logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar News: ಬಿಹಾರದಲ್ಲಿ ಮತ್ತೆ ದೋಣಿ ದುರಂತ, ಸರಯು ನದಿಯಲ್ಲಿ ಇಬ್ಬರ ಸಾವು: 7 ಮಂದಿ ನಾಪತ್ತೆ

Bihar News: ಬಿಹಾರದಲ್ಲಿ ಮತ್ತೆ ದೋಣಿ ದುರಂತ, ಸರಯು ನದಿಯಲ್ಲಿ ಇಬ್ಬರ ಸಾವು: 7 ಮಂದಿ ನಾಪತ್ತೆ

HT Kannada Desk HT Kannada

Nov 02, 2023 06:20 AM IST

ಬಿಹಾರದ ಸರನ್‌ ಜಿಲ್ಲೆಯ ಸರಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮೃತಪಟ್ಟು ಇನ್ನು ಏಳು ಮಂದಿ ಕಾಣೆಯಾಗಿದ್ದಾರೆ.

    • Bihar News ಬಿಹಾರದ ಸರನ್‌ ಜಿಲ್ಲೆಯಲ್ಲಿ ಹರಿಯುವ ಸರಯು ನದಿಯಲ್ಲಿ ಜನರನ್ನು ಹೊತ್ತು ಹೊರಟಿದ್ದ ದೋಣಿ ಮುಳುಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಏಳು ಮಂದಿ ಕಾಣೆಯಾಗಿದ್ಧಾರೆ. ಇನ್ನೂ ಒಂಬತ್ತು ಮಂದಿ ನದಿಯಲ್ಲಿ ಈಜಿ ದಡ ಸೇರಿದ್ದಾರೆ. 
ಬಿಹಾರದ ಸರನ್‌ ಜಿಲ್ಲೆಯ ಸರಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮೃತಪಟ್ಟು ಇನ್ನು ಏಳು ಮಂದಿ ಕಾಣೆಯಾಗಿದ್ದಾರೆ.
ಬಿಹಾರದ ಸರನ್‌ ಜಿಲ್ಲೆಯ ಸರಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮೃತಪಟ್ಟು ಇನ್ನು ಏಳು ಮಂದಿ ಕಾಣೆಯಾಗಿದ್ದಾರೆ.

ಪಾಟ್ನಾ: ನಿಗದಿಗಿಂತ ಹೆಚ್ಚು ಜನರನ್ನು ತುಂಬಿಕೊಂಡು ಹೊರಟಿದ್ದ ದೋಣಿ ಮುಳುಗಿ ಇಬ್ಬರು ಮಹಿಳೆಯರು ಮೃತಪಟ್ಟು7 ಮಂದಿ ನಾಪತ್ತೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಬಿಹಾರದ ಸರನ್‌ ಜಿಲ್ಲೆಯ ಸರಯು ನದಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು 9 ಮಂದಿ ಈಜಿ ದಡ ಸೇರಿದ್ದಾರೆ. ಕಾಣೆಯಾದವರ ಹುಡುಕಾಟ ಬುಧವಾರ ರಾತ್ರಿ ನಡೆದಿದ್ದು, ಗುರುವಾರವೂ ಮುಂದುವರಿಯಲಿದೆ.

ಏಳು ಮಂದಿ ನದಿಯಲ್ಲಿ ಕೊಚ್ಚಿ ಹೋಗಿರುವ ಆತಂಕವಿದ್ದು, ಹುಡುಕಾಟ ಬುಧವಾರ ರಾತ್ರಿಯಿಡೀ ಕೈಗೊಂಡಿದ್ದೇವೆ. ಗುರುವಾರವೂ ರಕ್ಷಣಾ ತಂಡಗಳು ಪತ್ತೆ ಕಾರ್ಯ ನಡೆಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಸಂಜೆ 6.30ರ ಹೊತ್ತಿಗೆ 18 ಪ್ರಯಾಣಿಕರಿದ್ದ ದೋಣಿಯೊಂದು ಸರಯು ನದಿಯ ಮಾಂಜಿ ಬ್ಲಾಕ್‌ ಮತಿಯಾರ್‌ ಘಾಟ್‌ ಪ್ರದೇಶದಲ್ಲಿ ಹೊರಟಿತ್ತು, ಆಗ ದೋಣಿ ನದಿಯೊಳಗೆ ಉರುಳಿ ಬಿದ್ದಾಗ ದುರ್ಘಟನೆ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ರಕ್ಷಣಾ ಕಾರ್ಯ ನಡೆಸಿ ಕೆಲವರನ್ನು ರಕ್ಷಿಸಿದ್ದೇವೆ. ಹೆಚ್ಚು ಜನ ತುಂಬಿಕೊಂಡು ಹೊರಟಿದ್ದರಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆಯಾದರೂ ತನಿಖೆ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಸರನ್‌ ಜಿಲ್ಲಾಧಿಕಾರಿ ಅಮನ್‌ ಸಮೀರ್‌ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೇ ಬಿಹಾರದ ಮುಜಫರ್‌ ಜಿಲ್ಲೆಯ ಬಾಗಮತಿ ನದಿಯಲ್ಲಿ ದೋಣಿ ಮುಳುಗಿ 15 ಮಕ್ಕಳು ಮೃತಪಟ್ಟ ಘಟನೆ ನಡೆದಿತ್ತು. ಈಗ ಮತ್ತೊಂದು ದೋಣಿ ದುರಂತ ಸಂಭವಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ