logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nasa Astronomy Picture: ನಾಸಾದ ಈ ದಿನದ ಖಗೋಳ ಚಿತ್ರ, 1360 ಜ್ಯೋತಿರ್ವರ್ಷ ದೂರದಲ್ಲಿ ಕಂಡ ಕಣ್ಮನ ಸೆಳೆಯುವ ನೀಹಾರಿಕೆ

NASA Astronomy Picture: ನಾಸಾದ ಈ ದಿನದ ಖಗೋಳ ಚಿತ್ರ, 1360 ಜ್ಯೋತಿರ್ವರ್ಷ ದೂರದಲ್ಲಿ ಕಂಡ ಕಣ್ಮನ ಸೆಳೆಯುವ ನೀಹಾರಿಕೆ

Praveen Chandra B HT Kannada

May 30, 2023 02:26 PM IST

NASA Astronomy Picture: ನಾಸಾದ ಈ ದಿನದ ಖಗೋಳ ಚಿತ್ರ, 1360 ಜ್ಯೋತಿರ್ವರ್ಷ ದೂರದಲ್ಲಿ ಕಂಡ ಕಣ್ಮನ ಸೆಳೆಯುವ ನೀಹಾರಿಕೆ

  • NASA Astronomy Picture of the Day : ಇಂದು ನಾಸಾ ಪ್ರಕಟಿಸಿದ ಚಿತ್ರವು ನೆಬ್ಯುಲಾ ಎಂ 27. ಇದನ್ನು ಡಂಬ್ಬೆಲ್ ನೆಬ್ಯುಲಾ ಎಂದೂ ಕರೆಯುತ್ತಾರೆ. ಇದು ವಲ್ಪೆಕುಲಾ ನಕ್ಷತ್ರಪುಂಜದ ಕಡೆಗೆ ಸುಮಾರು 1360 ಜ್ಯೂತಿರ್ವರ್ಷ ದೂದಲ್ಲಿದೆ.

NASA Astronomy Picture: ನಾಸಾದ ಈ ದಿನದ ಖಗೋಳ ಚಿತ್ರ, 1360 ಜ್ಯೋತಿರ್ವರ್ಷ ದೂರದಲ್ಲಿ ಕಂಡ ಕಣ್ಮನ ಸೆಳೆಯುವ ನೀಹಾರಿಕೆ
NASA Astronomy Picture: ನಾಸಾದ ಈ ದಿನದ ಖಗೋಳ ಚಿತ್ರ, 1360 ಜ್ಯೋತಿರ್ವರ್ಷ ದೂರದಲ್ಲಿ ಕಂಡ ಕಣ್ಮನ ಸೆಳೆಯುವ ನೀಹಾರಿಕೆ (NASA/Patrick A. Cosgrove)

ಖಗೋಳ ಪ್ರಿಯರಿಗೆ ಆಕಾಶವೇ ಸಿನಿಮಾ ಥಿಯೇಟರ್‌. ಆಕಾಶ ನೋಡುತ್ತ ನಿಮಿಷ, ಗಂಟೆಗಳ ಕಾಲ ಕಾಲ ಮೈಮರೆಯುತ್ತಾರೆ. ಈ ದಿಗಂತದಲ್ಲಿ ಅಗಣಿತ ಚಿತ್ರಗಳು, ಚಿತ್ತಾರಗಳು ಪ್ರತಿನಿತ್ಯ ಮೂಡುತ್ತ ಇರುತ್ತವೆ. ಖಗೋಳ ಪ್ರಿಯರಂತೂ ವಿಶೇಷ ಕ್ಯಾಮೆರಾ, ದೂರದರ್ಶಕಗಳ ನೆರವಿನಿಂದ ಖಗೋಳದ ವಿಸ್ಮಯಗಳನ್ನು ದಾಖಲಿಸುತ್ತಾರೆ. ಇದೇ ಸಮಯದಲ್ಲಿ ಖಗೋಳ ಸಂಸ್ಥೆಗಳೂ ಆಕಾಶದ ವಿದ್ಯಮಾನಗಳತ್ತ ಸದಾ ಕಣ್ಣಿಟ್ಟಿರುತ್ತವೆ. ಇಂತಹ ಖಗೋಳ ಪ್ರಿಯರು ನಿತ್ಯ ತೆಗೆಯುವ ಛಾಯಾಚಿತ್ರಗಳಲ್ಲಿ ಪ್ರತಿನಿತ್ಯ ಒಂದು ಫೋಟೊವನ್ನು ನಾಸಾ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಈ ದಿನದ ಫೋಟೊ ಎಂದು ಪ್ರಕಟಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಇಂದು ಅಂದರೆ ಮೇ 30ರಂದು ನಾಸಾ ಪ್ರಕಟಿಸಿದ ಫೋಟೊ ನೀಹಾರಿಕೆಯದ್ದು. ಅಂದರೆ, ನೆಬ್ಯುಲಾದ್ದು. ಕಳೆದ ಹಲವು ತಿಂಗಳಲ್ಲಿ ಹಲವು ವಿಶಿಷ್ಟ ಆಕಾರದ ನಿಹಾರಿಕೆಗಳು ಆಕಾಶದಲ್ಲಿ ಕಂಡಿವೆ. ಬಹುತೇಕ ನೀಹಾರಿಕೆಗಳು ಪ್ರಮುಖವಾಗಿ ಮೂರು ವಿಧಗಳನ್ನು ಹೊಂದಿರುತ್ತವೆ. ಅಂದರೆ, ಗೋಳಾಕಾರದ, ಅಂಡಾಕಾರದ ಮತ್ತು ಎರಡು ಧ್ರುವ ಹೊಂದಿರುವ ಎಂಬ ಮೂರು ಪ್ರಕಾರಗಳಲ್ಲಿ ನೀಹಾರಿಕೆಗಳು ಕಾಣಿಸುತ್ತವೆ. ಕೆಲವೊಮ್ಮೆ ಇನ್ನೂ ವೈವಿಧ್ಯಮಯವಾದ ಆಕಾರವನ್ನು ನೀಹಾರಿಕೆಗಳು ಹೊಂದಿರುತ್ತವೆ. ಹೆಡ್‌ಫೋನ್‌ ಅಕಾರದಲ್ಲಿ, ಹೃದಯದ ಆಕಾರದಲ್ಲಿ, ದೆವ್ವಗಳ ಆಕಾರದಲ್ಲಿಯೂ ನಿಹಾರಿಕೆಗಳು ಕಾಣಿಸುತ್ತವೆ.

ನಿಹಾರಿಕೆ ಎಂದರೆ ಏನೆಂದು ತಿಳಿದಿಲ್ಲದವರಿಗಾಗಿ ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ನೀಹಾರಿಕೆ ಎಂದರೆ ನಕ್ಷತ್ರಗಳ ನಡುವೆ ಇರುವ ಅಂತರ್‌ತಾರಾ ಜಾಗದಲ್ಲಿ ನಕ್ಷತ್ರ ಸೃಷ್ಟಿಯಾಗುವ ಪ್ರದೇಶವಾಗಿದೆ. ಇಲ್ಲಿ ಅನಿಲಗಳು, ಮುಖ್ಯವಾಗಿ ಹೈಡ್ರೋಜನ್‌ ಮತ್ತು ಹೀಲಿಯಂ ಇರುತ್ತವೆ.

ಇಂದು ನಾಸಾ ಪ್ರಕಟಿಸಿದ ಚಿತ್ರವು ನೆಬ್ಯುಲಾ ಎಂ 27. ಇದನ್ನು ಡಂಬ್ಬೆಲ್ ನೆಬ್ಯುಲಾ ಎಂದೂ ಕರೆಯುತ್ತಾರೆ. ಇದು ವಲ್ಪೆಕುಲಾ ನಕ್ಷತ್ರಪುಂಜದ ಕಡೆಗೆ ಸುಮಾರು 1360 ಜ್ಯೂತಿರ್ವರ್ಷ ದೂದಲ್ಲಿದೆ. 1764 ರಲ್ಲಿ ಫ್ರೆಂಚ್ ಖಗೋಳಶಾಸ್ತ್ರಜ್ಞ ಚಾರ್ಲ್ಸ್ ಮೆಸ್ಸಿಯರ್ ಅವರು ಕಂಡುಹಿಡಿದ ಮತ್ತು ಪಟ್ಟಿಮಾಡಿದ ಮೊದಲ ಗ್ರಹಗಳ ನೀಹಾರಿಕೆಗಳಲ್ಲಿ ಡೆಂಬ್ಬೆಲ್‌ ನೆಬ್ಯುಲಾವು 27ನೇಯದ್ದು. ಈ ನಿಹಾರಿಕೆಯಲ್ಲಿ ಹಳೆಯ ನಿಕ್ಷತ್ರದ ಪರಿಣಾಮಗಳು ಗೋಚರಿಸುತ್ತವೆ ಎಂದು ನಾಸಾ ತಿಳಿಸಿದೆ. ಇದರ ಹೊರಪದರಗಳು ಹೊಳೆಯುವ ಬಣ್ಣವನ್ನು ಹೊಂದಿದೆ. ಈ ನೆಬ್ಯುಲಾವನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಸ್ಪಷ್ಟವಾಗಿ ನೋಡಬಹುದು ಎಂದು ನಾಸಾ ತಿಳಿಸಿದೆ.

ಅಂದಹಾಗೆ, ನಾಸಾವು ಇಂದು ಪ್ರಕಟಿಸಿದ ನಿಹಾರಿಕೆಯ ಚಿತ್ರವನ್ನು ಖಗೋಳ ಛಾಯಾಗ್ರಾಹಕ ಪತ್ರಿಕ್‌ ಎ ಕಾಸ್‌ಗ್ರೋವ್‌ ಅವರು ZWO ASI2600MM-Pro ಕ್ಯಾಮೆರಾ ಬಳಸಿ ಕ್ಲಿಕ್ಕಿಸಿದ್ದಾರೆ.

ಈ ಚಿತ್ರಕ್ಕೆ ನಾಸಾ ನೀಡಿರುವ ವಿವರಣೆ ಈ ರೀತಿಯಾಗಿದೆ.

ಇದು ನಮ್ಮ ಸೂರ್ಯ ಆಗಬಹುದೇ? ಸಾಧ್ಯತೆಯಿದೆ. ನಮ್ಮ ಸೂರ್ಯನ ಭವಿಷ್ಯದ ಸುಳಿವನ್ನು 1764ರಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಡಂಬ್ಬೆಲ್ ನೆಬ್ಯುಲಾ ಎಂದು ಕರೆಯಲ್ಪಡುವ ಮೆಸ್ಸಿಯರ್ನ ಪಟ್ಟಿಯಲ್ಲಿರುವ 27 ನೇ ವಸ್ತುವು ಗ್ರಹಗಳ ನೀಹಾರಿಕೆಯಾಗಿದೆ. ಇದು ಆಕಾಶದಲ್ಲಿ ಪ್ರಕಾಶಮಾನವಾದ ಗ್ರಹಗಳ ನಿಹಾರಿಕೆಗಳಲ್ಲಿ ಒಂದಾಗಿದೆ. ಇದು ಫಾಕ್ಸ್ (ವಲ್ಪೆಕುಲಾ) ನಕ್ಷತ್ರಪುಂಜದ ಕಡೆಗಿದೆ. ಆ ನೆಬ್ಯುಲಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1 ಸಾವಿರ ವರ್ಷ ಬೇಕು ಎಂದು ನಾಸಾ ಬರೆದಿದೆ.

ಯಾರಿಗೊತ್ತು, ಮುಂದೆ ಆರು ಶತಕೋಟಿ ವರ್ಷಗಳ ಬಳಿಕ ನಮ್‌ ಸೂರ್ಯನೂ ಹೀಗೆಯೇ ಮಂಕಾಗಿ ಮೃತ ನಕ್ಷತ್ರವಾಗಬಹುದು. ಮುಂದೊಂದು ದಿನ ನಮ್ಮ ಸೂರ್ಯನೂ ಡೆಂಬ್ಬೆಲ್‌ ನಿಹಾರಿಕೆಯಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ