logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Remote Voting In India: ವಲಸೆ ಕಾರ್ಮಿಕರ ಮತದಾನ ಅನುಕೂಲಕ್ಕೆ ʻರಿಮೋಟ್‌ ಮತಗಟ್ಟೆʼ; ಚುನಾವಣಾ ಆಯೋಗದಿಂದ ವಿಶೇಷ ಪ್ರಯತ್ನ

Remote voting in India: ವಲಸೆ ಕಾರ್ಮಿಕರ ಮತದಾನ ಅನುಕೂಲಕ್ಕೆ ʻರಿಮೋಟ್‌ ಮತಗಟ್ಟೆʼ; ಚುನಾವಣಾ ಆಯೋಗದಿಂದ ವಿಶೇಷ ಪ್ರಯತ್ನ

HT Kannada Desk HT Kannada

Dec 29, 2022 02:39 PM IST

ಭಾರತದ ಚುನಾವಣಾ ಆಯೋಗ

  • Remote voting in India: ಸಾರ್ವಜನಿಕ ವಲಯದ ಉದ್ಯಮ ಅಭಿವೃದ್ಧಿಪಡಿಸಿರುವ ಬಹು-ಕ್ಷೇತ್ರದ ರಿಮೋಟ್ ಇವಿಎಂ ಇದಾಗಿದೆ. ಇದನ್ನು ಒಂದೇ ರಿಮೋಟ್ ಮತಗಟ್ಟೆಯಿಂದ 72 ಕ್ಷೇತ್ರಗಳ ಮತದಾನವನ್ನು ನಿರ್ವಹಿಸಬಹುದು ಎಂದು ಭಾರತದ ಚುನಾವಣಾ ಆಯೋಗ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಭಾರತದ ಚುನಾವಣಾ ಆಯೋಗ
ಭಾರತದ ಚುನಾವಣಾ ಆಯೋಗ (HT_PRINT)

ಭಾರತದ ಚುನಾವಣಾ ಆಯೋಗವು ದೇಶೀಯ ವಲಸೆ ಮತದಾರರಿಗಾಗಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಜನವರಿ 16 ರಂದು ಈ ಮತ ಯಂತ್ರದ ಕಾರ್ಯನಿರ್ವಹಣೆಯ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ಆಯೋಗವು, ರಾಜಕೀಯ ಪಕ್ಷಗಳನ್ನು ಅದಕ್ಕೆ ಆಹ್ವಾನಿಸಿದೆ.

ಚುನಾವಣಾ ಸಮಿತಿಯು ರಿಮೋಟ್ ಮತದಾನದ ಪರಿಕಲ್ಪನೆಯ ಟಿಪ್ಪಣಿಯನ್ನು ಕೂಡ ಪ್ರಕಟಿಸಿದೆ. ಅದನ್ನು ಕಾರ್ಯಗತಗೊಳಿಸುವಲ್ಲಿ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೇಳಲಾಗಿದೆ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಸಾರ್ವಜನಿಕ ವಲಯದ ಉದ್ಯಮ ಅಭಿವೃದ್ಧಿಪಡಿಸಿರುವ ಬಹು-ಕ್ಷೇತ್ರದ ರಿಮೋಟ್ ಇವಿಎಂ ಇದಾಗಿದೆ. ಇದನ್ನು ಒಂದೇ ರಿಮೋಟ್ ಮತಗಟ್ಟೆಯಿಂದ 72 ಕ್ಷೇತ್ರಗಳ ಮತದಾನವನ್ನು ನಿರ್ವಹಿಸಬಹುದು ಎಂದು ಆಯೋಗ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ANI ವರದಿ ಪ್ರಕಾರ, ವಿವಿಧ ಮಧ್ಯಸ್ಥಗಾರರ ಪ್ರತಿಕ್ರಿಯೆ ಮತ್ತು ಮೂಲಮಾದರಿಯ ಪ್ರಾತ್ಯಕ್ಷಿಕೆಯ ಆಧಾರದ ಮೇಲೆ ಆಯೋಗವು ರಿಮೋಟ್ ಮತದಾನ ವಿಧಾನವನ್ನು ಅಳವಡಿಸುವ ಪ್ರಕ್ರಿಯೆಯನ್ನು ಸೂಕ್ತವಾಗಿ ಮುಂದುವರಿಸಲಿದೆ.

"ಯುವಕರು ಮತ್ತು ನಗರ ನಿರಾಸಕ್ತಿಯ ಮೇಲೆ ಗಮನ ಕೇಂದ್ರೀಕರಿಸಿದ ನಂತರ, ರಿಮೋಟ್ ಮತದಾನವು ಚುನಾವಣಾ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯನ್ನು ಬಲಪಡಿಸುವ ಪರಿವರ್ತನೆಯ ಉಪಕ್ರಮವಾಗಬಹುದು" ಎಂದು ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ಏಜೆನ್ಸಿಗಳ ಮಾಹಿತಿ ಆಧರಿಸಿದ ಸುದ್ದಿ)

ಗಮನಾರ್ಹ ಸುದ್ದಿಗಳು

Rules for used car market: ಯೂಸ್ಡ್‌ ಕಾರು ಮಾರುಕಟ್ಟೆ ನಿಯಮ ಅಂತಿಮಗೊಳಿಸಿದೆ ಸರ್ಕಾರ; ಯಾಕೆ ಈ ನಿಯಮ?

ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರುಕಟ್ಟೆ ನಿಯಂತ್ರಣದ ಮಾರ್ಗಸೂಚಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಂತಿಮಗೊಳಿಸಿದೆ. ಇದು ಸೆಕೆಂಡ್‌ ಹ್ಯಾಂಡ್‌ ಕಾರು ಮಾರುಕಟ್ಟೆ ಎದುರಿಸುತ್ತಿರುವ ನಿಯಂತ್ರಕ ಲೋಪದೋಷಗಳನ್ನು ನಿವಾರಿಸಲು ಸಹಕಾರಿ. ಇದೇ ಲೋಪಗಳನ್ನು ಮುಂದಿಟ್ಟುಕೊಂಡು ವ್ಯವಹರಿಸುವ ವಂಚಕ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸರ್ಕಾರದ ಈ ನಡೆಗೆ ಗಮನಸೆಳೆದಿದೆ. ಮೂರು ತಿಂಗಳ ಹಿಂದೆ ಈ ಮಾರ್ಗಸೂಚಿಯ ಕರಡನ್ನು ಪ್ರಕಟಿಸಿದ್ದ ಸರ್ಕಾರ, ಸಂಬಂಧಪಟ್ಟವರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಿತ್ತು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Vaikunta Dwara Darshanam: ಟಿಟಿಡಿ ಅಲರ್ಟ್‌, ಜ.2ರಿಂದ 11ರ ತನಕ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ; ಜ.1ರಿಂದ ಸರ್ವದರ್ಶನ ಟಿಕೆಟ್‌ ಉಚಿತ

Vaikunta Dwara Darshanam: ತಿರುಪತಿ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿ ದೇವರ ವೈಕುಂಠ ದ್ವಾರ ದರ್ಶನ ಜನವರಿ 2ರಿಂದ 11ರ ತನಕ ಲಭ್ಯವಿರಲಿದೆ. ಇದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಆಡಳಿತ ಮಂಡಳಿ ಮಾಡುತ್ತಿದ್ದು, ಇದರ ಮಾಹಿತಿಯನ್ನು ಹಂಚಿಕೊಂಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Tirumala Darshan pattern: ತಿರುಮಲ ಭಕ್ತರ ದರ್ಶನ ಪದ್ಧತಿಯಲ್ಲಿ ಬದಲಾವಣೆ ಇಲ್ಲ; ಟಿಟಿಡಿ ಚೇರ್ಮನ್‌ ಸ್ಪಷ್ಟೀಕರಣ

ಆನಂದ ನಿಲಯಂಗೆ ಈಗಿರುವ ಚಿನ್ನದ ಹೊದಿಕೆ ತೆಗೆದು ಹೊಸ ಚಿನ್ನದ ಹೊದಿಕೆ (ಗೋಲ್ಡ್‌ ಪ್ಲೇಟಿಂಗ್‌) ಹೊದಿಸುವ ತೀರ್ಮಾನವನ್ನುತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಇತ್ತೀಚಿನ ಸಭೆಯಲ್ಲಿ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಇರಲ್ಲ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಟಿಟಿಡಿ ಸ್ಪಷ್ಟೀಕರಣ ನೀಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ