logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iphone News: ಆಪಲ್‌ ಐಫೋನ್‌ಗೆ ಐಒಎಸ್‌ 17 ಬೀಟಾ ಡೆವಲಪರ್‌ ಆವೃತ್ತಿ ಇನ್‌ಸ್ಟಾಲ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Iphone News: ಆಪಲ್‌ ಐಫೋನ್‌ಗೆ ಐಒಎಸ್‌ 17 ಬೀಟಾ ಡೆವಲಪರ್‌ ಆವೃತ್ತಿ ಇನ್‌ಸ್ಟಾಲ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Praveen Chandra B HT Kannada

Jun 09, 2023 07:00 AM IST

Iphone News: ಆಪಲ್‌ ಐಫೋನ್‌ಗೆ ಐಒಎಸ್‌ 17 ಬೀಟಾ ಡೆವಲಪರ್‌ ಆವೃತ್ತಿ ಇನ್‌ಸ್ಟಾಲ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

    • Install iOS 17: ಐಫೋನ್ ಎಕ್ಸ್‌ಎಸ್‌, ಎಕ್ಸ್‌ಎಸ್‌ ಮ್ಯಾಕ್ಸ್‌, ಐಫೋನ್ ಎಕ್ಸ್‌ಆರ್‌, ಐಫೋನ್ 11, 11 ಪ್ರೊ, 11 ಪ್ರೊ ಮ್ಯಾಕ್ಸ್‌, ಐಫೋನ್ 12, 12 ಮಿನಿ, 12 ಪ್ರೊ, 12 ಪ್ರೊ ಮ್ಯಾಕ್ಸ್‌, ಐಫೋನ್ 13, 13 ಮಿನಿ, ಐಫೋನ್‌ 13 ಪ್ರೊ, 13ಪ್ರೊ ಮ್ಯಾಕ್ಸ್‌,  14 ಪ್ರೊ, 14 ಪ್ರೊ ಮ್ಯಾಕ್ಸ್‌, 2 ತಲೆಮಾರಿನ ಎಸ್‌ಇಗಳಿಗೆ ನೂತನ ಐಒಎಸ್‌ 17 ಬೀಟಾ ಬೆಂಬಲ ನೀಡುತ್ತದೆ.
Iphone News: ಆಪಲ್‌ ಐಫೋನ್‌ಗೆ ಐಒಎಸ್‌ 17 ಬೀಟಾ ಡೆವಲಪರ್‌ ಆವೃತ್ತಿ ಇನ್‌ಸ್ಟಾಲ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Iphone News: ಆಪಲ್‌ ಐಫೋನ್‌ಗೆ ಐಒಎಸ್‌ 17 ಬೀಟಾ ಡೆವಲಪರ್‌ ಆವೃತ್ತಿ ಇನ್‌ಸ್ಟಾಲ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಆಪಲ್‌ ಐಫೋನ್‌ ಬಳಕೆದಾರರಿಗೆ ಹೊಸ ಅಪ್‌ಡೇಟ್‌ ಅಂದರೆ ಹಲವು ಫೀಚರ್‌ಗಳ ಸುಗ್ಗಿ. ಕಂಪನಿಯು iOS 17 ಅಪ್‌ಡೇಟ್‌ ನೀಡುತ್ತಿದೆ ಎಂದು ತಿಳಿದಾಗ ಬಹುತೇಕ ಆಪಲ್‌ ಐಫೋನ್‌ ಇರುವವರು ಹಿಗ್ಗಿ ಹೋಗಿರಬಹುದು. ಆದರೆ, ಈ ಅಪ್‌ಡೇಟ್‌ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ನಿಮಗೆ ಆಸಕ್ತಿಯಿದ್ದರೆ ಈಗಲೇ ನಿಮ್ಮ ಐಫೋನ್‌ಗೆ ಈ ಅಪ್‌ಡೇಟ್‌ ಅನ್ನು ಇನ್‌ಸ್ಟಾಲ್‌ ಮಾಡಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಹೌಟು ಮಾಲಿಕೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಈಗ ನಿಮಗೆ ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಲು ಸಾಧ್ಯವಿರುವುದು ಐಒಎಸ್‌ 17 ಡೆವಲಪರ್‌ ಆವೃತ್ತಿ. ಒಂದು ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಸಾಮೂಹಿಕವಾಗಿ ಎಲ್ಲ ಬಳಕೆದಾರರಿಗೆ ನೀಡುವ ಮೊದಲು ಆಸಕ್ತರಿಗೆ ಪರಿಶೀಲಿಸಲು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಬೀಟಾ ಡೆವಲಪರ್‌ ಸಾಫ್ಟ್‌ವೇರ್‌ ಇರುತ್ತದೆ. ಈ ಸಮಯದಲ್ಲಿ ನೂತನ ಅಪ್‌ಡೇಟ್‌ನಲ್ಲಿ ಏನಾದರೂ ಬಗ್ಸ್‌, ತೊಂದರೆಗಳು ಇದ್ದರೆ ಈ ಡೆವಲಪರ್‌ಗಳು ಮಾಹಿತಿ ನೀಡಬಹುದು.

ಇನ್‌ಸ್ಟಾಲ್‌ ಮಾಡುವ ಮುನ್ನ ಎಚ್ಚರ

ಆದರೆ, ನಿಮಗೆ ಈ ರೀತಿ ಬೀಟಾ ಆವೃತ್ತಿ ಕುರಿತು ಹೆಚ್ಚಿನ ಮಾಹಿತಿ ಇಲ್ಲದೆ ಇದ್ದರೆ ಈಗ ಡೌನ್‌ಲೋಡ್‌ ಮಾಡಬೇಡಿ. ಮುಂದಿನ ತಿಂಗಳವರೆಗೆ ಕಾಯಬೇಡಿ. ಇದೇ ರೀತಿ ನಿಮ್ಮ ಮುಖ್ಯವಾದ ಐಫೋನ್‌ಗೆ ಇದನ್ನು ಇನ್‌ಸ್ಟಾಲ್‌ ಮಾಡಬೇಡಿ. ನಿಮ್ಮಲ್ಲಿ ಹಳೆಯ ಐಫೋನ್‌ ಇದ್ದರೆ ಅಂದರೆ ಈಗ ಬಳಕೆ ಮಾಡುತ್ತ ಇಲ್ಲದಿದ್ದರೆ ಅದರಲ್ಲಿ ಈ ಬೀಟಾ ಆವೃತ್ತಿಯನ್ನು ಇನ್‌ಸ್ಟಾಲ್‌ ಮಾಡಿ. ಇಲ್ಲವಾದರೆ ನಿಮ್ಮ ಎಲ್ಲಾ ಡೇಟಾ ಅಳಿಸಿ ಹೋಗಬಹುದು. ಇಂತಹ ತೊಂದರೆಯಾಗಬಾರದು ಎಂದರೆ ನೀವು ಬಳಸುತ್ತಿರುವ ಪ್ರೈಮರಿ ಐಫೋನ್‌ಗೆ ಇದನ್ನು ಇನ್‌ಸ್ಟಾಲ್‌ ಮಾಡಬೇಡಿ, ಬಳಸದ ಇನ್ನೊಂದ ಐಫೋನ್‌ ಇದ್ದರೆ ಅದಕ್ಕೆ ಇನ್‌ಸ್ಟಾಲ್‌ ಮಾಡಿ ಹೊಸ ಫೀಚರ್‌ಗಳು ಏನಿದೆ ಎಂದು ಪರಿಶೀಲಿಸಿ.

ಯಾವೆಲ್ಲ ಐಫೋನ್‌ಗಳಿಗೆ iOS 17 ಬೆಂಬಲ ನೀಡುತ್ತದೆ?

ಐಫೋನ್ XS ಮತ್ತು XS ಮ್ಯಾಕ್ಸ್‌, ಐಫೋನ್ XR, ಐಫೋನ್ 11, ಐಫೋನ್ 11 ಪ್ರೊ, 11 ಪ್ರೊ ಮ್ಯಾಕ್ಸ್‌, ಐಫೋನ್ 12, 12 ಮಿನಿ, ಐಫೋನ್‌ 12 ಪ್ರೊ, 12 ಪ್ರೊ ಮ್ಯಾಕ್ಸ್‌,

ಐಫೋನ್ 13, 13 ಮಿನಿ, ಐಫೋನ್‌ 13 ಪ್ರೊ, 13ಪ್ರೊ ಮ್ಯಾಕ್ಸ್‌, ಐಫೋನ್‌ 14 ಪ್ರೊ, 14 ಪ್ರೊ ಮ್ಯಾಕ್ಸ್‌, ಎರಡನೇ ತಲೆಮಾರಿನ ಐಫೋನ್‌ ಎಸ್‌ಇಗಳಿಗೆ ಬೀಟಾ ಸಾಫ್ಟ್‌ವೇರ್‌ ಬೆಂಬಲ ನೀಡುತ್ತದೆ.

ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಹೇಗೆ?

  1. ಮೊದಲನೆಯದಾಗಿ ಐಫೋನ್‌ನಲ್ಲಿರುವ ಡೇಟಾವನ್ನು ಬ್ಯಾಕಪ್‌ ತೆಗೆದುಕೊಳ್ಳಿ
  2. ಆಪಲ್‌ ಡೆವಲಪರ್‌ ಪ್ರೊಗ್ರಾಮ್‌ಗೆ ನಿಮ್ಮ ಆಪಲ್‌ ಐಡಿಯನ್ನು ರಿಜಿಸ್ಟ್ರಾರ್‌ ಮಾಡಿಕೊಳ್ಳಿ.
  3. ಬಳಿಕ ಐಫೋನ್‌ನ ಸೆಟ್ಟಿಂಗ್‌ ಆಪ್‌ಗೆ ತೆರೆಯಿರಿ.
  4. ಅಲ್ಲಿ ಜನರಲ್‌, ಸಾಫ್ಟ್‌ವೇರ್‌ ಅಪ್‌ಡೇಟ್‌ ಆಯ್ಕೆಗೆ ಹೋಗಿ
  5. ಅಲ್ಲಿ ಬೀಟಾ ಅಪ್‌ಡೇಟ್‌ ಕ್ಲಿಕ್‌ ಮಾಡಿ
  6. ಐಒಎಸ್‌ 17 ಡೆವಲಪರ್‌ ಬೀಟಾ ಕ್ಲಿಕ್‌ ಮಾಡಿ
  7. ಡೌನ್‌ಲೋಡ್‌ ಮಾಡಿ ಮತ್ತು ಇನ್‌ಸ್ಟಾಲ್‌ ನೀಡಿ

ಇನ್‌ಸ್ಟಾಲ್‌ ಪೂರ್ಣಗೊಂಡ ಬಳಿಕ ನಿಮ್ಮ ಐಫೋನ್‌ ಬೂಟ್‌ ಆಗುತ್ತದೆ, ಐಒಎಸ್‌ 17 ಡೆವಲಪರ್‌ ಪ್ರಿವ್ಯೂ ತೆರೆದುಕೊಳ್ಳುತ್ತದೆ.

ಮತ್ತೊಮ್ಮೆ ಎಚ್ಚರಿಕೆ: ನಿಮ್ಮ ಬಳಕೆಯಲ್ಲಿರುವ ಐಫೋನ್‌ನಲ್ಲಿ ಇದನ್ನು ಇನ್‌ಸ್ಟಾಲ್‌ ಮಾಡಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ