logo
ಕನ್ನಡ ಸುದ್ದಿ  /  Nation And-world  /  Election Affidavit News In Kannada High Court Declares Arunachal Mla's Election Void For Concealing Information Nkn

Election Affidavit: ತಪ್ಪು ಅಫಿಡವಿಟ್ ಕೊಟ್ಟಿದ್ದಕ್ಕೆ ಸ್ಥಾನ ಕಳೆದುಕೊಂಡ ಬಿಜೆಪಿ ಶಾಸಕಿ; ಕರ್ನಾಟಕದ ಅಭ್ಯರ್ಥಿಗಳಿಗೊಂದು ಪಾಠ

Nikhil Kulkarni HT Kannada

Apr 27, 2023 10:54 AM IST

ಸಾಂದರ್ಭಿಕ ಚಿತ್ರ

    • ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮಾಹಿತಿಯನ್ನು ಮರೆಮಾಚಿದ ಆರೋಪದ ಮೇಲೆ, ಗುವಾಹಟಿ ಹೈಕೋರ್ಟ್‌ನ ಇಟಾನಗರ ಪೀಠವು, ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಿ ದಸಾಂಗ್ಲು ಪುಲ್ ಅವರ ಶಾಸಕ ಸ್ಥಾನವನ್ನು ಅನೂರ್ಜಿತಗೊಳಿಸಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ದಸಾಂಗ್ಲು ಪುಲ್‌ ಅವರ ಶಾಸಕತ್ವ ಅನೂರ್ಜಿತಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ಗುವಹಾಟಿ: ಕರ್ನಾಟಕದಲ್ಲಿ ಈಗ ಚುನಾವಣಾ ಅಬ್ಬರ. ನಾಮಪತ್ರ ಸಲ್ಲಿಸಿ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಒಂದೆಡೆಯಾದರೆ, ನಾಮಪತ್ರ ತಿರಸ್ಕೃತಗೊಂಡು ಪೇಚಾಡುತ್ತಿರುವ ಆಕಾಂಕ್ಷಿಗಳು ಮತ್ತೊಂದೆಡೆ. ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದ ಆಕಾಂಕ್ಷಿಗಳು ನಿರಾಸೆಯಾಗುವುದು ಸಹಜ.

ಟ್ರೆಂಡಿಂಗ್​ ಸುದ್ದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

ಕೆಲವೊಮ್ಮೆ ನಾಮಪತ್ರ ಸ್ವೀಕೃತಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ನಂತರವೂ, ನಾಮಪತ್ರ ಸಲ್ಲಿಕೆ ಅಪೂರ್ಣ ಎಂಬ ಕಾರಣಕ್ಕೆ ಶಾಸಕರು ತಮ್ಮ ಶಾಸಕ ಸ್ಥಾನ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಇದಕ್ಕೆ ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಿ ದಸಾಂಗ್ಲು ಪುಲ್‌ ಜ್ವಲಂತ ಉದಾಹರಣೆಯಾಗಿದ್ದಾರೆ.

ಹೌದು, ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮಾಹಿತಿಯನ್ನು ಮರೆಮಾಚಿದ ಆರೋಪದ ಮೇಲೆ, ಗುವಾಹಟಿ ಹೈಕೋರ್ಟ್‌ನ ಇಟಾನಗರ ಪೀಠವು, ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಿ ದಸಾಂಗ್ಲು ಪುಲ್ ಅವರ ಶಾಸಕ ಸ್ಥಾನವನ್ನು ಅನೂರ್ಜಿತಗೊಳಿಸಿದೆ.

ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ದಸಾಂಗ್ಲು ಪುಲ್‌ ಅವರ ಶಾಸಕತ್ವ ಅನೂರ್ಜಿತಗೊಂಡಿದೆ.

"ದಸಾಂಗ್ಲು ಪುಲ್ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 33ರ ಅನುಸಾರವಾಗಿ, ತಮ್ಮ ನಾಮಪತ್ರವನ್ನು ಸಲ್ಲಿಸಿಲ್ಲ. ಹೀಗಾಗಿ ಅವರ ನಾಮಪತ್ರವನ್ನು ಅನೂರ್ಜಿತಗೊಳಿಸಲಾಗಿದೆ.." ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

45 ವರ್ಷದ ದಸಾಂಗ್ಲು ಪುಲ್ ಅವರು ಮೇ 2019 ರ ವಿಧಾನಸಭಾ ಚುನಾವಣೆಯಲ್ಲಿ, ಹಯುಲಿಯಾಂಗ್‌ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಮರು ಆಯ್ಕೆಯಾಗಿದ್ದರು. ತಮ್ಮ ಪತಿ ಮತ್ತು ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ನಿಧನದ ಬಳಿಕ 2016ರಲ್ಲಿ ನಡೆದ ಉಪಚುನಾವಣೆಯಲ್ಲಿ, ದಸಾಂಗ್ಲು ಪುಲ್ ಭರ್ಜರಿ ಜಯ ಸಾಧಿಸಿದ್ದರು.

2019 ರಲ್ಲಿ ದಸಾಂಗ್ಲು ಪುಲ್‌ ಅವರಿಂದ ಸೋತ ಕಾಂಗ್ರೆಸ್ ಅಭ್ಯರ್ಥಿ ಲುಪಾಲುಮ್ ಕ್ರಿ ಅವರು, ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಪತಿಯ ಮುಂಬೈನಲ್ಲಿರುವ ನಾಲ್ಕು ಮತ್ತು ಅರುಣಾಚಲ ಪ್ರದೇಶದ ಎರಡು ಆಸ್ತಿಗಳನ್ನು ದಸಾಂಗ್ಲು ಪುಲ್ ಘೋಷಿಸಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೇ ಚುನಾವಣೆಗೂ ಮೊದಲೇ ತಾವು ಸಲ್ಲಿಸಿದ್ದ ಆಕ್ಷೇಪಣೆಗಳ ಹೊರತಾಗಿಯೂ, ದಸಾಂಗ್ಲು ಪುಲ್ ಅವರ ನಾಮನಿರ್ದೇಶನವನ್ನು ಸ್ವೀಕರಿಸಿರುವುದು ಆಯೀಗ ನಿಯಮಗಳಿಗೆ ವಿರುದ್ಧವಾದುದು ಎಂದು ಲುಪಾಕುಮ್‌ ಕ್ರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು. ಆದರೆ ತಾವು ಪತಿಯ ಮೇಲಿನ ಆಸತಿಗಳ ಹಕ್ಕನ್ನು ಬಿಟ್ಟುಕೊಟ್ಟಿದ್ದೇನೆ ಎಂದು ದಸಾಂಗ್ಲು ಪುಲ್‌ ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ವಾದ-ಪ್ರತಿವಾದವನ್ನು ಆಲಿಸಿದ ಗುವಹಾಟಿ ಹೈಕೋರ್ಟ್‌ನ ಇಟಾನಗರ ಪೀಠ, ದಸಾಂಗ್ಲು ಪುಲ್‌ ಅವರ ಶಾಸಕ ಸ್ಥಾನವನ್ನು ಅನೂರ್ಜಿತಗೊಳಿಸಿತು. ಅಲ್ಲದೇ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರವೂ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುವುದು ಕಡ್ಡಾಯ ಎಂದು ಹೈಕೋರ್ಟ್‌ ಪೀಠ ಪುನರುಚ್ಛಿಸಿತು.

ಕಳೆದ ಮಂಗಳವಾರ ನೀಡಿದ ಆದೇಶದಲ್ಲಿ ನ್ಯಾಯಾಲಯವು ದಸಾಂಗ್ಲು ಪುಲ್ ಅವರ ನಾಮಪತ್ರಗಳ "ಅಸಮರ್ಪಕ ಸ್ವೀಕಾರ" ಅವರ ಚುನಾವಣೆಯ ಫಲಿತಾಂಶದ ಮೇಲೆ "ವಸ್ತುವಿನ ಮೇಲೆ ಪರಿಣಾಮ ಬೀರಿದೆ" ಎಂದು ಹೇಳಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು