logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bittu Bajrangi: ನುಹ್​ ಕೋಮು ಗಲಭೆ; ಗೋರಕ್ಷಕ ಬಿಟ್ಟು ಬಜರಂಗಿ ಅರೆಸ್ಟ್, ಯಾರೀತ? ಈತನ ಬಗ್ಗೆ ಇಲ್ಲಿದೆ ಡಿಟೇಲ್ಸ್

Bittu Bajrangi: ನುಹ್​ ಕೋಮು ಗಲಭೆ; ಗೋರಕ್ಷಕ ಬಿಟ್ಟು ಬಜರಂಗಿ ಅರೆಸ್ಟ್, ಯಾರೀತ? ಈತನ ಬಗ್ಗೆ ಇಲ್ಲಿದೆ ಡಿಟೇಲ್ಸ್

Meghana B HT Kannada

Aug 17, 2023 10:42 AM IST

ಬಿಟ್ಟು ಬಜರಂಗಿ ಅರೆಸ್ಟ್

    • Nuh clashes: ಮುಸ್ಲಿಂ ಪ್ರಾಬಲ್ಯದ ನುಹ್‌ನಲ್ಲಿ ಜುಲೈ 31 ರಂದು ನಡೆದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯಲ್ಲಿ ಬಿಟ್ಟು ಬಜರಂಗಿ ಮತ್ತು ಆತನ ಸಹಚರರು ಶಸ್ತ್ರಾಸ್ತ್ರಗಳನ್ನು ಬಳಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಿಟ್ಟು ಬಜರಂಗಿ ಅರೆಸ್ಟ್
ಬಿಟ್ಟು ಬಜರಂಗಿ ಅರೆಸ್ಟ್

ಇತ್ತೀಚಿಗಿನ ಹರಿಯಾಣದ ನುಹ್ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬುಧವಾರ (ಆಗಸ್ಟ್ 16) ಪೊಲೀಸರು ಬಂಧಿಸಿದ್ದಾರೆ. ಈತ ಗೋರಕ್ಷಾ ಬಜರಂಗ ದಳ ಎಂಬ ಸಂಘಟನೆಯ ಅಧ್ಯಕ್ಷನಾಗಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವು ಬಿಟ್ಟು ಬಜರಂಗಿಯಿಂದ ಅಂತರಕಾಯ್ದುಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

ರಾಜ್ ಕುಮಾರ್ ಎಂದೂ ಕರೆಯಲ್ಪಡುವ 45 ವರ್ಷ ವಯಸ್ಸಿನ ಬಿಟ್ಟು ಬಜರಂಗಿ ಫರಿದಾಬಾದ್‌ನ ಗಾಜಿಪುರ ಮಾರುಕಟ್ಟೆ ಮತ್ತು ಡಬುವಾ ಮಾಕೆಟ್‌ನಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿದ್ದಾರೆ. ಈತ ಕಳೆದ ಮೂರು ವರ್ಷಗಳಿಂದ ತಮ್ಮ ಗೋರಕ್ಷಾ ಬಜರಂಗದಳ ಎಂಬ ಸಂಘಟನೆಯನ್ನು ನಡೆಸುತ್ತಿದ್ದಾನೆ. ಈತ ಈ ಮೊದಲು ಬಜರಂಗ ದಳದ ಸದಸ್ಯನಾಗಿದ್ದನು ಎಂದು ಕೆಲ ಮೂಲಗಳು ತಿಳಿಸಿವೆ.

ಜುಲೈ ಅಂತ್ಯದಲ್ಲಿ ಹರಿಯಾಣದ ನುಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಹಾಗೂ ಪೊಲೀಸರು ಗಾಯಗೊಂಡಿದ್ದರು. ಮೂರು ದಿನಗಳ ಕಾಲ ಹಿಂಸಾಚಾರ ಮುಂದುವರೆದಿತ್ತು. ನೂರಾರು ವಾಹನಗಳನ್ನು ಬೆಂಕಿ ಹಚ್ಚಿ ಸುಡಲಾಗಿತ್ತು.

ಮುಸ್ಲಿಂ ಪ್ರಾಬಲ್ಯದ ನುಹ್‌ನಲ್ಲಿ ಜುಲೈ 31 ರಂದು ನಡೆದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯಲ್ಲಿ ಬಿಟ್ಟು ಬಜರಂಗಿ ಮತ್ತು ಆತನ ಸಹಚರರು ಶಸ್ತ್ರಾಸ್ತ್ರಗಳನ್ನು ಬಳಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಹಿಂಸಾಚಾರದ ಎರಡು ದಿನಗಳ ನಂತರ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟ್ಟು ಬಜರಂಗಿಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದರು, ಆದರೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈತ ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣ ಮಾಡುತ್ತಾನೆ ಮತ್ತು ಶಸ್ತ್ರಾಸ್ತ್ರಗಳನ್ನು ಝಳಪಿಸುತ್ತಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಆತನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಮೂರು ಪ್ರಕರಣಗಳು ದಾಖಲಾಗಿವೆ.

“ಜುಲೈ 31 ರಂದು ನಾನು ನನ್ನ ತಂಡದೊಂದಿಗೆ ನಲ್ಹಾರ್ ದೇವಸ್ಥಾನದಿಂದ 300 ಮೀಟರ್ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸುಮಾರು 20 ಜನರ ಗುಂಪು ಕತ್ತಿ ಮತ್ತು ತ್ರಿಶೂಲಗಳನ್ನು ಹಿಡಿದು ನಲ್ಹಾರ್ ದೇವಸ್ಥಾನದೆಡೆಗೆ ಮೆರವಣಿಗೆ ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನನ್ನ ತಂಡ ಅವರ ಶಸ್ತ್ರಾಸ್ತ್ರಗಳನ್ನು ಕಿತ್ತು ವಶಪಡಿಸಿಕೊಂಡಿದೆ. ನಂತರ ಆ ಗುಂಪು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತು ಮತ್ತು ನಮ್ಮ ತಂಡದ ಮೇಲೆ ಹಲ್ಲೆ ನಡೆಸಿತು ”ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಉಷಾ ಕುಂಡು ಅವರು ದೂರು ನೀಡಿದ್ದರು.

ಆಯುಧಗಳನ್ನು ಇರಿಸಲಾಗಿದ್ದ ಪೊಲೀಸ್ ವಾಹನಗಳ ಮುಂದೆ ಗುಂಪು ಧರಣಿ ಕುಳಿತಿತ್ತು. ಇದಾದ ಕೂಡಲೇ ವಾಹನದ ಹಿಂಬದಿ ಗೇಟ್ ತೆರೆದು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದರು. ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಕೊಲೆ ಬೆದರಿಕೆ ಹಾಕಿರುವವರನ್ನು ಬಿಟ್ಟು ಬಜರಂಗಿ ಮತ್ತು ಇತರರನ್ನು ಗುರುತಿಸಲಾಗಿದೆ ಎಂದು ಎಎಸ್ಪಿ ಕುಂಡು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕುಂಡು ಅವರ ದೂರಿನ ಆಧಾರದ ಮೇಲೆ ಹೊಸ ಎಫ್‌ಐಆರ್ ದಾಖಲಿಸಿ ಬಜರಂಗಿಯನ್ನು ಫರಿದಾಬಾದ್‌ನಲ್ಲಿ ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ 148 (ಗಲಭೆಗಳು), 149 (ಕಾನೂನುಬಾಹಿರ ಸಭೆ), 332 (ಗಾಯ ಉಂಟು ಮಾಡುವುದು), 353, 186 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಿಸದಂತೆ ತಡೆಯುವುದು), 395, 397 (ಸಶಸ್ತ್ರ ದರೋಡೆ), 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಹಲವು ಸೆಕ್ಷನ್​ಗಳ ಅಡಿಯಲ್ಲಿ ಕೇಸ್​ ದಾಖಲಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ