logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  From April 1 Changes: ಏಪ್ರಿಲ್‌ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಮಹತ್ತರ 10 ಬದಲಾವಣೆ, ಇಲ್ಲಿದೆ ವಿವರ

From April 1 Changes: ಏಪ್ರಿಲ್‌ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಮಹತ್ತರ 10 ಬದಲಾವಣೆ, ಇಲ್ಲಿದೆ ವಿವರ

HT Kannada Desk HT Kannada

Mar 28, 2023 11:14 AM IST

Representational Image

  • 2023-24 ಹೊಸ ಹಣಕಾಸು ವರ್ಷ (financial year 2023-24) ಏಪ್ರಿಲ್ 1 ರಂದು ಆರಂಭವಾಗುತ್ತದೆ. ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾಡಿರುವ ಘೋಷಣೆಗಳು ಇದೇ ಸಮಯದಲ್ಲಿ ಜಾರಿಗೆ ಬರುತ್ತವೆ.

Representational Image
Representational Image

ಬೆಂಗಳೂರು: 2023-24 ಹೊಸ ಹಣಕಾಸು ವರ್ಷ (financial year 2023-24) ಏಪ್ರಿಲ್ 1 ರಂದು ಆರಂಭವಾಗುತ್ತದೆ. ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾಡಿರುವ ಘೋಷಣೆಗಳು ಇದೇ ಸಮಯದಲ್ಲಿ ಜಾರಿಗೆ ಬರುತ್ತವೆ. ಆದಾಯ ತರಿಗೆ ನಿಯಮಗಳಲ್ಲಿ ಆಗುವ ಬದಲಾವಣೆಗಳು ತೆರಿಗೆ ಪಾವತಿದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.

ಟ್ರೆಂಡಿಂಗ್​ ಸುದ್ದಿ

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಏಪ್ರಿಲ್‌ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಆಗುವ ಪ್ರಮುಖ ಹತ್ತು ಬದಲಾವಣೆಗಳ ವಿವರ ಇಲ್ಲಿದೆ

1. ಡಿಫಾಲ್ಟ್‌ ತೆರಿಗೆ ಪದ್ಧತಿ: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವಾಗ ಬಳಕೆದಾರರು "ಹಳೆಯ ಅಥವಾ ಹೊಸತು" ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಅವರಿಗೆ ಡಿಫಾಲ್ಟ್‌ ಆಗಿ "ಹೊಸ ತೆರಿಗೆ ಪದ್ಧತಿ" ಅನ್ವಯಿಸಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

2. ತೆರಿಗೆ ವಿನಾಯಿತಿ ಮಿತಿ ಹೆಚ್ಚಳ: ಇಲ್ಲಿಯವರೆಗೆ ಐದು ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಮಿತಿ ಇತ್ತು. ಈ ಮಿತಿ ಏಳು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರರ್ಥ ವರ್ಷಕ್ಕೆ 7 ಲಕ್ಷಕ್ಕಿಂತ ಕಡಿಮೆ ಸಂಬಳ ಹೊಂದಿರುವ ವ್ಯಕ್ತಿಯು ವಿನಾಯಿತಿಗಳನ್ನು ಪಡೆಯುವ ಸಲುವಾಗಿ ವಿವಿಧ ಹೂಡಿಕೆ ತೋರಿಸಬೇಕಾಗಿಲ್ಲ.

3. ಸ್ಟ್ಯಾಂಡರ್ಡ್ ಡಿಡಕ್ಷನ್: ಹಳೆಯ ತೆರಿಗೆ ಪದ್ಧತಿಯಲ್ಲಿ 50,000 ರೂ. ಕಡಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಹೊಸ ತೆರಿಗೆ ಪದ್ಧತಿಗೂ ವಿಸ್ತರಿಸಲಾಗಿದೆ. ಆದ್ದರಿಂದ, ವಾರ್ಷಿಕ ಆದಾಯ ರೂ 5.15 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೇತನದಾರರು 52,500 ರೂ.ನಷ್ಟು ಪ್ರಯೋಜನ ಪಡೆಯುತ್ತಾರೆ.

4. ಆದಾಯ ತೆರಿಗೆ ಸ್ಲ್ಯಾಬ್‌: ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷ ರೂ.ಗೆ ಹೆಚ್ಚಿಸಿರುವುದರಿಂದ ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಜನರು ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಈ ಮುಂದಿನಂತೆ ಇವೆ

  • 0- 3 ಲಕ್ಷ ರೂ.ವರೆಗೆ: ಯಾವುದೇ ಆದಾಯ ತೆರಿಗೆ ಇಲ್ಲ
  • 3 ಲಕ್ಷ ರೂ.ನಿಂದ 6 ಲಕ್ಷ ರೂ.ವರೆಗೆ: 5%
  • 6 ಲಕ್ಷ ರೂ.ನಿಂದ 9 ಲಕ್ಷ ರೂ.ವರೆಗೆ: 10%
  • 9 ಲಕ್ಷ ರೂ.ನಿಂದ 12 ಲಕ್ಷ ರೂ.ವರೆಗೆ: 15%
  • 12 ಲಕ್ಷ ರೂ.ನಿಂದ 15 ಲಕ್ಷ ರೂ.ವರೆಗೆ: 20%
  • 15 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ: 30%

5. ಎಲ್‌ಟಿಎ: 2002 ರಿಂದ 3 ಲಕ್ಷ ರೂ.ಗಳಿದ್ದ ರಜೆಯ ಪ್ರಯಾಣ ಭತ್ಯೆಯ ಎನ್‌ಕ್ಯಾಶ್‌ಮೆಂಟ್ ಮಿತಿಯನ್ನು ಈಗ 25 ಲಕ್ಷಕ್ಕೆ ಏರಿಸಲಾಗಿದೆ. ಇದು ಕೂಡ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

6. ಯಾವುದೇ ಎಲ್‌ಟಿಸಿಜಿ ತೆರಿಗೆ ಪ್ರಯೋಜನಗಳಿಲ್ಲ: ಮೊದಲ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯು ಅಸ್ತಿತ್ವದಲ್ಲಿರುವ ದೀರ್ಘಾವಧಿಯ ಬಂಡವಾಳ ಲಾಭಗಳ ಬದಲಿಗೆ ಅಲ್ಪಾವಧಿಯ ಬಂಡವಾಳ ಲಾಭಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಹೂಡಿಕೆದಾರರಿಗೆ ಇನ್ನು ಮುಂದೆ ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅವಕಾಶವಿಲ್ಲ.

7. ಮಾರುಕಟ್ಟೆ ಸಂಯೋಜಿತ ಡಿಬೆಂಚರ್‌ಗಳು: ಏಪ್ರಿಲ್ 1 ರ ನಂತರ, ಎಂಎಲ್‌ಡಿಗಳಲ್ಲಿನ ಹೂಡಿಕೆಯು ಅಲ್ಪಾವಧಿಯ ಬಂಡವಾಳ ಆಸ್ತಿಗಳಾಗಿರುತ್ತದೆ. ತಜ್ಞರ ಪ್ರಕಾರ, ಮ್ಯೂಚುವಲ್ ಫಂಡ್ ಉದ್ಯಮದ ಮೇಲೆ ಇಂತಹ ಕ್ರಮದ ಪರಿಣಾಮವು ಕೊಂಚಮಟ್ಟಿಗೆ ಋಣಾತ್ಮಕವಾಗಿರುತ್ತದೆ.

8. ಜೀವ ವಿಮಾ ಪಾಲಿಸಿಗಳು: ವಾರ್ಷಿಕ ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿನ ಜೀವ ವಿಮಾ ಪ್ರೀಮಿಯಂನಿಂದ ಬರುವ ಆದಾಯವು ತೆರಿಗೆಗೆ ಒಳಪಡುತ್ತದೆ.

9. ಹಿರಿಯ ನಾಗರಿಕರಿಗೆ ಪ್ರಯೋಜನ: ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌)ಯಲ್ಲಿ ಹಣ ಉಳಿತಾಯ ಮಾಡುವ ಮಿತಿಯನ್ನು ದ್ವಿಗುಣಗೊಳಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿದ್ದರು. ಅದು ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆ. ಈ ಹಿಂದೆ ಭಾರತ ಸರಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಂಬ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮಿತಿಯನ್ನು 15 ಲಕ್ಷ ರೂ.ಗೆ ನಿಗದಿಪಡಿಸಿತ್ತು. ಈ ಅಪಾಯರಹಿತ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಿರಿಯರಿಗೆ ವರ್ಷಕ್ಕೆ 7.40 ಬಡ್ಡಿದರ ನೀಡಲಾಗುತ್ತಿತ್ತು. ಇದೀಗ ಈ ಹೂಡಿಕೆ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ.

10. ಭೌತಿಕ ಚಿನ್ನದ ಪರಿವರ್ತನೆ: ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್ ಗೋಲ್ಡ್‌ ರಿಸಿಪ್ಟ್‌ಗೆ (EGR) ಪರಿವರ್ತಿಸಿದರೆ ಯಾವುದೇ ಬಂಡವಾಳ ತೆರಿಗೆ ಲಾಭ ಇರುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ