊಸದಾಗಿ ಮಂಡಿಸಬೇಕಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಅದು ಭಾರತದಲ್ಲಿ ಮಹಿಳೆಯರ ವಿವಾಹ ವಯಸ್ಸಿನ ಏರಿಕೆ ವಿಧೇಯಕ ಇದೇ ರೀತಿ ಗೊಂದಲಗಳಿಂದ ಕಡತದಲ್ಲಿಯೇ ಉಳಿದಿಕೊಂಡಿದೆ.

ಭಾರತದಲ್ಲಿ ಸದ್ಯ ಮಹಿಳೆಯರ ಮದುವೆ ಕನಿಷ್ಠ ವಯಸ್ಸು 18 ವರ್ಷ ಇದೆ. ಪುರುಷರಿಗೆ 21 ವರ್ಷ ವಯಸ್ಸಾಗಿದ್ದರೆ ಮದುವೆಯಾಗಬಹುದು. ಮಹಿಳೆಯರ ವಯಸ್ಸನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆದಿದ್ದವು. ಅವರು ಕನಿಷ್ಠ ಪದವಿಯನ್ನಾದರೂ ಪೂರೈಸಬೇಕು. ಇದರಿಂದ ಅವರ ಜೀವನವೂ ಸಶಕ್ತಗೊಳ್ಳಲಿದೆ. ಬೇಗನೇ ಮದುವೆಯಾಗಿ ಬದುಕು ರೂಪಿಸಿಕೊಳ್ಳಲು ಅಡ್ಡಿಯಾಗಲಿದೆ ಎನ್ನುವ ಆಶಯ ಇದರ ಹಿಂದೆ ಇತ್ತು.

2021 ರಲ್ಲಿಯೇ ಎನ್‌ಡಿಎ ಸರ್ಕಾರ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಹೆಚ್ಚಿಸುವ ವಿಧೇಯಕವನ್ನು ಮಂಡಿಸಿತ್ತು. ಬಾಲ್ಯವಿವಾಹ( ತಿದ್ದುಪತಿ) ಮಸೂದೆ 2021 ಯನ್ನು ಹತ್ತು ಸದಸ್ಯರ ಕಾರ್ಯಪಡೆಯ ಶಿಫಾರಸ್ಸಿನ ಮೇರೆಗೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಇದರಲ್ಲಿ ಏಕೆ ಮದುವೆ ವಯಸ್ಸು ಏರಿಸಬೇಕು. ಇದರಿಂದ ಸಾಮಾಜಿಕವಾಗಿ ಏನು ಬದಲಾವಣೆ ಆಗಲಿದೆ. ಅದಕ್ಕಿಂತ ಮುಂಚೆ ಮದುವೆಯಾದರೆ ಏನೇನೂ ಕಾನೂನಾತ್ಮಕ ತೊಡಕು ಆಗಲಿದೆ. ಮದುವೆಯಾಗುವವರಿಗೆ ಹಾಗೂ ಮದುವೆ ಮಾಡಿಸುವವರಿಗೆ, ಕುಟುಂಬದ ಸದಸ್ಯರು ಕಾನೂನಿನ ಪರಿಣಾಮ ಎದುರಿಸುವ ಅಂಶಗಳು ಇದ್ದವು. ಈಗಾಗಲೇ 18 ವರ್ಷ ವರ್ಷದೊಳಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಕಾನೂನು ರೀತಿಯ ಕ್ರಮ ಕುಟುಂಬದವರ ಮೇಲೆ ಆಗುತ್ತಲೇ ಇದೆ. ಇದೇ ರೀತಿಯ ಕಾನೂನಿನಲ್ಲಿ ಶಿಕ್ಷೆ ನೀಡುವ ಅಂಶಗಳನ್ನು ಈ ವಿಧೇಯಕ ಒಳಗೊಂಡಿತ್ತು.

ಕೆಲ ಪಕ್ಷಗಳ ವಿರೋಧ

ಮೂರು ವರ್ಷದ ಹಿಂದೆಯೇ ಬಲು ಉಮೇದಿನಿಂದಲೇ ಕೇಂದ್ರ ಸರ್ಕಾರ ಈ ವಿಧೇಯಕ ಮಂಡಿಸಿದರೂ ಆನಂತರ ಈ ಕುರಿತು ಚರ್ಚೆಗಳು ನಡೆಯದೇ ಅಲ್ಲಿಯೇ ಅದು ಉಳಿದು ಹೋಯಿತು. ಈಗಲೂ ಮೂರು ವರ್ಷದಿಂದ ವಿಧೇಯಕ ಕಡತಗಳಲ್ಲಿ ಸೇರಿ ಹೋಗಿದೆಯೇ ಹೊರತು ಲೋಕಸಭೆಯಲ್ಲಿ ಅನುಮತಿ ಸಿಕ್ಕಿಲ್ಲ.

ಇದಕ್ಕೆ ನಾನಾ ಕಾರಣಗಳಿದ್ದು, ಸರಿಯಾದ ಮಾಹಿತಿಯಿಲ್ಲದೇ ವಿಧೇಯಕ ಜಾರಿಗೊಳಿಸುವುದು ಬೇಡ ಎನ್ನುವ ಅಭಿಪ್ರಾಯ ಡಿಎಂಕೆ ಸಹಿತ ನಾನಾ ಪಕ್ಷಗಳಿಂದ ವ್ಯಕ್ತವಾಗಿತ್ತು.

ಅವಧಿ ಮುಗಿಯುವ ಹೊತ್ತು

ಲೋಕಸಭೆ ಇಲ್ಲವೇ ರಾಜ್ಯಸಭೆಯಲ್ಲಿ ಯಾವುದೇ ವಿಧೇಯಕ ಮಂಡನೆಯಾದರೆ ಅದು ಮೂರು ವರ್ಷದೊಳಗೆ ಸದನದ ಒಪ್ಪಿಗೆ ಪಡೆಯಬೇಕು. ಆನಂತರ ರಾಷ್ಟ್ರಪತಿಗಳ ಅಂಕಿತದ ಬಳಿಕ ಹೊಸ ಸರ್ಕಾರಿ ಆದೇಶ ಜಾರಿಯಾಗುತ್ತದೆ. ಅಲ್ಲಿಂದ ಹೊಸ ಕಾನೂನು ಜಾರಿಯಾಗುವುದು ಪದ್ದತಿ. ಅನುಮತಿ ಪಡೆಯದೇ ಇದ್ದರೆ ಆ ವಿಧೇಯಕ ರದ್ದಾಗಲಿದೆ.

ಈಗ ಮಹಿಳೆಯರ ಮದುವೆ ವಯಸ್ಸು ಹೆಚ್ಚಿಸುವ ವಿಧೇಯಕವೂ ಅಂಗೀಕಾರವಾಗದೇ ಲೋಕಸಭೆಯಲ್ಲಿ ಹಾಗೆಯೇ ನಿಂತಿದೆ. ಈಗ ನಡೆಯುತ್ತಿರುವುದು 17 ನೇ ಲೋಕಸಭೆಯ ಕಡೆಯ ಅಧಿವೇಶನ. ಈಗ ಇದು ಜಾರಿಯಾಗದೇ ಇದ್ದರೆ ಮುಂದಿನ ಸರ್ಕಾರದ ಅವಧಿಯಲ್ಲಿ ವಿಧೇಯಕವನ್ನು ಹೊಸದಾಗಿ ಮಂಡಿಸಬೇಕಾಗುತ್ತದೆ ಎನ್ನುವುದು ತಜ್ಞರ ನುಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ