logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Re-kyc Rbi Rule And Process: ಮರು ಕೆವೈಸಿ ಮಾಡಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ; ಆರ್‌ಬಿಐ ನಿಯಮ ಏನು ಹೇಳುತ್ತೆ ಚೆಕ್‌ ಮಾಡಿ

Re-KYC RBI rule and process: ಮರು ಕೆವೈಸಿ ಮಾಡಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ; ಆರ್‌ಬಿಐ ನಿಯಮ ಏನು ಹೇಳುತ್ತೆ ಚೆಕ್‌ ಮಾಡಿ

HT Kannada Desk HT Kannada

Dec 09, 2022 09:10 AM IST

ಭಾರತೀಯ ರಿಸರ್ವ್‌ ಬ್ಯಾಂಕ್‌

  • Re-KYC RBI rule and process: ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದರು. ಅದರ ವಿವರ ಇಲ್ಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌
ಭಾರತೀಯ ರಿಸರ್ವ್‌ ಬ್ಯಾಂಕ್‌ (HT_PRINT)

ನಿರ್ದಿಷ್ಟ ಮಧ್ಯಂತರಗಳಲ್ಲಿ ಸಾಲದಾತರು ಬ್ಯಾಂಕಿನ ದಾಖಲೆಗಳನ್ನು ನವೀಕರಿಸುವುದಕ್ಕಾಗಿ ಮರು ಕೆವೈಸಿ ಮಾಡುವಂತೆ ಕೇಳುತ್ತಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿಗಳ ಅನುಸಾರವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಯಾವುದೇ ವೈಯಕ್ತಿಕ ಅಥವಾ ಸಂಪರ್ಕ ಮಾಹಿತಿಯು ಬದಲಾಗಿದ್ದರೆ, ಗ್ರಾಹಕರು ಮರು-ಕೆವೈಸಿ ಮೂಲಕ ದಾಖಲೆಗಳನ್ನು ನವೀಕರಿಸಬಹುದು.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ವಿತ್ತೀಯ ನೀತಿ ಘೋಷಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸುತ್ತ ಈ ವಿಚಾರ ಹೇಳಿದ್ದರು.

ಬ್ಯಾಂಕುಗಳು ಕೂಡ ಗ್ರಾಹಕರನ್ನು ಬ್ಯಾಂಕಿಗೆ ಆಹ್ವಾನಿಸದೇ ಮರು-ಕೆವೈಸಿ ಪ್ರಕ್ರಿಯೆ ಪೂರೈಸುವುದು ಸಾಧ್ಯವಿದೆ. ಒಂದೊಮ್ಮೆ ಬ್ಯಾಂಕುಗಳು ಈ ವಿಚಾರಕ್ಕಾಗಿ ಗ್ರಾಹಕರನ್ನು ಬ್ಯಾಂಕ್‌ ಶಾಖೆಗೆ ಕರೆಯಿಸಿಕೊಂಡರೆ ಆಗ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಈ ಕುರಿತು ದೂರು ಸಲ್ಲಿಸಬಹುದು ಎಂದು ಶಕ್ತಿಕಾಂತ ದಾಸ್‌ ಸ್ಪಷ್ಟಪಡಿಸಿದ್ದಾರೆ.

ಏನಿದು ಮರು-ಕೆವೈಸಿ? (What is re-KYC?)

ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಗಸೂಚಿಗಳಿಗೆ ಅನುಸಾರವಾಗಿ ಸಾಲದಾತರು ಬ್ಯಾಂಕಿನ ದಾಖಲೆಗಳನ್ನು ನವೀಕರಿಸಲು ನಿರ್ದಿಷ್ಟ ಮಧ್ಯಂತರಗಳಲ್ಲಿ ಮರು-ಕೆವೈಸಿ ಕೇಳುವುದು ವಾಡಿಕೆ. ವೈಯಕ್ತಿಕ ಅಥವಾ ಸಂಪರ್ಕ ಮಾಹಿತಿ ಬದಲಾಗಿದ್ದರೆ ಗ್ರಾಹಕರು ಕೂಡ ಮರು-ಕೆವೈಸಿ ಮೂಲಕ ದಾಖಲೆಗಳನ್ನು ನವೀಕರಿಸಬಹುದು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕೆವೈಸಿ ನಿಯಮ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಳು ತಮ್ಮ ಖಾತೆದಾರರ ಗ್ರಾಹಕ ಗುರುತಿನ ದಾಖಲೆಗಳನ್ನು ನಿಯತಕಾಲಿಕವಾಗಿ ನವೀಕರಿಸಬೇಕಾಗುತ್ತದೆ.

ಖಾತೆಯನ್ನು ತೆರೆಯುವಾಗ ಕೈಗೊಳ್ಳಲಾದ KYC ಜತೆಗೆ, ಗ್ರಾಹಕರು ಮರು-ಕೆವೈಸಿ ಪ್ರಕ್ರಿಯೆ ಮಾಡಬೇಕಾಗಬಹುದು. ಅಂತಹ ಸನ್ನಿವೇಶದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಮರು-ಕೆವೈಸಿ ಅವಧಿ ಎಷ್ಟು? (What is the period for re-KYC?)

ಬ್ಯಾಂಕಿಂಗ್ ತಜ್ಞರ ಪ್ರಕಾರ, ಕೆವೈಸಿಯ ನಿಯತಕಾಲಿಕ ಅಪ್ಡೇಟ್‌ನ ಸಮಯದ ಮಧ್ಯಂತರಗಳು ಅಸ್ತಿತ್ವದಲ್ಲಿರುವ ಹೆಚ್ಚಿನ, ಮಧ್ಯಮ ಮತ್ತು ಕಡಿಮೆ-ಅಪಾಯದ ಗ್ರಾಹಕರಿಗೆ ಕ್ರಮವಾಗಿ 2, 8 ಮತ್ತು 10 ವರ್ಷಗಳಾಗಿರುತ್ತವೆ.

ಒಂದೊಮ್ಮೆ ಕೆವೈಸಿ ಮಾಡಿಸಿಕೊಳ್ಳದೇ ಇದ್ದರೆ ಏನಾಗಬಹುದು? ಆರ್‌ಬಿಐ ನಿಯಮಗಳ ಪ್ರಕಾರ, ನಿಯತಕಾಲಿಕ ನವೀಕರಣಕ್ಕಾಗಿ ಗ್ರಾಹಕರು ಕೆವೈಸಿ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಖಾತೆಯನ್ನು ಮುಚ್ಚುವ ಸಂಪೂರ್ಣ ಹಕ್ಕು ಬ್ಯಾಂಕ್‌ಗೆ ಇದೆ. ಆದಾಗ್ಯೂ, ಕೇಂದ್ರೀಯ ಕೆವೈಸಿ ರಿಜಿಸ್ಟ್ರಿ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಗುರುತಿಸುವಿಕೆಯ ಸಂಖ್ಯೆಯನ್ನು ಇತರ ಬ್ಯಾಂಕ್‌ಗಳೊಂದಿಗೆ ಹಂಚಿಕೊಳ್ಳಬಹುದಾದರೆ, ನಂತರ ಮರು-ಕೆವೈಸಿ ಮಾಡಬೇಕಾಗಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ