logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Elon Musk: ಜುಕರ್‌ಬರ್ಗ್ ವಿರುದ್ಧ ಎಲಾನ್ ಮಸ್ಕ್ ಕೇಜ್ ಫೈಟ್; ಲೆಕ್ಸ್ ಫ್ರಿಡ್‌ಮನ್‌ನಿಂದ ಸಮರ ಕಲೆ ತರಬೇತಿ ಪಡೆಯುತ್ತಿರುವ ನಂ 1 ಉದ್ಯಮಿ

Elon Musk: ಜುಕರ್‌ಬರ್ಗ್ ವಿರುದ್ಧ ಎಲಾನ್ ಮಸ್ಕ್ ಕೇಜ್ ಫೈಟ್; ಲೆಕ್ಸ್ ಫ್ರಿಡ್‌ಮನ್‌ನಿಂದ ಸಮರ ಕಲೆ ತರಬೇತಿ ಪಡೆಯುತ್ತಿರುವ ನಂ 1 ಉದ್ಯಮಿ

HT Kannada Desk HT Kannada

Jun 29, 2023 11:11 AM IST

ಪಾಡ್‌ಕಾಸ್ಟರ್, ಕೃತಕಬುದ್ಧಿಮತ್ತೆ ಸಂಶೋಧಕ ಲೆಕ್ಸ್ ಫ್ರಿಡ್‌ಮನ್‌ ಅವರೊಂದಿಗೆ ಸಮರ ಕಲೆ ತರಬೇತಿ ಪಡೆಯುತ್ತಿರುವ ಜಗತ್ತಿನ ನಂಬರ್ ಶ್ರೀಮಂತ ಎಲಾನ್ ಮಸ್ಕ್

  • ಟೆಸ್ಲಾ ಸಂಸ್ಥಾಪಕ, ಟ್ವಿಟರ್ ಬಾಸ್ ಎಲಾನ್ ಮಸ್ಕ್ (Elon Musk) ಮತ್ತು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನಡುವೆ ಕೇಜ್ ಫೈಟ್ ನಡೆಯಲಿದ್ದು, ಇಬ್ಬರು ಮಹಾ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಪಾಡ್‌ಕಾಸ್ಟರ್, ಕೃತಕಬುದ್ಧಿಮತ್ತೆ ಸಂಶೋಧಕ ಲೆಕ್ಸ್ ಫ್ರಿಡ್‌ಮನ್‌ ಅವರೊಂದಿಗೆ ಸಮರ ಕಲೆ ತರಬೇತಿ ಪಡೆಯುತ್ತಿರುವ ಜಗತ್ತಿನ ನಂಬರ್ ಶ್ರೀಮಂತ ಎಲಾನ್ ಮಸ್ಕ್
ಪಾಡ್‌ಕಾಸ್ಟರ್, ಕೃತಕಬುದ್ಧಿಮತ್ತೆ ಸಂಶೋಧಕ ಲೆಕ್ಸ್ ಫ್ರಿಡ್‌ಮನ್‌ ಅವರೊಂದಿಗೆ ಸಮರ ಕಲೆ ತರಬೇತಿ ಪಡೆಯುತ್ತಿರುವ ಜಗತ್ತಿನ ನಂಬರ್ ಶ್ರೀಮಂತ ಎಲಾನ್ ಮಸ್ಕ್

ನ್ಯೂಯಾರ್ಕ್: ಜಗತ್ತಿನ ಇಬ್ಬರು ಶ್ರೀಮಂತ ಉದ್ಯಮಿಗಳ ನಡುವೆ ಕೇಜ್ ಫೈಟ್‌ಗೆ (Cage Match) ವೇದಿಕೆ ಸಿದ್ಧವಾಗುತ್ತಿದ್ದು, ಇಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲ ಹೆಚ್ಚಿಸಿದೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಟೆಸ್ಲಾ ಸಂಸ್ಥಾಪಕ, ಟ್ವಿಟರ್ ಬಾಸ್ ಎಲಾನ್ ಮಸ್ಕ್ (Elon Musk) ಮತ್ತು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನಡುವೆ ಈ ಕೇಜ್ ಫೈಟ್ ನಡೆಯಲಿದೆ. ಇದಕ್ಕಾಗಿ ಇಬ್ಬರು ಮಹಾ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಅದರಲ್ಲೂ ಎಲಾನ್ ಮಸ್ಕ್ ಕಳೆದೊಂದು ವಾರದಿಂದ ತಮ್ಮ ದೇಹವನ್ನು ದಂಡಿಸುತ್ತಿದ್ದು, ಪರಿಣಿತರಿಂದ ತರಬೇತಿ ಪಡೆಯುತ್ತಿದ್ದಾರೆ. ಅವರ ಕಸರತ್ತಿನ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕ್ರೇಜ್ ಹೆಚ್ಚಿಸುತ್ತಿದೆ.

ಜನಪ್ರಿಯ ಪಾಡ್‌ಕಾಸ್ಟರ್, ಕೃತಕ ಬುದ್ಧಿಮತ್ತೆ(AI) ಸಂಶೋಧಕ ಲೆಕ್ಸ್ ಫ್ರಿಡ್‌ಮನ್ (Lex Friedman) ಅವರಿಂದ ಎಲಾನ್ ಮಸ್ಕ್ ತರಬೇತಿ ಪಡೆಯುತ್ತಿದ್ದಾರೆ. ಕೇಜ್‌ ಫೈಟ್‌ಗಾಗಿ ಸಮರ ಕಲೆಗಳನ್ನು ಕಲೆಯುತ್ತಿದ್ದಾರೆ. ಇದರಲ್ಲಿ ಮಸ್ಕ್ ಯಶಸ್ಸು ಕಂಡಿದ್ದಾರೆ ಅಂತಲೂ ವರದಿಯಾಗಿದೆ.

ಈ ಹಿಂದೆ ಫ್ರಿಡ್‌ಮನ್ ಅವರು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರಿಗೂ ತರಬೇತಿ ನೀಡಿದ್ದಾರೆ. ಅದರ ವಿಡಿಯೋಗಳನ್ನು ಅವರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರು ಮಹಾನ್ ನಾಯಕರಿಗೆ ಸಮರ ಕಲೆಗಳ ತರಬೇತಿ ನೀಡಿರುವ ಲೆಕ್ಸ್‌ ಫ್ರಿಡ್‌ಮನ್, ಮಸ್ಕ್ ಮತ್ತು ಜುಕರ್‌ಬರ್ಗ್ ಅವರಲ್ಲಿ ಯಾವ ಕೌಶಲ್ಯಗಳನ್ನು ಹೆಚ್ಚಿಸಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ.

ಎಲಾನ್ ಮಸ್ಕ್‌ಗೆ ತರಬೇತಿ ನೀಡಿರುವ ಇತ್ತೀಚಿನ ಫೋಟೋ ಹಂಚಿಕೊಂಡಿರುವ ಲೆಕ್ಸ್‌ ಫ್ರಿಡ್‌ಮನ್, ಇಬ್ಬರು ಬಿಲಿಯನೇರ್‌ಗಳು ಕೇಜ್ ಪಂದ್ಯದ ಬದಲಿಗೆ ಕೇವಲ ಸಮರ ಕಲೆಗಳನ್ನು ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಫೋಟೋ ಜೊತೆಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿಕೊಂಡರು ವಿಜ್ಞಾನಿ ಫ್ರಿಡ್‌ಮನ್, ನಾನು ನಿನ್ನೆ ಕೆಲವು ಗಂಟೆಗಳ ಕಾಲ ಎಲಾನ್ ಮಸ್ಕ್ ಅವರಿಗೆ ಪೂರ್ವಸಿದ್ಧತೆಯ ಬಗ್ಗೆ ತರಬೇತಿಯಲ್ಲಿ ಭಾಗವಹಿಸಿದ್ದೆ. ಅವರು ಶಕ್ತಿ ಮತ್ತು ಕೌಶಲ್ಯದ ಬಗ್ಗೆ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇಬ್ಬರು ಘಟಾನುಘಟಿಗಳ ಬಲಾಬಲವನ್ನು ನೋಡುವುದಾದರೆ ಇಬ್ಬರೂ ಉದ್ಯಮಿಗಳು ಅಮೆರಿಕದವರೇ ಆಗಿದ್ದು, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ 39 ವರ್ಷ ವಯಸ್ಸಾಗಿದ್ದು, 5.8 ಅಡಿ ಎತ್ತರ ಇದ್ದು, 154 ಕೆಜಿ ತೂಕ ಇದ್ದಾರೆ. ಅದೇ ರೀತಿಯಾಗಿ ಜಗತ್ತಿನ ನಂಬರ್ ಶ್ರೀಮಂತ ಉದ್ಯಮಿ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ವಯಸ್ಸು 51 ಆಗಿದ್ದು, 6.2 ಅಡಿ ಎತ್ತರ ಇದ್ದಾರೆ. ಇವರು 187 ಕೆಜಿ ತೂಕ ಇದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ