logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gd Constable Vacancy Revised: ಕಾನ್‌ಸ್ಟೆಬಲ್‌ ನೇಮಕಾತಿ 2022ರ ಖಾಲಿ ಹುದ್ದೆ ಸಂಖ್ಯೆ ಪರಿಷ್ಕರಣೆ; ಕರ್ನಾಟಕದಲ್ಲಿದೆ 1127 ಖಾಲಿ ಹುದ್ದೆ

GD constable vacancy revised: ಕಾನ್‌ಸ್ಟೆಬಲ್‌ ನೇಮಕಾತಿ 2022ರ ಖಾಲಿ ಹುದ್ದೆ ಸಂಖ್ಯೆ ಪರಿಷ್ಕರಣೆ; ಕರ್ನಾಟಕದಲ್ಲಿದೆ 1127 ಖಾಲಿ ಹುದ್ದೆ

HT Kannada Desk HT Kannada

Mar 21, 2023 11:21 AM IST

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022

  • GD constable vacancy revised: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022ಕ್ಕೆ ಸಂಬಂಧಿಸಿದ ಖಾಲಿ ಹುದ್ದೆಗಳ ಸಂಖ್ಯೆ ಪರಿಷ್ಕರಣೆ ಆಗಿದ್ದು, ಖಾಲಿ ಹುದ್ದೆಗಳ ಸಂಖ್ಯೆ 50,187ಕ್ಕೆ ಏರಿದೆ.

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022
ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022 (ssc.nic.in)

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022ಕ್ಕೆ ಸಂಬಂಧಿಸಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಖಾಲಿ ಹುದ್ದೆಗಳ ಸಂಖ್ಯೆ ಪರಿಷ್ಕರಣೆ ಆಗಿದೆ. ಇದರಂತೆ, ಈ ಹಿಂದೆ ಘೋಷಿಸಿದ್ದ 24,369 ಹುದ್ದೆಗಳ ಬದಲಾಗಿ 50,187 ಹುದ್ದೆಗಳ ಭರ್ತಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಕ್ರಮ ತೆಗೆದುಕೊ‍ಳ್ಳಲಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022ರ ಪರೀಕ್ಷೆ ಇದೇ ವರ್ಷ ಜನವರಿ 10 ಮತ್ತು ಫೆಬ್ರವರಿ 13ರಂದು ನಡೆದಿತ್ತು. ಕೀ ಆನ್ಸರ್‌ಗಳನ್ನು ಫೆಬ್ರವರಿ 18ರಂದು ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಪ್ರಕಟಿಸಿದೆ. ಫೆ.25ರ ತನಕ ಕೀ ಆನ್ಸರ್‌ ಕುರಿತು ಆಕ್ಷೇಪಣೆಗೆ ಅವಕಾಶವನ್ನೂ ಆಯೋಗ ಕೊಟ್ಟಿತ್ತು.

ಜಿಡಿ ಕಾನ್‌ಸ್ಟೆಬಲ್‌ ನೇಮಕಾತಿ 2022ಕ್ಕೆ ಸಂಬಂಧಿಸಿದ ಪರಿಷ್ಕೃತ ಖಾಲಿ ಹುದ್ದೆಗಳ ವಿವರವಾದ ಅಧಿಸೂಚನೆಯು ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಅಂತರ್ಜಾಲತಾಣದಲ್ಲಿ ಲಭ್ಯವಿದೆ.

ಪರಿಷ್ಕೃತ ಖಾಲಿ ಹುದ್ದೆಗಳ ವಿವರ ಹೀಗಿದೆ..

ರಕ್ಷಣಾ ದಳಪುರುಷಮಹಿಳೆ
ಬಿಎಸ್‌ಎಫ್‌178833169
ಸಿಐಎಸ್‌ಎಫ್‌5447613
ಸಿಆರ್‌ಪಿಎಫ್‌ 10589580
ಎಸ್‌ಎಸ್‌ಬಿ 2031243
ಐಟಿಬಿಪಿ 4796846
ಎಆರ್‌353368
ಎಸ್‌ಎಸ್‌ಎಫ್‌16054
ಒಟ್ಟು- 50187  

ಆಯೋಗವು 2023ರ ಜನವರಿಯಲ್ಲಿ ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ನಂತರ, ಸಿಎಪಿಎಫ್‌ಗಳು ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಗುಣಮಟ್ಟದ ಪರೀಕ್ಷೆ (PST), ವಿವರವಾದ ವೈದ್ಯಕೀಯ ಪರೀಕ್ಷೆ (DME) ಮತ್ತು ವಿಮರ್ಶೆ ವೈದ್ಯಕೀಯ ಪರೀಕ್ಷೆ (RME) ಅನ್ನು ನಿಗದಿಪಡಿಸುತ್ತದೆ ಮತ್ತು ನಡೆಸುತ್ತದೆ.

ಅಭ್ಯರ್ಥಿಗಳು ವಿವರವಾದ ಅಧಿಸೂಚನೆ ಗಮನಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕದಲ್ಲಿ ಎಷ್ಟಿವೆ ಖಾಲಿ ಹುದ್ದೆಗಳು

ಕರ್ನಾಟಕದಲ್ಲಿ ಬಿಎಸ್‌ಎಫ್‌, ಸಿಐಎಸ್‌ಎಫ್‌, ಸಿಆರ್‌ಪಿಎಫ್‌, ಎಸ್‌ಎಸ್‌ಬಿ, ಐಟಿಬಿಪಿ, ಎಆರ್‌ಗಳಲ್ಲಿ ಒಟ್ಟು 1127 ಖಾಲಿ ಹುದ್ದೆಗಳಿವೆ.

ಭದ್ರತಾ ಪಡೆಎಸ್‌ಸಿ ಎಸ್‌ಟಿಒಬಿಸಿಇಡಬ್ಲ್ಯುಎಸ್‌ಯುಆರ್‌ ಒಟ್ಟು
ಬಿಎಸ್‌ಎಫ್‌713212055178456
ಸಿಐಎಸ್‌ಎಫ್‌2209361854139
ಸಿಆರ್‌ಪಿಎಫ್‌45137528110271
ಎಸ್‌ಎಸ್‌ಬಿ030512141953
ಐಟಿಬಿಪಿ1908331249121
ಎಆರ್‌130622143287
ಒಟ್ಟು 175712981414421127

ಗಮನಿಸಬಹುದಾದ ಸುದ್ದಿ

ನಿಮ್ಮ ಜೀವನೋದ್ದೇಶ ಏನು?; ಗುರಿ ಮತ್ತು ಗುರುವನ್ನು ಕಂಡುಕೊಳ್ಳಲು ಇಲ್ಲಿದೆ ಪಂಚ ಸೂತ್ರ

Life purpose: ಜೀವನೋದ್ದೇಶವನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ನಿಮ್ಮ ಜೀವನದ ಗುರಿ ಮತ್ತು ಉದ್ದೇಶದ ಸ್ಪಷ್ಟತೆ ಇಲ್ಲದೇ ಇದ್ದಾಗ, ಮಾರ್ಗದರ್ಶಕರ ನೆರವು ಕೂಡ ಬೇಕಾಗುತ್ತದೆ. ಆದಾಗ್ಯೂ, ಬದುಕಿನ ಹಾದಿಯಲ್ಲಿ ಇದೊಂದು ನಿರ್ಣಾಯಕ ಘಟ್ಟ ಎಂಬುದು ವಾಸ್ತವ. ಜೀವನೋದ್ದೇಶ ತಿಳಿಯಬೇಕಾ? ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ಬೆಟ್ಟಿಂಗ್‌ ಶುರು; ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಪರ ʻಆಸ್ತಿʼ ಬಾಜಿಗಿಟ್ಟ ತೆಲುಗು ಸಮಾಜದ ಮುಖಂಡ!

ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಗಮನಸೆಳೆಯುತ್ತವೆ. ರಾಜಕೀಯ ರಂಗು ಅನೇಕರ ಬದುಕಿನ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಸೋಮವಾರ ಅಂಥದ್ದೇ ಒಂದು ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ