logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Msp For Copra: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ; ಮಿಲ್ಲಿಂಗ್ ಕೊಬ್ಬರಿಗೆ 300 ರೂ, ಉಂಡೆ ಕೊಬ್ಬರಿಗೆ 250 ರೂ

MSP for Copra: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ; ಮಿಲ್ಲಿಂಗ್ ಕೊಬ್ಬರಿಗೆ 300 ರೂ, ಉಂಡೆ ಕೊಬ್ಬರಿಗೆ 250 ರೂ

Umesh Kumar S HT Kannada

Dec 27, 2023 06:58 PM IST

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (MSP for Copra) ಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಮೊದಲನೆಯ ಚಿತ್ರದಲ್ಲಿರುವುದು ಮಿಲ್ಲಿಂಗ್ ಕೊಬ್ಬರಿ. ಎರಡನೇಯದು ಉಂಡೆ ಕೊಬ್ಬರಿ. (ಸಾಂಕೇತಿಕ ಚಿತ್ರ)

  • ತೆಂಗು ಬೆಳೆಗಾರರಿಗೊಂದು ಶುಭ ಸುದ್ದಿ. ಮುಂದಿನ ಸೀಸನ್‌ 2024-25ರ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಮಿಲ್ಲಿಂಗ್ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕ್ವಿಂಟಾಲಿಗೆ 300 ರೂಪಾಯಿ, ಉಂಡೆ ಕೊಬ್ಬರಿ ಎಂಎಸ್‌ಪಿಯನ್ನು ಕ್ವಿಂಟಾಲಿಗೆ 250 ರೂಪಾಯಿ ಹೆಚ್ಚಿಸಲಾಗಿದೆ.

 ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (MSP for Copra) ಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಮೊದಲನೆಯ ಚಿತ್ರದಲ್ಲಿರುವುದು ಮಿಲ್ಲಿಂಗ್ ಕೊಬ್ಬರಿ. ಎರಡನೇಯದು ಉಂಡೆ ಕೊಬ್ಬರಿ. (ಸಾಂಕೇತಿಕ ಚಿತ್ರ)
ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (MSP for Copra) ಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಮೊದಲನೆಯ ಚಿತ್ರದಲ್ಲಿರುವುದು ಮಿಲ್ಲಿಂಗ್ ಕೊಬ್ಬರಿ. ಎರಡನೇಯದು ಉಂಡೆ ಕೊಬ್ಬರಿ. (ಸಾಂಕೇತಿಕ ಚಿತ್ರ)

ನವದೆಹಲಿ: ಮುಂದಿನ ಸೀಸನ್‌ಗೆ ಅನ್ವಯವಾಗುವಂತೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (MSP for Copra) ಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಇಂದು (ಡಿ.27) ಅನುಮೋದಿಸಿದೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಫುಟ ಸಭೆಯಲ್ಲಿ 2024 ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಅನುಮೋದಿಸಲಾಗಿದೆ. ಕೇಂದ್ರ ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ, ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಎಲ್ಲ ಕಡ್ಡಾಯ ಬೆಳೆಗಳ ಎಂಎಸ್‌ಪಿಗಳನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚು ನಿಗದಿಪಡಿಸಲಾಗಿದೆ.

2024ರ ಋತುವಿನಲ್ಲಿ ಪ್ರತಿ ಕ್ವಿಂಟಾಲ್ ಮಿಲ್ಲಿಂಗ್ ಕೊಬ್ಬರಿಗೆ (Milling Copra) ನ್ಯಾಯ ಬೆಲೆಯಾಗಿ 11,160 ರೂಪಾಯಿ ನಿಗದಿ ಮಾಡಲಾಗಿದೆ. ಇದೇ ರೀತಿ, ಉಂಡೆ ಕೊಬ್ಬರಿಗೆ (Ball Copra) 12,000 ರೂಪಾಯಿ ನಿಗದಿ ಮಾಡಲಾಗಿದೆ. ಇದು ಮಿಲ್ಲಿಂಗ್ ಕೊಬ್ಬರಿಗೆ ಶೇಕಡಾ 51.84 ಮತ್ತು ಕೊಬ್ಬರಿ ಗಿಟುಕಿಗೆ ಶೇಕಡಾ 63.26 ಮಾರ್ಜಿನ್ ಅನ್ನು ಖಚಿತಪಡಿಸಿದೆ. ಇದು ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಮೀರಿದೆ.

ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆಯನ್ನು ತೆಗೆಯಲು ಬಳಸಲಾಗುತ್ತದೆ. ಆದರೆ ಉಂಡೆ ಕೊಬ್ಬರಿಯನ್ನು ಆಹಾರಕ್ಕೆ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಹೆಚ್ಚು ಮಿಲ್ಲಿಂಗ್‌ ಕೊಬ್ಬರಿ ಉತ್ಪಾದಿಸಲಾಗುತ್ತದೆ. ಕರ್ನಾಟಕದಲ್ಲಿ ಉಂಡೆ ಕೊಬ್ಬರಿ ಹೆಚ್ಚು.

2024 ರ ಋತುವಿನ ಎಂಎಸ್‌ಪಿಯು ಹಿಂದಿನ ಋತುವಿನಲ್ಲಿ ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ಇದ್ದ ಬೆಲೆಗಿಂತ 300 ರೂಪಾಯಿ ಮತ್ತು ಉಂಡೆ ಕೊಬ್ಬರಿಗೆ 250 ರೂಪಾಯಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರವು ಕಳೆದ 10 ವರ್ಷಗಳ ಅವಧಿಯಲ್ಲಿ ಮಿಲ್ಲಿಂಗ್ ಕೊಬ್ಬರಿಯ ಎಂಎಸ್‌ಪಿಯನ್ನು ಶೇಕಡ 113 ಮತ್ತು ಉಂಡೆ ಕೊಬ್ಬರಿಯ ಎಂಎಸ್‌ಪಿಯನ್ನು ಶೇಕಡ 118ರಷ್ಟು ಹೆಚ್ಚಿಸಿದೆ. ಅಂದರೆ, 2014-15ರಲ್ಲಿ ಮಿಲ್ಲಿಂಗ್ ಕೊಬ್ಬರಿಯ ಎಂಎಸ್‌ಪಿ ಕ್ವಿಂಟಾಲ್‌ಗೆ 5,250 ರೂಪಾಯಿ ಮತ್ತು ಉಂಡೆ ಕೊಬ್ಬರಿಯ ಎಂಎಸ್‌ಪಿ ಕ್ವಿಂಟಾಲ್‌ಗೆ 5,500 ರೂಪಾಯಿ ಇತ್ತು. ಈಗ 2024-25ರ ಅವಧಿಗೆ ಇದು 11,160 ರೂಪಾಯಿ ಮತ್ತು 12,000 ರೂಪಾಯಿ ಆಗಿದೆ.

ತೆಂಗು ಬೆಳೆಗಾರರಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ಲಾಭದಾಯಕ ಆದಾಯವನ್ನು ಖಚಿತಪಡಿಸುತ್ತದೆ. ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ತೆಂಗುಬೆಳೆಗಾರರನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಪ್ರಸಕ್ತ 2023 ರ ಹಂಗಾಮಿನಲ್ಲಿ, ಸರ್ಕಾರವು 1.33 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯನ್ನು 1,493 ಕೋಟಿ ರೂಪಾಯಿ ವೆಚ್ಚದಲ್ಲಿ ದಾಖಲೆಯ ಪ್ರಮಾಣದಲ್ಲಿ ಸಂಗ್ರಹಿಸಿದೆ. ಇದರಿಂದ 90,000 ರೈತರಿಗೆ ಪ್ರಯೋಜನವಾಗಿದೆ. ಪ್ರಸ್ತುತ 2023 ರಲ್ಲಿ ಸಂಗ್ರಹಣೆಯು ಹಿಂದಿನ ಋತುವಿಗಿಂತ (2022) ಶೇಕಡಾ 227 ಏರಿಕೆ ದಾಖಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ