logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rekha Singh: ಗಾಲ್ವಾನ್​ ಸಂಘರ್ಷದಲ್ಲಿ ಮಡಿದ ಯೋಧನ ಪತ್ನಿ ಭಾರತೀಯ ಸೇನೆ ಸೇರ್ಪಡೆ.. ಪೂರ್ವ ಲಡಾಖ್​ಗೆ ನಿಯೋಜನೆ

Rekha Singh: ಗಾಲ್ವಾನ್​ ಸಂಘರ್ಷದಲ್ಲಿ ಮಡಿದ ಯೋಧನ ಪತ್ನಿ ಭಾರತೀಯ ಸೇನೆ ಸೇರ್ಪಡೆ.. ಪೂರ್ವ ಲಡಾಖ್​ಗೆ ನಿಯೋಜನೆ

Meghana B HT Kannada

Apr 29, 2023 09:15 PM IST

ರೇಖಾ ಸಿಂಗ್​ ಭಾರತೀಯ ಸೇನೆ ಸೇರ್ಪಡೆ

    • Galwan Clash: ಗಾಲ್ವಾನ್​ ಸಂಘರ್ಷದಲ್ಲಿ ಮಡಿದ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್  ಅವರು ಇಂದು ( ಏ 29) ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ ಹಾಗೂ ಅವರನ್ನು ಕಳೆದ ಮೂರು ವರ್ಷಗಳಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪೂರ್ವ ಲಡಾಖ್​ಗೆ ನಿಯೋಜನೆ ಮಾಡಲಾಗಿದೆ.
ರೇಖಾ ಸಿಂಗ್​ ಭಾರತೀಯ ಸೇನೆ ಸೇರ್ಪಡೆ
ರೇಖಾ ಸಿಂಗ್​ ಭಾರತೀಯ ಸೇನೆ ಸೇರ್ಪಡೆ

2020ರ ಜೂನ್​ನಲ್ಲಿ ನಡೆದ ಗಾಲ್ವಾನ್​ ಸಂಘರ್ಷವನ್ನು (Galwan Clash) ಭಾರತೀಯರು ಮರೆಯಲು ಅಸಾಧ್ಯ. ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಜೊತೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು. ಇದೀಗ ಹುತಾತ್ಮ ಯೋಧರೊಬ್ಬರ ಪತ್ನಿ ಭಾರತೀಯ ಸೇನೆಗೆ (Indian Army) ಸೇರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಗಾಲ್ವಾನ್​ ಸಂಘರ್ಷದಲ್ಲಿ ಮಡಿದ ನಾಯಕ್ ದೀಪಕ್ ಸಿಂಗ್ (Naik Deepak Singh) ಅವರ ಪತ್ನಿ ರೇಖಾ ಸಿಂಗ್ (Rekha Singh) ಅವರು ಇಂದು ( ಏ 29) ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ ಹಾಗೂ ಅವರನ್ನು ಕಳೆದ ಮೂರು ವರ್ಷಗಳಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪೂರ್ವ ಲಡಾಖ್​ಗೆ ನಿಯೋಜನೆ ಮಾಡಲಾಗಿದೆ.

“ಮರಣೋತ್ತರ ವೀರಚಕ್ರ ಪಡೆದ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ, ಮಹಿಳಾ ಕೆಡೆಟ್ ರೇಖಾ ಸಿಂಗ್ ಚೆನ್ನೈನಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಗೆ ನೇಮಕಗೊಂಡರು. ದೀಪಕ್ ಅವರು ಗಾಲ್ವಾನ್ ಘರ್ಷಣೆಯ ಸಮಯದಲ್ಲಿ ಅತ್ಯುನ್ನತ ತ್ಯಾಗವನ್ನು ಮಾಡಿದ್ದರು” ಎಂದು ಭಾರತೀಯ ಸೇನೆ ಟ್ವೀಟ್​ ಮಾಡಿದೆ.

ಬಿಹಾರ ರೆಜಿಮೆಂಟ್‌ನ 16 ನೇ ಬೆಟಾಲಿಯನ್‌ನ ಯೋಧನಾಗಿದ್ದ ನಾಯಕ್ ದೀಪಕ್ ಸಿಂಗ್ ಅವರು ಗಾಲ್ವಾನ್​ ಕಣಿವೆಯಲ್ಲಿ ಜೂನ್ 15, 2020 ರಂದು ಚೀನೀ ಸೈನಿಕರ ವಿರುದ್ಧ ಹೋರಾಡುವಾಗ ಮೃತಪಟ್ಟಿದ್ದರು. 2021ರ ನವೆಂಬರ್​ನಲ್ಲಿ ಅವರಿಗೆ ಮರಣೋತ್ತರವಾಗಿ ವೀರ ಚಕ್ರವನ್ನು ನೀಡಲಾಯಿತು. ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರದ ನಂತರ ಭಾರತದ ಮೂರನೇ ಅತ್ಯುನ್ನತ ಮಿಲಿಟರಿ ಗೌರವ ಇದಾಗಿದೆ.

ಭಾರತದ ಅಧಿಕಾರಿಗಳ ಮಾಹಿತಿ ಪ್ರಕಾರ ಗಾಲ್ವಾನ್​ ಸಂಘರ್ಷದಲ್ಲಿ ಭಾರತೀಯ ಸೇನೆಗಿಂತ ಎರಡು ಪಟ್ಟು ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ. ಆದರೆ ಚೀನಾ ಕೇವಲ ತನ್ನ ನಾಲ್ಕು ಸೈನಿಕರು ಕೊಲ್ಲಲ್ಪಟ್ಟರು ಎಂದು ಅಧಿಕೃತವಾಗಿ ಹೇಳಿಕೊಂಡಿದೆ.

ಚೆನ್ನೈ ಮೂಲದ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಿಂದ ಉತ್ತೀರ್ಣರಾದ ಐವರು ಮಹಿಳೆಯರನ್ನು ಮೊಟ್ಟಮೊದಲ ಬಾರಿಗೆ ಫಿರಂಗಿದಳದ ರೆಜಿಮೆಂಟ್‌ಗೆ ಸೇರಿಸಲಾಗಿದೆ. ಐವರಲ್ಲಿ ಮೂವರನ್ನು ಚೀನಾ ಗಡಿ ಕಾಯುವ ಘಟಕಗಳಿಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯುದ್ಧದಲ್ಲಿ ಅಥವಾ ಕರ್ತವ್ಯದ ಸಾಲಿನಲ್ಲಿ ಮಡಿದ ಯೋಧರ ಪತ್ನಿಯರು ತಮ್ಮ ಪತಿಯಂದಿರ ಹೆಜ್ಜೆಗಳನ್ನು ಅನುಸರಿಸಲು, ಅವರನ್ನು ಅಧಿಕಾರಿಗಳನ್ನಾಗಿ ಮಾಡಲು ಅರ್ಹರಾಗಿರುವ ಮಹಿಳೆಯರನ್ನು ಭಾರತೀಯ ಸೇನೆ ಪ್ರೋತ್ಸಾಹಿಸುತ್ತಿದೆ ಮತ್ತು ಅವರ ಹೊಸ ಆರಂಭಕ್ಕೆ ಮಾರ್ಗದರ್ಶನವನ್ನು ನೀಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ