logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Elon Musk: ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಲಾನ್‌ ಮಸ್ಕ್‌; 6 ವಾರಗಳಲ್ಲಿ ಸಂಸ್ಥೆ ಸೇರಲಿದ್ದಾರೆ ಹೊಸ ಸಿಇಒ

Elon Musk: ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಲಾನ್‌ ಮಸ್ಕ್‌; 6 ವಾರಗಳಲ್ಲಿ ಸಂಸ್ಥೆ ಸೇರಲಿದ್ದಾರೆ ಹೊಸ ಸಿಇಒ

Reshma HT Kannada

May 12, 2023 07:55 AM IST

ಎಲಾನ್‌ ಮಸ್ಕ್‌ (ಟ್ವಿಟರ್)

    • Elon Musk: ಟ್ವಿಟರ್‌ಗೆ ಹೊಸ ಸಿಇಒ ನೇಮಕ ಮಾಡಿಕೊಂಡಿರುವುದಾಗಿ ಟ್ವೀಟ್‌ ಮಾಡಿದ್ದಾರೆ ಎಲಾನ್‌ ಮಸ್ಕ್‌. ಇದರೊಂದಿಗೆ ತಾನು ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿಯೂ ತಿಳಿಸಿದ್ದಾರೆ. 
ಎಲಾನ್‌ ಮಸ್ಕ್‌ (ಟ್ವಿಟರ್)
ಎಲಾನ್‌ ಮಸ್ಕ್‌ (ಟ್ವಿಟರ್)

ವಾಷಿಂಗ್‌ಟನ್‌: ಎಲಾನ್‌ ಮಸ್ಕ್‌ ತಾವು ಟ್ವಿಟರ್‌ ಸಿಇಒ ಹುದ್ದೆಯಿಂದ ಕೆಳಗಿಯುವ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಇನ್ನು ಕೆಲವು ವಾರಗಳಷ್ಟೇ ಮಸ್ಕ್‌ ಟಿಟ್ವರ್‌ ಸಿಇಒ ಆಗಿ ಮುಂದುವರಿಯಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಈ ಬಗ್ಗೆ ಇಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ ಮಸ್ಕ್‌. ʼನಾನು ಟ್ವಿಟರ್‌ಗೆ ಹೊಸ ಸಿಇಒ ಅನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಲು ಉತ್ಸುಕನಾಗಿದ್ದೇನೆ. ಅವರು ಇನ್ನು 6 ವಾರಗಳಲ್ಲಿ ಟ್ವಿಟರ್‌ ಸಿಇಒ ಸ್ಥಾನವನ್ನು ಅಲಂಕರಿಸಲಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.

ಆದರೆ ಯಾರು, ಏನು ಎಂಬುದನ್ನು ಅವರು ತಿಳಿಸಿಲ್ಲ. ಆದರೆ ಆರು ವಾರಗಳಲ್ಲಿ ಹೊಸ ಸಿಇಒ ಬರುತ್ತಾರೆ ಎಂಬ ಅಂಶ ಮಾತ್ರ ಟ್ವಿಟರ್‌ನಲ್ಲಿದೆ.

ಆ ನಂತರ ಮಸ್ಕ್‌ ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಚೀಫ್‌ ಟೆಕ್ನಾಲಜಿ ಆಫೀಸರ್‌) ಆಗಿ ಮುಂದುವರಿಯಲಿದ್ದಾರೆ.

ಭವಿಷ್ಯದಲ್ಲಿ ಸ್ಟಾಫ್‌ವೇರ್‌ ಹಾಗೂ ಸಿಸೊಪ್‌ಗಳ ಮೇಲ್ವಿಚಾರಣೆ ಮಾಡುವುದಾಗಿ ಮಸ್ಕ್‌ ಘೋಷಿಸಿದ್ದಾರೆ.

ಇದರೊಂದಿಗೆ ಟ್ವಿಟರ್‌ನಲ್ಲಿ ಹೊಸ ಅಪ್‌ಡೇಟ್‌ವೊಂದನ್ನು ಘೋಷಿಸಿದ್ದು, ಅದು ವೆರಿಫೈಡ್‌ ಬಳಕೆದಾರರ ಮೆಸೆಜಿಂಗ್‌ ಸರ್ವೀಸ್‌ಗೆ ಸಂಬಂಧಿಸಿದ್ದಾಗಿದೆ. ಈ ಕುರಿತು ಅವರು ನಿನ್ನೆ (ಮೇ 11) ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಈ ಹಿಂದೆ ಬಳಕೆದಾರರು ಯಾವುದೇ ಸಂದೇಶಕ್ಕೆ ಇಮೋಜಿಗಳೊಂದಿಗೆ ಸಂದೇಶಕ್ಕೆ ಉತ್ತರ ನೀಡಬಹುದು ಎಂದು ತಿಳಿಸಿದ್ದರು ಮಸ್ಕ್‌, ಇದರೊಂದಿಗೆ ಉತ್ತಮ ಸಂವಹನಕ್ಕಾಗಿ ಮುಂಬರುವ ದಿನಗಳಲ್ಲಿ ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್‌ ಮತ್ತು ವಿಡಿಯೊ ಚಾಟ್‌ ಸೌಲಭ್ಯವನ್ನು ಪರಿಚಯಿಸಲಿದೆ ಎಂದು ಮೇ 11 ರಂದು ಮಸ್ಕ್‌ ತಿಳಿಸಿದ್ದರು. ಇದರೊಂದಿಗೆ ಕೆಲವು ವರ್ಷಗಳಿಂದ ಸಕ್ರಿಯವಾಗಿಲ್ಲದ ಖಾತೆಗಳನ್ನು ತೆಗೆದುಹಾಕುವುದಾಗಿಯೂ ಅವರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ