logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Flipkart Big Saving Day: ಫ್ಲಿಪ್‌ಕಾರ್ಟ್‌ ಬಿಗ್‌ ಉಳಿತಾಯ ದಿನಾಂಕ ಪ್ರಕಟ, ಐಫೋನ್‌, ಗ್ಯಾಲಾಕ್ಸಿ ಸೇರಿದಂತೆ ಹಲವು ವಸ್ತುಗಳಿಗೆ ದರ ಕಡಿತ

Flipkart Big Saving Day: ಫ್ಲಿಪ್‌ಕಾರ್ಟ್‌ ಬಿಗ್‌ ಉಳಿತಾಯ ದಿನಾಂಕ ಪ್ರಕಟ, ಐಫೋನ್‌, ಗ್ಯಾಲಾಕ್ಸಿ ಸೇರಿದಂತೆ ಹಲವು ವಸ್ತುಗಳಿಗೆ ದರ ಕಡಿತ

Praveen Chandra B HT Kannada

Aug 02, 2023 05:03 PM IST

Flipkart Big Saving Day: ಫ್ಲಿಪ್‌ಕಾರ್ಟ್‌ ಬಿಗ್‌ ಉಳಿತಾಯ ದಿನಾಂಕ ಪ್ರಕಟ

  • Flipkart Big Saving Days sale: ಸ್ವಾತಂತ್ರ್ಯ ದಿನಕ್ಕೆ ಮುನ್ನ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್ಸ್‌ ಡೇ ಆರಂಭಿಸಲಿದೆ. ಆಗಸ್ಟ್‌ 4ರಿಂದ 9ರವರೆಗೆ ಬಿಗ್ ಸೇವಿಂಗ್ ಡೇಸ್ ಸೇಲ್ಸ್‌ ಇರಲಿದ್ದು, ಐಫೋನ್‌, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಸೇರಿದಂತೆ ಹಲವು ಉತ್ಪನ್ನಗಳಿಗೆ ಡಿಸ್ಕೌಂಟ್‌ ಪಡೆಯುವ ಅವಕಾಶ ದೊರಕಲಿದೆ.

Flipkart Big Saving Day: ಫ್ಲಿಪ್‌ಕಾರ್ಟ್‌ ಬಿಗ್‌ ಉಳಿತಾಯ ದಿನಾಂಕ ಪ್ರಕಟ
Flipkart Big Saving Day: ಫ್ಲಿಪ್‌ಕಾರ್ಟ್‌ ಬಿಗ್‌ ಉಳಿತಾಯ ದಿನಾಂಕ ಪ್ರಕಟ

ಬೆಂಗಳೂರು: ಫ್ಲಿಪ್‌ಕಾರ್ಟ್‌ ಖರೀದಿದಾರರಿಗೆ ಸಿಹಿಸುದ್ದಿ. ಆಗಸ್ಟ್‌ 4ರಿಂದ 9ರವರೆಗೆ ಬಿಗ್ ಸೇವಿಂಗ್ ಡೇಸ್ ಸೇಲ್ಸ್‌ ನಡೆಯಲಿದೆ. ಸ್ವಾತಂತ್ರ್ಯ ದಿನದ ಸಂಭ್ರಮ ಹೆಚ್ಚಿಸಲು ಹೊಸ ಖರೀದಿಗೆ ಮುಂದಾಗುವವರಿಗೆ ಇದರಿಂದ ಪ್ರಯೋಜನವಾಗಲಿದೆ. ಸ್ಮಾರ್ಟ್ ಸಾಧನಗಳು, ಗೃಹೋಪಯೋಗಿ ವಸ್ತುಗಳು, ಇತರ ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ಇಲ್ಲಿ ಖರೀದಿಸಬಹುದು. ಐಫೋನ್‌ 14, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌ 22 ಪ್ಲಸ್‌, ಸ್ಯಾಮ್ಸಂಗ್‌ ಗ್ಯಾಲಾಕ್ಸಿ Z Flip 3ನಂತಹ ಪ್ರೀಮಿಯಂ ಫೋನ್‌ ಖರೀದಿಯಲ್ಲಿ ದೊಡ್ಡ ಮೊತ್ತ ಉಳಿಸಲು ಸಾಧ್ಯವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಫ್ಲಿಪ್‌ಕಾರ್ಟ್‌ ಬಿಗ್‌ ಸೇಲ್‌ ದಿನಾಂಕ

ಆಗಸ್ಟ್‌ 4ರಿಂದ 9ರವರೆಗೆ ಬಿಗ್ ಸೇವಿಂಗ್ ಡೇಸ್ ಸೇಲ್ಸ್‌ ನಡೆಯಲಿದ್ದು, ವಿವಿಧ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ಘೋಷಿಸಲಾಗುತ್ತಿದೆ. ಕೆಲವೊಂದು ಡಿಸ್ಕೌಂಟ್‌ ವಿವರವನ್ನು ಈಗಾಗಲೇ ಘೋಷಿಸಲಾಗಿದೆ.

5ಜಿ ಸ್ಮಾರ್ಟ್‌ಫೋನ್‌ಗಳಿಗೆ ದರ ಕಡಿತ

ಫ್ಲಿಪ್‌ಕಾರ್ಟ್‌ ಕಂಪನಿಯು ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದೊರಕಲಿದೆ ಎಂದು ಪಟ್ಟಿ ನೀಡಿದೆ. ಐಫೋನ್ 14 ಮತ್ತು ಐಫೋನ್ 14 ಪ್ಲಸ್, ಸಾಮಾನ್ಯವಾಗಿ 68999 ರೂ ಮತ್ತು 79999 ರೂ.ಗೆ ದೊರಕುತ್ತದೆ. ಬಿಗ್‌ ಸೇಲ್‌ ದಿನದಲ್ಲಿ ಇನ್ನಷ್ಟು ಡಿಸ್ಕೌಂಟ್‌ ದೊರಕಲಿದೆ. , Realme, Poco ಮತ್ತು Oppo ನಂತಹ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಸಹ ರಿಯಾಯಿತಿ ದರದಲ್ಲಿ ಲಭ್ಯವಿರಬಹುದು ಎಂದು ತಿಳಿದುಬಂದಿದೆ. ಒಟ್ಟಾರೆ, ಹಲವು ಉತ್ಪನ್ನಗಳ ದರ ಕಡಿತ ಖಚಿತವಾಗಿದೆ.

ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಡಿಸ್ಕೌಂಟ್‌

Samsung Galaxy S22 Plus ಖರೀದಿಸಲು ಬಯಸುವವರಿಗೂ ಅತ್ಯುತ್ತಮ ಡಿಸ್ಕೌಂಟ್‌ ದೊರಕಲಿದೆ. ಈಗ ಈ ಸ್ಮಾರ್ಟ್‌ಫೋನ್‌ ದರ 59999 ರೂಪಾಯಿ ಇದೆ. ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್ಸ್‌ ಡೇಯಂದು ಇನ್ನಷ್ಟು ದರ ಕಡಿತವಾಗಲಿದೆ. ಸ್ಯಾಮ್‌ಸಂಗ್‌ನ Pixel 6A ಮತ್ತು Samsung Galaxy Z Flip 3ಗೂ ಡಿಸ್ಕೌಂಟ್‌ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಎಷ್ಟು ಡಿಸ್ಕೌಂಟ್‌ ದೊರಕಲಿದೆ ಎಂಬ ಮಾಹಿತಿ ದೊರಕಲಿದೆ.

ಒಟ್ಟಾರೆ ಫ್ಲಿಪ್‌ಕಾರ್ಟ್‌ನಲ್ಲಿ ಏನಾದರೂ ಖರೀದಿಸಬೇಕೆಂದುಕೊಳ್ಳುವವರು ಈ ವಿನಾಯಿತಿ ದರದ ಸಮಯದಲ್ಲಿ ಖರೀದಿಸಬಹುದು. ಫೋನ್‌ ಮಾತ್ರವಲ್ಲದೆ, ಟಿವಿ, ಲ್ಯಾಪ್‌ಟಾಪ್‌, ಗೃಹಬಳಕೆಯ ವಸ್ತುಗಳಿಗೂ ಭರ್ಜರಿ ವಿನಾಯಿತಿ ನೀಡುವುದಾಗಿ ಫ್ಲಿಪ್‌ಕಾರ್ಟ್‌ ತಿಳಿಸಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ ಈ ಬಿಗ್‌ ಡೇ ಸೇಲ್‌ಗಾಗಿ ವಿಶೇಷ ಪುಟಗಳನ್ನು ಆರಂಭಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ