logo
ಕನ್ನಡ ಸುದ್ದಿ  /  Nation And-world  /  Sunny Leone: Kerala Hc Stays Cheating Case Against Sunny Leone

Sunny Leone Cheating Case: ಸನ್ನಿಲಿಯೋನ್‌ ವಂಚಿಸಿದ್ದಾರೆಂದು ಕೇರಳ ಹೈಕೋರ್ಟ್‌ನಲ್ಲಿ ಕೇಸ್‌ ದಾಖಲಾಗಿದೆ!

HT Kannada Desk HT Kannada

Nov 16, 2022 12:47 PM IST

ಸನ್ನಿ ಲಿಯೋನ್‌

  • Sunny Leone: ಮೂರು ವರ್ಷದ ಹಿಂದೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವುದಕ್ಕೆ ಮುಂಗಡ ಹಣ ಪಡೆದು ವಂಚಿಸಿದ್ದಾರೆ ಎಂಬುದು ಸನ್ನಿ ಲಿಯೋನ್‌ ಮತ್ತು ಇತರ ಇಬ್ಬರ ಮೇಲಿರುವ ಆರೋಪ. ಕ್ರೈಂಬ್ರಾಂಚ್‌ ಈ ಸಂಬಂಧ ಕೇಸ್‌ ದಾಖಲಿಸಿದೆ.

ಸನ್ನಿ ಲಿಯೋನ್‌
ಸನ್ನಿ ಲಿಯೋನ್‌

ತಿರುವನಂತಪುರ: ಬಾಲಿವುಡ್‌ ನಟಿ ಸನ್ನಿಲಿಯೋನ್‌ ಮತ್ತು ಇತರೆ ಇಬ್ಬರು ವಂಚನೆ ಮಾಡಿದ್ದಾರೆ ಎಂದು ಕೇರಳ ಹೈಕೋರ್ಟ್‌ನಲ್ಲಿ ಕೇಸ್‌ ದಾಖಲಾಗಿದೆ. ಸೋಮವಾರ ಈ ಕೇಸ್‌ ದಾಖಲಾಗಿದ್ದು, ಕೇಸ್‌ ವಜಾಗೊಳಿಸುವಂತೆ ನಟಿ ಸನ್ನಿಲಿಯೋನ್‌ ಮಂಗಳವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

ಮೂರು ವರ್ಷದ ಹಿಂದೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವುದಕ್ಕೆ ಮುಂಗಡ ಹಣ ಪಡೆದು ವಂಚಿಸಿದ್ದಾರೆ ಎಂಬುದು ಸನ್ನಿ ಲಿಯೋನ್‌ ಮತ್ತು ಇತರ ಇಬ್ಬರ ಮೇಲಿರುವ ಆರೋಪ. ಕ್ರೈಂಬ್ರಾಂಚ್‌ ಈ ಸಂಬಂಧ ಕೇಸ್‌ ದಾಖಲಿಸಿದೆ.

ಸನ್ನಿ ಲಿಯೋನ್‌ ಸಲ್ಲಿಸಿದ ಅರ್ಜಿಯನ್ನು ಏಕಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಜಿಯಾದ್‌ ರಹಮಾನ್‌ ಅವರು ಸ್ವೀಕರಿಸಿ ವಿಚಾರಣೆಗೆ ಎತ್ತಿಕೊಂಡಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಸನ್ನಿಲಿಯೋನ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿಯುವ ತನಕ ಅವರ ವಿರುದ್ಧ ದೂರಿಗೆ ಸಂಬಂಧಿಸಿ ಯಾವುದೇ ಕ್ರಮ ಮುಂದುವರಿಸಬಾರದು ಎಂದು ಪೊಲೀಸರಿಗೆ ಕೋರ್ಟ್‌ ಸೂಚನೆ ನೀಡಿದೆ.

ಕೊಚ್ಚಿಯ ಪೆರುವಂಬವೂರ್‌ ನಿವಾಸಿ ಎಂ.ಶಿಯಾಸ್‌ ದೂರುದಾರ. ಅವರು ಡಿಜಿಪಿ ಲೋಕನಾಥ್‌ ಬೆಹ್ರಾಗೆ ದೂರು ನೀಡಿದ್ದರು. ಡಿಜಿಪಿ ಆದೇಶದ ಮೇರೆಗೆ ಕ್ರೈಂ ಬ್ರಾಂಚ್‌ ಪೊಲೀಸರು ತನಿಖೆ ಶುರು ಮಾಡಿದ್ದರು. ಆ ಸಂದರ್ಭದಲ್ಲಿ ಸನ್ನಿ ಲಿಯೋನ್‌ ಅವರು ಪೊಲೀಸರನ್ನು ಸಂಪರ್ಕಿಸಿ, ತಾನು ಕಾರ್ಯಕ್ರಮದಲ್ಲಿ ಭಾಗವಹಿಸುವೆ ಅಥವಾ ಮುಂಗಡ ಪಡೆದ ಹಣ ಹಿಂತಿರುಗಿಸುವೆ ಎಂದು ಹೇಳಿದ್ದರು. ಆದರೆ ಇದು ಈಡೇರಿರಲಿಲ್ಲ. ಈ ಪ್ರಕರಣ ಸಂಬಂಧ ಸನ್ನಿಲಿಯೋನ್‌ ಎರಡು ಸಲ ವಿಚಾರಣೆ ಎದುರಿಸಿದ್ದರು.

ಸನ್ನಿ ಲಿಯೋನ್‌ ಅವರ ಮ್ಯಾನೇಜರ್‌ ಈ ವ್ಯವಹಾರ ನಡೆಸಿದ್ದು 30 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಸಂಘಟಕರಿಗೆ ಡೇಟ್‌ ನೀಡಿದ ಬಳಿಕ ಅನೇಕ ಸಲ ದಿನಾಂಕ ಬದಲಾಯಿಸಿದ್ದನ್ನೂ ಸನ್ನಿ ಲಿಯೋನ್‌ ಒಪ್ಪಿಕೊಂಡಿದ್ದರು.

ಕೇರಳದಲ್ಲಿ 2019ರ ಫೆಬ್ರವರಿ ಒಂದು ತಿಂಗಳ ಕಾಲ ರಜೆಯಲ್ಲಿದ್ದಾಗ ಈ ಕಾರ್ಯಕ್ರಮದ ಪ್ರಸ್ತಾಪವು ಬಂದಿತ್ತು ಎಂದು ಸನ್ನಿ ಹೇಳಿದ್ದಾರೆ. ಆದರೆ, 30 ಲಕ್ಷ ರೂಪಾಯಿ ಮುಂಗಡವನ್ನು ಸ್ವೀಕರಿಸಿದ ನಂತರ ಕಾರ್ಯಕ್ರಮಕ್ಕೆ ಹಾಜರಾಗಲು ವಿಫಲರಾದರು. ಇದು ನಂಬಿಕೆಯ ಉಲ್ಲಂಘನೆ ಎಂಬುದು ಸಂಘಟಕರ ವಾದ. ಕರಣ್‌ಜಿತ್ ಕೌರ್ ಅಲಿಯಾಸ್ ಸನ್ನಿ ಲಿಯೋನ್ ಜತೆಗೆ ಅವರ ಪತಿ ಡೇನಿಯಲ್ ವೆಬರ್ ಮತ್ತು ಅವರ ಮ್ಯಾನೇಜರ್ ಸುನಿಲ್ ರಜನಿ ಅವರ ಹೆಸರು ಎಫ್‌ಐಆರ್‌ನಲ್ಲಿ ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಹೈಕೋರ್ಟ್ ಮೂವರಿಗೂ ನಿರೀಕ್ಷಣಾ ಜಾಮೀನು ನೀಡಿತ್ತು.

    ಹಂಚಿಕೊಳ್ಳಲು ಲೇಖನಗಳು