logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vishwakarma Yojana: ವಿಶ್ವಕರ್ಮ ಯೋಜನೆಗೆ ಸಚಿವ ಸಂಪುಟ ಸಮ್ಮತಿ, ಈ ಯೋಜನೆಯಲ್ಲಿ ಯಾರಿಗೆ ಸಾಲ ಸಿಗುತ್ತೆ; ಅರ್ಹತೆ ಏನು ಇಲ್ಲಿದೆ ವಿವರ

Vishwakarma Yojana: ವಿಶ್ವಕರ್ಮ ಯೋಜನೆಗೆ ಸಚಿವ ಸಂಪುಟ ಸಮ್ಮತಿ, ಈ ಯೋಜನೆಯಲ್ಲಿ ಯಾರಿಗೆ ಸಾಲ ಸಿಗುತ್ತೆ; ಅರ್ಹತೆ ಏನು ಇಲ್ಲಿದೆ ವಿವರ

Umesh Kumar S HT Kannada

Aug 16, 2023 07:44 PM IST

'ಪಿಎಂ ವಿಶ್ವಕರ್ಮ' ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಇಂದು (ಆ.16) ಅನುಮೋದಿಸಿದೆ

  • PM Vishwakarma Yojana: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಪ್ರಧಾನಮಂತ್ರಿಯವರು, ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ 'ಪಿಎಂ ವಿಶ್ವಕರ್ಮ' ಯೋಜನೆಗೆ ಅನುಮೋದನೆ ನೀಡಿದರು. ಈ ಯೋಜನೆಯಡಿ 1 ಲಕ್ಷದವರೆಗಿನ ಸಾಲವನ್ನು ಉದಾರ ನಿಯಮಗಳ ಅನುಸಾರ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಇದರ ವಿವರ ಇಲ್ಲಿದೆ. 

'ಪಿಎಂ ವಿಶ್ವಕರ್ಮ' ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಇಂದು (ಆ.16) ಅನುಮೋದಿಸಿದೆ
'ಪಿಎಂ ವಿಶ್ವಕರ್ಮ' ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಇಂದು (ಆ.16) ಅನುಮೋದಿಸಿದೆ

ನವದೆಹಲಿ: ಪಿಎಂ ವಿಶ್ವಕರ್ಮ ಯೋಜನೆ (PM Vishwakarma Yojana)ಗೆ 13,000 ಕೋಟಿ ರೂಪಾಯಿ ಅನುದಾನ ಮೀಸಲಿಡುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಇಂದು (ಆ.16) ಅನುಮೋದಿಸಿದೆ. ಇದರಿಂದಾಗಿ ದೇಶದ ನೇಕಾರರು, ಚಿನ್ನದ ಕೆಲಸಗಾರರು, ಲಾಂಡ್ರಿಯವರು ಮತ್ತು ಇತರರು 30 ಲಕ್ಷ ಸಾಂಪ್ರದಾಯಿಕ ವೃತ್ತಿ ನಡೆಸುವವರಿಗೆ ಪ್ರಯೋಜನವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯು ಸಾಂಪ್ರದಾಯಿಕ ಕೌಶಲ ವೃತ್ತಿಯವರನ್ನು ಬೆಂಬಲಿಸುವ ಉದ್ದೇಶದ್ದು. ಈ ಯೋಜನೆಯಲ್ಲಿ ಅವರಿಗೆ ಸರಳ ನಿಯಮಗಳೊಂದಿಗೆ 1 ಲಕ್ಷ ರೂಪಾಯಿ ತನಕ ಸಾಲ ಸೌಲಭ್ಯ ಸಿಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಪಿಎಂ ವಿಶ್ವಕರ್ಮ ಸಾಲ ಸೌಲಭ್ಯದ ವಿವರ

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕುಶಲಕರ್ಮಿಗಳಿಗೆ ಮೊದಲ ಹಂತದಲ್ಲಿ 1 ಲಕ್ಷ ರೂಪಾಯಿ ಮತ್ತು ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿ ಸಬ್ಸಿಡಿ ಸಾಲ ನೀಡಲಾಗುತ್ತದೆ. ಇದಕ್ಕೆ ಬಡ್ಡಿದರ ಶೇಕಡ 5 ಇರಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದರು.

ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿ ಆಗುವುದು ಹೇಗೆ

ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿ ಆಗಿರುವುದನ್ನು ಗುರುತಿಸಲು ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ. ಇದಾದ ಬಳಿಕ ಮೊದಲ ಹಂತದಲ್ಲಿ 1 ಲಕ್ಷ ರೂಪಾಯಿ ತನಕ ಸಾಲ ಸೌಲಭ್ಯ, ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿ ತನಕ ಸಾಲ ಸೌಲಭ್ಯ ಶೇಕಡ 5 ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.

ಇದಲ್ಲದೆ, ಈ ಯೋಜನೆಯ ಫಲಾನುಭವಿ ಆದವರಿಗೆ ಕೌಶಲ ವೃದ್ಧಿಗೆ, ಟೂಲ್ ಕಿಟ್ ಇನ್ಸೆಂಟಿವ್‍, ಡಿಜಿಟಲ್‍ ವಹಿವಾಟಿಗೆ ಇನ್‍ಸೆಂಟಿವ್‍ ಮತ್ತು ಮಾರ್ಕೆಟಿಂಗ್ ಸಪೋರ್ಟ್‍ ಕೂಡ ಸಿಗಲಿದೆ.

ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶ

ಗುರು-ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕೌಶಲಗಳನ್ನು ಅಂದರೆ ಸಾಂಪ್ರದಾಯಿಕ ಉಪಕರಣ, ಕೈಗಳನ್ನು ಬಳಸಿ ಮಾಡುವ ವೃತ್ತಿಗಳನ್ನು ಬಲಪಡಿಸುವ, ಪೋಷಿಸುವ ಉದ್ದೇಶ ಪಿಎಂ ವಿಶ್ವಕರ್ಮ ಯೋಜನೆಯದ್ದು.

ಈ ಯೋಜನೆಯು ಕುಶಲಕರ್ಮಿಗಳ ಕೆಲಸದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ವಿಶ್ವಕರ್ಮರನ್ನು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವುದನ್ನು ಖಚಿತಪಡಿಸುತ್ತದೆ.

ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಬರುವ 18 ವೃತ್ತಿಗಳು

ಈ ಯೋಜನೆಯು ಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳ ಕುಶಲಕರ್ಮಿಗಳಿಗೆ ಬೆಂಬಲವನ್ನು ಒದಗಿಸುತ್ತದೆ. ಹದಿನೆಂಟು ಸಾಂಪ್ರದಾಯಿಕ ಕರ ಕುಶಲ ವ್ಯಾಪಾರಗಳನ್ನು ಮೊದಲ ಹಂತದಲ್ಲಿ ಸೇರಿಸಲಾಗಿದೆ.

  1. ಕಾರ್ಪೆಂಟರ್ (ಬಡಗಿ)
  2. ದೋಣಿ ತಯಾರಕ;
  3. ಆಯುಧೋಪಕರಣ ತಯಾರಕ
  4. ಕಮ್ಮಾರ;
  5. ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಕ
  6. ಬೀಗ ತಯಾರಕ;
  7. ಚಿನ್ನದ ಕೆಲಸ ಮಾಡುವವರು
  8. ಕುಂಬಾರ
  9. ಶಿಲ್ಪಿ (ಮೂರ್ತಿ, ಕಲ್ಲು ಕೆತ್ತನೆ), ಕಲ್ಲು ಒಡೆಯುವವನು
  10. ಚಮ್ಮಾರ / ಪಾದರಕ್ಷೆ ಕುಶಲಕರ್ಮಿ
  11. ಮೇಸ್ತ್ರಿ (ಕಟ್ಟಡ ನಿರ್ಮಾಣ)
  12. ಬುಟ್ಟಿ/ಚಾಪೆ/ಪೊರಕೆ ತಯಾರಕ/ಕಾಯಿರ್ ನೇಕಾರ
  13. ಸಾಂಪ್ರದಾಯಿಕ ಗೊಂಬೆ ತಯಾರಕರು
  14. ಕ್ಷೌರಿಕ
  15. ಹೂಮಾಲೆ/ಮಾಲೆ ತಯಾಕರು
  16. ದೋಬಿ
  17. ದರ್ಜಿ/ಟೈಲರ್
  18. ಮೀನಿನ ಬಲೆ ತಯಾರಕರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ