logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Udhampur Blasts: ಉಧಂಪುರ ಸ್ಫೋಟದ ಹಿಂದೆ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಕೈವಾಡ -ಎನ್ಐಎ

Udhampur blasts: ಉಧಂಪುರ ಸ್ಫೋಟದ ಹಿಂದೆ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಕೈವಾಡ -ಎನ್ಐಎ

HT Kannada Desk HT Kannada

Nov 28, 2022 09:26 AM IST

ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಸ್ಥಳದ ಬಳಿ ಜಮಾಯಿಸಿದ ಪೊಲೀಸ್ ಸಿಬ್ಬಂದಿ

  • “ಸರ್ಕಾರಿ ಕೇಂದ್ರಗಳು, ಸೇನೆ ಅಥವಾ ಭದ್ರತಾ ಪಡೆಗಳ ಶಿಬಿರಗಳು, ಕಾಶ್ಮೀರಿ ಪಂಡಿತರು ಮತ್ತು ಇತರ ನಿವಾಸಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ವಲಸೆ ಕಾರ್ಮಿಕರನ್ನು ಗುರಿಯಾಗಿಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ಹೊಸ ಅಪರಿಚಿತ ಸಂಘಟನೆಯನ್ನು ರಚಿಸುವುದರ ಬಗ್ಗೆ ನಮಗೆ ಮಾಹಿತಿ ದೊರಕಿದೆ” ಎಂದು ಎನ್ಐಎ ಅಧಿಕಾರಿ ಹೇಳಿದ್ದಾರೆ.

ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಸ್ಥಳದ ಬಳಿ ಜಮಾಯಿಸಿದ ಪೊಲೀಸ್ ಸಿಬ್ಬಂದಿ
ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಸ್ಥಳದ ಬಳಿ ಜಮಾಯಿಸಿದ ಪೊಲೀಸ್ ಸಿಬ್ಬಂದಿ (ANI)

ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ನಡೆದ ಅವಳಿ ಬಸ್‌ ಸ್ಫೋಟದ ಹಿಂದೆ ಪಾಕಿಸ್ತಾನ ಮೂಲದ ‘ಅಜ್ಞಾತ’ ಭಯೋತ್ಪಾದಕ ಸಂಘಟನೆಯ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಸ್ವಲ್ಪ ಮುಂಚಿತವಾಗಿ ಸ್ಫೋಟ ಸಂಭವಿಸಿತ್ತು. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಎಂಟು ಗಂಟೆಗಳ ಅವಧಿಯಲ್ಲಿ ನಡೆದ ಸ್ಫೋಟಗಳಲ್ಲಿ ಇಬ್ಬರು ಗಾಯಗೊಂಡಿದ್ದರು. ಸೆಪ್ಟೆಂಬರ್ 28ರಂದು ರಾತ್ರಿ 10.30ಕ್ಕೆ ಡೊಮೈಲ್ ಚೌಕ್ ಬಳಿಯ ಬೈಗ್ರಾ ಪೆಟ್ರೋಲ್‌ ಬಂಕ್‌ನಲ್ಲಿ ಸ್ಫೋಟ ನಡೆದಿತ್ತು. ಆ ಬಳಿಕ ಸೆಪ್ಟೆಂಬರ್ 29ರಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ಹಳೆಯ ಬಸ್ ನಿಲ್ದಾಣದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತ್ತು. ಇದರಿಂದಾಗಿ ಈ ಪ್ರದೇಶದಲ್ಲಿ ಭೀತಿ ಸೃಷ್ಟಿಯಾಗಿತ್ತು. ನವರಾತ್ರಿ ಉತ್ಸವದ ನಡುವೆ ಮತ್ತು ಅಕ್ಟೋಬರ್ 4 ರಂದು ಶಾ ಅವರ ನಿಗದಿತ ಭೇಟಿಗೆ ಮುಂಚಿತವಾಗಿ ನಡೆದ ಈ ಘಟನೆಯಿಂದ ಇಡೀ ರಾಜ್ಯ ಪೊಲೀಸ್ ಮತ್ತು ಕೇಂದ್ರ ಸಂಸ್ಥೆಗಳು ಅಲರ್ಟ್ ಆಗಿವೆ.

“ಸರ್ಕಾರಿ ಕೇಂದ್ರಗಳು, ಸೇನೆ ಅಥವಾ ಭದ್ರತಾ ಪಡೆಗಳ ಶಿಬಿರಗಳು, ಕಾಶ್ಮೀರಿ ಪಂಡಿತರು ಮತ್ತು ಇತರ ನಿವಾಸಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ವಲಸೆ ಕಾರ್ಮಿಕರನ್ನು ಗುರಿಯಾಗಿಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ಹೊಸ ಅಪರಿಚಿತ ಸಂಘಟನೆಯನ್ನು ರಚಿಸುವುದನ್ನು ನಾವು ನೋಡುತ್ತಿದ್ದೇವೆ” ಎಂದು ಎನ್ಐಎ ಅಧಿಕಾರಿ ಹೇಳಿದ್ದಾರೆ.

ಘಟನೆ ಸಂಬಂಧ ಅಕ್ಟೋಬರ್ 2ರಂದು ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಅವರು, ಭಯೋತ್ಪಾದಕ ಮೊಹಮ್ಮದ್ ಅಸ್ಲಾಮ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ. ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಮೀನ್ ಭತ್‌ ಅಲಿಯಾಸ್ ಖುಬೈಬ್ ನಿರ್ದೇಶನದ ಮೇರೆಗೆ ಎರಡು ಬಸ್ಸುಗಳಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಹಾಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವ ಸಂದರ್ಭದಲ್ಲಿ, ಸ್ಫೋಟಗಳು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಹೊಂದಿರಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಕೂಡಾ ಹೇಳಿದೆ. ಹೀಗಾಗಿ ಸ್ಫೋಟ ಪ್ರಕರಣಗಳನ್ನು ತನಿಖಾ ಸಂಸ್ಥೆ ಗಂಭೀರವಾಗಿ ಹೇಳಿದೆ.

ಅವಳಿ ಸ್ಫೋಟ ಸಂಬಂಧ ನವೆಂಬರ್ 15ರಂದು NIA ದಾಖಲಿಸಿದ ಎರಡು ಪ್ರತ್ಯೇಕ ಎಫ್‌ಐಆರ್ ಪ್ರತಿಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ನೋಡಿದೆ. “ಅಜ್ಞಾತ ಭಯೋತ್ಪಾದಕ ಸಂಘಟನೆಯು ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡಲು ಮತ್ತು ಸ್ಫೋಟ ನಡೆಸುವ ಮೂಲಕ ಈ ಪ್ರದೇಶದ ನಾಗರಿಕರಲ್ಲಿ ಭಯ ಸೃಷ್ಟಿಸಲು ಕ್ರಿಮಿನಲ್ ಸಂಚು ರೂಪಿಸಿದೆ” ಎಂದು ಏಫ್‌ಐಆರ್‌ ಪ್ರತಿಯಲ್ಲಿ ಹೇಳಲಾಗಿದೆ.

“ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ ಈ ಸ್ಫೋಟದ ಹಿಂದೆ ಎಲ್‌ಇಟಿಯ ಸಹಚರರೇ ಇದ್ದಾರೆ ಹೊರತು ಬೇರೆ ಯಾರೂ ಅಲ್ಲ ಎಂದು ತಿಳಿದುಬಂದಿದೆ,” ಎಂದು ಅಧಿಕಾರಿ ಹೇಳಿದ್ದಾರೆ.

ಇನ್ನೊಂದೆಡೆ ಅಂತಾರಾಷ್ಟ್ರೀಯ ಪಿತೂರಿಯ ತನಿಖೆಯ ಭಾಗವಾಗಿ, ಕೇಂದ್ರ ತನಿಖಾ ಸಂಸ್ಥೆಯು ಪಾಕಿಸ್ತಾನ ಸೇನೆ, ಅದರ ಬೇಹುಗಾರಿಕಾ ಸಂಸ್ಥೆಯಾದ ISI ಮತ್ತು ಲಷ್ಕರ್-ಎ-ತೈಬಾ (LeT) ಮೇಲೂ ಕಣ್ಣಿಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಮತ್ತೊಂದು ‘ಸಂಘಟನೆ ಅಥವಾ ಗುಂಪನ್ನು’ ಬೆಂಬಲಿಸಿದೆಯೇ ಎಂಬುದನ್ನು ಸಹ ಪರಿಶೀಲಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ