logo
ಕನ್ನಡ ಸುದ್ದಿ  /  Nation And-world  /  Sharad Yadav Passed Away, Former Union Minister, Prominent Socialist Leader Dies At 75

Sharad Yadav passes Away: ಆರ್‌ಜೆಡಿ ಮುಖಂಡ, ಕೇಂದ್ರದ ಮಾಜಿ ಸಚಿವ ಶರದ್‌ ಯಾದವ್‌ ನಿಧನ

HT Kannada Desk HT Kannada

Jan 13, 2023 05:46 AM IST

Sharad Yadav passes Away: ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ನಿಧನ

    • Sharad Yadav passes Away: ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಶರದ್‌ ಯಾದವ್‌ (75) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶರದ್‌ ಯಾದವ್‌ ಅವರು ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Sharad Yadav passes Away: ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ನಿಧನ
Sharad Yadav passes Away: ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ನಿಧನ (PTI)

ನವದೆಹಲಿ: ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಶರದ್‌ ಯಾದವ್‌ (75) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶರದ್‌ ಯಾದವ್‌ ಅವರು ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

"ಪಪ್ಪ ನಹೀ ಹೇ" ಎಂದು ಅವರ ಮಗಳು ತನ್ನ ತಂದೆಯ ಮರಣ ವಾರ್ತೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. "ಗುರುವಾರ ರಾತ್ರಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆʼʼ ಎಂದು ಶರದ್‌ ಯಾದವ್‌ ಪುತ್ರಿ ಸುಭಾಷಿನಿ ಯಾದವ್‌ ತಿಳಿಸಿದ್ದಾರೆ.

ನಿನ್ನೆ ಅವರು ಪ್ರಜ್ಞೆ ತಪ್ಪಿದ್ದರು. ಬಳಿಕ ಫೋರ್ಟಿಸ್‌ ಆಸ್ಪತ್ರೆಯ ಫೋರ್ಟಿಸ್‌ ಮೊಮೊರಿಯಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ದಾಖಲಿಸಲಾಗಿತ್ತು. "ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ಸೇರಿಸುವ ಸಮಯದಲ್ಲಿ ನಾಡಿ ಮಿಡಿತ ಸ್ಥಗಿತಗೊಂಡಿತ್ತು. ರಕ್ತದ ಪರಿಚಲನೆ ಸ್ಥಗಿತಗೊಂಡಿತ್ತು. ಹಲವು ತುರ್ತು ಚಿಕಿತ್ಸೆಗಳನ್ನು ನಡೆಸಲಾಯಿತು. ರಾತ್ರಿ 10.19 ಗಂಟೆಗೆ ಶರದ್‌ ಯಾದವ್ ಮೃತಪಟ್ಟಿರುವುದನ್ನು ಘೋಷಿಸಲಾಯಿತುʼʼ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಶರದ್‌ ಯಾದವ್ ನಿಧನ ವಾರ್ತೆಯಿಂದ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ಶರದ್‌ ಯಾದವ್‌ ಅವರು ಬಿಹಾರದ ಪ್ರಭಾವಿ ರಾಜಕಾರಣಿಯಾಗಿದ್ದರು. ಇವರು ಮಧ್ಯಪ್ರದೇಶದ ಹೊಶಂಗಾಬಾದ್‌ ಜಿಲ್ಲೆಯ ಬಬೈ ಗ್ರಾಮದಲ್ಲಿ ಕಿಶೋರ್‌ ಯಾದವ್‌ ಮತ್ತು ಸುಮಿತ್ರಾ ಯಾದವ್‌ ಸುಪುತ್ರರಾಗಿ 1947ರ ಜುಲೈ 1ರಂದು ಜನಿಸಿದರು. ಇವರು 1974ರ ಉಪಚುನಾವಣೆಯ ವೇಳೆ ಲೋಕಸಭೆಗೆ ಆಯ್ಕೆಯಾಗಿದ್ದರು. ಇವರು ಲೋಕಸಭೆಗೆ ಏಳು ಭಾರಿ ಆಯ್ಕೆಯಾಗಿದ್ದರು. ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು.

ಇವರು ಜನತಾದಳ ಪಕ್ಷದ ರಾಷ್ಟ್ರೀಯ ಸ್ಥಾಪಕರು. 2004ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿತೀಶ್ ಕುಮಾರ್ ನೆರವಿನಿಂದ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಲೋಕತಾಂತ್ರಿಕ ಜನತಾದಳ ಆರಂಭಿಸಿದ್ದರು. ನಿತೀಶ್‌ ಜತೆ ಸಂಬಂಧ ಹಾಳಾದ ಕಾರಣ ಈ ಪಕ್ಷ ಆರಂಭಿಸಿದರು. ಕಳೆದ ವರ್ಷ ಎಲ್‌ಜೆಡಿ ಆರ್‌ಜೆಡಿ ವಿಲೀನವಾಗಿತ್ತು.

1969-70, 1972 ಮತ್ತು 1975 ರಲ್ಲಿ ಎಂಎಸ್‌ಐಎ ಅಡಿಯಲ್ಲಿ ಬಂಧಿತರಾಗಿದ್ದರು. ಅನೇಕ ರಾಜಕೀಯ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು. ಡಾ. ರಾಮ್ ಮನೋಹರ್ ಲೋಹಿಯಾ ಅವರ ವಿಚಾರಗಳಿಂದ ಪ್ರೇರಿತರಾಗಿ ಇವರು ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದರು. ಇದು ಇವರ ರಾಜಕೀಯ ಪ್ರವೇಶಕ್ಕೂ ಕಾರಣವಾಯಿತು.

ವಿ.ಪಿ.ಸಿಂಗ್‌, ಅಟಲ್‌ ಬಿಹಾರಿ ವಾಜಪೇಯಿರವರ ಸರ್ಕಾರದಲ್ಲಿ ಕೇಂದ್ರದ ಜವಳಿ ಮತ್ತು ಆಹಾರ ಸಂಸ್ಕರಣಾ, ಕಾರ್ಮಿಕ ಇಲಾಖೆ, ನಾಗರಿಕ ವಿಮಾನಯಾನ, ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಇವರು ಜಬಲ್‌ಪುರದ ಸರಕಾರಿ ವಿಜ್ಞಾನ ಕಾಲೇಜಿನ ಶಾಖೆಯಾದ ರಾಬರ್ಟ್‌ಸನ್‌ ಕಾಲೇಜಿನಲ್ಲಿ ಬ್ಯಾಚುಲರ್‌ ಆಫ್‌ ಸೈನ್ಸ್‌ ಪದವಿ ಪಡೆದಿದ್ದಾರೆ. ಜಬಲ್‌ಪುರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಕೃಷಿಕರಾಗಿ, ಶಿಕ್ಷಣ ತಜ್ಞರಾಗಿ, ಎಂಜಿನಿಯರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ರೇಖಾ ಯಾದವ್‌ ಅವರನ್ನು 1989ರ ಫೆಬ್ರವರಿ 15ರಂದು ವಿವಾಹವಾಗಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು