logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shreyans Kumat: ಕೈ ತುಂಬ ಸಂಬಳದ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಬರೆದು 4ನೇ ರ‍್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದ್ರು ಶ್ರೇಯನ್ಸ್

Shreyans Kumat: ಕೈ ತುಂಬ ಸಂಬಳದ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಬರೆದು 4ನೇ ರ‍್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದ್ರು ಶ್ರೇಯನ್ಸ್

Umesh Kumar S HT Kannada

Oct 27, 2023 12:44 PM IST

ಶ್ರೇಯನ್ಸ್ ಕುಮತ್, ಐಐಎಸ್‌

  • ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕಾಗಿಯೆ ತಮ್ಮ ಉತ್ತಮ ಸಂಬಳದ ಕೆಲಸವನ್ನು ತೊರೆದರಲ್ಲದೆ, ಮೊದಲ ಪ್ರಯತ್ನದಲ್ಲೇ ಸಿವಿಲ್ ಸರ್ವೀಸ್ ಎಕ್ಸಾಂ ಅನ್ನು ಆಲ್ ಇಂಡಿಯಾ ಮಟ್ಟದಲ್ಲಿ 4 ನೇ ರ‍್ಯಾಂಕ್‌ನೊಂದಿಗೆ ಪಾಸಾದವರು ಕೂಡ. ಅವರ ಹೆಸರು ಶ್ರೇಯನ್ಸ್ ಕುಮತ್. 

ಶ್ರೇಯನ್ಸ್ ಕುಮತ್, ಐಐಎಸ್‌
ಶ್ರೇಯನ್ಸ್ ಕುಮತ್, ಐಐಎಸ್‌ (shreyanskumat / instagram)

ಭಾರತದ ಅತ್ಯಂತ ಸವಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪೈಕಿ ಯೂನಿಯನ್‌ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆ ಪ್ರಮುಖವಾದುದು. ಭಾರತ ಸರ್ಕಾರದ ಆಡಳಿತಾತ್ಮಕ ಸ್ಥಾನದ ಹೊಣೆಗಾರಿಕೆ ನಿರ್ವಹಿಸುವ ಅಧಿಕಾರಿಗಳ ಹುದ್ದೆ ಭರ್ತಿಗೆ ನಡೆಸುವ ನೇಮಕಾತಿ ಪ್ರಕ್ರಿಯೆಯ ಒಂದು ಭಾಗ ಇದು. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ. ಇದಕ್ಕಾಗಿ ಸತತ ಅಧ್ಯಯನವನ್ನೂ ಮಾಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

ಆದರೆ, ಅವರಲ್ಲಿ ಕೆಲವರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಇನ್ನುಳಿದವರು ವಿಫಲರಾಗಿ ಬೇರೆ ಬೇರೆ ಉದ್ಯೋಗಗಳ ಕಡೆಗೆ ಮುಖ ಮಾಡುವುದು ಸಾಮಾನ್ಯ. ನಾಗರಿಕ ಸೇವಾ ಪರೀಕ್ಷೆಯ ಪಠ್ಯಕ್ರಮವು ವಿಸ್ತೃತ ಮತ್ತು ವೈವಿಧ್ಯಮಯ. ಆದ್ದರಿಂದ ತಯಾರಿಗೆ ಬಹಳ ಸಮಯ ಬೇಕು. ಪ್ರಾರಂಭದಿಂದಲೇ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದವರು ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಸುಲಭವಾಗುತ್ತದೆ ಎಂಬುದು ಹಲವರ ನಂಬಿಕೆ. ಅಂತಹ ಒಬ್ಬ ಅಭ್ಯರ್ಥಿಯ ಯಶಸ್ಸಿನ ಕಥೆಯನ್ನು ಗಮನಿಸೋಣ. ಹೌದು ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕಾಗಿಯೆ ತಮ್ಮ ಉತ್ತಮ ಸಂಬಳದ ಕೆಲಸವನ್ನು ತೊರೆದರಲ್ಲದೆ, ಮೊದಲ ಪ್ರಯತ್ನದಲ್ಲೇ ಸಿವಿಲ್ ಸರ್ವೀಸ್ ಎಕ್ಸಾಂ ಪಾಸಾದವರು ಕೂಡ. ಅವರ ಹೆಸರು ಶ್ರೇಯನ್ಸ್ ಕುಮತ್.

ಶ್ರೇಯನ್ಸ್ ಕುಮತ್ ಯಾರು, ಅವರ ಪರಿಚಯ, ಹಿನ್ನೆಲೆ

ಶ್ರೇಯನ್ಸ್ ರಾಜಸ್ಥಾನದ ಅಜ್ಮೀರ್ ಮೂಲದವರು. ಅಜ್ಮೀರ್ ಸಮೀಪದ ಕಿಶನ್‌ಗಢದಲ್ಲಿ ಶಾಲಾ ಶಿಕ್ಷಣ ಪಡೆದರು. ಶ್ರೇಯನ್ಸ್ ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದರು. ಎಂಜಿನಿಯರ್ ಆಗಬೇಕೆಂದೇ ಕನಸು ಕಂಡು ಅದರಂತೆ ಮುಂದುವರಿದವರು ಶ್ರೇಯನ್ಸ್ ಕುಮತ್. ಆದಾಗ್ಯೂ, ಅವರ ಅಜ್ಜ ಯಾವಾಗಲೂ ಐಎಎಸ್ ಅಧಿಕಾರಿಯಾಗು ಎನ್ನುತ್ತಿದ್ದರು.

ಊರಲ್ಲೇ 10ನೇ ತರಗತಿ ಮುಗಿಸಿ, 11ನೇ ತರಗತಿಗೆ ಬಂದಾಗ ಸೈನ್ಸ್ ತಗೊಂಡರು. ಎರಡು ವರ್ಷ ಕೋಟಾದಲ್ಲಿ ಜೆಇಇಗೆ ಅಧ್ಯಯನ ಮಾಡಿದರು. ಬಳಿಕ ಭಾರತದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಬಿ)ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರದ ಪದವಿ ಪಡೆದರು. ಅಲ್ಲಿಂದ ಹೊರ ಬಂದು ಇ & ವೈ ಕಂಪನಿಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸಕ್ಕೆ ಸೇರಿದರು.

ಕೆಲಸಕ್ಕೆ ಸೇರಿದ ಬಳಿಕ ಕಾಡಿತ್ತು ಅಜ್ಜ ನೀಡಿದ ಪ್ರೇರಣೆ

ಎರಡು ವರ್ಷ ಕೆಲಸ ಮಾಡಿದ ಬಳಿಕ ಶ್ರೇಯನ್ಸ್ ಕುಮತ್‌ಗೆ ಆ ಕೆಲಸ ರುಚಿಸಲಿಲ್ಲ. ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಯಿತು. ಹಾಗೆ ಆ ಉದ್ಯೋಗ ಬಿಟ್ಟು, ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದರು. ಅಧ್ಯಯನ ಮಾಡಲು, ಆಫ್‌ಲೈನ್ ತರಗತಿಗಳಿಗೆ ಸಹ ಸೇರಿಕೊಂಡರು.

ದಿನಕ್ಕೆ ಹತ್ತು ಗಂಟೆ ಅಧ್ಯಯನ ಮತ್ತು ಪರೀಕ್ಷೆ ಕುರಿತ ಸಂಶೋಧನೆಗಳನ್ನು ನಡೆಸಿ ಸಿದ್ದತೆ ಮಾಡಿಕೊಂಡರು. 2018ರ ನಾಗರಿಕ ಸೇವಾ ಪರೀಕ್ಷೆ ಬರೆದು ಆಲ್ ಇಂಡಿಯಾ ಮಟ್ಟದಲ್ಲಿ 4ನೇ ರ‍್ಯಾಂಕ್ ಗಳಿಸಿ ಗಮನಸೆಳೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ