logo
ಕನ್ನಡ ಸುದ್ದಿ  /  Nation And-world  /  Explainer-what Are E-fuels, And Can They Help Make Cars Co2-free?

What are e-fuels: ಪೆಟ್ರೋಲ್‌, ಡೀಸೆಲ್‌ ಎಂಜಿನ್‌ ವಾಹನಗಳಿಗೆ ಇತಿಶ್ರೀ! ಏನಿದು ಇ-ಇಂಧನ? ಇವು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಬಹುದೇ?

Praveen Chandra B HT Kannada

Mar 07, 2023 07:37 PM IST

What are e-fuels: ಪೆಟ್ರೋಲ್‌, ಡೀಸೆಲ್‌ ಎಂಜಿನ್‌ ವಾಹನಗಳಿಗೆ ಇತಿಶ್ರೀ? ಏನಿದು ಇ-ಇಂಧನ?

  • 2035ರ ಬಳಿಕ ಮಾರಾಟವಾಗುವ ಎಲ್ಲಾ ಹೊಸ ಕಾರುಗಳು ಶೂನ್ಯ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಹೊಂದಿರಬೇಕು. ಇದರಿಂದಾಗಿ ಪೆಟ್ರೋಲ್‌, ಡೀಸೆಲ್‌ನಂತಹ ಪಳೆಯುಳಿಕೆ ಇಂಧನ ಚಾಲಿತ ಕಾರುಗಳನ್ನು ಮಾರಾಟ ಮಾಡುವುದು ಸಾಧ್ಯವಾಗದು.

What are e-fuels: ಪೆಟ್ರೋಲ್‌, ಡೀಸೆಲ್‌ ಎಂಜಿನ್‌ ವಾಹನಗಳಿಗೆ ಇತಿಶ್ರೀ? ಏನಿದು ಇ-ಇಂಧನ?
What are e-fuels: ಪೆಟ್ರೋಲ್‌, ಡೀಸೆಲ್‌ ಎಂಜಿನ್‌ ವಾಹನಗಳಿಗೆ ಇತಿಶ್ರೀ? ಏನಿದು ಇ-ಇಂಧನ? (ANI)

ಲೇಖನ: Victoria Waldersee and Kate Abnett

ಟ್ರೆಂಡಿಂಗ್​ ಸುದ್ದಿ

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

ಬರ್ಲಿನ್‌/ಬ್ರಸೆಲ್ಸ್‌: 2035ರ ವೇಳೆಗೆ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಹೊರಸೂಸುವ ಕಾರುಗಳ ಮಾರಾಟವನ್ನು ಕೊನೆಗೊಳಿಸುವ ಐತಿಹಾಸಿಕ ಐರೋಪ್ಯ ಒಕ್ಕೂಟದ ಕಾನೂನಿಗೆ ಜರ್ಮನಿಯು ಕೊನೆಯ ಕ್ಷಣದಲ್ಲಿ ವಿರೋಧ ವ್ಯಕ್ತಪಡಿಸಿದೆ. 2035ರ ಬಳಿಕ ಆಂತರಿಕ ದಹನ ಎಂಜಿನ್‌ (ಇಂಟರ್ನಲ್‌ ಕಂಬಸ್ಟನ್‌)ಗಳು ಇ-ಫ್ಯೂಯೆಲ್‌ ಚಾಲಿತವಾಗಿದ್ದರೆ ಅದಕ್ಕೆ ಅವಕಾಶ ನೀಡಬೇಕು ಎಂದು ಅದು ಬೇಡಿಕೆಯಿಟ್ಟಿದೆ.

2035ರ ಬಳಿಕ ಮಾರಾಟವಾಗುವ ಎಲ್ಲಾ ಹೊಸ ಕಾರುಗಳು ಶೂನ್ಯ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಹೊಂದಿರಬೇಕು. ಇದರಿಂದಾಗಿ ಪೆಟ್ರೋಲ್‌, ಡೀಸೆಲ್‌ನಂತಹ ಪಳೆಯುಳಿಕೆ ಇಂಧನ ಚಾಲಿತ ಕಾರುಗಳನ್ನು ಮಾರಾಟ ಮಾಡುವುದು ಸಾಧ್ಯವಾಗದು.

ಜರ್ಮನಿ ಸೇರಿದಂತೆ ಐರೋಪ್ಯ ಒಕ್ಕೂಟದ ಪ್ರಮುಖ ದೇಶಗಳು ಈ ಹಿಂದೆ ಈ ನಿಯಮಕ್ಕೆ ಬೆಂಬಲ ಸೂಚಿಸಿದ್ದವು. ಈ ನಿಯಮವು ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ಗಳಿಗೆ ನಿಷೇಧ ಹೇರಿರಲಿಲ್ಲ. ಹೀಗಾಗಿ ಬೆಂಬಲಿಸಿದ್ದವು. ಆದರೆ, ಇದೀಗ ಎಲ್ಲಾ ಕಾರುಗಳು ಇಫ್ಯೂಯೆಲ್‌ ಚಾಲಿತವಾಗಿರಬೇಕು ಎನ್ನುವ ನಿಯಮವನ್ನು ನೋಡಿ ಜರ್ಮನಿ ಕೊನೆಯ ಕ್ಷಣದಲ್ಲಿ ವಿರೋಧ ವ್ಯಕ್ತಪಡಿಸಿದೆ.

ಇ-ಇಂಧನಗಳು ಯಾವುವು?

ಇ-ಸೀಮೆಎಣ್ಣೆ, ಇ-ಮೀಥೇನ್ ಅಥವಾ ಇ-ಮೆಥೆನಾಲ್ ಇತ್ಯಾದಿಗಳನ್ನು ನವೀಕರಿಸಬಹುದಾದ ಅಥವಾ CO2-ಮುಕ್ತ ಎಲೆಕ್ಟ್ರಿಸಿಟಿ ಬಳಸಿ ಉತ್ಪಾದಿಸಲಾಗುತ್ತದೆ. ಆದರೆ, ಈ ಇಂಧನಗಳು ವಾಹನದಲ್ಲಿ ಹೊಗೆ ಸೂಸುತ್ತವೆ. ಆದರೆ, ಈ ಹೊಗೆಯ ಪ್ರಮಾಣವು ಪೆಟ್ರೋಲ್‌, ಡೀಸೆಲ್‌ ಇತ್ಯಾದಿಗಳನ್ನು ತಯಾರಿಸುವ ಸಮಯದಲ್ಲಿ ವಾತಾವರಣಕ್ಕೆ ಸೇರುವ ಸಿಒ2ಗೆ ಸಮವಾಗಿದೆ.

ಹೀಗಾಗಿ, 2035ರ ನಂತರ ಕಾರುಗಳು ಇ-ಇಂಧನದ ಮೂಲಕ ಚಾಲನೆಗೊಳ್ಳುವುದಿದ್ದರೆ ಅಂತಹ ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ಗಳ ವಾಹನಗಳಿಗೆ ಅವಕಾಶ ನೀಡಬೇಕು ಎನ್ನುವುದು ಜರ್ಮನ್‌ ಮತ್ತು ಇಟಲಿಯ ಬೇಡಿಕೆಯಾಗಿದೆ. ಆದರೆ, ಐರೋಪ್ಯ ಕಾನೂನು ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ ಚಾಲಿತ ವಾಹನಗಳಿಗೆ ನಿಷೇಧ ಹೇರಿದರೆ ಇಂತಹ ಇ-ಇಂಧನ ವಾಹನಗಳಿಗೆ ಅವಕಾಶ ದೊರಕದು. ಇ-ಇಂಧನ ಚಾಲಿತ ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ ಚಾಲಿತ ವಾಹನಗಳನ್ನು 2035ರ ಬಳಿಕವೂ ಬಳಸಬಹುದು ಎಂದು ಸ್ಪಷ್ಟವಾಗಿ ತಿಳಿಸಿದರೆ ಮಾತ್ರ ಈ ಕಾನೂನಿಗೆ ಸಮ್ಮತಿ ನೀಡುವುದಾಗಿ ಜರ್ಮನಿ ಮತ್ತು ಇಟಲಿ ತಿಳಿಸಿವೆ.

ಇ-ಇಂಧನಗಳನ್ನು ಯಾರು ತಯಾರಿಸುತ್ತಾರೆ?

ಬಹುತೇಕ ಕಾರು ತಯಾರಿಕಾ ಕಂಪನಗಳು ಈಗ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ವಾಹನಗಳನ್ನು ತಯಾರಿಸುತ್ತಿದ್ದಾರೆ. ಪ್ರಯಾಣಿಕ ಕಾರುಗಳಲ್ಲಿ ಸಿಒ2 ಹೊರಸೂಸುವಿಕೆ ಕಡಿಮೆ ಮಾಡಲು ಈ ಮೂಲಕ ಪ್ರಯತ್ನಿಸಲಾಗುತ್ತಿದೆ. ಆದರೆ, ಕೆಲವು ಕಾರು ತಯಾರಿಕಾ ಕಂಪನಿಗಳು ತಮ್ಮ ವಾಹನಗಳಿಗೆ ದೊಡ್ಡ ಬ್ಯಾಟರಿ ಜೋಡಿಸಿ ತೂಕ ಹೆಚ್ಚಿಸಲು ಇಚ್ಚಿಸುತ್ತಿಲ್ಲ. ಕೆಲವು ಪೂರೈಕೆದಾರರು ಮತ್ತು ತೈಲ ಕಂಪನಿಗಳು ಇ-ಇಂಧನಗಳ ಪರವಾಗಿದ್ದಾರೆ.

ದೊಡ್ಡಮಟ್ಟದಲ್ಲಿ ಇ-ಫ್ಯೂಯೆಲ್‌ಗಳನ್ನು ಇನ್ನೂ ಉತ್ಪಾದಿಸಲಾಗುತ್ತಿಲ್ಲ. 2021ರಲ್ಲಿ ಮೊದಲ ಬಾರಿಗೆ ಚಿಲಿ ದೇಶದಲ್ಲಿ ಮೊದಲ ಇ-ಫ್ಯೂಯೆಲ್‌ ಘಟಕ ಆರಂಭಿಸಲಾಗಿದೆ. ಇದಕ್ಕೆ ಪೋರ್ಷೆ ಕಂಪನಿಯು ನೆರವು ನೀಡಿದೆ. ಈ ಘಟಕವು ಪ್ರತಿವರ್ಷ 550 ಮಿಲಿಯನ್‌ ಲೀಟರ್‌ ಇ-ಇಂಧನ ಉತ್ಪಾದಿಸುವ ಗುರಿ ಹೊಂದಿದೆ. ನಾರ್ವೆಯಲ್ಲಿಯೂ ಇಂತಹ ಘಟಕ ಆರಂಭವಾಗಲಿದೆ. ಇಲ್ಲಿ 2024ರಿಂದ ಇ-ಫ್ಯೂಯೆಲ್‌ ಉತ್ಪಾದನೆಯಾಗಲಿದೆ.

ಜರ್ಮನಿಯಲ್ಲಿ ಬಾಷ್‌, ಝಡ್‌ಎಫ್‌, ಮಹ್ಲೆ ಇತ್ಯಾದಿ ಕಂಪನಿಗಳು ಇ- ಫ್ಯೂಯೆಲ್‌ ಉದ್ಯಮದ ಲಾಬಿ ಗುಂಪಿನ ಸದಸ್ಯರಾಗಿದ್ದಾರೆ. ಬೃಹತ್‌ ತೈಲ ಕಂಪನಿಗಳೂ ಇವುಗಳ ಪರವಾಗಿ ನಿಂತಿವೆ. ಪೋರ್ಷೆ, ಮಾಜ್ದಾದಂತಹ ಕಂಪನಿಗಳು ಈ ಇಂಧನ ತಂತ್ರಜ್ಞಾನವನ್ನು ಬೆಂಬಲಿಸಿವೆ. ಆದರೆ, ಬಿಎಂಡಬ್ಲ್ಯು, ಫೋಕ್ಸ್‌ವ್ಯಾಗನ್‌, ಮರ್ಸಿಡಿಸ್‌ ಬೆಂಝ್‌ ಸೇರಿದಂತೆ ಪ್ರಮುಖ ವಾಹನ ಕಂಪನಿಗಳು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ವಾಹನಗಳತ್ತ ಬೃಹತ್‌ ಹೂಡಿಕೆ ಮಾಡಿವೆ.

ಸವಾಲುಗಳೇನು?

ಇ-ಇಂಧನಗಳನ್ನು ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ಗಳಲ್ಲಿ ಬಳಸಬಹುದು. ಹೀಗಾಗಿ, ಪೆಟ್ರೋಲ್‌ ಮತ್ತು ಡೀಸೆಲ್‌ ಕಂಪನಿಗಳಿಗೆ ಇದು ಸಿಹಿಸುದ್ದಿ. ಆದರೆ, ಇ-ಇಂಧನಗಳ ತಯಾರಿಕೆಯು ತುಂಬಾ ದುಬಾರಿ ಎಂದು ತಜ್ಞರು ಹೇಳುತ್ತಾರೆ. ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ ಕಾರಿನಲ್ಲಿ ಇ-ಇಂಧನ ಬಳಸುವುದಕ್ಕೆ ಬ್ಯಾಟರಿ ಎಲೆಕ್ಟ್ರಿಕ್‌ ವಾಹನಗಳಿಗಿಂತ ಐದು ಪಟ್ಟು ಪಟ್ಟು ಹೆಚ್ಚು ಖರ್ಚು ಮಾಡಬೇಕಾಗುತ್ತದೆಯಂತೆ. ಒಟ್ಟಾರೆ, ಇ-ಇಂಧನದ ಕುರಿತು ಜಗತ್ತಿನಲ್ಲಿ ಮಿಶ್ರ ಅಭಿಪ್ರಾಯಗಳು ಇವೆ ಎನ್ನಬಹುದು.

    ಹಂಚಿಕೊಳ್ಳಲು ಲೇಖನಗಳು