logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ed ರೈಡ್‌: ಕಂತೆಕಂತೆ ಹಣದರಾಶಿ ನೋಡಿ ದಂಗಾದ್ರಾ; ನೇಮಕಾತಿ 'ಕಲೆಕ್ಷನ್‌' ಇದು!!

ED ರೈಡ್‌: ಕಂತೆಕಂತೆ ಹಣದರಾಶಿ ನೋಡಿ ದಂಗಾದ್ರಾ; ನೇಮಕಾತಿ 'ಕಲೆಕ್ಷನ್‌' ಇದು!!

Jul 22, 2022 09:16 PM IST

ಇಡಿಯು ಶುಕ್ರವಾರ ಪಶ್ಚಿಮ ಬಂಗಾಳದ ಇಬ್ಬರು ಮಂತ್ರಿಗಳ ಮನೆಯ ಮೇಲೆ ದಾಳಿ ಮಾಡಿದೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕ ಹಗರಣಕ್ಕೆ ಸಂಬಂಧಪಟ್ಟಂತೆ ನಡೆದ ರೈಡ್‌ ಇದಾಗಿದೆ. ಈ ಸಂದರ್ಭದಲ್ಲಿ ಅವರ ಮನೆಯಲ್ಲಿಮತ್ತು ಅವರಿಬ್ಬರಿಗೆ ಸಂಬಂಧಪಟ್ಟ ವಿವಿಧ ಸ್ಥಳಗಳಲ್ಲಿ ಪತ್ತೆಯಾದ ಕಂತೆಕಂತೆ ಹಣದ ರಾಶಿ ನೋಡಿ ಎಲ್ಲರೂ ದಂಗಾಗಿದ್ದಾರೆ.

  • ಇಡಿಯು ಶುಕ್ರವಾರ ಪಶ್ಚಿಮ ಬಂಗಾಳದ ಇಬ್ಬರು ಮಂತ್ರಿಗಳ ಮನೆಯ ಮೇಲೆ ದಾಳಿ ಮಾಡಿದೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕ ಹಗರಣಕ್ಕೆ ಸಂಬಂಧಪಟ್ಟಂತೆ ನಡೆದ ರೈಡ್‌ ಇದಾಗಿದೆ. ಈ ಸಂದರ್ಭದಲ್ಲಿ ಅವರ ಮನೆಯಲ್ಲಿಮತ್ತು ಅವರಿಬ್ಬರಿಗೆ ಸಂಬಂಧಪಟ್ಟ ವಿವಿಧ ಸ್ಥಳಗಳಲ್ಲಿ ಪತ್ತೆಯಾದ ಕಂತೆಕಂತೆ ಹಣದ ರಾಶಿ ನೋಡಿ ಎಲ್ಲರೂ ದಂಗಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂದು ದೇಶವೇ ಬೆಚ್ಚಿಬೀಳುವಷ್ಟು ಹಣದ ಕಂತೆಗಳನ್ನು ಇಡಿ ಜಪ್ತಿ ಮಾಡಿದೆ. ಪಶ್ಚಿಮ ಬಂಗಾಳ ಸ್ಕೂಲ್‌ ಸರ್ವೀಸ್‌ ಕಮಿಷನ್‌ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಮಂಡಳಿಗಳಲ್ಲಿನ ಉದ್ಯೋಗ ನೇಮಕಾತಿಗೆ ಸಂಬಂಧಪಟ್ಟಂತೆ ವಿವಿಧೆಡೆ ಇಡಿ ದಾಳಿ ಮಾಡಿದ್ದು, ಹಣದ ರಾಶಿಯೇ ಪತ್ತೆಯಾಗಿದೆ. ರಾಜ್ಯದ ವಿವಿಧ 13 ಕಡೆಗಳಲ್ಲಿ ರೈಡ್‌ ಮಾಡಲಾಗಿದೆ. ಪಾರ್ಥ ಮುಖರ್ಜಿ, ಪರೇಶ್‌ ಚಂದ್ರ ಅಧಿಕಾರಿಯ ಮನೆ ಸೇರಿದಂತೆ ಹಲವೆಡೆ ರೈಡ್‌ ಮಾಡಲಾಗಿದೆ.
(1 / 5)
ಪಶ್ಚಿಮ ಬಂಗಾಳದಲ್ಲಿ ಇಂದು ದೇಶವೇ ಬೆಚ್ಚಿಬೀಳುವಷ್ಟು ಹಣದ ಕಂತೆಗಳನ್ನು ಇಡಿ ಜಪ್ತಿ ಮಾಡಿದೆ. ಪಶ್ಚಿಮ ಬಂಗಾಳ ಸ್ಕೂಲ್‌ ಸರ್ವೀಸ್‌ ಕಮಿಷನ್‌ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಮಂಡಳಿಗಳಲ್ಲಿನ ಉದ್ಯೋಗ ನೇಮಕಾತಿಗೆ ಸಂಬಂಧಪಟ್ಟಂತೆ ವಿವಿಧೆಡೆ ಇಡಿ ದಾಳಿ ಮಾಡಿದ್ದು, ಹಣದ ರಾಶಿಯೇ ಪತ್ತೆಯಾಗಿದೆ. ರಾಜ್ಯದ ವಿವಿಧ 13 ಕಡೆಗಳಲ್ಲಿ ರೈಡ್‌ ಮಾಡಲಾಗಿದೆ. ಪಾರ್ಥ ಮುಖರ್ಜಿ, ಪರೇಶ್‌ ಚಂದ್ರ ಅಧಿಕಾರಿಯ ಮನೆ ಸೇರಿದಂತೆ ಹಲವೆಡೆ ರೈಡ್‌ ಮಾಡಲಾಗಿದೆ.(ANI)
ಅಬ್ಬಾ ಎಷ್ಟೊಂದು ಹಣದ ರಾಶಿ. ಎಷ್ಟೊಂದು ದುಡ್ಡಿರಬಹುದು ಇದರಲ್ಲಿ ಎಂದು ನೀವು ಆಲೋಚಿಸಬಹುದು. ಇದರಲ್ಲಿ ಬರೋಬ್ಬರಿ 20 ಕೋಟಿ ರೂ.ಗೂ ಅಧಿಕ ಮೊತ್ತವಿದೆ. ವಿಶೇಷವೆಂದರೆ ಈ ಹಣ ಪತ್ತೆಯಾಗಿರುವುದು ಅರ್ಪಿತಾ ಮುಖರ್ಜಿ ಎಂಬವರ ಮನೆಯಲ್ಲಿ. ಇವರು ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ಸಂಬಂಧಿಯಂತೆ.
(2 / 5)

ಇಡಿ ಅಧಿಕಾರಿಗಳು ಕೇವಲ ಪ್ರತಿಪಕ್ಷಗಳಿಗೆ ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮೇಲೆಯೇ ದಾಳಿ ಮಾಡುತ್ತವೆ ಎಂಬ ದೂರಿತ್ತು. ಈ ಇಡಿ ದಾಳಿಯು ಪ್ರತಿಪಕ್ಷಗಳಿಗೆ ಸರಿಯಾದ ಉತ್ತರ ನೀಡಿದೆ ಎಂದು ಈ ಫೋಟೊಗಳಿಗೆ ಟ್ವೀಟರ್‌ನಲ್ಲಿ ಕಾಮೆಂಟ್‌ಗಳು ಬಂದಿವೆ.
(3 / 5)
ಇಡಿ ಅಧಿಕಾರಿಗಳು ಕೇವಲ ಪ್ರತಿಪಕ್ಷಗಳಿಗೆ ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮೇಲೆಯೇ ದಾಳಿ ಮಾಡುತ್ತವೆ ಎಂಬ ದೂರಿತ್ತು. ಈ ಇಡಿ ದಾಳಿಯು ಪ್ರತಿಪಕ್ಷಗಳಿಗೆ ಸರಿಯಾದ ಉತ್ತರ ನೀಡಿದೆ ಎಂದು ಈ ಫೋಟೊಗಳಿಗೆ ಟ್ವೀಟರ್‌ನಲ್ಲಿ ಕಾಮೆಂಟ್‌ಗಳು ಬಂದಿವೆ.(ANI)
ಈ ಹಣದ ರಾಶಿಯಲ್ಲಿ ಗರಿಗರಿ 500 ರೂ. ಮತ್ತು 2 ಸಾವಿರ ರೂಪಾಯಿ ನೋಟುಗಳಿದ್ದು, ಮೋದಿ ನೋಟ್‌ ಬ್ಯಾನ್‌ ಮಾಡಿಯೂ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಅಲ್ವೇ ಎಂದು ಟ್ವೀಟರ್‌ನಲ್ಲಿ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.
(4 / 5)
ಈ ಹಣದ ರಾಶಿಯಲ್ಲಿ ಗರಿಗರಿ 500 ರೂ. ಮತ್ತು 2 ಸಾವಿರ ರೂಪಾಯಿ ನೋಟುಗಳಿದ್ದು, ಮೋದಿ ನೋಟ್‌ ಬ್ಯಾನ್‌ ಮಾಡಿಯೂ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಅಲ್ವೇ ಎಂದು ಟ್ವೀಟರ್‌ನಲ್ಲಿ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.
ಕರ್ನಾಟಕದಲ್ಲಿಯೂ ಇದೇ ರೀತಿ ಪಿಎಸ್‌ಐ ನೇಮಕದಲ್ಲಿ ಅಕ್ರಮ ನಡೆದಿದ್ದು, ಹಲವು ಕೋಟಿಗಳ ವಂಚನೆ ನಡೆದಿದೆ. ಇದೀಗ  ಪಶ್ಚಿಮ ಬಂಗಾಳದಲ್ಲಿಯೂ ಬೃಹತ್‌ ಉದ್ಯೋಗ ಅಕ್ರಮ ನಡೆದಿದ್ದು, ಅಭ್ಯರ್ಥಿಗಳಿಂದ ಹಣ ಪಡೆದು ರಾಶಿ ಹಾಕಿಕೊಂಡವರು ಇದೀಗ ಇಡಿ ತನಿಖೆ ಎದುರಿಸುತ್ತಾರೆ. ಇತ್ತ ಉದ್ಯೋಗಕ್ಕಾಗಿ ಹಣಕೊಟ್ಟವರು ಉದ್ಯೋಗವೂ ಇಲ್ಲದೆ, ಹಣವೂ ಇಲ್ಲದೆ ಶಿಕ್ಷೆಯ ಭೀತಿಯಲ್ಲಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು