logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jio 5g New Phone: ಜಿಯೋದಿಂದ ಮತ್ತೊಂದು 5g ಫೋನ್‌? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Jio 5G New Phone: ಜಿಯೋದಿಂದ ಮತ್ತೊಂದು 5G ಫೋನ್‌? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

HT Kannada Desk HT Kannada

Dec 09, 2022 10:17 AM IST

ಜಿಯೋ ಫೋನ್‌ 5G

  • Jio LS1654QB5: ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಜಿಯೋದಿಂದ ಮತ್ತೊಂದು 5G ಸ್ಮಾರ್ಟ್‌ ಫೋನ್‌ ಪ್ರವೇಶಿಸುತ್ತಿದೆಯೇ? ಹೌದು ಎನ್ನುವ ಸುಳಿವು ನೀಡಿದೆ ಗೀಕ್‌ಬೆಂಚ್‌. ಇದುವರೆಗೆ ಈ ಫೋನ್‌ ಬಿಡುಗಡೆ ದಿನಾಂಕ ಮತ್ತು ಇತರೆ ವಿಚಾರಗಳನ್ನು ಜಿಯೋ ಅಧಿಕೃತವಾಗಿ ಏನೂ ಶೇರ್‌ ಮಾಡಿಲ್ಲ. ಗೀಕ್‌ಬೆಂಚ್‌ನಲ್ಲಿ ಕೆಲವು ವಿವರಗಳು ಬಹಿರಂಗವಾಗಿದ್ದು, ಅದು ಹೀಗಿದೆ.

ಜಿಯೋ ಫೋನ್‌ 5G
ಜಿಯೋ ಫೋನ್‌ 5G

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಜಿಯೋದಿಂದ ಮತ್ತೊಂದು 5G ಸ್ಮಾರ್ಟ್‌ ಫೋನ್‌ ಪ್ರವೇಶಿಸುತ್ತಿದೆಯೇ? ಹೌದು ಎನ್ನುವ ಸುಳಿವು ನೀಡಿದೆ ಗೀಕ್‌ಬೆಂಚ್‌. ಇದುವರೆಗೆ ಈ ಫೋನ್‌ ಬಿಡುಗಡೆ ದಿನಾಂಕ ಮತ್ತು ಇತರೆ ವಿಚಾರಗಳನ್ನು ಜಿಯೋ ಅಧಿಕೃತವಾಗಿ ಏನೂ ಶೇರ್‌ ಮಾಡಿಲ್ಲ. ಗೀಕ್‌ಬೆಂಚ್‌ನಲ್ಲಿ ಕೆಲವು ವಿವರಗಳು ಬಹಿರಂಗವಾಗಿರುವುದನ್ನು ಹಿಂದುಸ್ತಾನ್‌ ಟೈಮ್ಸ್‌ನ ಸೋದರ ಸಂಸ್ಥೆ ದ ಲೈವ್‌ ಮಿಂಟ್‌ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಭಾರತದಲ್ಲಿ ಜಿಯೋ 5G ಹ್ಯಾಂಡ್‌ಸೆಟ್‌ನ ಚೊಚ್ಚಲ ಪ್ರವೇಶಕ್ಕೆ ಮುಂಚಿತವಾಗಿ ಅದರ ಕೆಲವು ಫೀಚರ್ಸ್‌ ಕುರಿತು ಸುಳಿವು ನೀಡಲಾಗಿದೆ. ಸದ್ಯಕ್ಕೆ, ಈ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕದ ಕುರಿತು ಯಾವುದೇ ಅಧಿಕೃತ ಸಂವಹನವಿಲ್ಲ. ಆದರೆ ಅದರ ರೆಂಡರ್‌ಗಳು ವೆಬ್‌ನಲ್ಲಿ ಕಾಣಿಸಿಕೊಂಡಿವೆ. ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್ ಜಿಯೋ ಫೋನ್ 5G ಗೆ ಶಕ್ತಿಯನ್ನು ನೀಡಬಹುದು ಮತ್ತು ಬೆಂಚ್‌ಮಾರ್ಕಿಂಗ್ ಸೈಟ್‌ನಲ್ಲಿನ ಪಟ್ಟಿಯ ಪ್ರಕಾರ ಇದು Android 12 ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇತ್ತೀಚೆಗೆ, "Jio LS1654QB5" ಶೀರ್ಷಿಕೆಯೊಂದಿಗೆ ಹ್ಯಾಂಡ್‌ಸೆಟ್‌ ವಿವರ MySmartPrice Geekbenchನ ಪಟ್ಟಿಯಲ್ಲಿ ಕಂಡುಬಂದಿದೆ. RAM, ಪ್ರಿನ್ಸೆಸ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ಫೀಚರ್ಸ್‌ ಕುರಿತಾದ ವಿವರವೂ ಇಲ್ಲಿ ಕಂಡುಬಂದಿದೆ.

ವರದಿಯ ಪ್ರಕಾರ, ಲೀಕ್‌ ಆಗಿರುವ ಜಿಯೋ ಫೋನ್ 5G ವಿವರವನ್ನು ʻಹೋಲಿʼ ಎಂಬ ಸಂಕೇತನಾಮದೊಂದಿಗೆ ಪಟ್ಟಿ ಮಾಡಲಾಗಿದೆ. ಇದು ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ ಮತ್ತು Adreno 619 GPU ಗಳ ಜತೆಯಾಗಿರಬಹುದು ಎಂದು ಸುಳಿವು ಲಭ್ಯವಾಗಿದೆ.

ಇದಲ್ಲದೆ, ಜಿಯೋ ಫೋನ್ ಸಿಂಗಲ್-ಕೋರ್ ಪರೀಕ್ಷೆಯಲ್ಲಿ 549 ಅಂಕಗಳನ್ನು ಮತ್ತು ಮಲ್ಟಿ-ಕೋರ್ ಬೆಂಚ್‌ಮಾರ್ಕ್ ಪರೀಕ್ಷೆಯಲ್ಲಿ 1661 ಅಂಕಗಳನ್ನು ಗಳಿಸಿದೆ ಎಂದು ಪಟ್ಟಿಯು ಸೂಚಿಸಿದೆ. ಇದು Android 12 ನಲ್ಲಿ ರನ್ ಆಗುವ ಸಾಧ್ಯತೆಯಿದೆ ಮತ್ತು ವರದಿಗಳ ಪ್ರಕಾರ Jio PragatiOS ನೊಂದಿಗೆ ಬರಬಹುದು.

ಇದಲ್ಲದೆ, ಮುಂಬರುವ ಉಪಕರಣವು 4GB RAM ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಅದೇ ರೀತಿ 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿರಬಹುದು. ಈ ಸ್ಮಾರ್ಟ್‌ಫೋನ್ 18W ಚಾರ್ಜಿಂಗ್‌ನಿಂದ ಬೆಂಬಲಿತವಾದ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಏತನ್ಮಧ್ಯೆ, JioGamesCloud ಸ್ಮಾರ್ಟ್‌ಫೋನ್‌ಗಳು, ವೆಬ್ ಬ್ರೌಸರ್‌ಗಳು ಮತ್ತು Jio ಸೆಟ್ ಟಾಪ್ ಬಾಕ್ಸ್‌ನಲ್ಲಿ JioGames ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಇದನ್ನು JioGames ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮೂಲಕ ಪ್ರಕಟಿಸಿದೆ. ಕ್ಲೌಡ್ ಗೇಮಿಂಗ್ ಸೇವೆಯು ಪ್ರಸ್ತುತ ಬೀಟಾದಲ್ಲಿ ಎಲ್ಲರಿಗೂ ಲಭ್ಯವಿದೆ.

“ಹವಾಮಾನ ವರದಿ - ಫೈರಿ ವೀಕೆಂಡ್‌ ಮುಂದಿದೆ. ಕ್ಲೌಡ್ ಗೇಮಿಂಗ್‌ಗೆ ಧನ್ಯವಾದಗಳು #JioGamesCloud ಸ್ಮಾರ್ಟ್‌ಫೋನ್‌ಗಳು, ವೆಬ್ ಬ್ರೌಸರ್‌ಗಳು ಮತ್ತು Jio ಸೆಟ್ ಟಾಪ್ ಬಾಕ್ಸ್‌ನಲ್ಲಿ JioGames ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ನೀವು ಇನ್ನೂ ಪ್ರಯತ್ನಿಸಿಲ್ವಾ? ” ಎಂದು ಟ್ವೀಟ್ ಹೇಳಿದೆ.

ಈ ಸೇವೆಯನ್ನು ರಿಲಯನ್ಸ್‌ ಜಿಯೋದ ವಾರ್ಷಿಕ ಮಹಾಸಭೆ 2019ರಲ್ಲಿ ನಡೆದಾಗ ಘೋಷಿಸಲಾಗಿತ್ತು. ಇದು ಜಿಯೋ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ