logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Business News: ಭಾರತದ ನೂತನ ಸಂಸತ್‌ ಭವನ ಲೋಕಾರ್ಪಣೆ ನೆನಪಿಗೆ 75 ರೂಪಾಯಿ ನಾಣ್ಯ

Business news: ಭಾರತದ ನೂತನ ಸಂಸತ್‌ ಭವನ ಲೋಕಾರ್ಪಣೆ ನೆನಪಿಗೆ 75 ರೂಪಾಯಿ ನಾಣ್ಯ

HT Kannada Desk HT Kannada

May 26, 2023 08:23 AM IST

ಭಾರತದ ನೂತನ ಸಂಸತ್‌ ಸಂಕೀರ್ಣದ ಲೋಕಾರ್ಪಣೆ ನೆನಪಿಗೆ ಭಾನುವಾರ ೭೫ ರೂ. ಮುಖ ಬೆಲೆಯ ವಿಶೇಷ ನಾಣ್ಯ ಬಿಡುಗಡೆಯಾಗಲಿದೆ.

    • ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದೆ. ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭದೊಂದಿಗೆ ಸಿಂಹದ ಮುಖ ಇರಲಿದೆ. ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ.
ಭಾರತದ ನೂತನ ಸಂಸತ್‌ ಸಂಕೀರ್ಣದ ಲೋಕಾರ್ಪಣೆ ನೆನಪಿಗೆ ಭಾನುವಾರ ೭೫ ರೂ. ಮುಖ ಬೆಲೆಯ ವಿಶೇಷ ನಾಣ್ಯ ಬಿಡುಗಡೆಯಾಗಲಿದೆ.
ಭಾರತದ ನೂತನ ಸಂಸತ್‌ ಸಂಕೀರ್ಣದ ಲೋಕಾರ್ಪಣೆ ನೆನಪಿಗೆ ಭಾನುವಾರ ೭೫ ರೂ. ಮುಖ ಬೆಲೆಯ ವಿಶೇಷ ನಾಣ್ಯ ಬಿಡುಗಡೆಯಾಗಲಿದೆ.

ಹೊಸದಿಲ್ಲಿ: ಭಾರತದ ನೂತನ ಸಂಸತ್‌ ಭವನದ ಉದ್ಘಾಟನೆ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರವು 75 ರೂಪಾಯಿ ಮುಖ ಬೆಲೆಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಕೇಂದ್ರ ಹಣಕಾಸು ಸಚಿವಾಲಯವು ಈ ನಾಣ್ಯವನ್ನು ಸಿದ್ದಪಡಿಸಿದೆ. ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದೆ.

ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭದೊಂದಿಗೆ ಸಿಂಹದ ಮುಖ ಇರಲಿದೆ. ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ನಾಣ್ಯದ ಎಡ ಭಾಗದಲ್ಲಿ ಭಾರತ್‌ ಎಂದು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್‌ನಲ್ಲಿ ಉಲ್ಲೇಖಿಸಲಾಗಿದೆ. ರೂಪಾಯಿ ಚಿಹ್ನೆಯೂ ದೊಡ್ಡದಾಗಿ ಕಾಣಿಸಲಿದೆ.

ನಾಣ್ಯದ ಮತ್ತೊಂದು ಬದಿಯಲ್ಲಿ ನೂತನ ಸಂಸತ್‌ ಸಂಕೀರ್ಣದ ಚಿತ್ರವಿರಲಿದೆ. ಕೆಳ ಭಾಗದಲ್ಲಿ ಸಂಸತ್‌ ಸಂಕಲ್ಪ ಎಂದು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಬದಿಯಲ್ಲಿ ಪಾರ್ಲಿಮೆಂಟ್‌ ಕಾಂಪ್ಲೆಕ್ಸ್‌ ಎಂದು ಇಂಗ್ಲೀಷ್‌ನಲ್ಲಿ ಮುದ್ರಿಸಲಾಗಿದೆ.

ಇಡೀ ನಾಣ್ಯದ ತೂಕ 35 ಗ್ರಾಂನಷ್ಟು ಇರಲಿದೆ, ನಾಣ್ಯದ ಸುತ್ತಳತೆ 44 ಮಿಲಿ ಮೀಟರ್‌. ನಾಣ್ಯವು ಶೇಕಡ 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ತಲಾ ಶೇ .5ರಷ್ಟು ಸತು ಹಾಗೂ ಮಿಶ್ರ ಲೋಹವನ್ನು ಒಳಗೊಂಡಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟ್‌ ಮಿಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ನೋಯಿಡಾ, ಕೋಲ್ಕತ್ತಾ, ಮುಂಬೈ ಹಾಗೂ ಹೈದ್ರಾಬಾದ್‌ನಲ್ಲಿರುವ ಘಟಕದಲ್ಲಿ ಈ ವಿಶೇಷ ನಾಣ್ಯಗಳನ್ನು ಮುದ್ರಿಸಲಿದೆ.

ಈಗಾಗಲೇ 75 ರೂಪಾಯಿ ಮುಖಬೆಲೆಯ ನಾಣ್ಯ ಮುದ್ರಿಸಲಾಗಿದ್ದರೂ ನೂತನ ಸಂಸತ್‌ ಭವನ ಸಂಕೀರ್ಣದ ವಿಶೇಷ ನಾಣ್ಯ ಇದಾಗಲಿದೆ. ಸದ್ಯ 60, 75, 100, 125, 1000 ರೂಪಾಯಿ ಮುಖ ಬೆಲೆಯ ನಾಣ್ಯಗಳು ನಮ್ಮಲ್ಲಿವೆ. ಇವೆಲ್ಲವೂ ವಿಶೇಷ ಸ್ಮರಣಾರ್ಥ ಬಿಡುಗಡೆ ಮಾಡಿರುವಂತವು. ವಿಶೇಷ ನಾಣ್ಯಗಳು ಬೇಕಿದ್ದರೆ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಪತ್ರ ಬರೆದು ಅಗತ್ಯ ಹಣ ತುಂಬಿದರೆ ಕಳುಹಿಸಿಕೊಡಲಾಗುತ್ತದೆ ಎಂಬುದು ಆರ್‌ಬಿಐ ಅಧಿಕಾರಿಗಳ ಮಾಹಿತಿ.

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ವಿಶಾಲ ಸಂಸತ್‌ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇದನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ