logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಸತ್ತಿನಲ್ಲಿ ಮುಂದುವರಿದ ಬಿಕ್ಕಟ್ಟು, ಲೋಕಸಭೆಯಲ್ಲಿ ಇನ್ನಿಬ್ಬರು ಸದಸ್ಯರ ಅಮಾನತು; 10 ಅಂಶಗಳಲ್ಲಿ ಈವರೆಗಿನ ವಿದ್ಯಮಾನ

ಸಂಸತ್ತಿನಲ್ಲಿ ಮುಂದುವರಿದ ಬಿಕ್ಕಟ್ಟು, ಲೋಕಸಭೆಯಲ್ಲಿ ಇನ್ನಿಬ್ಬರು ಸದಸ್ಯರ ಅಮಾನತು; 10 ಅಂಶಗಳಲ್ಲಿ ಈವರೆಗಿನ ವಿದ್ಯಮಾನ

HT Kannada Desk HT Kannada

Dec 20, 2023 07:22 PM IST

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಾರ್ತಾ ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್.

  • ಅಸಾಂಸದೀಯ ನಡವಳಿಕೆ ಕಾರಣ ಲೋಕಸಭೆಯಲ್ಲಿ ಅಮಾನತುಗೊಂಡ ಸದಸ್ಯರ ಸಂಖ್ಯೆ 97 ಮತ್ತು ರಾಜ್ಯಸಭೆಯಲ್ಲಿ ಅಮಾನತು ಆದವರ ಸಂಖ್ಯೆ 46 ಆಗಿದೆ. ಇದುವರೆಗೆ ಒಟ್ಟು 143 ಸದಸ್ಯರು ಅಮಾನತುಗೊಂಡಂತಾಗಿದೆ. 

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಾರ್ತಾ ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಾರ್ತಾ ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್. (ANI)

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ಕಂದಕ ಹೆಚ್ಚಿದ್ದು, ಸಂಸದೀಯವಲ್ಲದ ನಡವಳಿಕೆ ಪ್ರದರ್ಶಿಸಿದ ಇನ್ನಿಬ್ಬರು ಸಂಸದರನ್ನು ಲೋಕಸಭೆಯಲ್ಲಿ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಅಮಾನತುಗೊಂಡ ಸದಸ್ಯರ ಸಂಖ್ಯೆ 143ಕ್ಕೆ ಏರಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ರಾಜ್ಯಸಭಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್‌ಖಡ್ ಅವರನ್ನು ಅನುಕರಿಸಿ ಲೇವಡಿ ಮಾಡಿದ ತೃಣಮೂಲ ಕಾಂಗ್ರೆಸ್‌ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಕೃತ್ಯವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಡಿಯೋ ಚಿತ್ರೀಕರಿಸಿದ ವಿಚಾರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವಂತೆ ಮಾಡಿತು.

ಈ ನಡುವೆ, ರಾಜ್ಯಸಭಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್‌ಖಡ್ ಅವರನ್ನು ಅನುಕರಿಸಿ ಲೇವಡಿ ಮಾಡಿದ ಸದಸ್ಯರನ್ನೂ ಅಮಾನತು ಮಾಡುವಂತೆ ಸಂಸತ್ತಿನ ಶಿಸ್ತು ಸಮಿತಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ ಪ್ರಸಂಗವೂ ವರದಿಯಾಗಿದೆ.

ಸಂಸತ್ತಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಗಮನಿಸಬೇಕಾದ 10 ಅಂಶಗಳು ಹೀಗಿವೆ

1. ಕಲಾಪ ನಡೆಯುತ್ತಿರುವಾಗ ಸದನದಲ್ಲಿ ಪ್ಲೆಕಾರ್ಡ್‌ಗಳನ್ನು ತೋರಿಸಿದ ಇಬ್ಬರು ವಿಪಕ್ಷದ ಸದಸ್ಯರನ್ನು ಲೋಕಸಭೆ ಬುಧವಾರ ಅಮಾನತುಗೊಳಿಸಿದೆ. ಕೇರಳ ಕಾಂಗ್ರೆಸ್ (ಮಣಿ)ಯ ಥಾಮಸ್ ಚಾಜಿಕಡನ್ ಮತ್ತು ಸಿಪಿಐ(ಎಂ) ನ ಎ ಎಂ ಆರಿಫ್ ಅವರನ್ನು "ದುರ್ನಡತೆ"ಗಾಗಿ ಅಮಾನತುಗೊಳಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿತು. ಇದರೊಂದಿಗೆ ಲೋಕಸಭೆಯಲ್ಲಿ ಅಮಾನತುಗೊಂಡ ಸದಸ್ಯರ ಸಂಖ್ಯೆ 97 ಮತ್ತು ರಾಜ್ಯಸಭೆಯಲ್ಲಿ ಅಮಾನತು ಆದವರ ಸಂಖ್ಯೆ 46 ಆಗಿದೆ.
2. ರಾಹುಲ್ ಗಾಂಧಿ ಮತ್ತು ಕಲ್ಯಾಣ್‌ ಬ್ಯಾನರ್ಜಿಯವರ ಕೃತ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ ಎಂದು ಹೇಳಿದ ಜಗದೀಪ್ ಧನ್‌ಖಡ್‌, "ಕೆಲವು ಗೌರವಾನ್ವಿತ ಸಂಸದರ ಹೀನಾಯ ವರ್ತನೆ ಬಗ್ಗೆ ಅವರು ತೀವ್ರ ನೋವನ್ನು ವ್ಯಕ್ತಪಡಿಸಿದ್ದಾರೆ. ಪವಿತ್ರ ಸಂಸತ್ತಿನ ಸಂಕೀರ್ಣದಲ್ಲಿ ಆಗಿರುವಂತಹ ವರ್ತನೆಯನ್ನು ಅವರು 20 ವರ್ಷಗಳಿಂದ ಎದುರಿಸುತ್ತ ಬಂದಿರುವುದಾಗಿ ಹೇಳಿದರು. ಆದರೆ, ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ, ರಾಜಸಭಾಧ್ಯಕ್ಷರ ಪೀಠಕ್ಕೆ ಇಂತಹ ಅಪಚಾರವಾಗಬಾರದು. ವೈಯಕ್ತಿಕವಾಗಿ ನನ್ನನ್ನು ಅವಹೇಳನಮಾಡಿದ್ದರೆ ಸಹಿಸಬಹುದಾಗಿತ್ತು. ಆದರೆ ಈ ವರ್ತನೆ ಅದಲ್ಲ. ಸಂಸತ್ತಿನಲ್ಲೂ ಈ ರೀತಿ ಆಗಿರುವುದು ದುರದೃಷ್ಟಕರ ಎಂದು ಖೇದ ವ್ಯಕ್ತಪಡಿಸಿದರು.

3. ರಾಜ್ಯಸಭಾಧ್ಯಕ್ಷ ಜಗದೀಪ್ ಧನ್‌ಖಡ್‌ ಅವರ ಬೆಂಬಲಕ್ಕೆ ನಿಂತ ಆಡಳಿತಾರೂಢ ಪಕ್ಷದ ಸದಸ್ಯರು, ವಿಪಕ್ಷ ಸದಸ್ಯರ ಮಿಮಿಕ್ರಿ ವಿರುದ್ಧ ಪ್ರತಿಭಟನೆ 10 ನಿಮಿಷ ನಡೆಸಿದರು. ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿಯವರು ನಿಮಗೆ ಮತ್ತು ನಿಮ್ಮ ಸಾಂವಿಧಾನಿಕ ಸ್ಥಾನಕ್ಕೆ ಅಗೌರವ ತೋರಿದ ಕ್ರಮವನ್ನು ನಾವು ಖಂಡಿಸುತ್ತೇವೆ. ಸಮಾಜದ ಒಂದು ನಿರ್ದಿಷ್ಟ ಸಮುದಾಯವನ್ನು ಅಪಮಾನಿಸುವುದು ಸರಿಯಲ್ಲ. ನೈತಿಕ ಮೌಲ್ಯ ಈ ಮಟ್ಟಕ್ಕೆ ಕುಸಿತ ಕಂಡಿರುವುದು ಇದೇ ಮೊದಲು ಎಂದು ಟೀಕಿಸಿದರು.

4. ನಿನ್ನೆ (ಡಿ.19) ನಡೆದ ವಿದ್ಯಮಾನವು ವಿಪಕ್ಷ ಸದಸ್ಯರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಅವರಿಗೆ ರೈತನ ಮಗ ಅಥವಾ ಜಾಟ್ ಸಮುದಾಯದ ವ್ಯಕ್ತಿಯೊಬ್ಬರು ಉಪರಾಷ್ಟ್ರಪತಿ ಸ್ಥಾನದಲ್ಲಿ, ರಾಜ್ಯಸಭಾಧ್ಯಕ್ಷರ ಪೀಠದಲ್ಲಿ ಕುಳಿತುಕೊಳ್ಳುವುದು ಇಷ್ಟವಿಲ್ಲ. ಸದನದಲ್ಲಿ ರಾಜೀವ್ ಶುಕ್ಲಾ ನೀಡಿದ ಹೇಳಿಕೆಯೂ ಇದೇ ಮನಸ್ಥಿತಿಯನ್ನು ಬಿಂಬಿಸಿದೆ ಎಂದು ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದರು. 50-60 ಸದಸ್ಯರು ಇಡೀ 543 ಸದಸ್ಯರ ಕಲಾಪದಲ್ಲಿ ಭಾಗವಹಿಸುವ ಹಕ್ಕನ್ನು ಕಸಿದುಕೊಳ್ಳಲು, ಹಾಳುಗಡೆವಲು ಪ್ರಯತ್ನಿಸಿದರೆ ಅಂಥವರನ್ನು ಅಮಾನತು ಮಾಡುವುದರಲ್ಲಿ ತಪ್ಪಿಲ್ಲ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದರು.

5. ಸಂಸತ್ತಿನಲ್ಲಿ ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಯವರನ್ನು ಚುನಾಯಿತ ಜನಪ್ರತಿನಿಧಿಗಳು ನಡೆಸಿಕೊಂಡ ರೀತಿಯನ್ನು ಗಮನಿಸಿದ್ದೇನೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವು ಘನತೆ ಮತ್ತು ಸೌಜನ್ಯದ ಪರಿಮಿತಿಯಲ್ಲಿ ಇರಲಿಲ್ಲ. ಸಂಸದೀಯ ನಡವಳಿಕೆಯನ್ನು ಎತ್ತಿಹಿಡಿಯಬೇಕಾದ್ದು ಅವಶ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

6. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಧ್ಯಮ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, "ಸಂಸದರು ಅಲ್ಲಿ ಕುಳಿತಿದ್ದರು, ನಾನು ಅವರ ವೀಡಿಯೊವನ್ನು ಚಿತ್ರೀಕರಿಸಿದ್ದೇನೆ. ನನ್ನ ವೀಡಿಯೊ ನನ್ನ ಫೋನ್‌ನಲ್ಲಿದೆ. ಮಾಧ್ಯಮಗಳು ಅದನ್ನು ತೋರಿಸುತ್ತಿವೆ ... ನಮ್ಮ 150 (143) ಸಂಸದರನ್ನು (ಸದನದಿಂದ) ಹೊರಹಾಕಲಾಗಿದೆ. ಆದರೆ ಅಲ್ಲಿ ಮಾಧ್ಯಮಗಳಲ್ಲಿ ಅದರ ಬಗ್ಗೆ ಯಾವುದೇ ಚರ್ಚೆ ಇಲ್ಲ, ಅದಾನಿ ಬಗ್ಗೆ ಯಾವುದೇ ಚರ್ಚೆ ಇಲ್ಲ, ರಫೇಲ್ ಬಗ್ಗೆ ಯಾವುದೇ ಚರ್ಚೆ ಇಲ್ಲ, ನಿರುದ್ಯೋಗದ ಬಗ್ಗೆ ಯಾವುದೇ ಚರ್ಚೆ ಇಲ್ಲ, ನಮ್ಮ ಸಂಸದರು ನಿರಾಶೆಗೊಂಡು ಹೊರಗೆ ಕುಳಿತಿದ್ದಾರೆ. ಆದರೆ ನೀವು ಅದರ (ಮಿಮಿಕ್ರಿ) ಬಗ್ಗೆ ಚರ್ಚಿಸುತ್ತಿದ್ದೀರಿ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

7. ಉಪರಾಷ್ಟ್ರಪತಿ ಜಗದೀಪ್ ಧನ್‌ಖಡ್ ಅವರು ರಾಜ್ಯಸಭೆಯಲ್ಲಿ ವರ್ತಿಸುವುದು ಇದೇ ರೀತಿಯಾ ಎಂದು ಪ್ರಶ್ನಿಸಿದ ಸಂಸದ ಕಲ್ಯಾಣ್ ಬ್ಯಾನರ್ಜಿ, ಅವರು ಕೂಡ ನನ್ನದೇ ವೃತ್ತಿಬಾಂಧವರು, ಹಿರಿಯ ನ್ಯಾಯವಾದಿ, ಎರಡನೇಯದಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದವರು ಅವರನ್ನು ನಾನು ಗೌರವಿಸುತ್ತೇನೆ. ಅವರ ಮನಸ್ಸಿಗೆ ನೋವು ಉಂಟುಮಾಡುವ ಉದ್ದೇಶ ತನಗೆ ಇರಲಿಲ್ಲ. ಆ ವಿಚಾರವನ್ನು ಅಷ್ಟೊಂದು ವೈಯಕ್ತಿಕವಾಗಿ ಏನಕ್ಕೆ ತೆಗೆದುಕೊಂಡರೋ ಗೊತ್ತಿಲ್ಲ. ಆದರೆ ಪ್ರಧಾನಿ ಮೋದಿಯವರು 2014-19ರ ಅವಧಿಯಲ್ಲಿ ಇದೇ ರೀತಿ ವಿಪಕ್ಷ ಸದಸ್ಯರನ್ನು ಲೇವಡಿ ಮಾಡಿದ್ದಾರೆ. ಆಗ ಏನೂ ಆಗಿರಲಿಲ್ಲ. ಈಗ ಹೀಗ್ಯಾಕೆ ಎಂದು ಪ್ರಶ್ನಿಸಿದರು.

8. ಜಗದೀಪ್ ಧನಖಡ್ ಅವರ ಜಾಟ್ ಸಮುದಾಯಕ್ಕೆ ಅವಮಾನ ಮಾಡಿದ್ದು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು ದಲಿತ ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಇನ್ನೊಂದೆಡೆ, ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದು ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದರು.

9. ಮಿಮಿಕ್ರಿ ಮಾಡಿರುವ ವಿಚಾರದಲ್ಲಿ ಜಾತಿ ಪ್ರಶ್ನೆ ಬರುವುದಿಲ್ಲ. ಬಿಜೆಪಿಯವರು ಪ್ರತಿಯೊಂದರಲ್ಲೂ ಜಾತಿಯನ್ನು ಮುಂದಿಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದರು.

10. ಕಲ್ಯಾಣ್ ಬ್ಯಾನರ್ಜಿ ಅವರ ಮಿಮಿಕ್ರಿ ಪ್ರಹಸನದ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರನ್ನು ಖಂಡಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್‌, ಈ ಶತಮಾನದ ಗಾಂಭೀರ್ಯ ಇಲ್ಲದ ನಾಯಕ ರಾಹುಲ್ ಗಾಂಧಿ. ಅವರ ಮಾತಿಗೂ ಆಲೋಚನೆಗಳಿಗೂ ತಾಳ ಮೇಳ ಇಲ್ಲ. ಗಾಂಭೀರ್ಯ ಇಲ್ಲದ ವ್ಯಕ್ತಿಯ ಕುರಿತಾಗಿ ಹೆಚ್ಚು ಗಮನಹರಿಸಬೇಕಾದ ಅವಶ್ಯಕತೆ ಇಲ್ಲ ಎಂದೆನಿಸುತ್ತದೆ. ಮೂರು ರಾಜ್ಯಗಳ ಚುನಾವಣೆ ಸೋಲಿನ ಬಳಿಕ ಅವರು ಹತಾಶರಾಗಿದ್ದಾರೆ. ಅದಕ್ಕೆ ಅವರು ಉಪರಾಷ್ಟ್ರಪತಿಯವರನ್ನು ಲೇವಡಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

(ಏಜೆನ್ಸಿಗಳ ಮಾಹಿತಿಯೊಂದಿಗೆ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ