logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Spacex: ಸ್ಪೇಸ್‌ಎಕ್ಸ್‌ ರಾಕೆಟ್‌ ಏರಿ ಅಂತರಿಕ್ಷಕ್ಕೆ ತೆರಳಿದ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ ರಾಯನಾ ಬರ್ನಾವಿ

SpaceX: ಸ್ಪೇಸ್‌ಎಕ್ಸ್‌ ರಾಕೆಟ್‌ ಏರಿ ಅಂತರಿಕ್ಷಕ್ಕೆ ತೆರಳಿದ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ ರಾಯನಾ ಬರ್ನಾವಿ

Praveen Chandra B HT Kannada

May 22, 2023 07:56 AM IST

ರಾಯನಾ ಬರ್ನಾವಿ

    • ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ ರಾಯನಾ ಬರ್ನಾವಿ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ.
ರಾಯನಾ ಬರ್ನಾವಿ
ರಾಯನಾ ಬರ್ನಾವಿ (Getty Images via AFP)

ಕೇಪ್ ಕ್ಯಾನವೆರಲ್: ಸ್ಪೇಸ್‌ ಎಕ್ಸ್‌ನ ಬಹುಕೋಟಿ ಡಾಲರ್‌ ಮೌಲ್ಯದ ಚಾರ್ಟೆಡ್‌ ರಾಕೆಟ್‌ನಲ್ಲಿ ಸೌದಿ ಅರೇಬಿಯಾದ ಮೊದಲ ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ ರಾಯನಾ ಬರ್ನಾವಿಯೂ ಇದ್ದಾರೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ನಿವೃತ್ತ ನಾಸಾ ಗಗನಯಾತ್ರಿ ನೇತೃತ್ವದಲ್ಲಿ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಈ ಗಗನಯಾನ ಕೈಗೊಳ್ಳಲಾಗಿದೆ. ಇವರ ಜತೆ ಈಗ ಕ್ರೀಡಾ ಕಾರ್‌ ರೇಸಿಂಗ್‌ ತಂಡವನ್ನು ಹೊಂದಿರುವ ಅಮೆರಿಕದ ಉದ್ಯಮಿಯೊಬ್ಬರೂ ಗಗನಕ್ಕೆ ನೆಗೆದಿದ್ದಾರೆ.

ಈ ನಾಲ್ವರು ಗಗನಯಾತ್ರಿಗಳು ಸೋಮವಾರ ಬೆಳಿಗ್ಗೆ ತಮ್ಮ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇವರೆಲ್ಲರೂ ಒಂದು ವಾರಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ.

ಸೌದಿ ಅರೇಬಿಯಾ ಸರ್ಕಾರವು ಈ ಮೂಲಕ ತನ್ನ ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಸ್ಟೆಮ್ ಸೆಲ್ ಸಂಶೋಧಕರಾದ ರೇಯಾನಾ ಬರ್ನಾವಿ ಅವರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ರಾಯಲ್ ಸೌದಿ ಏರ್ ಫೋರ್ಸ್‌ನ ಫೈಟರ್ ಪೈಲಟ್ ಅಲಿ ಅಲ್-ಕರ್ನಿಯೂ ಇವರೊಂದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.

1985 ರಲ್ಲಿ ಸೌದಿ ರಾಜಕುಮಾರ ಶಟಲ್‌ ಡಿಸ್ಕವರಿ ಲಾಂಚ್‌ ಮಾಡಿದ್ದರು. ಇದಾದ ಬಳಿಕ ಇದೀಗ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಸೌದಿ ಅರೇಬಿಯಾದ ಈ ಗಗನಯಾತ್ರಿಗಳು ರಾಕೆಟ್‌ ಸವಾರಿ ಮಾಡಿದ್ದಾರೆ. ಹೀಗಾಗಿ, ಸೌದಿ ಅರೇಬಿಯಾದ ಪಾಲಿಗೆ ಇದು ಐತಿಹಾಸಿಕವೂ ಹೌದು.

“ಬಾಹ್ಯಾಕಾಶದಿಂದ ಹಲೋ! ಈ ಕ್ಯಾಪ್ಸುಲ್‌ನಿಂದ ಭೂಮಿಯನ್ನು ನೋಡುವುದು ಅದ್ಭುತವಾಗಿದೆ” ಎಂದು ಐಎಸ್‌ಎಸ್‌ಗೆ ತಲುಪಿದ ಬಳಿಕ ಬರ್ನಾವಿ ಹೇಳಿದ್ದಾರೆ. "ಬಾಹ್ಯಾಕಾಶದಿಂದ ಹೊರಗೆ ನೋಡುತ್ತಿದ್ದೇನೆ, ಇದು ನಮ್ಮೆಲ್ಲರಿಗೂ ಉತ್ತಮ ಪ್ರಯಾಣದ ಆರಂಭ" ಎಂದು ಆಲ್‌ ಕರ್ನಿ ಹೇಳಿದ್ದಾರೆ.

ಇತರೆ ಗಗನಯಾತ್ರಿಗಳು: ಈ ಗಗನಯಾನದಲ್ಲಿ ನಾಕ್ಸ್‌ವಿಲ್ಲೆ, ಟೆನ್ನೆಸ್ಸೀಯ ಜಾನ್ ಶಾಫ್ನರ್ ಇದ್ದಾರೆ. ಇವರು ಮಾಜಿ ಕಾರ್‌ ರೇಸರ್‌. ಯುರೋಪ್‌ನಲ್ಲಿ ಸ್ಪರ್ಧಿಸುವ ಸ್ಪೋರ್ಟ್ಸ್ ಕಾರ್ ರೇಸಿಂಗ್ ತಂಡದ ಮಾಲೀಕರಾಗಿದ್ದಾರೆ. ಜತೆಗೆ, ಇವರೊಂದಿಗೆ ಅಂತರಿಕ್ಷದಲ್ಲಿ 665 ದಿನಗಳ ಕಾಲ ವಾಸಿಸಿದ ಇತಿಹಾಸ, ದಾಖಲೆ ಹೊಂದಿರುವಂತಹ ಚಾಪೆರೋನ್ ಪೆಗ್ಗಿ ವಿಟ್ಸನ್ ಕೂಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ತಲುಪಿದ್ದಾರೆ.

"ಇದು ಒಂದು ಅಸಾಧಾರಣ ಪ್ರಯಾಣ" ಎಂದು ವಿಟ್ಸನ್ ಕಕ್ಷೆಯನ್ನು ತಲುಪಿದ ನಂತರ ಹೇಳಿದರು. ಆಗ ಇತರೆ ಗಗನಯಾನಿಗಳು ಸಂತೋಷದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಹೂಸ್ಟನ್ ಮೂಲದ ಆಕ್ಸಿಯಮ್ ಸ್ಪೇಸ್ ವತಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಡೆಸಿದ ಎರಡನೇ ಗಗನಯಾನವಾಗಿದೆ. ಕಳೆದ ವರ್ಷ ಮೂವರು ಉದ್ಯಮಿಗಳು, ಒಬ್ಬರು ನಿವೃತ್ತ ನಾಸಾ ಗಗನಯಾತ್ರಿ ಆಕ್ಸಿಯಸ್‌ ಸ್ಪೇಸ್‌ ಜತೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾನ ಕೈಗೊಂಡಿದ್ದರು.

ಒಬ್ಬರು ಗಗನಯಾನಿಗೆ ಈ ಬಾರಿ ಎಷ್ಟು ಟಿಕೆಟ್‌ ದರ ವಿಧಿಸಲಾಗಿದೆ ಎಂದು ಆಕ್ಸಿಯಮ್ ಸ್ಪೇಸ್ ತಿಳಿಸಿಲ್ಲ. ಈ ಹಿಂದಿನ ಪ್ರವಾಸದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತಲಾ 55 ಮಿಲಿಯನ್ ಡಾಲರ್‌ ಟಿಕೆಟ್‌ ದರ ವಿಧಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ