logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Apple Wonderlust: ಭಾರತದಲ್ಲಿ ಐಫೋನ್‌ 15 ದರ ಎಷ್ಟಿರಬಹುದು, ಆಪಲ್‌ ವಂಡರ್‌ಲಸ್ಟ್‌ ಕಾರ್ಯಕ್ರಮದಲ್ಲಿ ಬಹಿರಂಗ

Apple Wonderlust: ಭಾರತದಲ್ಲಿ ಐಫೋನ್‌ 15 ದರ ಎಷ್ಟಿರಬಹುದು, ಆಪಲ್‌ ವಂಡರ್‌ಲಸ್ಟ್‌ ಕಾರ್ಯಕ್ರಮದಲ್ಲಿ ಬಹಿರಂಗ

HT Kannada Desk HT Kannada

Sep 12, 2023 12:43 PM IST

ಐಫೋನ್‌ 14 (ಸಾಂದರ್ಭಿಕ ಚಿತ್ರ)

  • New iPhones at Wonderlust event: ನೂತನ ಐಫೋನ್‌ 15 ಮತ್ತು 15 ಪ್ಲಸ್‌ ದರವು ಇದರ ಈ ಹಿಂದಿನ ಮಾದರಿಗಳಂತೆ ತಲಾ 799 ಮತ್ತು 899 ಡಾಲರ್‌ ಇರುವ ನಿರೀಕ್ಷೆಯಿದೆ. ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ದರ ಮಾತ್ರ ಇದಕ್ಕಿಂತ ಹೆಚ್ಚಿರಲಿದೆ ಎಂದು ಟೆಕ್‌ ತಜ್ಞರು ಹೇಳಿದ್ದಾರೆ.

 ಐಫೋನ್‌ 14 (ಸಾಂದರ್ಭಿಕ ಚಿತ್ರ)
ಐಫೋನ್‌ 14 (ಸಾಂದರ್ಭಿಕ ಚಿತ್ರ) (Apple)

ಆಪಲ್‌ ಕಂಪನಿಯು ತನ್ನ ನೂತನ ಐಫೋನ್‌ ಅನ್ನು ಇಂದು ನಡೆಯಲಿರುವ ವಂಡರ್‌ಲಸ್ಟ್‌ ಕಾರ್ಯಕ್ರಮದಲ್ಲಿ ಘೋಷಿಸಲಿದೆ. ಇಂದು ಬೆಳಗ್ಗೆ 10.30 ಗಂಟೆಗೆ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಆಪಲ್‌ ತನ್ನ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ. ಯುಎಸ್‌ಬಿ ಸಿ, ಐಒಎಸ್‌ 17 ಶೆಡ್ಯೂಲ್‌, ಆಪಲ್‌ ಹೊಸ ವಾಚ್‌ಗಳು, ನೂತನ ಏರ್‌ಪಾಡ್ಸ್‌ ಪ್ರೊ ಇತ್ಯಾದಿಗಳೂ ಬಿಡುಗಡೆಯಾಗಲಿವೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ನೂತನ ಐಫೋನ್‌ 15 ಮತ್ತು 15 ಪ್ಲಸ್‌ ದರವು ಇದರ ಈ ಹಿಂದಿನ ಮಾದರಿಗಳಂತೆ ತಲಾ 799 ಮತ್ತು 899 ಡಾಲರ್‌ ಇರುವ ನಿರೀಕ್ಷೆಯಿದೆ. ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ದರ ಮಾತ್ರ ಇದಕ್ಕಿಂತ ಹೆಚ್ಚಿರಲಿದೆ ಎಂದು ಟೆಕ್‌ ತಜ್ಞರು ಹೇಳಿದ್ದಾರೆ.

ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ದರ ಹೆಚ್ಚಿರುವ ಸೂಚನೆಯನ್ನು ಈಗಾಗಲೇ ಆಪಲ್‌ ಸಿಇಒ ಟಿಮ್‌ ಕುಕ್‌ ನೀಡಿದ್ದಾರೆ. "ಈ ಕೆಟಗರಿಯಲ್ಲಿ ಅತ್ಯುತ್ತಮವಾಗಿರುವುದನ್ನು ಖರೀದಿಸಲು ಗ್ರಾಹಕರು ತುಸು ತಮ್ಮ ಬಜೆಟ್‌ ಹೆಚ್ಚಿಸಿಕೊಳ್ಳಬೇಕಿದೆ" ಎಂದು ಅವರು ಹೇಳಿದ್ದಾರೆ.

ತಜ್ಞ ವಿಶ್ಲೇಷಕರಾದ ಜೆಫ್‌ ಪೂ ಮತ್ತು ಬ್ಲೂಮ್‌ಬರ್ಗ್‌ ಮಾರ್ಕ್‌ ಗುರ್ಮನ್‌ ಅವರು ಕೂಡ ಪ್ರೊ ಮಾಡೆಲ್‌ಗಳ ದರ ಹೆಚ್ಚಿಸಿರುವ ಸೂಚನೆ ನೀಡಲಾಗಿದೆ. ಎಲ್ಲಾ ಐಫೋನ್‌ ಸಾಧನಗಳಲ್ಲಿ ಹೊಸ ಸಾಧನಗಳ ದರ ಸುಮಾರು 100 ಡಾಲರ್‌ನಷ್ಟು ಹೆಚ್ಚಿರುವ ಸೂಚನೆಯನ್ನು ಅವರು ನೀಡಿದ್ದಾರೆ.

ಐಫೋನ್‌ 15 ದರ ಎಷ್ಟಿರಬಹುದು?

ಇಂದು ನಡೆಯುತ್ತಿರುವ ವಂಡರ್‌ಲಸ್ಟ್‌ ಕಾರ್ಯಕ್ರಮದಲ್ಲಿ ಇದರ ದರದ ಕುರಿತು ಸ್ಪಷ್ಟತೆ ದೊರಕಬಹುದು. ಇನ್ನು ಕೆಲವೇ ಗಂಟೆಗಳಲ್ಲಿ ಈ ಕುರಿತು ಅಪ್‌ಡೇಟ್‌ ದೊರಕಬಹುದು. ಭಾರತದಲ್ಲಿ ನೂತನ ಐಫೋನ್‌ ದರವು 79,900 ರೂಪಾಯಿಯಿಂದ ಆರಂಭವಾಗುವ ಸೂಚನೆಯನ್ನು ಟೆಕ್‌ ತಜ್ಞರು ನೀಡಿದ್ದಾರೆ. ಕಳೆದ ವರ್ಷ ಇದೇ ದರದಲ್ಲಿ ಐಫೋನ್‌ 15 ಭಾರತದಲ್ಲಿ ಲಾಂಚ್‌ ಆಗಿತ್ತು. ಐಫೋನ್‌ 15 ಪ್ಲಸ್‌ ಆರಂಭಿಕ ದರ ಸುಮಾರು 89,900 ರೂಪಾಯಿ ಇತ್ತು. ಇದೀಗ ಅಪ್‌ಡೇಟೆಡ್‌ ಆವೃತ್ತಿಗಳ ದರ ಎಷ್ಟಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಹೊಸ ಐಫೋನ್‌ ಕುರಿತು ಟೆಕ್‌ ಜಗತ್ತಿನಲ್ಲಿ ಚರ್ಚೆ ಕಾವೇರಿದೆ. ಇದರಲ್ಲಿ ಸಾಲಿಡ್‌ ಬಟನ್‌, ಯುಎಸ್‌ಬಿ ಸಿ ಮೂಲಕ ವೇಗದ ಚಾರ್ಜಿಂಗ್‌ ಇತ್ಯಾದಿ ಹಲವು ಫೀಚರ್‌ಗಳು ಇರಲಿವೆ. ಆದರೆ, ಜನರು ಮಾತ್ರ ಅದರ ಹೊಸ ಕ್ಯಾಮೆರಾದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ. ಈಗಾಗಲೇ ಐಫೋನ್‌ 14ರಲ್ಲಿ ಅದ್ಭುತ ಕ್ಯಾಮೆರಾ ಇದೆ. ವೃತ್ತಿಪರ ಫೋಟೊಗ್ರಾಫರ್‌ ತೆಗೆದಂತಹ ಚಿತ್ರ ತೆಗೆಯಲು ಈ ಐಫೋನ್‌ ನೆರವು ನೀಡುತ್ತದೆ. ಅಂದರೆ, ಡಿಎಸ್‌ಎಲ್‌ಆರ್‌ ಕ್ಯಾಮೆರಾದ ಚಿತ್ರದಂತೆ ಗುಣಮಟ್ಟ ನೀಡುತ್ತದೆ. ಹಾಗಾದರೆ, ಇದಕ್ಕಿಂತಲೂ ಅತ್ಯುತ್ತಮವಾದ ಐಫೋನ್‌ 15ನ ಕ್ಯಾಮೆರಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ