logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  S Jaishankar: 'ಭಾರತ ಯಾರ ಬಲವಂತಕ್ಕೂ ಜಗ್ಗಲ್ಲ'; ಪಾಕ್ ಮತ್ತು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದ ಜೈಶಂಕರ್

S Jaishankar: 'ಭಾರತ ಯಾರ ಬಲವಂತಕ್ಕೂ ಜಗ್ಗಲ್ಲ'; ಪಾಕ್ ಮತ್ತು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದ ಜೈಶಂಕರ್

HT Kannada Desk HT Kannada

Jan 15, 2023 09:52 AM IST

ವಿದೇಶಾಂಗ ಸಚಿವ ಎಸ್ ಜೈಶಂಕರ್

    • ಇಂದು ಭಾರತದ ಬಗ್ಗೆ ಜಗತ್ತಿಗೆ ಗೌರವವಿದೆ. ಭಾರತವು ಯಾರ ಬಲವಂತಕ್ಕೂ ಬಗ್ಗದ ರಾಷ್ಟ್ರವೆಂದು ಜಗತ್ತು ನೋಡುತ್ತದೆ. ಭಾರತ ತನ್ನ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ, ಎಂದು ಜೈಶಂಕರ್‌ ಹೇಳಿದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್

ಭಾರತದ ದೀರ್ಘ ಸಹನೆಯ ಮನೋಭಾವವು ಭಯೋತ್ಪಾದನೆಯನ್ನು ಮಟ್ಟಹಾಕಬೇಕಾದ ಅಪಾಯವನ್ನು ಸೃಷ್ಟಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಭಯೋತ್ಪಾದನೆ ಹಾಗೂ ಗಡಿ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾಗೆ ತಕ್ಕ ಸಂದೇಶ ರವಾನಿಸಿರುವ ಅವರು, ಉರಿ ಮತ್ತು ಬಾಲಾಕೋಟ್‌ನ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ತುಗ್ಲಕ್ ಮ್ಯಾಗಜಿನ್‌ನ 53ನೇ ವಾರ್ಷಿಕೋತ್ಸವದ ದಿನವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ನಾವು ಯಾವ ಬೆದರಿಕೆಗಳಿಗೂ ಜಗ್ಗಲ್ಲ. ನಮ್ಮನ್ನು ಯಾರಿಂದಲೂ ಬಲವಂತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಭಯೋತ್ಪಾದನೆಗೆ ಭಾರತದ ಉತ್ತರ ಇಷ್ಟೇ... ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ ದೃಢವಾಗಿದೆ ಎಂದು ಅವರಿ ಹೇಳಿದರು.

"ಉತ್ತರ ಗಡಿಗಳಲ್ಲಿ, ಚೀನಾ ಇಂದು ನಮ್ಮ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ. ತನ್ನ ಪಡೆಗಳನ್ನು ತರುವ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಕೋವಿಡ್ ಹೊರತಾಗಿಯೂ, ಅವರಿಗೆ ನಮ್ಮ ಉತ್ತರ ಪ್ರಬಲ ಮತ್ತು ದೃಢವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಿಯೋಜಿಸಲಾದ ನಮ್ಮ ಪಡೆಗಳು, ನಮ್ಮ ಗಡಿಗಳನ್ನು ರಕ್ಷಿಸುತ್ತವೆ. ತೀವ್ರತರವಾದ ಭೂಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ಇದು ಇಂದಿಗೂ ಮುಂದುವರೆದಿದೆ" ಎಂದು ಜೈಶಂಕರ್ ಹೇಳಿದ್ದಾರೆ.

ಇಂದು ಭಾರತದ ಬಗ್ಗೆ ಜಗತ್ತಿಗೆ ಗೌರವವಿದೆ. ಭಾರತವು ಯಾರ ಬಲವಂತಕ್ಕೂ ಬಗ್ಗದ ರಾಷ್ಟ್ರವೆಂದು ಜಗತ್ತು ನೋಡುತ್ತದೆ. ಭಾರತ ತನ್ನ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ, ಎಂದು ಅವರು ಹೇಳಿದರು.

"ರಾಷ್ಟ್ರೀಯ ಯೋಗಕ್ಷೇಮವು ಹಲವಾರು ಅಂಶಗಳನ್ನು ಹೊಂದಿವೆ. ಅದರಲ್ಲಿ ರಾಷ್ಟ್ರೀಯ ಭದ್ರತೆಯು ಮೂಲಭೂತ ಅಡಿಪಾಯವಾಗಿದೆ. ಎಲ್ಲಾ ದೇಶಗಳು ಈ ವಿಷಯದಲ್ಲಿ ಸವಾಕು ಎದುರಿಸುತ್ತಿವೆ. ಆದರೆ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ವಿಶೇಷವಾಗಿ ಭಯೋತ್ಪಾದನೆಯಂತಹ ಸಮಸ್ಯೆಗಳಿಂದಾಗಿ ಬಹುಶಃ ನಾವು ಬೇರೆ ದೇಶಗಳಿಗಿಂತ ಹೆಚ್ಚಿನ ಸಮಸ್ಯೆಗಳ ಪಾಲನ್ನು ಹೊಂದಿದ್ದೇವೆ. ಆದಾಗ್ಯೂ, ನಮ್ಮ ದೀರ್ಘಕಾಲಿಕ ಸಹನೆಯು ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸುವ ಅಪಾಯವನ್ನು ಸೃಷ್ಟಿಸಿದೆ. ಅದಕ್ಕಾಗಿಯೇ ಉರಿ ಮತ್ತು ಬಾಲಾಕೋಟ್ ಮೂಲಕ ಹೆಚ್ಚು ಅಗತ್ಯವಿರುವ ಸಂದೇಶವನ್ನು ಕಳುಹಿಸಲಾಗಿದೆ" ಎಂದು ವಿದೇಶಾಂಗ ಸಚಿವರು ಹೇಳಿದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಾರತವು ಜಗತ್ತಿಗೆ ಲಸಿಕೆಗಳನ್ನು ತಯಾರಿಸಿ ಸರಬರಾಜು ಮಾಡುವಲ್ಲಿ ಯಶಸ್ವಿಯಾದಾಗ ಸರ್ಕಾರವು ವಿಸ್ತರಿಸಿದ ಯೋಜನೆಗಳ ಕುರಿತು ಮಾತನಾಡಿದ ಜೈಶಂಕರ್, "ನನ್ನ ವಿದೇಶ ಪ್ರವಾಸದ ಸಮಯದಲ್ಲಿ, ನಾನು ನಮ್ಮ ದೇಶದ ಲಸಿಕೆಗಳು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸರಬರಾಜು ಮಾಡಲ್ಪಟ್ಟಿವೆ ಮತ್ತು ನಮ್ಮ ಸರ್ಕಾರದ ಆಡಳಿತದ ಬಗೆಗಿನ ಆಸಕ್ತಿಯ ಮಾತುಗಳನ್ನು ಬೇರೆ ದೇಶಗಳ ವಿದೇಶಾಂಗ ಸಚಿವರ ಬಾಯಿಂದ ಕೇಳಿದೆ. ನಮ್ಮಲ್ಲೂ ಕೆಲವು ಸಮಸ್ಯೆಗಳಿವೆ ಎಂದು ಅವರು ನನಗೆ ಹೇಳಿದರು. ಆದರೆ ಒಬ್ಬರೇ ಮೋದಿ (ಪ್ರಧಾನಿ) ಇರುವುದರಿಂದ, ನಾನು ತಂತ್ರಜ್ಞಾನದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಅವರಿಗೆ ತಿಳಿಸಿದೆ" ಎಂದು ಜೈಶಂಕರ್‌ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ