logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Himachal Rain: ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು, ಕುಸಿದ ಶಿವಮಂದಿರ, ಕೊಚ್ಚಿ ಹೋದ ಮನೆಗಳು

Himachal rain: ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು, ಕುಸಿದ ಶಿವಮಂದಿರ, ಕೊಚ್ಚಿ ಹೋದ ಮನೆಗಳು

Praveen Chandra B HT Kannada

Aug 14, 2023 01:22 PM IST

ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು

  • Himachal Pradesh rains: ಭಾರೀ ಮಳೆಗೆ ಹಿಮಾಚಲ ಪ್ರದೇಶ ತತ್ತರಿಸಿದೆ. ಕಳೆದ 24 ಗಂಟೆಯಲ್ಲಿ ಹಿಮಾಲಯ ಪ್ರದೇಶದಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೇಘಸ್ಪೋಟದ ಕುರಿತು ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಟ್ವೀಟ್‌ ಮಾಡಿದ್ದಾರೆ.

ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು
ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮೇಘಸ್ಪೋಟದಂತಹ ವಾತಾವರಣವಿದೆ. ಕಳೆದ 24 ಗಂಟೆಯಲ್ಲಿ ಹಿಮಾಲಯ ಪ್ರದೇಶದಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. "ಎಲ್ಲರೂ ಮನೆಯೊಳಗೆ ಇರಿ, ಹೊರಕ್ಕೆ ಬರಬೇಡಿ" ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಮನವಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯ ಕಾರಣದಿಂದ ಸಂಭವಿಸಿದ ಎರಡು ಪ್ರತ್ಯೇಕ ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 16 ಜನರು ಮೃತಪಟ್ಟಿರುವುದನ್ನು ಈಗಾಗಲೇ ಮುಖ್ಯಮಂತ್ರಿಗಳು ಖಚಿತಪಡಿಸಿದ್ದಾರೆ. ಕಳೆದ ರಾತ್ರಿ ಸೊಲಾನ್‌ ಜಿಲ್ಲೆಯಲ್ಲಿ ಮೇಘಸ್ಪೋಟ ಸಂಭವಿಸಿ ಏಳು ಜನರು ಮೃತಪಟ್ಟಿದ್ದರು. ಇಂದು ಸುಮೇರ್‌ ಗುಡ್ಡ ಪ್ರದೇಶದಲ್ಲಿ ಶಿವ ದೇಗುಲವು ಗುಡ್ಡಕುಸಿತದಿಂದ ನೆಲಕಚ್ಚಿದೆ. ಈ ದೇಗುಲದಡಿ ಸಿಲುಕಿ ಸುಮಾರು ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

"ಮನೆಯಲ್ಲಿಯೇ ಇರಿ, ಮನೆ ಸಮೀಪದ ನದಿ ಅಥವಾ ಗುಡ್ಡಗಾಡು ಪ್ರದೇಶದತ್ತ ಹೋಗಬೇಡಿ" ಎಂದು ಮುಖ್ಯಮಂತ್ರಿ ಸುಖ್‌ವಿಂದರ್‌ ಸಿಂಗ್‌ ಸುಖ್‌ ಅವರು ಟ್ವೀಟ್‌ ಮಾಡಿದ್ದಾರೆ. ಶಿಮ್ಲಾ ನಗರದಲ್ಲಿ 15ರಿಂದ 20 ಜನರು ಮಣ್ಣಿನಡಿ ಸಮಾದಿಯಾಗಿದ್ದಾರೆ ಎನ್ನಲಾಗಿದೆ. ಹಲವು ಮನೆಗಳು ಮಣ್ಣು ಮತ್ತು ಕೆಸರಿನಡಿಗೆ ಹೋಗಿವೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ಆದಿತ್ಯ ನೇಗಿ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸೋಲನ್‌ನಲ್ಲಿ ಮೃತಪಟ್ಟವರನ್ನು ಹರ್ನಾಮ್ (38), ಕಮಲ್ ಕಿಶೋರ್ (35), ಹೇಮಲತಾ (34), ರಾಹುಲ್ (14), ನೇಹಾ (12), ಗೋಲು (8), ಮತ್ತು ರಕ್ಷಾ (12) ಎಂದು ಗುರುತಿಸಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ನೆರವು ಮತ್ತು ಬೆಂಬಲವನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಟ್ವೀಟ್‌ ಮಾಡಿದ್ದಾರೆ.

"ಸೋಲನ್ ಜಿಲ್ಲೆಯ ಧಾವ್ಲಾ ಉಪ-ತಹಸೀಲ್ ಗ್ರಾಮದ ಜಾಡೋನ್‌ನಲ್ಲಿ ಸಂಭವಿಸಿದ ಮೇಘಸ್ಫೋಟ ದುರಂತದಲ್ಲಿ 7 ಅಮೂಲ್ಯ ಜೀವಗಳನ್ನು ಕಳೆದುಕೊಂಡ ಬಗ್ಗೆ ಕೇಳಿ ಘಾಸಿಗೊಂಡಿದ್ದೇನೆ. ದುಃಖಿತ ಕುಟುಂಬಗಳಿಗೆ ಸಂತಾಪಗಳು ' ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತ್ತವಾಗಿವೆ. ಗುಡ್ಡಗಳು ಕುಸಿತದ ಭೀತಿಯಲ್ಲಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಿಮ್ಲಾ ಚಂಡೀಗಢ ರಸ್ತೆ ಬ್ಲಾಕ್‌ ಆಗಿದೆ. ಜೂನ್‌ 24ಕ್ಕೆ ಹಿಮಾಚಲ ಪ್ರದೇಶಕ್ಕೆ ಮುಂಗಾರು ಪ್ರವೇಶಿಸಿತ್ತು. ಈ ಬಾರಿ ಮಳೆ ಋತುವಿನಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ