logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ballistic Missile Crash In South Korea: ನಗರದ ಮೇಲೆ ಬಿದ್ದ ದಕ್ಷಿಣ ಕೊರಿಯಾದ ವಿಫಲ ಬ್ಯಾಲಿಸ್ಟಿಕ್‌ ಕ್ಷಿಪಣಿ: ಮುಂದೇನಾಯ್ತು?

Ballistic Missile Crash In South Korea: ನಗರದ ಮೇಲೆ ಬಿದ್ದ ದಕ್ಷಿಣ ಕೊರಿಯಾದ ವಿಫಲ ಬ್ಯಾಲಿಸ್ಟಿಕ್‌ ಕ್ಷಿಪಣಿ: ಮುಂದೇನಾಯ್ತು?

HT Kannada Desk HT Kannada

Oct 05, 2022 01:35 PM IST

ಸಾಂದರ್ಭಿಕ ಚಿತ್ರ

    • ನೆರೆಯ ಉತ್ತರ ಕೊರಿಯಾ ನಿನ್ನೆ(ಅ.೦4-ಮಂಗಳವಾರ) ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಿದ ಬೆನ್ನಲ್ಲೇ, ದಕ್ಷಿಣ ಕೊರಿಯಾ ಕೂಡ ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆಯ ವಿಫಲ ಪ್ರಯತ್ನ ಮಾಡಿದೆ. ದಕ್ಷಿಣ ಕೊರಿಯಾ ಉಡಾವಣೆ ಮಾಡಿದ ಈ ಬ್ಯಾಲಿಸ್ಟಿಕ್‌ ಕ್ಷಿಪಣಿ ನಗರವೊಂದರ ಮೇಲೆ ಬಿದ್ದು ಭಾರೀ ಆತಂಕ ಸೃಷ್ಟಿಸಿದೆ. ದೇಶದ ಪೂರ್ವ ಕರಾವಳಿಯ ಗ್ಯಾಂಗ್‌ನ್ಯೂಂಗ್‌ ನಗರದ ಮೇಲೆ ಈ ಕ್ಷಿಪಣಿ ಅಪ್ಪಳಿಸಿದೆ. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (AFP)

ಸಿಯೋಲ್: ನೆರೆಯ ಉತ್ತರ ಕೊರಿಯಾ ನಿನ್ನೆ(ಅ.೦4-ಮಂಗಳವಾರ) ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಿದ ಬೆನ್ನಲ್ಲೇ, ದಕ್ಷಿಣ ಕೊರಿಯಾ ಕೂಡ ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆಯ ವಿಫಲ ಪ್ರಯತ್ನ ಮಾಡಿದೆ. ದಕ್ಷಿಣ ಕೊರಿಯಾ ಉಡಾವಣೆ ಮಾಡಿದ ಈ ಬ್ಯಾಲಿಸ್ಟಿಕ್‌ ಕ್ಷಿಪಣಿ ನಗರವೊಂದರ ಮೇಲೆ ಬಿದ್ದು ಭಾರೀ ಆತಂಕ ಸೃಷ್ಟಿಸಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಹೌದು, ದಕ್ಷಿಣ ಕೊರಿಯಾದ ಸೇನೆಯು ಮಂಗಳವಾರ ತಡರಾತ್ರಿ ಹ್ಯುನ್‌ಮೂ-2 ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾವಣೆ ಮಾಡಿತು. ಆದರೆ ಈ ಕ್ಷಿಪಣಿ ವಿಫಲವಾಗಿ ಉಡಾವಣೆಯಾದ ಸ್ವಲ್ಪ ಸಮಯದ ಬಳಿಕ ಪತನಗೊಂಡಿತು. ದೇಶದ ಪೂರ್ವ ಕರಾವಳಿಯ ಗ್ಯಾಂಗ್‌ನ್ಯೂಂಗ್‌ ನಗರದ ಮೇಲೆ ಈ ಕ್ಷಿಪಣಿ ಅಪ್ಪಳಿಸಿದೆ. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಕ್ಷಿಪಣಿಯ ಪ್ರೊಪೆಲೆಂಟ್‌ಗೆ ಬೆಂಕಿ ತಗುಲಿದ ಪರಿಣಾಮ ಅದು ಸ್ಫೋಟಗೊಳ್ಳಲಿಲ್ಲ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಅಧಿಕಾರಿಯೊಬ್ಬರು ಯೋನ್‌ಹಾಪ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಈ ಕ್ಷಿಪಣಿ ಸ್ಫೋಟಗೊಂಡಿದ್ದರೆ ಗ್ಯಾಂಗ್‌ನ್ಯೂಂಗ್‌ ನಗರದಲ್ಲಿ ಭಾರಾಈ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಆದರೆ ಕ್ಷಿಪಣಿಯು ಗ್ಯಾಂಗ್‌ನ್ಯೂಂಗ್‌ ನಗರದ ಸಮೀಪವಿರುವ ವಾಯುಪಡೆಯ ನೆಲೆಯ ಮೇಲೆ ಅಪ್ಪಳಿಸಿದೆ ಎಂದು ದಕ್ಷಿಣ ಕೊರಿಯಾ ಮಿಲಿಟರಿ ಸ್ಪಷ್ಟಪಡಿಸಿದೆ. ಜನವಸತಿ ಪ್ರದೇಶದಿಂದ ದೂರದಲ್ಲಿ ಈ ಕ್ಷಿಪಣಿ ಅಪ್ಪಳಿಸಿದ್ದು, ನೆಲಕ್ಕೆ ಅಪ್ಪಳಿಸುತ್ತಿದ್ದಂತೇ, ಕ್ಷಿಪಣಿಗೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಅದೃಷ್ಟವಶಾತ್‌ ಈ ಕ್ಷಿಪಣಿ ಸ್ಫೋಟಗೊಂಡಿಲ್ಲ ಎಂಬುದು ಸಮಾಧಾನಕರ ಸಂಗತಿ.

ಆದರೆ ಈ ಘಟನೆಯಿಂದ ಉದ್ರಿಕ್ತರಾಗಿರುವ ಗ್ಯಾಂಗ್‌ನ್ಯೂಂಗ್‌ ನಗರದ ನಿವಾಸಿಗಳು, ಮಿಲಿಟರಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕ್ಷಿಪಣಿ ಉಡಾವಣೆಯ ಬಗ್ಗೆ ನಮಗೆ ಯಾವುದೇ ಮುನ್ಸೂಚನೆಯನ್ನೇ ನೀಡಿರಲಿಲ್ಲ ಎಂದು ಗ್ಯಾಂಗ್‌ನ್ಯೂಂಗ್‌ ನಗರವಾಸಿಗಳು ಆಪಾದಿಸಿದ್ಧಾರೆ.

ನಿನ್ನೆ ಉತ್ತರ ಕೊರಿಯಾ ಬ್ಯಾಲಿಸ್ಟಿಕ್‌ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಿತ್ತು. ಆದರೆ ಈ ಕ್ಷಿಪಣಿ ಜಪಾನ್‌ನ ಟೋಕಿಯೋ ನಗರದ ಆಗಸದ ಮೇಲೆ ಹಾರಿ ಹೋಗಿತ್ತು. ಇದರಿಂದ ಟೋಕಿಯೋ ನಗರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದ ಜಪಾನ್‌ ಸರ್ಕಾರ, ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕೂಡ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆಯನ್ನು ಖಂಡಿಸಿದ್ದರು.

ಉತ್ತರ ಕೊರಿಯಾ ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, ದಕ್ಷಿಣ ಕೊರಿಯಾ ಮತ್ತು ಅಮೆರಿಕನ್‌ ಸೇನೆ ಜಂಟಿ ಸೇನಾ ತರಬೇತಿ ಹಮ್ಮಿಕೊಂಡಿದ್ದವು. ಈ ವೇಳೆ ದಕ್ಷಿಣ ಕೊರಿಯಾ ಹಾರಿಸಿದ ಬ್ಯಾಲಿಸ್ಟಿಕ್‌ ಕ್ಷಿಪಣಿ ವಿಫಲಗೊಂಡು ಗ್ಯಾಂಗ್‌ನ್ಯೂಂಗ್‌ ನಗರದ ಮೇಲೆ ಬಿದ್ದಿದೆ.

1950-53 ಕೊರಿಯನ್ ಯುದ್ಧವು ಶಾಂತಿ ಒಪ್ಪಂದಕ್ಕಿಂತ ಹೆಚ್ಚಾಗಿ ಕದನವಿರಾಮದಲ್ಲಿ ಕೊನೆಗೊಂಡ ನಂತರ, ದಕ್ಷಿಣ ಮತ್ತು ಉತ್ತರ ಕೊರಿಯಾಗಳು ತಾಂತ್ರಿಕವಾಗಿ ಯುದ್ಧದಲ್ಲಿ ನಿರತವಾಗಿವೆ. ಎರಡೂ ನೆರೆಹೊರೆಯವರ ನಡುವೆ ನೇರ ಸಶಸ್ತ್ರ ಘರ್ಷಣೆಗಳು ಅಪರೂಪವಾಗಿದ್ದರೂ,ದಕ್ಷಿಣ ಕೊರಿಯಾದ ಕ್ಷಿಪಣಿ ಅಪಘಾತವು, ಯುದ್ಧ ಘೋಷಣೆಯಾಗಿದೆ ಎಂಬ ವದಂತಿ ಹರಡಲು ಕಾರಣವಾಯಿತು.

ಇದು ಕ್ಷಿಪಣಿ ವೈಫಲ್ಯ ಎಂದು ಘೋಷಿಸಲು ದಕ್ಷಿಣ ಕೊರಿಯಾದ ಮಿಲಟರಿ ಬಹಳ ಸಮಯ ತೆಗೆದುಕೊಂಡಿದ್ದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಮತ್ತು ಅಪಘಾತದ ಕಾರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ದಕ್ಷಿಣ ಮತ್ತು ಉತ್ತರ ಕೊರಿಯಾ ನಡುವಿನ ಈ ಕ್ಷಿಪಣಿ ಪೈಪೋಟಿ ಜಾಗತಿಕವಾಗಿ ಗಮನ ಸೆಳೆದಿದೆ ಎಂದು ಹೇಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ