logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /   Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ, ಏನಿದು ಗಂಗಾ ವಿಲಾಸ, ಏನಿದರ ವಿಶೇಷ?

Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ, ಏನಿದು ಗಂಗಾ ವಿಲಾಸ, ಏನಿದರ ವಿಶೇಷ?

Praveen Chandra B HT Kannada

Jan 08, 2023 11:27 AM IST

Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ (SOURCED IMAGE)

    • Ganga Vilas Cruise : ಜನವರಿ 13ರಂದು ಹೊಸ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ. ದೀರ್ಘಾವದ ನದಿ ಪ್ರಯಾಣ ಹೊರಡಲು ಭಾರತ ಸಿದ್ಧವಾಗಿದ್ದು, ವಿಶ್ವದ ಅತಿ ಉದ್ದದ ನದಿ ಪ್ರಯಾಣಕ್ಕೆ ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಕ್ರೂಸ್‌ ಹಡಗು ಸುದೀರ್ಘವಾದ 50 ದಿನಗಳ ಪ್ರಯಾಣ ಕೈಗೊಳ್ಳಲಿದೆ. ಯಾನದ ಸಂದರ್ಭದಲ್ಲಿ ಈ ಕ್ರೂಸ್‌ ಹಲವು ಹೆರಿಟೇಜ್‌ ತಾಣಗಳಲ್ಲಿ ನಿಂತು ಪ್ರಯಾಣ ಮುಂದುವರೆಸಲಿದೆ.
Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ (SOURCED IMAGE)
Ganga Vilas Cruise : ವಿಶ್ವದ ದೀರ್ಘ ನದಿ ಪ್ರಯಾಣಕ್ಕೆ ಜನವರಿ 13ರಂದು ಮೋದಿ ಚಾಲನೆ (SOURCED IMAGE)

ವಾರಣಾಸಿ: ಜನವರಿ 13ರಂದು ಹೊಸ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ. ದೀರ್ಘಾವದ ನದಿ ಪ್ರಯಾಣ ಹೊರಡಲು ಭಾರತ ಸಿದ್ಧವಾಗಿದ್ದು, ವಿಶ್ವದ ಅತಿ ಉದ್ದದ ನದಿ ಪ್ರಯಾಣಕ್ಕೆ ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಕ್ರೂಸ್‌ ಹಡಗು ಸುದೀರ್ಘವಾದ 50 ದಿನಗಳ ಪ್ರಯಾಣ ಕೈಗೊಳ್ಳಲಿದೆ. ಯಾನದ ಸಂದರ್ಭದಲ್ಲಿ ಈ ಕ್ರೂಸ್‌ ಹಲವು ಹೆರಿಟೇಜ್‌ ತಾಣಗಳಲ್ಲಿ ನಿಂತು ಪ್ರಯಾಣ ಮುಂದುವರೆಸಲಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ವಿಶ್ವದ ದೀರ್ಘ ನದಿ ಪ್ರಯಾಣ ಹೊರಡುವ ಕ್ರೂಸ್‌ ಕುರಿತು ಇಲ್ಲಿದೆ ಹೆಚ್ಚಿನ ವಿವರ

1. ವಾರಣಾಸಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ಘಾಜಿಪುರ, ಬುಕ್ಸಾರ್‌ ಮತ್ತು ಪಾಟ್ನಾ ಮೂಲಕ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಒಂದು ರಾತ್ರಿ ಬಾಂಗ್ಲಾದೇಶದ ನದಿಯಲ್ಲಿ ಉಳಿದು ಬಳಿಕ ಗುವಾಹಟಿ ಮೂಲಕ ದಿಬ್ರುಗಢಕ್ಕೆ ಹಿಂತುರುಗಲಿದೆ.

2. ಗಂಗಾ ವಿಲ್ಲಾಸ್‌ ಕ್ರೂಸ್‌ ಭಾರತದ ಎರಡು ಪ್ರಮುಖ ನದಿಗಳಾದ ಗಂಗಾ ಮತ್ತು ಬ್ರಹ್ಮಪುತ್ರದಲ್ಲಿ ಪ್ರಯಾಣ ಕೈಗೊಳ್ಳಲಿದೆ.

3. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಈ ಗಂಗಾ ವಿಲಾಸ್‌ ಎಂಬ ವಿಶ್ವದ ಅತಿ ಉದ್ದದ ನದಿ ಕ್ರೂಸ್‌ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.

4. ಈ ಯಾನವು ಉತ್ತರ ಪ್ರದೇಶದ ವಾರಣಾಸಿ ಮತ್ತು ಅಸ್ಸಾಂನ ದಿಬ್ರುಗಢ ನಡುವೆ ನದಿಯಲ್ಲಿ 50 ದಿನಗಳಲ್ಲಿ 3200 ಕಿ.ಮೀ. ಕ್ರಮಿಸಲಿದೆ.

5. ಪ್ರಯಾಣದ ಸಮಯದಲ್ಲಿ ಈ ಕ್ರೂಸ್‌ ಸುಮಾರು 50ಕ್ಕೂ ಹೆಚ್ಚು ಸ್ಥಳದಲ್ಲಿ ನಿಲ್ಲಲಿದೆ. ಅಂದರೆ, ವಿಶ್ವ ಪಾರಂಪರಿಕ ತಾಣಗಳಲ್ಲಿ, ಪ್ರಮುಖ ಧಾಮಗಳಲ್ಲಿ ನಿಂತು ಪ್ರಯಾಣ ಮುಂದುವರೆಸಲಿದೆ. ಸುಂದರ್‌ ಬನ, ಕಾಝಿರಂಗ ನ್ಯಾಷನಲ್‌ ಪಾರ್ಕ್‌ ಮುಂತಾದ ಕಡೆ ನಿಂತು ಪ್ರಯಾಣ ಬೆಳೆಸಲಿದೆ. ಹಡಗು ಜನಪ್ರಿಯ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಸುಂದರಬನ್ಸ್‌ ಡೆಲ್ಟಾ ಸೇರಿದಂತೆ ಇನ್ನು ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ಶ್ರೀಮಂತ ಜೀವ ವೈವಿಧ್ಯತೆಗಳನ್ನು ಒಳಗೊಂಡ ಅಭಯಾರಣ್ಯಗಳ ಮೂಲಕ ಹಾದು ಹೋಗುತ್ತದೆ.

6. ಗಂಗಾ ವಿಲಾಸ್ ಕ್ರೂಸ್ ಸ್ವಿಟ್ಜರ್ಲೆಂಡ್‌ನ 32 ಮತ್ತು ಜರ್ಮನಿಯ ಒಬ್ಬ ಸೇರಿದಂತೆ 33 ಪ್ರವಾಸಿಗರೊಂದಿಗೆ ದಿಬ್ರುಗಢಕ್ಕೆ ಹೊರಡಲಿದೆ.

7. ಸುಮಾರು 62.5 ಮೀ(ಉದ್ದ), 12.8 ಮೀ(ಅಗಲ) ಮತ್ತು 1.35 ಮೀ (ಡ್ರಾಫ್ಟ್) ಅಳತೆಯ ಈ ಹಡಗು ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳನ್ನು ದಾಟುವ ಮೂಲಕ 3200 ಕಿಮೀ ದೂರವನ್ನು ಕ್ರಮಿಸಲಿದೆ.

8. ಈ ಪ್ರವಾಸದ ಸಮಯದಲ್ಲಿ ಪವಿತ್ರ ಗಂಗಾ ಆರತಿ, ವಿಶ್ವದ ಅತಿ ದೊಡ್ಡ ಮ್ಯಾಂಗ್ರೋವ್‌ ಕಾಡಿನ ನೈಸರ್ಗಿಕ ಅದ್ಭುತಗಳನ್ನು ಕೂಡ ನೋಡಬಹುದು. ಇನ್ನು ಭಾರತದ ಬ್ಲ್ಯಾಕ್ ಮ್ಯಾಜಿಕ್ ತೊಟ್ಟಿಲು ಎಂದೇ ಹೆಸರುವಾಸಿಯಾಗಿರುವ ಮಯೋಂಗ್‌ಗೂ ಕೂಡ ಭೇಟಿ ನೀಡಬಹುದು.

9. ಈ ಕ್ರೂಸ್‌ನೊಳಗೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಜಿಮ್‌, ಸ್ಪಾ, ಹೊರಭಾಗ ನೋಡುವ ಡಾಕ್‌ ಸೇರಿದಂತೆ ಇತರೆ ಹಲವು ಸೌಲಭ್ಯಗಳು, ಸೌಕರ್ಯಗಳು ಇವೆ.

10. ಗಂಗಾ ವಿಲಾಸ್ ಕ್ರೂಸ್ 27 ನದಿ ವ್ಯವಸ್ಥೆಗಳು ಮತ್ತು ವಿಶ್ವ ಪರಂಪರೆಯ ತಾಣಗಳು ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಪ್ರವಾಸ ತಾಣಗಳನ್ನು ಅನ್ವೇಷಣೆ ಮಾಡುತ್ತಾ 50 ದಿನಗಳ ಸುದೀರ್ಘ ನದಿ ಪ್ರವಾಸ ಕೈಗೊಳ್ಳಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ