logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upsc Reserve List: ಯುಪಿಎಸ್‌ಸಿ ಮೇನ್ 2022ರ ರಿಸರ್ವ್‌ ಲಿಸ್ಟ್ ಪ್ರಕಟ, 89 ಅಭ್ಯರ್ಥಿಗಳ ಆಯ್ಕೆ ವಿವರ ಹೀಗಿದೆ

UPSC Reserve list: ಯುಪಿಎಸ್‌ಸಿ ಮೇನ್ 2022ರ ರಿಸರ್ವ್‌ ಲಿಸ್ಟ್ ಪ್ರಕಟ, 89 ಅಭ್ಯರ್ಥಿಗಳ ಆಯ್ಕೆ ವಿವರ ಹೀಗಿದೆ

HT Kannada Desk HT Kannada

Nov 01, 2023 06:22 PM IST

ಯುಪಿಎಸ್‌ಸಿ (ಸಾಂಕೇತಿಕ ಚಿತ್ರ)

  • ಯುಪಿಎಸ್‌ಸಿ ನಾಗರಿಕ ಸೇವಾ ಮುಖ್ಯ ಪರೀಕ್ಷೆ 2022ರ ಫಲಿತಾಂಶ 2023ರ ಮೇ 23ರಂದು ಪ್ರಕಟವಾಗಿತ್ತು. ಅಂದು 933 ಅಭ್ಯರ್ಥಿಗಳ ಫಲಿತಾಂಶ ನೀಡಿದ್ದ ಆಯೋಗ, ಈಗ 89 ಅಭ್ಯರ್ಥಿಗಳ ಫಲಿತಾಂಶವನ್ನೂ ಪ್ರಕಟಿಸಿದೆ. ಅದರ ವಿವರ ಇಲ್ಲಿದೆ.

ಯುಪಿಎಸ್‌ಸಿ (ಸಾಂಕೇತಿಕ ಚಿತ್ರ)
ಯುಪಿಎಸ್‌ಸಿ (ಸಾಂಕೇತಿಕ ಚಿತ್ರ)

ನವದೆಹಲಿ: ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ ರಿಸಲ್ಟ್ 2022ರ ರಿಸರ್ವ್‌ ಲಿಸ್ಟ್ ಅನ್ನು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್‌ (UPSC) ಇಂದು (ನ.1) ಬಿಡುಗಡೆ ಮಾಡಿದೆ. 2022ರ ಯುಪಿಎಸ್‌ಸಿ ನಾಗರಿಕ ಸೇವಾ ಮುಖ್ಯ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದನ್ನು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ upsc.gov.in ಓಪನ್ ಮಾಡಿ ಪರಿಶೀಲಿಸಬಹುದು.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ 2022ರ ಫಲಿತಾಂಶ 2023ರ ಮೇ 23ರಂದು ಪ್ರಕಟವಾಗಿತ್ತು. ಇದರಲ್ಲಿ 933 ಅಭ್ಯರ್ಥಿಗಳ ಫಲಿತಾಂಶ ಇತ್ತು. ಮೆರಿಟ್ ಆಧಾರದಲ್ಲಿ ಇವರನ್ನು ಐಎಎಸ್, ಐಎಫ್‌ಎಸ್‌, ಐಪಿಎಸ್‌ಗೆ ಮತ್ತು ಇತರೆ ಕೇಂದ್ರೀಯ ಸೇವಾ ವಿಭಾಗಕ್ಕೆ ಆಯ್ಕೆ ಮಾಡಲಾಗಿದೆ. 1022 ಗ್ರೂಪ್ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಭರ್ತಿ ಮಾಡಲು ಈ ಪರೀಕ್ಷೆ ನಡೆಸಲಾಗಿತ್ತು.

ಅಧಿಕೃತ ನೋಟಿಸ್ ಪ್ರಕಾರ, ಕೇಂದ್ರೀಯ ಲೋಕಸೇವಾ ಆಯೋಗವು ಈಗ 89 ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದೆ. ಇದರಲ್ಲಿ 65 ಸಾಮಾನ್ಯ, 7 ಇಡಬ್ಲ್ಯುಎಸ್‌, 15 ಒಬಿಸಿ, 1 ಎಸ್‌ಸಿ ಮತ್ತು 1 ಎಸ್‌ಟಿ ಅಭ್ಯರ್ಥಿಗಳಿದ್ದಾರೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾದ ಬಳಿಕವೂ ಖಾಲಿ ಉಳಿದ ಹುದ್ದೆಗಳ ಭರ್ತಿಗಾಗಿ ಸಿವಿಲ್‌ ಸರ್ವೀಸಸ್ ಎಕ್ಸಾಮಿನೇಷನ್ 2022ರ ಫಲಿತಾಂಶದ ಆಧಾರದಲ್ಲಿ ಈ ನೇಮಕವನ್ನು ಆಯೋಗ ಪ್ರಕಟಿಸಿದೆ.

ಯುಪಿಎಸ್‌ಸಿ ನಾಗರಿಕ ಸೇವೆಗಳ ಮುಖ್ಯ ಫಲಿತಾಂಶ 2022 ಮೀಸಲು ಪಟ್ಟಿ ಪರಿಶೀಲಿಸುವುದು ಹೇಗೆ

  • ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ
  • ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಕಾಣುವ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ ರಿಸಲ್ಟ್ 2022 ರಿಸರ್ವ್ ಲಿಸ್ಟ್ ಲಿಂಕ್ ಕ್ಲಿಕ್ ಮಾಡಿ
  • ಒಂದು ಹೊಸ ಪಿಡಿಎಫ್‌ ಫೈಲ್ ಓಪನ್ ಆಗುತ್ತದೆ. ಅದರಲ್ಲಿ ಅಭ್ಯರ್ಥಿಗಳ ಹೆಸರು ಮತ್ತು ಇತರೆ ವಿವರ ಇದೆ.
  • ಆ ಪೇಜ್ ಅನ್ನು ಡೌನ್‌ಲೋಡ್ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಇಟ್ಟುಕೊಳ್ಳಬಹುದು.

ರೋಲ್ ನಂಬರ್ 3534972 ಮತ್ತು 0828156 ಹೊಂದಿರುವ ಇಬ್ಬರು ಅಭ್ಯರ್ಥಿಗಳ ಉಮೇದುವಾರಿಕೆ ತಾತ್ಕಾಲಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ