logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi Dog Love: ರಾಹುಲ್‌ಗಾಂಧಿ ಮನೆಗೆ ಗೋವಾದಿಂದ ಬಂದ ಹೊಸ ಅತಿಥಿ: ಸೋನಿಯಾಗಾಂಧಿಗೂ ಪುಳಕ

Rahul Gandhi Dog Love: ರಾಹುಲ್‌ಗಾಂಧಿ ಮನೆಗೆ ಗೋವಾದಿಂದ ಬಂದ ಹೊಸ ಅತಿಥಿ: ಸೋನಿಯಾಗಾಂಧಿಗೂ ಪುಳಕ

HT Kannada Desk HT Kannada

Oct 05, 2023 09:52 AM IST

ರಾಹುಲ್‌ಗಾಂಧಿ ಅವರ ನಿವಾಸಕ್ಕೆ ಆಗಮಿಸಿ ಅತಿಥಿಯನ್ನು ಸ್ವಾಗತಿಸಿದ ಸೋನಿಯಾಗಾಂಧಿ,

    • Rahul Gandhi dog love ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗೋವಾಕ್ಕೆ ಹೋದಾಗ ಅಲ್ಲಿ ಕಂಡ ಶ್ವಾನಕ್ಕೆ ಫಿದಾ ಆಗಿದ್ದರು. ಅದನ್ನು ತಮಗೆ ಕೊಡುವಂತೆ ಕೇಳಿಕೊಂಡಿದ್ದರು. ಈಗ ಆ ಅತಿಥಿ ರಾಹುಲ್‌ ಮನೆ ಸೇರಿದೆ. ಮನೆಯವರನ್ನೂ ಖುಷಿಗೊಳಿಸಿದೆ.
ರಾಹುಲ್‌ಗಾಂಧಿ ಅವರ ನಿವಾಸಕ್ಕೆ ಆಗಮಿಸಿ ಅತಿಥಿಯನ್ನು ಸ್ವಾಗತಿಸಿದ ಸೋನಿಯಾಗಾಂಧಿ,
ರಾಹುಲ್‌ಗಾಂಧಿ ಅವರ ನಿವಾಸಕ್ಕೆ ಆಗಮಿಸಿ ಅತಿಥಿಯನ್ನು ಸ್ವಾಗತಿಸಿದ ಸೋನಿಯಾಗಾಂಧಿ,

ದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಮನೆಗೆ ಹೊಸ ಹಾಗೂ ವಿಭಿನ್ನ ಅತಿಥಿಯ ಪ್ರವೇಶವಾಗಿದೆ. ಹೊಸ ಅತಿಥಿ ಬಂದಿರುವುದು ಗೋವಾದಿಂದ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ದೆಹಲಿಯಲ್ಲಿರುವ ತಮ್ಮನಿವಾಸಕ್ಕೆ ಬಂದ ಅತಿಥಿಯನ್ನು ರಾಹುಲ್‌ ಗಾಂಧಿ ಹಾಗೂ ಅವರ ತಾಯಿ ಸೋನಿಯಾಗಾಂಧಿ ಖುಷಿಯಿಂದಲೇ ಬರ ಮಾಡಿಕೊಂಡಿದ್ದಾರೆ.

ಅದೂ ವಿಶ್ವ ಪ್ರಾಣಿ ದಿನವಾದ ಅಕ್ಟೋಬರ್‌ 3ರಂದು ತಮ್ಮ ಮನೆಗೆ ಬಂದ ಹೊಸ ಅತಿಥಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ರಾಹುಲ್‌ಗಾಂಧಿ ಪರಿಚಯಿಸಿದ್ಧಾರೆ.

ಅತಿಥಿ ಹೆಸರು ನೂರಿ. ಅದು ಜಾಕ್‌ ರೆಸಲ್‌ ಟೆರಿಯರ್‌ (Jack Russell Terrier puppy) ತಳಿಯ ನಾಯಿ. ಆಗಸ್ಟ್‌ನಲ್ಲಿ ಗೋವಾ ಪ್ರವಾಸ ಹೋಗಿದ್ದ ರಾಹುಲ್‌ ಗಾಂಧಿ ಅವರು ಅಲ್ಲಿ ಈ ನಾಯಿ ತಳಿಯನ್ನು ಕಂಡು ಆಸಕ್ತರಾಗಿದ್ದರು. ಅದನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಆನಂತರ ಉತ್ತರ ಗೋವಾದ ಮಾಪುಸಾದಲ್ಲಿ ದಂಪತಿಗಳಿಬ್ಬರು ನಡೆಸುತ್ತಿದ್ದ ಡಾಗ್ ಕೆನಲ್​​ಗೆ (dog kennel)ಭೇಟಿ ನೀಡಿದ್ದಾರೆ. ಸ್ಟಾನ್ಲಿ ಬ್ರಗಾಂಕಾ ಹಾಗೂ ಶಿವಾನಿ ಪಿತ್ರೆ ಅವರು ಈ ಡಾಗ್ ಕೆನಲ್​​ನ್ನು ನಡೆಸುತ್ತಿದ್ದು, ರಾಹುಲ್​​ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಶ್ವಾನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬಳಿಕ ಮಾತುಕತೆ ನಡೆಸಿ ದತ್ತು ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು. ಈ ಪ್ರಕ್ರಿಯೆಗಳೆಲ್ಲವೂ ಮುಗಿದು ವಿಶ್ವ ಪ್ರಾಣಿ ದಿನವೇ ಅದು ದೆಹಲಿಯಲ್ಲಿರುವ ರಾಹುಲ್‌ ಗಾಂಧಿ ಅವರ ಮನೆಗೆ ಆಗಮಿಸಿತ್ತು. ಅದನ್ನು ಸ್ವೀಕರಿಸಿದ್ದ ರಾಹುಲ್‌ ಗಾಂಧಿ ತಮ್ಮ ತಾಯಿ ಸೋನಿಯಾಗಾಂಧಿ ಅವರಿಗೆ ಅಚ್ಚರಿಯ ರೀತಿಯಲ್ಲಿ ಪ್ರದರ್ಶಿಸಿದ್ದರು.

ಮನೆಗೆ ಬಂದಾಗ ಶ್ವಾನವನ್ನು ಬಾಕ್ಸ್‌ನಲ್ಲಿ ಸಂಪೂರ್ಣ ಕವರ್‌ ಮಾಡಲಾಗಿತ್ತು. ಸೋನಿಯಾ ಗಾಂಧಿ ಅವರು ಬಟ್ಟೆಯನ್ನು ತೆಗೆದಾಗ ಕಂಡಿದ್ದು ನೂರಿ. ವಾವ್‌ ಎಂದು ಅದನ್ನು ಕಂಡವರೇ ಪ್ರತಿಕ್ರಿಯಿಸಿದ್ದರು ಸೋನಿಯಾಗಾಂಧಿ. ಸೋ ಕ್ಯೂಟ್‌ ಎಂದು ಖುಷಿಗೊಂಡರು ಕೂಡ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ರಾಹುಲ್‌ ಗಾಂಧಿ, ನಮ್ಮ ಮನೆಗೆ ಬಂದಿರುವ ವಿಶೇಷ ಹಾಗೂ ಸುಂದರ ಅತಿಥಿಯನ್ನು ನಿಮಗೆ ಪರಿಚಯಿಸುತ್ತೇನೆ. ಇದರ ಹೆಸರು ನೂರಿ. ಗೋವಾದಿಂದ ನೇರವಾಗಿ ನಮ್ಮ ತೋಳುಗಳಲ್ಲಿ ಸೇರಿದ್ದಾಳೆ. ನಮ್ಮ ಮನೆಯ ಖುಷಿ ಇಮ್ಮಡಿಗೊಂಡಿದೆ. ಇದು ಅಮ್ಮನಿಗೆ ಆಶ್ಚರ್ಯಕರವೂ ಆಗಿತ್ತು. ಶ್ವಾನದ ಪ್ರೀತಿ ಹಾಗೂ ನಿಷ್ಠೆಯಿಂದ ನಾವು ಕಲಿಯುವುದು ಬಹಳ ಇದೆ. ವಿಶ್ವ ಪ್ರಾಣಿ ದಿನವೇ ಇದು ನಮ್ಮ ಮನೆಗೆ ಬಂದಿದೆ. ನಾವು ಪ್ರಾಣಿಗಳ ರಕ್ಷಣೆಗೆ ಪಣ ತೊಡಬೇಕಿದೆ ಎಂದು ಹೇಳಿದ್ದಾರೆ.

ರಾಹುಲ್‌ಗಾಂಧಿ ಅವರ ವಿಡಿಯೋಗೆ ನೆಟ್ಟಿಗರಿಂದಲೂ ಉತ್ತಮ ಪ್ರತಿಕ್ರಿಯೆಯೇ ಬಂದಿದೆ.

ರಾಹುಲ್‌ ಗಾಂಧಿ ಅವರು ಭಾವನಾ ಜೀವಿ. ಪ್ರಾಣಿ ಪ್ರಿಯ ಕೂಡ. ಬರೀ ನಾಯಕರಷ್ಟೇ ಅಲ್ಲ. ಮಾನವೀಯತೆ ಹೊಂದಿರುವ ವ್ಯಕ್ತಿ ಎಂದು ಒಬ್ಬರು ಪೋಸ್ಟ್‌ ಮಾಡಿದ್ದಾರೆ.

ನೂರಿ ನಾಯಿ ಮರಿ ಅವರ ಕೈಗಳನ್ನು ಸೇರಿದ ತಕ್ಷಣ ತೋರಿದ ಪ್ರೀತಿ, ಬಾಲ ಅಲ್ಲಾಡಿಸುತ್ತಾ ಬಂದ ಪರಿ ನಿಜಕ್ಕೂ ನನ್ನ ಹೃದಯವನ್ನೇ ಕರಗಿಸಿತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ