logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ

Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ

Praveen Chandra B HT Kannada

Jul 10, 2023 10:35 AM IST

Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ

    • Agniveers India: ಭಾರತದ ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಕುಸಿತವಾಗುವುದನ್ನು ತಪ್ಪಿಸುವ ಸಲುವಾಗಿ ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆಯನ್ನು ರಕ್ಷಣಾ ಪಡೆ ಮಾಡಿದೆ. 
Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ
Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ

ಬೆಂಗಳೂರು: ಭಾರತದ ಭೂಸೇನೆ, ವಾಯುಪಡೆ, ನೌಕಾಪಡೆಗಳಿಗೆ ಅಗ್ನಿವೀರರ ನೇಮಕಾತಿಯಲ್ಲಿ ಗಮನಾರ್ಹ ಬದಲಾವಣೆಗಳಾಗುವ ಸಾಧ್ಯತೆಯಿದೆ. ಭಾರತದ ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಕಡಿಮೆಯಾಗುವುದನ್ನು ತಪ್ಪಿಸುವ ಸಲುವಾಗಿ ಅಗ್ನಿವೀರರಾಗಿ ನೇಮಕಗೊಂಡವರಲ್ಲಿ ಶೇಕಡ 50ರಷ್ಟು ಸಿಬ್ಬಂದಿಯನ್ನು ಕಾಯಂ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ, ಈ ಕುರಿತು ಅಂತಿಮ ನಿರ್ಧಾರ ಇನ್ನೂ ತೆಗೆದುಕೊಳ್ಳಲಾಗಿಲ್ಲ. ಇದು ಕರಡು ಪ್ರಸ್ತಾಪದ ಹಂತದಲ್ಲಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ದೇಶದಲ್ಲಿ ಸೇನೆಯಲ್ಲಿ ಸೈನಿಕರ ಸಂಖ್ಯೆಯ ಕುಸಿತ ತಪ್ಪಿಸುವ ಸಲುವಾಗಿ ಸಶಸ್ತ್ರಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿವೀರರನ್ನು ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. 2026ರವರೆಗೆ ಸೇನಾ ನೇಮಕಾತಿ ಮಿತಿ ಇರುವ ಕಾರಣ ಅಗ್ನಿವೀರರ ನೇಮಕಾತಿ ಹೆಚ್ಚಳದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಲಾಗುತ್ತಿದೆ ಎನ್ನಲಾಗಿದೆ.

ಅಗ್ನಿವೀರರ ನೇಮಕ ಪ್ರಮಾಣ ಹೆಚ್ಚಳ

ಅಗ್ನಿವೀರರ ನೇಮಕದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವುದು ಸೇರಿದಂತೆ ಹಲವು ಬದಲಾವಣೆಗಳಿಗೆ ರಕ್ಷಣಾ ಪಡೆಯು ಪ್ರಸ್ತಾಪ ಮಾಡಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಅಂದರೆ, ಅಗ್ನಿವೀರರ ನೇಮಕದ ಪ್ರಮಾಣವನ್ನು ಈಗಿನ ಮಿತಿಗೆ ಬದಲಾಗಿ ಕಾಯಂ ಆಗಿ ಶೇಕಡ 50ಕ್ಕೆ ಹೆಚ್ಚಿಸಲು ಯೋಜಿಸಲಾಗುತ್ತಿದೆ. ಏವಿಯೇಷನ್‌, ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಇಂತಹ ಇತರೆ ವಿಭಾಗಗಳಿಂದಲೂ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಲು ಆಲೋಚಿಸಲಾಗುತ್ತಿದೆ.

ಅಗ್ನಿವೀರರ ವಯೋಮಿತಿ ಹೆಚ್ಚಳ

"ಅಗ್ನಿವೀರರ ನೇಮಕಾತಿಗೆ 21 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಿದರೆ ಈ ರೀತಿ ವಿವಿಧ ಶಿಕ್ಷಣ ಪಡೆದವರು ದೊರಕುವುದು ಕಷ್ಟ. ವಯೋಮಿತಿಯನ್ನು 23ಕ್ಕೆ ಹೆಚ್ಚಳ ಮಾಡಿದರೆ ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳು ದೊರಕಬಹುದು. 2022ರಿಂದ 2026ರ ನಡುವೆ ಸುಮಾರು 1.75 ಲಕ್ಷ ಅಗ್ನಿವೀರರನ್ನು ನೇಮಕ ಮಾಡುವ ನಿರೀಕ್ಷೆಯಿದೆ" ಎಂದು ವರದಿಗಳು ಹೇಳಿವೆ.

"ಈ ಅವಧಿಯಲ್ಲಿ ಈ ಹಿಂದಿನ ಮಿತಿಯಂತೆ 46 ಸಾವಿರ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಬದಲು 1.25 ಲಕ್ಷ ಅಗ್ನಿವೀರರನ್ನು(ಸೈನಿಕ ವಿಭಾಗಕ್ಕೆ) ನೇಮಕ ಮಾಡುವ ನಿರೀಕ್ಷೆಯಿದೆ. ಮುಂದಿನ ಐದು ಆರು ವರ್ಷಗಳಲ್ಲಿ ಈಗಿನ 50-60 ಸಾವಿರ ನೇಮಕಾತಿ ಬದಲಾಗಿ, 90 ಸಾವಿರದಿಂದ 1 ಲಕ್ಷದಷ್ಟು ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ" ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಪುರಿ ಹೇಳಿದ್ದಾರೆ.

ಅಗ್ನಿವೀರ ಹುದ್ದೆಗೆ ವಿದ್ಯಾರ್ಹತೆ

ಭಾರತದ ರಕ್ಷಣಾ ಪಡೆಯಲ್ಲಿ ಅಗ್ನಿವೀರ್‌ ಹುದ್ದೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಟೆಕ್ನಿಕಲ್‌ ವಿಭಾಗಗಳಿಗೆ ಅರ್ಜಿ ಸಲ್ಲಿಸುವವರು 12ನೇ ತರಗತಿ ಉತ್ತೀರ್ಣರಾಗಿರಬೇಕು ಎಂದು ಫೆಬ್ರವರಿ 16ರಂದು ಸೇನೆ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, 12ನೇ ತರಗತಿಯಲ್ಲಿ ಕನಿಷ್ಠ ಶೇ.60ರಷ್ಟು ಅಂಕ ಗಳಿಸಿದವರು ಅಗ್ನಿವೀರ್‌ ಕ್ಲರ್ಕ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 8ನೇ ತರಗತಿ ಓದಿದವರು ಅಗ್ನಿವೀರ್‌ ಟ್ರೇಡ್ಸ್‌ ಮ್ಯಾನ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಇತ್ತೀಚೆಗೆ ಮಾಡಿದ ಹೊಸ ನಿಯಮಗಳ ಪ್ರಕಾರ, ಹೊಸ ನಿಯಮಗಳು ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ ಸಂಸ್ಥೆಗಳಿಂದ ಪದವಿ ಪಡೆದಿರುವವರಿಗೆ ಸೇನೆಯಲ್ಲಿ ನುರಿತ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಈ ಎಲ್ಲ ಬದಲಾವಣೆಗಳು ಭಾರತೀಯ ಸೇನೆಯಲ್ಲಿ ಸೈನಿಕರಾಗುವ ನಿರೀಕ್ಷೆಯಲ್ಲಿರುವ ಯುವಜನತೆಗೆ ಅವಕಾಶ ನೀಡುತ್ತದೆ.

ಕೇಂದ್ರ ಸರಕಾರವು 2022ರಲ್ಲಿ ಭಾರತೀಯ ಸೇನೆಗೆ ಸೈನಿಕರನ್ನು ನೇಮಕ ಮಾಡುವ ಅಗ್ನಿವೀರ್‌ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ ಭೂ, ವಾಯು, ನೌಕೆ ಮೂರು ಸೇನಾ ಪಡೆಗಳಿಗೂ ನಾಲ್ಕು ವರ್ಷಗಳ ಅವಧಿಗೆ ನಿಯೋಜಿತ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ