logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cm Gaddi: ಬಿಜೆಪಿ ಗೆದ್ದ ಮೂರು ರಾಜ್ಯಗಳಲ್ಲಿ ಯಾರಿಗೆ ಮುಖ್ಯಮಂತ್ರಿ ಹುದ್ದೆ: ಇಲ್ಲಿದೆ ವಿಳಂಬ ಹಿಂದಿನ ಕಾರಣಗಳು

CM Gaddi: ಬಿಜೆಪಿ ಗೆದ್ದ ಮೂರು ರಾಜ್ಯಗಳಲ್ಲಿ ಯಾರಿಗೆ ಮುಖ್ಯಮಂತ್ರಿ ಹುದ್ದೆ: ಇಲ್ಲಿದೆ ವಿಳಂಬ ಹಿಂದಿನ ಕಾರಣಗಳು

Umesha Bhatta P H HT Kannada

Dec 06, 2023 01:42 PM IST

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಸಿಎಂ ಆಯ್ಕೆಗೆ ಬಿಜೆಪಿ ಕಸರತ್ತು ನಡೆದಿದೆ.

    • next CM ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ರಾಜ್ಯಗಳಿಗೆ ಮುಂದಿನ ಸಿಎಂ ಆಯ್ಕೆ ಸಂಬಂಧ ಬಿಜೆಪಿ ಮೌನವಾಗಿಯೇ ಪ್ರಯತ್ನ ನಡೆಸಿದೆ.ಈ ಸಂಬಂಧ ಸಭೆಗಳೂ ನಡೆದಿವೆ. ಅಳೆದು ತೂಗಿ ಬಿಜೆಪಿ ತನ್ನ ಹೊಸ ಸಿಎಂ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಸಿಎಂ ಆಯ್ಕೆಗೆ ಬಿಜೆಪಿ ಕಸರತ್ತು ನಡೆದಿದೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಸಿಎಂ ಆಯ್ಕೆಗೆ ಬಿಜೆಪಿ ಕಸರತ್ತು ನಡೆದಿದೆ.

ದೆಹಲಿ: ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎನ್ನುವಂತಿದ್ದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಬಹುಮತದೊಂದಿಗೆ ಗೆದ್ದಿದೆ. ಈಗ ಅಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಸಮಯ. ಈಗಾಗಲೇ ತೆಲಂಗಾಣದಲ್ಲಿ ಕಾಂಗ್ರೆಸ್‌ ತನ್ನ ಸಿಎಂ ಅಭ್ಯರ್ಥಿಯನ್ನಾಗಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದ ರೇವಂತ್‌ ರೆಡ್ಡಿ ಅವರನ್ನು ಆಯ್ಕೆ ಮಾಡಿದೆ. ನಾಲ್ಕೈದು ಜನ ಆಕಾಂಕ್ಷಿಗಳಿದ್ದರೂ ಗೊಂದಲವಿಲ್ಲದ ಹಾಗೆ ಆಯ್ಕೆ ಮಾಡಿದ್ದು, ಶಾಸಕಾಂಗ ಪಕ್ಷ ಸಭೆ, ಸಿಎಂ ಪ್ರಮಾಣ ವಚನ ಬಾಕಿಯಿವೆ. ಮಂಗಳವಾರದಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ಸಿಎಂ ಆಯ್ಕೆ ಸಂಬಂಧ ಸಭೆ ನಡೆದರೂ ಹೆಸರು ಅಂತಿಮವಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಆದರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿಯಲು ಅಣಿಯಾಗಿರುವ ಬಿಜೆಪಿ ಅವಸರ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ನಾಯಕತ್ವವನ್ನು ಬೆಳೆಸಲು ಬಯಸಿದ್ದಾರೆ. ಈ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಗಳನ್ನು ಯಾವ ರಾಜ್ಯದಲ್ಲೂ ಹೆಸರಿಸದೇ ಮೋದಿ ಹೆಸರಿನಲ್ಲಿ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸಲಾಗಿದೆ.

ಇದರಿಂದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಮೋದಿ ಅವರ ತಲೆಯಲ್ಲಿ ಯಾವ ಹೆಸರುಗಳಿವೆ ಎನ್ನುವುದು ತಿಳಿದಿಲ್ಲ. ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಇದಕ್ಕೂ ಮೊದಲು ವೀಕ್ಷಕರು ಅಲ್ಲಿಗೆ ತೆರಳಿ ಅಭಿಪ್ರಾಯ ಆಲಿಸಲಿದ್ದಾರೆ. ಶಾಸಕರು ಹಾಗೂ ಸ್ಥಳೀಯ ನಾಯಕರ ಅಭಿಪ್ರಾಯ ಕೇಳಿಕೊಂಡು ನಂತರ ಮೋದಿ ಅವರು ಅಂತಿಮಗೊಳಿಸುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡರೇ ಈವರೆಗೂ ಸಿಎಂ ಆಗಿದ್ದವರೇ ಮತ್ತೆ ಸಿಎಂ ಆಗಬಹುದು. ಹೊಸಬರಿಗೆ ಅವಕಾಶ ಸಿಗಬೇಕು ಎಂದು ಬಯಸಿದರೆ ಹಲವು ಹೆಸರುಗಳು ಮುಂಚೂಣಿಗೆ ಬರಲಿವೆ.

ಮಧ್ಯಪ್ರದೇಶದಲ್ಲಿ ಪಕ್ಷ ನಿಷ್ಟ, ರಾಜಸ್ಥಾನದಲ್ಲಿ ಧಾರ್ಮಿಕಗುರು ಹಾಗೂ ಛತ್ತೀಸಗಢದಲ್ಲಿ ಐಎಎಸ್‌ ಅಧಿಕಾರಿ ಸಿಎಂ ಹುದ್ದೆ ಅಲಂಕರಿಸಿದರೂ ಅಚ್ಚರಿಯಿಲ್ಲ.

ಯಾವ ರಾಜ್ಯದಲ್ಲಿ ಆಕಾಂಕ್ಷಿಗಳು ಇದ್ದಾರೆ. ಏನಾಗಬಹುದು ಎನ್ನುವ ಅಂಶಗಳು ಇಲ್ಲಿವೆ

ಮಧ್ಯಪ್ರದೇಶ

  1. 1) ಮಧ್ಯಪ್ರದೇಶದಲ್ಲಿ ಈಗಾಗಲೇ ನಾಲ್ಕು ಬಾರಿ ಸಿಎಂ ಆಗಿ ಕೆಲಸ ಮಾಡಿರುವ ಹಿರಿಯ ನಾಯಕ ಶಿವರಾಜ ಸಿಂಗ್‌ ಚೌಹಾಣ್‌ ಇದ್ದಾರೆ. ಅವರ ಕಾರ್ಯಕ್ರಮಗಳೂ ಕೈ ಹಿಡಿದಿವೆ. ಯಾವುದೇ ವಿವಾದವೂ ಇಲ್ಲದ ನಾಯಕ ಅವರು. ಹಿರಿತನ ವಿರುವುದರಿಂದ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
  2. 2) ಕಳೆದ ಬಾರಿ ಬಿಜೆಪಿಗೆ ಬಹುಮತವಿಲ್ಲದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಬಂಡಾಯವೆದ್ದು ಬಿಜೆಪಿ ಸರ್ಕಾರ ಮರು ಸ್ಥಾಪನೆಗೆ ಸಹಕರಿಸಿದ್ದ, ಹಾಲಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಹೆಸರೂ ಇದೆ. ಆದರ ಅವರ ಹೆಸರು ಪರಿಗಣನೆ ಆಗಬಹುದೇ ಎನ್ನುವ ಕುತೂಹಲವೂ ಇದೆ.
  3. 3) ಪಕ್ಷದ ರಾಜ್ಯಾಧ್ಯಕ್ಷರಾಗಿ ಈ ಚುನಾವಣೆಯಲ್ಲಿ ನೇತೃತ್ವ ವಹಿಸಿದ್ದ ಸಂಸದ ವಿಷ್ಣುದತ್ತ ಶರ್ಮ ಅವರ ಹೆಸರು ಕೂಡ ಇದೆ. ಪಕ್ಷ ನಿಷ್ಠತೆಯ ಜತೆಗೆ ಹೊಸಬರಿಗೆ ಅವಕಾಶ ನೀಡಬೇಕು ಎಂದಾಗ ವಿಡಿ ಶರ್ಮ ಹೆಸರೂ ಪರಿಗಣನೆಯಾಗಬಹುದು
  4. 4) ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪ್ರಹ್ಲಾದಸಿಂಗ್‌ ಪಟೇಲ್‌, ಸಂಸದ ಕೈಲಾಸ್‌ ವಿಜಯ ವರ್ಗೀಯ ಅವರುಗಳ ಹೆಸರೂ ಇದೆ. ಮೂವರೂ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ, ಕೂಡ.

ರಾಜಸ್ಥಾನ

  1. 1) ರಾಜಸ್ಥಾನದಲ್ಲಿ ಎರಡು ಬಾರಿ ಸಿಎಂ ಆಗಿ ಪಕ್ಷದೊಂದಿಗೆ ನಿರಂತರವಾಗಿ ಇದ್ದುಕೊಂಡು ಬಂದಿರುವ ರಾಜವಂಶಸ್ಥೆ ವಸುಂಧರಾ ರಾಜೇ ಅವರು ಆಕಾಂಕ್ಷಿ. ಅವರು ಈ ಅವಧಿಗೆ ತಮಗೆ ಅವಕಾಶ ನೀಡಬೇಕು ಎನ್ನುವ ಪ್ರಯತ್ನವನ್ನು ಮಾಡುತ್ತಿದ್ಶಾರೆ. ಆದರೆ ಟಿಕೆಟ್‌ ಪಡೆಯುವುದರಿಂದ ಹಿಡಿದು ಎಲ್ಲದರಲ್ಲೂ ಅವರನ್ನು ಅಷ್ಟಾಗಿ ವಿಶ್ವಾಸಕ್ಕೆ ಮೋದಿ ತೆಗೆದುಕೊಂಡಿಲ್ಲ. ಇದರಿಂದ ಏನಾಗಬಹುದು ಎನ್ನುವ ಕುತೂಹಲವಿದೆ
  2. 2) ರಾಜವಂಶಸ್ಥೆಯೂ ಆಗಿರುವ ದಿಯಾ ಕುಮಾರಿ ಅವರ ಹೆಸರೂ ಮುಂಚೂಣಿಯಲ್ಲಿದೆ. ವಸುಂಧರಾ ಅವರಿಗೆ ಬೇಡ ಎಂದಾದರೆ ಮತ್ತೊಬ್ಬ ಮಹಿಳೆ, ರಾಜವಂಶಸ್ಥೆ ಪ್ರತಿಷ್ಠಾಪಿಸಲೂ ಬಹುದು. ಇವ ರ ಹೆಸರೂ ಗಂಭೀರ ಪರಿಶೀಲನೆಯಲ್ಲಿದೆ.
  3. 3) ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಈ ಬಾರಿ ಚುನಾವಣೆಯಲ್ಲಿ ಪ್ರಬಲವಾಗಿಯೇ ಕೆಲಸ ಮಾಡಿದ್ದಾರೆ. ಅವರಿಗೆ ಅವಕಾಶ ನೀಡುವ ಕುರಿತೂ ಚರ್ಚೆಗಳಿವೆ.
  4. 4) ಲೋಕಸಭೆ ಸದಸ್ಯರಾಗಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲೂ ಗೆದ್ದಿರುವ ಮಹಾಂತ ಬಾಲಕನಾಥ ಯೋಗಿ ಅವರೂ ಸಿಎಂ ಹೆಸರಿನ ಪ್ರಮುಖ ದಾವೇದಾರ. ಧಾರ್ಮಿಕ ನಾಯಕರೊಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಹೇಗೆ ಎನ್ನುವ ಚಿಂತನೆಗಳೂ ಇವೆ.
  5. 5) ಸರಳತೆಗೆ ಹೆಸರಾದ ಕಿರೋಡಿ ಲಾಲ್‌ ಮೀನಾ ಅವರ ಹೆಸರು ಸಿಎಂ ರೇಸ್‌ನಲ್ಲಿದೆ. ವಯಸ್ಸಿನ ಕಾರಣಕ್ಕೆ ಅವರ ಹೆಸರು ಪರಿಗಣನೆ ಸಾಧ್ಯತೆ ಕಡಿಮೆ
  6. 6) ಕೇಂದ್ರ ಸಚಿವರಾಗಿರುವ ಅರ್ಜುನ್‌ ರಾಮ್‌ ಮೇಘವಾಲ್‌ ಅವರ ಹೆಸರು ಡಾರ್ಕ್‌ ಹಾರ್ಸ್‌ ರೀತಿಯಲ್ಲಿ ಚಾಲನೆಯಲ್ಲಿದೆ. ಅವಕಾಶ ಸಿಕ್ಕರೂ ಆಶ್ಚರ್ಯವಿಲ್ಲ

ಛತ್ತೀಸಗಢ

  1. 1) ಮಾಜಿ ಸಿಎಂ ಹಾಗೂ ಹಿರಿಯ ನಾಯಕ ಡಾ.ರಮಣ್‌ ಸಿಂಗ್‌ ಅವರ ಹೆಸರೂ ಪ್ರಮುಖವಾಗಿದೆ. ಈಗಾಗಲೇ ಮೂರು ಬಾರಿ ಸಿಎಂ ಆಗಿ ಸೋಲಿನ ದಡದಲ್ಲಿದ್ದ ಪಕ್ಷ ಗೆಲ್ಲಿಸುವಲ್ಲಿ ಇವರ ಪಾತ್ರವೂ ಇದೆ. ಆದರೆ ಹೊಸಬರಿಗೆ ಅವಕಾಶ ಎನ್ನುವ ನೀತಿಯಾದರೆ ರಮಣಸಿಂಗ್‌ಗೆ ಅವಕಾಶ ಸಿಗದೇ ಹೋಗಬಹುದು
  2. 2) ಪಕ್ಷದ ರಾಜ್ಯಾಧ್ಯಕ್ಷ ಅರುಣ್‌ ಸಾಹೋ ಅವರೂ ಈ ಬಾರಿ ಚುನಾವಣೆಯನ್ನು ಎದುರಿಸಿದ್ದಾರೆ. ಅವರ ಹೆಸರು ಕೂಡ ಸಿಎಂ ಆಗುವವರ ಪಟ್ಟಿಯಲ್ಲಿದೆ
  3. 3) ಕೇಂದ್ರ ಸಚಿವೆ ರೇಣುಕಾಸಿಂಗ್‌ ಗಿರಿಜನ ನಾಯಕಿ. ಈ ಬಾರಿ ಛತ್ತೀಸಗಢದಲ್ಲಿ ಹೆಚ್ಚಿನ ಗಿರಿಜನ ಹಾಗೂ ಮಹಿಳಾ ಮತ ಬಿಜೆಪಿಗೆ ಬಂದು ಗೆಲುವಿನ ದಡ ಮುಟ್ಟಿಸುವಲ್ಲಿ ಸಹಕಾರಿಯಾಗಿವೆ. ಇದರಿಂದ ಅವರಿಗೂ ಅವಕಾಶ ಸಿಕ್ಕರೂ ಸಿಗಬಹುದು
  4. 4) ಐಎಎಸ್‌ ಅಧಿಕಾರಿಯಾಗಿ ಐದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ ಪಡೆದು ಆನಂತರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಪಕ್ಷದಲ್ಲಿಯೇ ಇದ್ದುಕೊಂಡು ಈ ಬಾರಿ ವಿಧಾನಸಭೆ ಪ್ರವೇಶಿಸಿರುವ ಒಪಿ ಚೌಧರಿ ಹೆಸರು ಕೂಡ ಇದೆ. ಚೌಧರಿ ಅವರು ಅಮಿತ್‌ ಶಾ ಆಪ್ತರು. ಅಧಿಕಾರಿ ಹಾಗೂ ಹೊಸಪೀಳಿಗೆಗೆ ಅವಕಾಶ ನೀಡಬೇಕು ಎನ್ನುವುದಾದರೆ ಚೌಧರಿ ಡಾರ್ಕ್‌ ಹಾರ್ಸ್‌ರೀತಿಯಲ್ಲಿ ಸಿಎಂ ಹುದ್ದೆಗೆ ಏರಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ