logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  No Parking New Law: ನೋ ಪಾರ್ಕಿಂಗ್‌ ವಾಹನಗಳ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಿ 500 ರೂ. ಗೆಲ್ಲಿ!

No Parking New law: ನೋ ಪಾರ್ಕಿಂಗ್‌ ವಾಹನಗಳ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಿ 500 ರೂ. ಗೆಲ್ಲಿ!

HT Kannada Desk HT Kannada

Jun 17, 2022 12:34 PM IST

ನಿತಿನ್‌ ಗಡ್ಕರಿ, ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ

  • ಸಂಚಾರ ನಿಯಮ ಅದರಲ್ಲೂ ವಿಶೇಷವಾಗಿ ಪಾರ್ಕಿಂಗ್‌ ನಿಯಮ ಉಲ್ಲಂಘನೆ ತಡೆಗೆ ಹೊಸ ಕಾನೂನು ರೂಪಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಘೋಷಿಸಿದ್ದಾರೆ. ಇದರಂತೆ, ನೋ ಪಾರ್ಕಿಂಗ್‌ ಉಲ್ಲಂಘನೆ ಗಮನಕ್ಕೆ ತರುವವರಿಗೆ 500 ರೂಪಾಯಿ ಇನಾಮು ಘೋಷಿಸಲಾಗಿದೆ! 

ನಿತಿನ್‌ ಗಡ್ಕರಿ, ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ
ನಿತಿನ್‌ ಗಡ್ಕರಿ, ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ

ನವದೆಹಲಿ: ಪಾರ್ಕಿಂಗ್‌ ನಿಯಮ ಉಲ್ಲಂಘನೆ ಹೆಚ್ಚಾಗಿರುವ ಕಾರಣ, ಇದನ್ನು ಸರಿಪಡಿಸಲು ಹೊಸ ನಿಯಮ ಜಾರಿಗೊಳಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಪಾರ್ಕಿಂಗ್‌ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಫೋಟೋ ತೆಗೆದು ಕಳುಹಿಸುವ ವ್ಯಕ್ತಿಗೆ 500 ರೂಪಾಯಿ ಇನಾಮು ಕೊಡುವ ವಿಚಾರ ಹೊಸ ನಿಯಮದಲ್ಲಿ ಸೇರ್ಪಡೆಯಾಗಲಿದೆ ಎಂದು ಸಚಿವರು ಹೇಳಿದರು.

ಅವರು, ದೆಹಲಿಯಲ್ಲಿ ಇಂಡಸ್ಟ್ರಿಯಲ್‌ ಡಿಕಾರ್ಬನೈಸೇಷನ್‌ ಸಮಿಟ್‌ 2022 (ಐಡಿಎಸ್‌-2022) ಉದ್ದೇಶಿಸಿ ಮಾತನಾಡಿದರು.

ಪಾರ್ಕಿಂಗ್‌ ಸಮಸ್ಯೆ ತಗ್ಗಿಸುವುದಕ್ಕೆ ನಿಯಮ ತರಬೇಕಾದ್ದು ಅವಶ್ಯವಾಗಿದೆ. ಇಂತಹ ನಿಯಮ ಉಲ್ಲಂಘನೆಯನ್ನು ಗಮನಕ್ಕೆ ತರುವ ವ್ಯಕ್ತಿಗೆ 500 ರೂಪಾಯಿ ಬಹುಮಾನ ಮತ್ತು ಉಲ್ಲಂಘನೆ ಮಾಡಿದವರಿಗೆ 1,000 ರೂಪಾಯಿ ದಂಡ ವಿಧಿಸುವ ವಿಚಾರ ಚರ್ಚೆಯಲ್ಲಿದೆ. ಇದು ಪಾರ್ಕಿಂಗ್‌ ಸಮಸ್ಯೆಯನ್ನು ಬಹುತೇಕ ಬಗೆಹರಿಸಲಿದೆ ಎಂದು ಸಚಿವ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ವಾಹನಗಳನ್ನು ಪಾರ್ಕ್‌ ಮಾಡುವುದಕ್ಕೆ ಜನ ವ್ಯವಸ್ಥೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅವರು ಅವುಗಳನ್ನು ರಸ್ತೆ, ರಸ್ತೆ ಬದಿಗಳಲ್ಲೇ ಪಾರ್ಕ್‌ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸ್ವಂತ ಕಾರು ಹೊಂದುವುದು ಅಗತ್ಯವಾಗಿಬಿಟ್ಟಿದೆ. ಶೇರ್‌ ಮಾಡಿಕೊಂಡು ಹೋಗುವ ವ್ಯವಸ್ಥೆ ನಿಂತು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಡುಗೆಯವನ ಬಳಿ ಎರಡು ಕಾರು!

ಪಾರ್ಕಿಂಗ್‌ ಸಮಸ್ಯೆ ಬಗ್ಗೆ ಹೇಳುತ್ತ ನಾಗಪುರದಲ್ಲಿರುವ ತಮ್ಮ ಮನೆಯ ಅಡುಗೆಯವನ ಉದಾಹರಣೆಯನ್ನು ಗಡ್ಕರಿ ಹೇಳಿದರು. ನನ್ನ ಮನೆಯ ಅಡುಗೆಯವನ ಬಳಿ ಎರಡು ಸೆಕೆಂಡ್‌ ಹ್ಯಾಂಡ್‌ ಕಾರುಗಳಿವೆ. ಆರಂಭದಲ್ಲಿ ಮನೆಗೆಲಸದವರ ಬಳಿಯೇ ಎರಡು ಕಾರುಗಳಿವೆ ಎಂದು ನಾವೆಲ್ಲ ಶಾಕ್‌ ಆಗಿದ್ದಿದೆ. ದೇಶದಲ್ಲಿ ಈಗ ಆ ವಾತಾವರಣ ಇಲ್ಲ. ಬಹಳ ವರ್ಷಗಳಿಂದ ಅಮೆರಿಕದಲ್ಲಿ ಅಡುಗೆಯವರು ಕಾರಿನಲ್ಲೇ ಕೆಲಸಕ್ಕೆ ಹೋಗುತ್ತಾರೆ. ಇಂತಹ ವಾತಾವರಣ ಈಗ ಭಾರತದಲ್ಲೂ ಬಂದಿದೆ. ಇಲ್ಲೂ ಜನರ ಬದುಕಿನ ಗುಣಮಟ್ಟ ಸುಧಾರಣೆ ಆಗಿರುವುದನ್ನು ನಾವು ಗಮನಿಸಬಹುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಿವರಿಸಿದರು.

ದೆಹಲಿಯಲ್ಲಿ ನಾಲ್ಕು ಜನ, ಆರು ಕಾರು
ರಾಷ್ಟ್ರ ರಾಜಧಾನಿ ಅತಿ ಹೆಚ್ಚು ಸಂಚಾರ ದಟ್ಟಣೆ ಅನುಭವಿಸಿತ್ತಿರುವ ಪ್ರದೇಶ. ಇಲ್ಲಿ ನಾಲ್ಕು ಜನರಿಗೆ ಆರು ಕಾರುಗಳು ಎಂಬ ಲೆಕ್ಕದಲ್ಲಿವೆ. ದೆಹಲಿಯ ಜನ ಎಷ್ಟು ಅದೃಷ್ಟವಂತರು ಎಂದರೆ ಅವರ ಕಾರುಗಳನ್ನು ಪಾರ್ಕ್‌ ಮಾಡುವುದಕ್ಕಾಗಿ ನಾವು ರಸ್ತೆಗಳನ್ನು ನಿರ್ಮಿಸಿ ಕೊಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದ ಸಚಿವ ಗಡ್ಕರಿ, ದೆಹಲಿಯಲ್ಲಿ ಯಾರೊಬ್ಬರೂ ತಮ್ಮ ಮನೆಯ ಆವರಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳುತ್ತಿಲ್ಲ. ಎಲ್ಲರೂ ರಸ್ತೆಯಲ್ಲೇ ಪಾರ್ಕ್‌ ಮಾಡುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಾದ್ಯಂತ ಪಾರ್ಕಿಂಗ್‌ ಸಮಸ್ಯೆ ಹೊಸದೇನಲ್ಲ. ಎಲ್ಲ ನಗರಗಳಲ್ಲಿ ಈ ಸಮಸ್ಯೆ ಇದೆ. ಸ್ಥಳೀಯವಾಗಿ ಈಗಿರುವ ಸಂಚಾರಿ ನಿಯಮಗಳ ಮೂಲಕವೇ ಅದಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.  ಹೊಸ ನಿಯಮ ಜಾರಿಗೊಂಡರೆ, ಪಾರ್ಕಿಂಗ್‌ ಸಮಸ್ಯೆ ಬಗೆಹರಿಯಬಹುದು ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ