logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Apple Credit Card: ಭಾರತಕ್ಕೆ ಬರಲಿದೆಯೇ ಆಪಲ್‌ ಕ್ರೆಡಿಟ್‌ ಕಾರ್ಡ್‌ ಸೇವೆ?; ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗ ಸಾಧ್ಯತೆ ಹೀಗಿದೆ ವಿಶ್ಲೇಷಣೆ

Apple Credit Card: ಭಾರತಕ್ಕೆ ಬರಲಿದೆಯೇ ಆಪಲ್‌ ಕ್ರೆಡಿಟ್‌ ಕಾರ್ಡ್‌ ಸೇವೆ?; ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗ ಸಾಧ್ಯತೆ ಹೀಗಿದೆ ವಿಶ್ಲೇಷಣೆ

Jul 01, 2023 06:51 PM IST

ಭಾರತಕ್ಕೆ ಬರಲಿದೆಯೇ ಆಪಲ್‌ ಕ್ರೆಡಿಟ್‌ ಕಾರ್ಡ್‌ ಸೇವೆ?; ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗ ಸಾಧ್ಯತೆ, ಹೀಗಿದೆ ವಿಶ್ಲೇಷಣೆ

    • ಟೆಕ್‌ ದೈತ್ಯ ಆಪಲ್‌ ಸಂಸ್ಥೆ ಇದೀಗ ಭಾರತದಲ್ಲಿ ಡಿಜಿಟಲ್‌ ಪಾವತಿ ಕ್ಷೇತ್ರಕ್ಕೆ ಆಗಮಿಸುವ ಮುನ್ಸೂಚನೆ ನೀಡಿದೆ. ಹಾಗಾದರೆ ಭಾರತಕ್ಕೆ ಆಪಲ್‌ ಆಗಮಿಸಲು ಕಾರಣ ಏನಿರಬಹುದು? ಈಗಾಗಲೇ ಅಮೆರಿಕಾದಲ್ಲಿ ತನ್ನ ಸೇವೆ ನೀಡುತ್ತಿರುವ ಆಪಲ್‌, ಭಾರತದಲ್ಲಿಯೂ ಅದರ ಕ್ರೆಡಿಟ್‌ ಕಾರ್ಡ್‌ ಪ್ಲಾನ್‌ ವರ್ಕೌಟ್‌ ಆಗಬಹುದೇ? ಹೀಗಿದೆ ವಿವರಣೆ. 
ಭಾರತಕ್ಕೆ ಬರಲಿದೆಯೇ ಆಪಲ್‌ ಕ್ರೆಡಿಟ್‌ ಕಾರ್ಡ್‌ ಸೇವೆ?; ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗ ಸಾಧ್ಯತೆ, ಹೀಗಿದೆ ವಿಶ್ಲೇಷಣೆ
ಭಾರತಕ್ಕೆ ಬರಲಿದೆಯೇ ಆಪಲ್‌ ಕ್ರೆಡಿಟ್‌ ಕಾರ್ಡ್‌ ಸೇವೆ?; ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗ ಸಾಧ್ಯತೆ, ಹೀಗಿದೆ ವಿಶ್ಲೇಷಣೆ

Apple Credit Card: ಟೆಕ್‌ ದೈತ್ಯ ಆಪಲ್‌ ಸಂಸ್ಥೆ ಇದೀಗ ಗ್ಯಾಜೆಟ್ಸ್‌ ಜತೆಗೆ ಹಣಕಾಸಿನ ವ್ಯವಹಾರದ ದೃಷ್ಟಿಯಿಂದ ಭಾರತಕ್ಕೆ ಬರುವ ಸಾಧ್ಯತೆ ಇದೆ. ಅಂದರೆ, ಆಪಲ್ ಭಾರತದಲ್ಲಿ ತನ್ನದೇ ಆದ ಕ್ರೆಡಿಟ್ ಕಾರ್ಡ್ ಸೇವೆಯನ್ನು ಶುರು ಮಾಡಲು ತೆರೆಮರೆಯಲ್ಲಿಯೇ ಸಿದ್ಧತೆ ನಡೆಸಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಡಿಜಿಟಲ್‌ ಹಣ ಪಾವತಿ ಮೊಬೈಲ್‌ ಅಪ್ಲಕೇಷನ್‌ಗಳಿವೆ. ಅದೇ ರೀತಿ ಆಪಲ್‌ ಸಹ ದೇಶದಲ್ಲಿ 'ಆಪಲ್ ಪೇ' ಪ್ರಾರಂಭಿಸಲು ಚಿಂತನೆ ನಡೆಸಿದೆ. ಈಗಾಗಲೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜತೆಗೆ ಮಾತುಕತೆಯನ್ನೂ ನಡೆಸಿದೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಈಗಾಗಲೇ ಅಮೆರಿಕಾದಲ್ಲಿ ಆಪಲ್‌ ಕ್ರೆಡಿಟ್‌ ಕಾರ್ಡ್‌ ಸೇವೆ ಚಾಲ್ತಿಯಲ್ಲಿದೆ. ಗೋಲ್ಡ್‌ಮನ್‌ ಸ್ಯಾಚ್‌ ಸಹಯೋಗದಲ್ಲಿ ಪ್ರೀಮಿಯಂ, ಟೈಟಾನಿಯಮ್ ಮಾಸ್ಟರ್‌ಕಾರ್ಡ್‌ಗಳನ್ನು ನೀಡಿದೆ. ಇದೀಗ ಅದೇ ರೀತಿ ಭಾರತದಲ್ಲಿಯೂ ಆಪಲ್‌ ಸಂಸ್ಥೆಯಿಂದ ಕ್ರೆಡಿಟ್‌ ಕಾರ್ಡ್‌ ಪ್ರಾರಂಭಿಸುವ ಕೆಲಸ ಪ್ರಗತಿಯಲ್ಲಿದೆ. ಕಳೆದ ಏಪ್ರಿಲ್‌ನಲ್ಲಿ ಆಪಲ್‌ ಸಿಇಒ ಟೀಮ್‌ ಕುಕ್‌ ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿ ವೇಳೆ ಎಚ್‌ಡಿಎಫ್‌ಸಿ ಸಿಇಒ ಮತ್ತು ಎಂಡಿ ಶಶಿಧರ್‌ ಜಗದೀಶನ್‌ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ವೇಳೆ ಈ ನೂತನ ಕ್ರೆಡಿಟ್‌ ಕಾರ್ಡ್‌ ಚರ್ಚೆ ನಡೆದಿತ್ತು.

ಭಾರತದ ವ್ಯವಸ್ಥೆಯೇ ಬೇರೆ...

ಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ಹಂಚಿಕೆಯ ವ್ಯವಸ್ಥೆಯೇ ಬೇರೆ. ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾರಂಭಿಸಲು ಬ್ಯಾಂಕ್‌ಗಳಿಗೆ ಮಾತ್ರ ಅವಕಾಶವಿದೆ. ಬ್ಯಾಂಕ್‌ಗಳಷ್ಟೇ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡುತ್ತಿವೆ. ಅದರ ಹೊರತಾಗಿ ನೇರವಾಗಿ ಕ್ರೆಡಿಟ್‌ ಕಾರ್ಡ್‌ ಯಾವ ಸಂಸ್ಥೆಯೂ ನೀಡುತ್ತಿಲ್ಲ. ಹಾಗಾಗಿ ಆಪಲ್‌ ಸಂಸ್ಥೆ ಒಂದು ವೇಳೆ ಭಾರತಕ್ಕೆ ಬಂದಿದ್ದೇ ಆದರೆ, ಇದು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ. ಮುಂದುವರಿದು ಈಗಾಗಲೇ ರಿಸರ್ವ್‌ ಬ್ಯಾಂಕ್‌ ಜತೆಗೂ ಆಪಲ್‌ ಮಾತುಕತೆ ನಡೆಸಿದೆ.

ಹೀಗಿರಬಹುದೇ ಆಪಲ್‌ ಪ್ಲಾನ್‌

ಈಗಾಗಲೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜತೆಗೆ ಆಪಲ್‌ ಮಾತುಕತೆ ನಡೆಸಿದೆ. ಈ ಮಾತುಕತೆ ರುಪೇ (Rupay) ಪೇಮೆಂಟ್‌ ಫ್ಲಾಟ್‌ಫಾರ್ಮ್‌ಗಾಗಿಯೇ ಅಥವಾ ಯುಪಿಎ (UPI) ಗಾಗಿಯೇ ಇರಬಹುದೇ ಎಂಬ ಸ್ಪಷ್ಟತೆ ಇಲ್ಲ. ಒಂದು ವೇಳೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ, ಅಮೆಜಾನ್‌ ಪೇ ರೀತಿಯಲ್ಲಿ ಆಪಲ್‌ ಪೇ ಶುರುವಾಗಲಿದೆಯೇ ಎಂಬುದಕ್ಕೂ ಶೀಘ್ರದಲ್ಲಿ ಸ್ಪಷ್ಟತೆ ಸಿಗಲಿದೆ. ಇನ್ನೊಂದು ವಿಚಾರ ಏನೆಂದರೆ ಭಾರತದಲ್ಲಿ ಆಪಲ್‌ ತನ್ನ ಮಾಸ್ಟರ್‌ಕಾರ್ಡ್‌ ಮತ್ತು ವೀಸಾ ತ್ಯಜಿಸಿ ಪಾವತಿ ವ್ಯವಸ್ಥೆಗೆ ರುಪೇ ಮೂಲಕ ಆಗಮಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ; ರುಪೇ ಕ್ರೆಡಿಟ್‌ ಕಾರ್ಡ್‌ಗಳನ್ನು ಯುಪಿಐಗೆ ಸರಳವಾಗಿ ಲಿಂಕ್‌ ಮಾಡಬಹುದಾಗಿರುವುದರಿಂದ ಈ ಪ್ಲಾನ್‌ ಮೂಲಕ ಭಾರತದ ಮಾರುಕಟ್ಟೆ ಬರಬಹುದು. ಇನ್ನೊಂದು ವಿಚಾರ ಏನೆಂದರೆ, ಆಪಲ್ ಮಾತ್ರವಲ್ಲ, ಗೂಗಲ್, ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಕೂಡ ಪಾವತಿ ಕ್ಷೇತ್ರಕ್ಕೆ ಕಾಲಿಡಲು ಪ್ಲಾನ್‌ ರೂಪಿಸುತ್ತಿವೆ.

ಆಪಲ್‌ಗೆ ಭಾರತದ ಮೇಲೇಕೆ ಕಣ್ಣು!

ಭಾರತದ ಮೇಲೆಯೇ ಆಪಲ್‌ಗೇಕೆ ಕಣ್ಣು? ಇದಕ್ಕೂ ಕಾರಣವಿದೆ. ಆಪಲ್‌ ಬ್ರಾಂಡ್‌ನ ಉತ್ಪನ್ನಗಳಿಗೆ ಭಾರತದಲ್ಲಿ ಬಹು ದೊಡ್ಡ ಮಾರುಕಟ್ಟೆ ಇದೆ. 2022-23ರ ಸಾಲಿನಲ್ಲಿ ಐಫೋನ್‌ ತಯಾರಕರು ಭಾರತದಲ್ಲಿ ಬರೋಬ್ಬರಿ 50 ಸಾವಿರ ಕೋಟಿ ಬೆಲೆಯ ಆಪಲ್‌ ಉತ್ಪನ್ನಗಳು ಬಿಕರಿಯಾಗಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಸಾಹಸಕ್ಕೆ ಆಪಲ್‌ ಹೆಜ್ಜೆಯನ್ನಿರಿಸಿದೆ.

ಎಚ್‌ಡಿಎಫ್‌ಸಿ ಜತೆಗೆ ಸಹಯೋಗ

ಖಾಸಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮತ್ತು ಕ್ರೆಡಿಟ್‌ ಕಾರ್ಡ್‌ ವಿಚಾರದಲ್ಲಿಯೂ ಲೀಡರ್‌ ಎನಿಸಿಕೊಂಡಿರುವ ಎಚ್‌ಡಿಎಫ್‌ಸಿ ಸಹಯೋಗದಲ್ಲಿ ಆಪಲ್‌ ಕೈ ಜೋಡಿಸಲಿದೆ ಎನ್ನಲಾಗುತ್ತಿದೆ. ಸದ್ಯ ಎಲ್ಲವೂ ಪ್ರಾಥಮಿಕ ಮತ್ತು ಪ್ರಾಯೋಗಿಕ ಹಂತದಲ್ಲಿದ್ದು, ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಒಂದು ವೇಳೇ ಇದು ಅಧಿಕೃತವಾದರೆ, ನೇರವಾಗಿ ತನ್ನ ಹೆಸರಿನೊಂದಿಗೆ ಆಪಲ್‌ ಮಾರುಕಟ್ಟೆಗೆ ಇಳಿಯುವುದಿಲ್ಲ. ಬದಲಿಗೆ ಎಚ್‌ಡಿಎಫ್‌ಸಿ ಕಾರ್ಡ್‌ನ ಬೆನ್ನಬದಿಯಲ್ಲಿ ಆಪಲ್‌ ಸಂಸ್ಥೆಯ ಲೋಗೋ ಕಾಣಿಸಿಕೊಳ್ಳಬಹುದು.

ಸಿಗಲಿದೆ ರಿವಾರ್ಡ್‌ ಮತ್ತು ಇತರೆ ಬೆನಿಫಿಟ್ಸ್‌...

ರಿವಾರ್ಡ್‌ ಬಗ್ಗೆ ಮಾಹಿತಿ ನೀಡುವುದಾದರೆ, ಆಪಲ್‌ ಪೇ ಬಳಕೆಯಿಂದ ರಿವಾರ್ಡ್‌ ಪಾಯಿಂಟ್ಸ್‌ಗಳೂ ಸಿಗಲಿವೆ. ಆಪಲ್‌ ವಾಲೆಟ್‌ನಲ್ಲಿ ಇದು ಠೇವಣಿಯಾಗಲಿದೆ. ಇದಲ್ಲದೆ, ಆಪಲ್‌ ಪೇ ಬಳಕೆಗೆ ಯಾವುದೇ ವಾರ್ಷಿಕ ಶುಲ್ಕ ನೀಡುವ ಅವಶ್ಯಕತೆಯೂ ಇಲ್ಲ. ಅಮೆರಿಕಾದಲ್ಲಿ ತನ್ನ ಆಪಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯಲು ಶೇಕಡಾ 3ರಿಂದ 5ರ ವರೆಗೂ ಕ್ಯಾಶ್‌ಬ್ಯಾಕ್ ನೀಡಲಿದೆ. ಇತರ ಪ್ರೀಮಿಯಂ ಬ್ರ್ಯಾಂಡ್‌ಗಳೊಂದಿಗೆ ಶೇಕಡಾ 2ರಿಂದ 3ರ ವರೆಗೂ ಕ್ಯಾಶ್‌ಬ್ಯಾಕ್ ಸಿಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ